Mirror Vastu: ಈ ದಿಕ್ಕಿನಲ್ಲಿ ಕನ್ನಡಿ ಇದ್ದರೆ ಯಮನನ್ನು ಮನೆಗೆ ಆಹ್ವಾನಿಸಿದಂತೆ; ವಾಸ್ತುಪ್ರಕಾರ ಯಾವ ದಿಕ್ಕಿಗೆ ಕನ್ನಡಿ ಇಡಬಾರದು ನೋಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mirror Vastu: ಈ ದಿಕ್ಕಿನಲ್ಲಿ ಕನ್ನಡಿ ಇದ್ದರೆ ಯಮನನ್ನು ಮನೆಗೆ ಆಹ್ವಾನಿಸಿದಂತೆ; ವಾಸ್ತುಪ್ರಕಾರ ಯಾವ ದಿಕ್ಕಿಗೆ ಕನ್ನಡಿ ಇಡಬಾರದು ನೋಡಿ

Mirror Vastu: ಈ ದಿಕ್ಕಿನಲ್ಲಿ ಕನ್ನಡಿ ಇದ್ದರೆ ಯಮನನ್ನು ಮನೆಗೆ ಆಹ್ವಾನಿಸಿದಂತೆ; ವಾಸ್ತುಪ್ರಕಾರ ಯಾವ ದಿಕ್ಕಿಗೆ ಕನ್ನಡಿ ಇಡಬಾರದು ನೋಡಿ

Mirror Vastu: ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಕನ್ನಡಿ ಇಡುವುದಕ್ಕೂ ಕೆಲವು ನಿಯಮಗಳಿವೆ. ಈ ನಿಯಮಗಳನ್ನು ಮೀರಿ ವಿರುದ್ಧ ದಿಕ್ಕಿನಲ್ಲಿ ಇರಿಸಿದರೆ ಮನೆಗೆ ನಷ್ಟ ತಪ್ಪಿದ್ದಲ್ಲ.

ವಾಸ್ತುಪ್ರಕಾರ ಯಾವ ದಿಕ್ಕಿಗೆ ಕನ್ನಡಿ ಇಡಬಾರದು ನೋಡಿ
ವಾಸ್ತುಪ್ರಕಾರ ಯಾವ ದಿಕ್ಕಿಗೆ ಕನ್ನಡಿ ಇಡಬಾರದು ನೋಡಿ

ನಮ್ಮಲ್ಲಿ ಅನೇಕರು ಮನೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ವಾಸ್ತು ನಿಯಮಗಳನ್ನು ಪಾಲಿಸುತ್ತಾರೆ. ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ಸಕಾರಾತ್ಮಕ ಶಕ್ತಿ ಹರಿಯಲು ಅನುವಾಗುತ್ತದೆ, ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದು ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ಜೊತೆಗೆ ವಾಸ್ತುನಿಯಮಗಳನ್ನು ಪಾಲಿಸುವುದು ಲಕ್ಷ್ಮೀದೇವಿಯ ಅನುಗ್ರಹಕ್ಕೂ ಕಾರಣವಾಗುತ್ತದೆ. ನೀವು ಲಕ್ಷ್ಮೀದೇವಿಯ ಆಶೀರ್ವಾದ ಪಡೆದು ಯಾವುದೇ ತೊಂದರೆಗಳು ಬಾರದಂತೆ ಜೀವನ ಸಾಗಿಸಲು ಈ ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಬೇಕು.

ಪ್ರತಿಯೊಬ್ಬರ ಮನೆಯಲ್ಲೂ ಕನ್ನಡಿ ಇರುತ್ತದೆ. ಕನ್ನಡಿ ಇಲ್ಲದ ಮನೆಯೇ ಇಲ್ಲ ಅಂತ ಹೇಳಬಹುದು. ಆದರೆ ಮನೆಯಲ್ಲಿ ಕನ್ನಡಿ ಇಡಲು ಕೆಲವು ವಾಸ್ತುನಿಯಮಗಳಿವೆ. ಆದರೆ ಹಲವರಿಗೆ ಈ ನಿಯಮಗಳ ಬಗ್ಗೆ ಅರಿವಿಲ್ಲದೇ ಅವರು ತಪ್ಪು ಮಾಡುತ್ತಾರೆ. ಕನ್ನಡಿ ಇಡಲು ಸೂಕ್ತ ದಿಕ್ಕು ತಿಳಿಯದೇ ವಾಸ್ತು ನಿಯಮಕ್ಕೆ ವಿರುದ್ಧ ದಿಕ್ಕಿನಲ್ಲಿ ಇರಿಸಿ ಸಾಕಷ್ಟು ನಷ್ಟಗಳನ್ನು ಎದುರಿಸುತ್ತಾರೆ. ಆ ಕಾರಣಕ್ಕೆ ಮನೆಯ ಯಾವ ಭಾಗದಲ್ಲಿ ಕನ್ನಡಿಯನ್ನು ಇಡಬಾರದು ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಅದನ್ನು ಅನುಸರಿಸಬೇಕು. ಇಲ್ಲದಿದ್ದರೆ ದುರಾದೃಷ್ಟ ಸಂಭವಿಸುತ್ತದೆ. ಅನೇಕ ತೊಂದರೆಗಳು ಎದುರಾಗುತ್ತವೆ. ಹಾಗಾದರೆ ಯಾವ ದಿಕ್ಕಿಗೆ ಕನ್ನಡಿ ಇಡಬಾರದು, ಆ ದಿಕ್ಕಿನಲ್ಲಿ ಕನ್ನಡಿ ಇಡುವುದರಿಂದ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎಂಬ ವಿವರ ಇಲ್ಲಿದೆ. 

ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಡಬಾರದು?

ಮನೆಯಲ್ಲಿರುವ ಕನ್ನಡಿ ಎಂದಿಗೂ ದಕ್ಷಿಣಕ್ಕೆ ಮುಖ ಮಾಡಿ ಇಡಬಾರದು. ಇದು ಯಮಧರ್ಮರಾಜನ ನಿರ್ದೇಶನ. ಈ ದಿಕ್ಕಿನಲ್ಲಿ ಕನ್ನಡಿ ಇರುವುದರಿಂದ ರಾಜ ಯಮಧರ್ಮ ಯಮದೂತರನ್ನು ಕಳುಹಿಸುತ್ತಾನೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಅದು ಕೆಟ್ಟದ್ದನ್ನು ತರುತ್ತದೆ. ಇದರಿಂದ ಮನೆಗೆ ಒಳಿತಾಗುವುದಿಲ್ಲ. ಮನೆಯಲ್ಲಿ ಸಾವು, ನೋವು, ನಷ್ಟ ಹೆಚ್ಚುತ್ತದೆ. ಆದ್ದರಿಂದ, ಕನ್ನಡಿಯನ್ನು ಈ ದಿಕ್ಕಿನಲ್ಲಿ ಎಂದಿಗೂ ಇಡಬೇಡಿ.

ಕನ್ನಡಿ ದಕ್ಷಿಣಕ್ಕೆ ಮುಖ ಮಾಡಿದರೆ ಈ ಎಲ್ಲಾ ಸಮಸ್ಯೆ

1. ವೃತ್ತಿಯಲ್ಲಿ ತೊಂದರೆಗಳು

ಜ್ಯೋತಿಷಿದ ಪ್ರಕಾರ, ದಕ್ಷಿಣಕ್ಕೆ ಎದುರಾಗಿ ಕನ್ನಡಿ ಇಟ್ಟರೆ ವೃತ್ತಿಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ. ಕೆಲಸ ಮತ್ತು ವ್ಯವಹಾರದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಹಣಕಾಸಿನ ನಷ್ಟವೂ ಎದುರಾಗುತ್ತದೆ. ಮನೆಯಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. 

2.ಋಣಾತ್ಮಕ ಶಕ್ತಿ

ದಕ್ಷಿಣಕ್ಕೆ ಮುಖ ಮಾಡಿರುವ ಕನ್ನಡಿಯು ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಕುಟುಂಬ ಸದಸ್ಯರ ನಡುವೆ ಜಗಳಗಳು ಉಂಟಾಗುತ್ತವೆ. ಗಂಡ ಹೆಂಡತಿ ನಡುವೆ ಜಗಳವಾಗುವ ಸಾಧ್ಯತೆ ಇದೆ. ಸಹೋದರರ ನಡುವಿನ ಬಾಂಧವ್ಯ ಕೂಡ ಹಾಳಾಗುತ್ತದೆ. ಇದು ಕೂಡ ಮನೆಯಲ್ಲಿ ಶಾಂತಿ, ನೆಮ್ಮದಿ ಹಾಳಾಗಲು ಕಾರಣವಾಗುತ್ತದೆ. 

3. ಲಕ್ಷ್ಮೀದೇವಿಯ ಆಶೀರ್ವಾದ ಇರುವುದಿಲ್ಲ

ದಕ್ಷಿಣಕ್ಕೆ ಮುಖ ಮಾಡಿ ಕನ್ನಡಿ ಇಟ್ಟರೆ ಆರ್ಥಿಕ ತೊಂದರೆ ಉಂಟಾಗುತ್ತದೆ. ಲಕ್ಷ್ಮೀದೇವಿಯೂ ಸಹ ದುಃಖಿತಳಾಗುತ್ತಾಳೆ. ಇದರರ್ಥ ಮನೆಯಲ್ಲಿ ಹಣ ಇರುವುದಿಲ್ಲ. ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. 

ಹಾಗಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಕನ್ನಡಿಯನ್ನು ಇರಿಸಬೇಡಿ. ಈ ವಾಸ್ತು ನಿಯಮಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ನೀವು ಯಶಸ್ಸು ಸಾಧಿಸಲು ಸಾಧ್ಯ ನೆನಪಿರಲಿ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.