Shani Amavasya 2025: ಶನಿ ಅಮಾವಾಸ್ಯೆ ಯಾವಾಗ; ಶನಿ ದೇವನನ್ನು ಮೆಚ್ಚಿಸಲು ಈ ದಿನ ಯಾವ ಕ್ರಮ ಪಾಲಿಸಬೇಕು, ಏನು ಮಾಡಬಾರದು
Shani Amavasya 2025: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿದೇವನನ್ನು ಮೆಚ್ಚಿಸಲು ಶನಿ ಅಮಾವಾಸ್ಯೆ ಸೂಕ್ತ ದಿನ. ಶನಿ ಅಮಾವಾಸ್ಯೆ ಯಾವಾಗ? ಈ ದಿನ ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಹಿಂದೂ ಧರ್ಮದಲ್ಲಿ ಅಮಾವಾಸ್ಯೆಯ ತಿಥಿಗೆ ವಿಶೇಷ ಮಹತ್ವವಿದೆ. ಈ ದಿನದಂದು ತರ್ಪಣ ಬಿಡುವುದು ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಅಮಾವಾಸ್ಯೆಗಳಲ್ಲಿ ಶನಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಶನಿದೇವನ ಅನುಗ್ರಹ ಪಡೆಯಲು ಈ ದಿನ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು.
ಈ ವರ್ಷ ಮಾರ್ಚ್ 29 ಶನಿವಾರ ಶನಿ ಅಮಾವಾಸ್ಯೆ ಬರುತ್ತದೆ. ಇದು ಚೈತ್ರ ಮಾಸದ ಅಮಾವಾಸ್ಯೆಯ ದಿನ. ಶನಿವಾರ ಬರುವ ಅಮಾವಾಸ್ಯೆಯನ್ನು ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಶನಿಯ ಆಶೀರ್ವಾದ ಪಡೆಯಲು ಈ ದಿನವನ್ನು ವಿಶೇಷವೆಂದು ಪರಿಗಣಿಸಲಾಗಿದೆ.
ಜ್ಯೋತಿಷ್ಯದ ಪ್ರಕಾರ ಯಾರ ಜಾತಕದಲ್ಲಿ ಶನಿಯ ಶನಿದೋಷವಿರುತ್ತದೋ ಅಂಥವರು ಈ ದಿನದಂದು ಕೆಲವು ವಿಶೇಷ ಪರಿಹಾರ ಕ್ರಮಗಳನ್ನು ಪಾಲಿಸಬೇಕು. ಹೀಗೆ ಮಾಡುವುದರಿಂದ ಶನಿಯ ದುಷ್ಪರಿಣಾಮಗಳಿಂದ ಮುಕ್ತಿ ಸಿಗುತ್ತದೆ ಮತ್ತು ಅದರ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಶನಿಯ ಅಮಾವಾಸ್ಯೆಯಂದು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿವರ ಇಲ್ಲಿದೆ ಗಮನಿಸಿ.
ಶನಿಯ ಅಮಾವಾಸ್ಯೆಯಂದು ಏನು ಮಾಡಬೇಕು?
- ಶನಿದೇವನ ಆಶೀರ್ವಾದ ಪಡೆಯಲು, ಶನಿದೇವನ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು. ಅದಕ್ಕೆ ಕಡ್ಲೆ ಹಿಟ್ಟು ಮತ್ತು ಸ್ವಲ್ಪ ಕಪ್ಪು ಎಳ್ಳು ಸೇರಿಸಿ.
- ಶನಿಯ ಅಮಾವಾಸ್ಯೆಯಂದು, ಅಗತ್ಯವಿರುವವರಿಗೆ ಕಪ್ಪು ಎಳ್ಳು, ಕಪ್ಪು ಕಂಬಳಿ, ಕರಿಬೇವು ಮತ್ತು ಕಪ್ಪು ಬಟ್ಟೆಗಳನ್ನು ದಾನ ಮಾಡಿ.
- ಈ ದಿನ, ಅಶ್ವತ್ಥ ವೃಕ್ಷವನ್ನು ಏಳು ಬಾರಿ ಪ್ರದಕ್ಷಿಣೆ ಹಾಕಿ ಅದರ ಮುಂದೆ ದೀಪ ಹಚ್ಚಬೇಕು.
- ಈ ದಿನ, ಕಪ್ಪು ನಾಯಿಗೆ ಸಾಸಿವೆ ಎಣ್ಣೆ ಸವರಿದ ಬ್ರೆಡ್ ತಿನ್ನಿಸಬೇಕು.
- ಈ ದಿನದಂದು ಶಮಿ ವೃಕ್ಷವನ್ನು ಪೂಜಿಸುವುದು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ.
- ಶನಿ ಅಮಾವಾಸ್ಯೆಯಂದು ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ತೊಳೆಯಲ್ಪಡುತ್ತವೆ ಎಂದು ನಂಬಲಾಗಿದೆ.
- ಶನಿಯ ಅಮಾವಾಸ್ಯೆಯಂದು, ಬೆಲ್ಲ ಮತ್ತು ಕಡಲೆಕಾಯಿಯನ್ನು ಹನುಮಂತನಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಹನುಮಂತ ದೇವರನ್ನು ಮೆಚ್ಚಿಸುವ ಜೊತೆಗೆ, ಶನಿ ದೇವರ ಆಶೀರ್ವಾದವನ್ನೂ ಕೂಡ ಪಡೆಯಬಹುದು.
ಇದನ್ನೂ ಓದಿ: Shani Sadesati: ಸದ್ಯದಲ್ಲೇ ಮೇಷ ರಾಶಿಯವರಿಗೆ ಶನಿ ಸಾಡೇಸಾತಿ ಆರಂಭ, ಇದರಿಂದ ಏನೆಲ್ಲಾ ಪರಿಣಾಮಗಳಾಗಲಿವೆ ನೋಡಿ
ಶನಿಯ ಅಮಾವಾಸ್ಯೆಯಂದು ಏನು ಮಾಡಬಾರದು?
- ಈ ದಿನ ಮಾಂಸ ಮತ್ತು ಮದ್ಯ ಸೇವಿಸಬಾರದು.
- ಈ ದಿನ ನಿಮ್ಮ ಪೂರ್ವಜರನ್ನು ಮತ್ತು ಹಿರಿಯರನ್ನು ಅವಮಾನಿಸಬೇಡಿ.
- ಈ ದಿನದಂದು ನಾಯಿಗಳು, ಹಸುಗಳು ಮತ್ತು ಕಾಗೆಗಳಂತಹ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಹಾನಿ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ.
- ಈ ದಿನ ಕೂದಲು, ಗಡ್ಡ ಮತ್ತು ಉಗುರುಗಳನ್ನು ಕತ್ತರಿಸಬಾರದು. ಹೀಗೆ ಮಾಡುವುದರಿಂದ ಗ್ರಹ ದೋಷಗಳು ಉಂಟಾಗುತ್ತವೆ ಎಂದು ನಂಬಲಾಗಿದೆ.
- ಶನಿಯ ಅಮಾವಾಸ್ಯೆಯಂದು ಕಬ್ಬಿಣದ ವಸ್ತುಗಳು, ಪಾದರಕ್ಷೆಗಳು ಅಥವಾ ಶನಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದು.
ಶನಿ ದೋಷವಿದ್ದರೆ ಬದುಕಿನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆ ಕಾರಣಕ್ಕೆ ಶನಿ ಅಮಾವಾಸ್ಯೆಯ ದಿನ ಈ ಮೇಲೆ ಹೇಳಿದ ನಿಯಮಗಳನ್ನು ತಪ್ಪದೇ ಪಾಲಿಸಬೇಕು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ‘ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
