ಯುದ್ಧ ನಡೆಯುತ್ತಿರುವಂತೆ ಕನಸು ಬಿದ್ದರೆ ಶುಭವೋ, ಅಶುಭವೋ; ಸ್ವಪ್ನಶಾಸ್ತ್ರದ ಉತ್ತರ ಹೀಗಿದೆ
ಸ್ವಪ್ನಶಾಸ್ತ್ರದ ಪ್ರಕಾರ ನಾವು ಕಾಣುವ ಕನಸುಗಳು ಭವಿಷ್ಯದಲ್ಲಿ ಸಂಭವಿಸಬಹುದಾದ ಘಟನೆಗಳ ಸೂಚಕವಾಗಿವೆ. ಹಾಗಾದರೆ ಕನಸಿನಲ್ಲಿ ಯದ್ಧ ಮಾಡುವುದು ಕಂಡರೆ ಶುಭವೋ, ಅಶುಭವೋ ಈ ಬಗ್ಗೆ ಸ್ವಪ್ನಶಾಸ್ತ್ರ ಏನು ಹೇಳುತ್ತದೆ ನೋಡಿ.

ಪ್ರತಿ ದಿನ ನಾವು ಮಲಗಿದ್ದಾಗ ವಿವಿಧ ರೀತಿಯ ಕನಸು ಕಾಣುತ್ತೇವೆ. ಕೆಲವು ಕನಸುಗಳಿಗೆ ಅರ್ಥವಿದೆ ಅನ್ನಿಸಿದರೂ, ಇನ್ನೂ ಕೆಲವಕ್ಕೆ ತಲೆಬುಡ ಇಲ್ಲದ್ದು ಎನ್ನಿಸುತ್ತದೆ. ಸ್ವಪ್ನಶಾಸ್ತ್ರದ ಪ್ರಕಾರ ಕನಸುಗಳು ಭವಿಷ್ಯದ ಸೂಚಕವಾಗಿವೆ. ಮಾತ್ರವಲ್ಲ ಕೆಲವು ಕನಸುಗಳು ಶುಭ ಸೂಚಕವಾಗಿದ್ದರೆ, ಇನ್ನೂ ಕೆಲವು ಕನಸುಗಳು ಅಶುಭ ಸೂಚಕವಾಗಿವೆ. ಆದರೆ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ.
ಇತ್ತೀಚೆಗೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶವಿದೆ. ಪ್ರತಿದಿನ ಸಂಘರ್ಷಗಳು ನಡೆಯುತ್ತಲೇ ಇವೆ. ಈ ಸಂದರ್ಭದಲ್ಲಿ ನಿಮ್ಮ ಕನಸಿನಲ್ಲಿ ಯುದ್ಧದ ಸನ್ನಿವೇಶಗಳು ಬಂದಿರಬಹುದು. ಯುದ್ಧ ನಡೆಯುತ್ತಿರುವಂತೆ ನೀವು ಕನಸು ಕಂಡಿರಬಹುದು. ಯುದ್ಧದ ಕನಸು ಬೀಳುವುದು ಶುಭವೋ, ಅಶುಭವೋ, ಕನಸಿನಲ್ಲಿ ಯುದ್ಧ ನಡೆಯುವುದನ್ನು ನೋಡಿದರೆ ಏನು ಅರ್ಥ, ನೀವೇ ಯುದ್ಧದಲ್ಲಿ ಭಾಗವಹಿಸಿದಂತೆ ಕಂಡರೆ ಅರ್ಥವೇನು ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಸ್ವಪ್ನಶಾಸ್ತ್ರದ ಪ್ರಕಾರ ಯುದ್ಧದ ಕನಸಿನ ಅರ್ಥ
1. ಯುದ್ಧ ನಡೆಯುತ್ತಿರುವ ಕನಸು
ಕನಸಿನಲ್ಲಿ ಯುದ್ಧ ನಡೆಯುತ್ತಿರುವುದನ್ನು ನೋಡುವುದು ಶುಭವಲ್ಲ. ಅಂತಹ ಕನಸನ್ನು ಕಂಡರೆ, ಭವಿಷ್ಯದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರ್ಥ. ನಿಮ್ಮ ಬದುಕಿನಲ್ಲಿ ಒಂದಿಷ್ಟು ತೊಂದರೆಗಳು ಎದುರಾಗಲಿದೆ ಎಂಬುದನ್ನು ಈ ಕನಸು ಸೂಚಿಸುತ್ತದೆ.
2. ಕನಸಿನಲ್ಲಿ ಯುದ್ಧ ವಿಮಾನ ನೋಡುವುದು
ಕನಸಿನಲ್ಲಿ ಫೈಟರ್ ಜೆಟ್ ಅಥವಾ ಯುದ್ಧ ವಿಮಾನಗಳನ್ನು ನೋಡುವುದು ಶುಭ ಸಂಕೇತವಾಗಿದೆ. ಈ ರೀತಿ ಕನಸು ಕಂಡರೆ ನೀವು ಜೀವನದಲ್ಲಿ ಯಶಸ್ಸು ಸಾಧಿಸುತ್ತೀರಿ ಎಂದರ್ಥ. ಇದು ಭವಿಷ್ಯದಲ್ಲಿ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲಿದ್ದೀರಿ ಎಂಬುದರ ಸಂಕೇತವಾಗಿದೆ. ಅಂತಹ ಕನಸು ಶಕ್ತಿಯನ್ನು ತೋರಿಸುತ್ತದೆ.
3. ಕನಸಿನಲ್ಲಿ ನೀವು ಯುದ್ಧ ಮಾಡುತ್ತಿರುವುದು
ನೀವು ಕನಸಿನಲ್ಲಿ ಯುದ್ಧ ಮಾಡುತ್ತಿರುವಂತೆ ಕನಸು ಕಾಣುವುದು ಒಳ್ಳೆಯದಲ್ಲ. ಇದರಿಂದ ಜೀವನದಲ್ಲಿ ಗೊಂದಲ ಅಥವಾ ಸಣ್ಣ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಯಿದೆ.
4. ನಿಮ್ಮ ವಿರುದ್ಧ ಯುದ್ಧ ನಡೆಯುವುದು
ನಿಮ್ಮ ವಿರುದ್ಧ ಯಾರಾದರೂ ಹೋರಾಡುತ್ತಿದ್ದಾರೆ ಎಂದು ನೀವು ಕನಸು ಕಂಡರೆ, ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ ಎಂದರ್ಥ. ಇದರಿಂದ ನಿಮಗೆ ಕೆಲಸದ ಒತ್ತಡವೂ ಹೆಚ್ಚಾಗುವ ಸಾಧ್ಯತೆ ಇದೆ.ಜವಾಬ್ದಾರಿಗಳು ಕೂಡ ಹೆಚ್ಚಾಗುತ್ತವೆ. ನೀವು ಅಂತಹ ಕನಸುಗಳನ್ನು ಕಂಡಾಗ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಂಡು ಮುಂದುವರಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)