ನವ ವಿವಾಹಿತರು ಮಲಗುವ ಕೋಣೆಯಲ್ಲಿ ಈ 4 ವಸ್ತುಗಳನ್ನು ಇರಿಸಬೇಕು, ಪ್ರೀತಿ-ಬಾಂಧವ್ಯ ಹೆಚ್ಚಾಗುತ್ತೆ; ವಾಸ್ತು ಸಲಹೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನವ ವಿವಾಹಿತರು ಮಲಗುವ ಕೋಣೆಯಲ್ಲಿ ಈ 4 ವಸ್ತುಗಳನ್ನು ಇರಿಸಬೇಕು, ಪ್ರೀತಿ-ಬಾಂಧವ್ಯ ಹೆಚ್ಚಾಗುತ್ತೆ; ವಾಸ್ತು ಸಲಹೆ

ನವ ವಿವಾಹಿತರು ಮಲಗುವ ಕೋಣೆಯಲ್ಲಿ ಈ 4 ವಸ್ತುಗಳನ್ನು ಇರಿಸಬೇಕು, ಪ್ರೀತಿ-ಬಾಂಧವ್ಯ ಹೆಚ್ಚಾಗುತ್ತೆ; ವಾಸ್ತು ಸಲಹೆ

ವಾಸ್ತುಶಾಸ್ತ್ರದ ಪ್ರಕಾರ ನವವಿವಾಹಿತರು ತಮ್ಮ ಕೋಣೆಯಲ್ಲಿ ಈ 4 ವಸ್ತುಗಳನ್ನು ಇರಿಸಿಕೊಳ್ಳಬೇಕು. ಇದರಿಂದ ಅವರ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಹರಿಯುತ್ತದೆ. ನಕಾರಾತ್ಮಕ ಶಕ್ತಿ ದೂರಾಗುತ್ತದೆ. ಗಂಡ ಹೆಂಡತಿಯ ನಡುವೆ ಪ್ರೀತಿ ಹೆಚ್ಚುತ್ತದೆ.

ನವ ವಿವಾಹಿತರು ಮಲಗುವ ಕೋಣೆಯಲ್ಲಿ ಈ 4 ವಸ್ತು ಇರಿಸಬೇಕು; ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತೆ
ನವ ವಿವಾಹಿತರು ಮಲಗುವ ಕೋಣೆಯಲ್ಲಿ ಈ 4 ವಸ್ತು ಇರಿಸಬೇಕು; ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತೆ (PC: Canva)

ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಹಾಗೂ ಸಂಬಂಧಗಳಲ್ಲಿ ಧನಾತ್ಮಕ ಶಕ್ತಿ ಹರಿಯಲು ಮತ್ತು ನಕಾರಾತ್ಮಕ ಶಕ್ತಿ ದೂರವಾಗಲು ಅವಕಾಶ ಒದಗುತ್ತದೆ. ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದರಿಂದ ಸಂತೋಷ, ಶಾಂತಿ, ಸಮೃದ್ಧಿ ಸಿಗುತ್ತದೆ.

ನವವಿವಾಹಿತರು ವಾಸ್ತು ಪ್ರಕಾರ ಈ ಸಲಹೆಗಳನ್ನು ಅನುಸರಿಸಿದರೆ, ಸಕಾರಾತ್ಮಕ ಶಕ್ತಿಯು ಹರಿಯುತ್ತದೆ. ನಕಾರಾತ್ಮಕ ಶಕ್ತಿ ಅವರ ಬಳಿಯೂ ಸುಳಿಯುವುದಿಲ್ಲ. ಗಂಡ ಹೆಂಡತಿಯ ನಡುವಿನ ಪ್ರೀತಿ ಹೆಚ್ಚಾಗುತ್ತದೆ. ಮಲಗುವ ಕೋಣೆ ವಾತಾವರಣ, ಪ್ರೀತಿ, ಸಾಮರಸ್ಯ ಮತ್ತು ಸಕಾರಾತ್ಮಕ ಶಕ್ತಿಯಿಂದ ತುಂಬಿರಬೇಕು. ಮಲಗುವ ಕೋಣೆ ಸರಿಯಾದ ದಿಕ್ಕಿನಲ್ಲಿರಬೇಕು. ಶುಭ ಫಲಿತಾಂಶಗಳನ್ನು ನೀಡುವ ವಸ್ತುಗಳನ್ನು ಹೊಂದಿರುವುದು ಒಳ್ಳೆಯದು. ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿ, ತಿಳುವಳಿಕೆ ಮತ್ತು ಸಮೃದ್ಧಿ ಇರಬೇಕೆಂದು ನೀವು ಬಯಸಿದರೆ, ಈ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸಿ.

ನವ ವಿವಾಹಿತ ದಂಪತಿಗಳ ಕೋಣೆಯಲ್ಲಿ ಈ ವಸ್ತು ಇದ್ದರೆ ಶುಭ

1. ರಾಧಾ ಕೃಷ್ಣರ ಛಾಯಾಚಿತ್ರ

ಮಲಗುವ ಕೋಣೆಯಲ್ಲಿ ರಾಧಾ ಮತ್ತು ಕೃಷ್ಣನ ಫೋಟೊ ಇಡುವುದರಿಂದ ಗಂಡ ಮತ್ತು ಹೆಂಡತಿಯ ನಡುವಿನ ಪ್ರೀತಿ ಹೆಚ್ಚಾಗುತ್ತದೆ. ರಾಧಾ ಕೃಷ್ಣರ ಫೋಟೊವನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದರಿಂದ ದಾಂಪತ್ಯ ಜೀವನದಲ್ಲಿ ಸಂತೋಷ, ಪ್ರೀತಿ ಮತ್ತು ಮಾಧುರ್ಯ ಇರುತ್ತದೆ. ರಾಧಾ ಕೃಷ್ಣ ಕುಳಿತಿರುವ ಪ್ರತಿಮೆಯ ಫೋಟೊ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಫೋಟೊ ತುಂಬಾ ದೊಡ್ಡದಾಗಿರದಂತೆ ನೋಡಿಕೊಳ್ಳಿ, ಮಧ್ಯಮ ಗಾತ್ರದಲ್ಲಿದ್ದರೆ ಸಾಕು.

2. ಧೂಪದ್ರವ್ಯದ ಕಡ್ಡಿಗಳು ಅಥವಾ ನೈಸರ್ಗಿಕ ಸುಗಂಧ ದ್ರವ್ಯಗಳು

ಧೂಪದ್ರವ್ಯದಂತಹ ನೈಸರ್ಗಿಕ ಸುಗಂಧ ದ್ರವ್ಯಗಳು ವೈವಾಹಿಕ ಜೀವನವನ್ನು ಸುಧಾರಿಸಬಹುದು. ಇವುಗಳನ್ನು ಮಲಗುವ ಕೋಣೆಯಲ್ಲಿ ಇಡುವುದರಿಂದ ನೀವು ಶಾಂತವಾಗಿರಲು ಸಹಾಯ ಮಾಡುತ್ತದೆ. ಪ್ರೀತಿ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದು ಮಾನಸಿಕ ಒತ್ತಡವನ್ನು ದೂರ ಮಾಡುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷವನ್ನು ನೀಡುತ್ತದೆ.

3. ತಾಜಾ ಹೂವುಗಳು

ಮಲಗುವ ಕೋಣೆಯಲ್ಲಿ ತಾಜಾ ಹೂವುಗಳನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿ ಬರುತ್ತದೆ ಮತ್ತು ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಗುಲಾಬಿ ಮತ್ತು ಮಲ್ಲಿಗೆಯಂತಹ ಹೂವುಗಳು ಸಕಾರಾತ್ಮಕ ಶಕ್ತಿಯನ್ನು ನೀಡುವುದಲ್ಲದೆ, ಸಂತೋಷವನ್ನೂ ತರುತ್ತವೆ.

4. ಏಳು ಕುದುರೆಗಳ ಫೋಟೊ

ಮಲಗುವ ಕೋಣೆಯಲ್ಲಿ ಏಳು ಕುದುರೆಗಳ ಫೋಟೊ ಇಡುವುದರಿಂದ ಸಕಾರಾತ್ಮಕ ಶಕ್ತಿ ಹರಡುತ್ತದೆ. ಗಂಡ ಹೆಂಡತಿಯ ನಡುವಿನ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ. ಈ ಫೋಟೊವನ್ನು ಪೂರ್ವಕ್ಕೆ ಮುಖ ಮಾಡಿ ಇಡುವುದು ಉತ್ತಮ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.