Shani Trayodashi: ಜನವರಿಯಲ್ಲಿ ಶನಿ ತ್ರಯೋದಶಿ ಯಾವಾಗ, ಪಾಲಿಸಬೇಕಾದ ಕ್ರಮಗಳೇನು, ಈ ದಿನ ಉಪವಾಸ ಮಾಡಿದ್ರೆ ಏನು ಪ್ರಯೋಜನ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shani Trayodashi: ಜನವರಿಯಲ್ಲಿ ಶನಿ ತ್ರಯೋದಶಿ ಯಾವಾಗ, ಪಾಲಿಸಬೇಕಾದ ಕ್ರಮಗಳೇನು, ಈ ದಿನ ಉಪವಾಸ ಮಾಡಿದ್ರೆ ಏನು ಪ್ರಯೋಜನ

Shani Trayodashi: ಜನವರಿಯಲ್ಲಿ ಶನಿ ತ್ರಯೋದಶಿ ಯಾವಾಗ, ಪಾಲಿಸಬೇಕಾದ ಕ್ರಮಗಳೇನು, ಈ ದಿನ ಉಪವಾಸ ಮಾಡಿದ್ರೆ ಏನು ಪ್ರಯೋಜನ

ಹಿಂದೂ ಧರ್ಮದಲ್ಲಿ ಶನಿ ಪ್ರದೋಷ ಅಥವಾ ಶನಿ ತ್ರಯೋದಶಿಗೆ ವಿಶೇಷ ಮಹತ್ವವಿದೆ. ಶನಿ ತ್ರಯೋದಶಿಯಂದು ಈಶ್ವರ, ಪಾರ್ವತಿ ಹಾಗೂ ಶನಿದೇವನನ್ನು ಪೂಜಿಸುವುದು ವಾಡಿಕೆ. ಈ ದಿನ ಉಪವಾಸ ಮಾಡುವುದರಿಂದ ವಿಶೇಷ ಫಲ ಲಭಿಸುತ್ತದೆ ಎಂಬ ನಂಬಿಕೆಯೂ ಇದೆ. ಜನವರಿ ತಿಂಗಳಲ್ಲಿ ಶನಿ ಪ್ರದೋಷ ಅಥವಾ ಶನಿ ತ್ರಯೋದಶಿ ವ್ರತ ಯಾವಾಗ, ಈ ದಿನ ಪಾಲಿಸಬೇಕಾದ ಕ್ರಮಗಳೇನು ಎಂಬ ವಿವರ ಇಲ್ಲಿದೆ.

ಶನಿ ತಯ್ರೋದಶಿ ವ್ರತ
ಶನಿ ತಯ್ರೋದಶಿ ವ್ರತ

ಶನಿ ತ್ರಯೋದಶಿ ಅಥವಾ ಶನಿ ಪ್ರದೋಷಕ್ಕೆ ಹಿಂದೂ ಧರ್ಮಕ್ಕೆ ವಿಶೇಷ ಮಹತ್ವವಿದೆ, ಜ್ಯೋತಿಷ್ಯದ ಪ್ರಕಾರವೂ ಇದು ವಿಶೇಷ ದಿನ. ಪ್ರತಿ ತಿಂಗಳ ಕೃಷ್ಣ ಮತ್ತು ಶುಕ್ಲಪಕ್ಷದ ತ್ರಯೋದಶಿಯಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಪ್ರದೋಷ ವ್ರತವು ಶಿವ, ಪಾರ್ವತಿ ಹಾಗೂ ಶನಿಗೆ ಅರ್ಪಿತವಾದ ದಿನವಾಗಿದೆ. ಸಾಮಾನ್ಯವಾಗಿ ತಿಂಗಳಲ್ಲಿ ಎರಡು ದಿನ ಎರಡು ಬಾರಿ ಪ್ರದೋಷ ಬರುತ್ತದೆ. ಯಾವಾಗ ಶನಿವಾರದ ದಿನ ಪ್ರದೋಷ ಬರುವುದೋ ಆ ದಿನವನ್ನು ಶನಿ ತ್ರಯೋದಶಿ ಎಂದು ಕರೆಯಲಾಗುತ್ತದೆ.

ಈ ದಿನ ಉಪವಾಸ ಮಾಡುವುದು ವಿಶೇಷ. ಶಿವ ಪಾರ್ವತಿಯನ್ನು ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಪ್ರದೋಷ ವ್ರತವನ್ನು ಪ್ರದೋಷ ಕಾಲದಲ್ಲಿ ತ್ರಯೋದಶಿಯ ದಿನದಂದು ಮಾಡಲಾಗುತ್ತದೆ. ಪ್ರದೋಷ ವ್ರತವು ಸೂರ್ಯಾಸ್ತದಿಂದ ಪ್ರಾರಂಭವಾಗುತ್ತದೆ. ಜನವರಿ ತಿಂಗಳಲ್ಲಿ ಶನಿ ತ್ರಯೋದಶಿ ಯಾವಾಗ ಬರುತ್ತದೆ, ಈ ದಿನ ಆಚರಿಸಬೇಕಾದ ಕ್ರಮಗಳೇನು ಎಂಬ ಮಾಹಿತಿ ಇಲ್ಲಿದೆ.

ಜನವರಿಯಲ್ಲಿ ಶನಿ ತ್ರಯೋದಶಿ ಯಾವಾಗ?

2025ರ ಜನವರಿಯಲ್ಲಿ ಶನಿ ತ್ರಯೋದಶಿ ವ್ರತ ಅಥವಾ ಶನಿ ಪ್ರದೋಷ ವ್ರತವನ್ನು ಜನವರಿ 11ರಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ತ್ರಯೋದಶಿ ತಿಥಿ ಮತ್ತು ಪ್ರದೋಷ ಒಟ್ಟಿಗೆ ಬಂದಾಗ ಶಿವನ ಪೂಜೆಗೆ ಉತ್ತಮ ಸಮಯ ಎಂದು ನಂಬಲಾಗಿದೆ.

ಶನಿ ತ್ರಯೋದಶಿ ಸಮಯ?

ಜನವರಿ 11 ಬೆಳಿಗ್ಗೆ 8:21 ರಿಂದ ಜನವರಿ 12 ಬೆಳಿಗ್ಗೆ 6:33ರವರೆಗೆ

ಶನಿ ಪ್ರದೋಷ ವ್ರತ ಪೂಜಾ ಮುಹೂರ್ತ

ಶನಿ ಪ್ರದೋಷ ಪೂಜಾ ಮುಹೂರ್ತವು ಸಂಜೆ 5:43 ರಿಂದ 8:26 ರವರೆಗೆ ಇರುತ್ತದೆ. ಒಟ್ಟು ಪೂಜೆಯ ಸಮಯ 2 ಗಂಟೆ 42 ನಿಮಿಷಗಳು.

ತ್ರಯೋದಶಿ ವ್ರತ ಉಪವಾಸ ಆಚರಿಸಿದರೆ ಏನು ಫಲ?

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ತ್ರಯೋದಶಿ ದಿನದಂದು ಉಪವಾಸ ಮಾಡುವುದರಿಂದ ಪಾಪಗಳಿಂದ ವಿಮೋಚನೆ ಸಿಗುತ್ತದೆ ಎಂಬ ನಂಬಿಕೆ ಇದೆ. ಶನಿ ಪ್ರದೋಷದಂದು ಉಪವಾಸ ಮಾಡುವುದರಿಂದ ಸಂತಾನ ಭಾಗ್ಯ ಲಭಿಸುತ್ತದೆ. ಶಿವ ಮಹಾಪುರಾಣದ ಪ್ರಕಾರ, ಪ್ರದೋಷ ಉಪವಾಸವನ್ನು ಆಚರಿಸುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಕಾರಣವಾಗುತ್ತದೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಅವಕಾಶವಿದೆ. ಈ ದಿನ ಉಪವಾಸ ಮಾಡುವುದರಿಂದ ಮಾನಸಿಕ ಕ್ಷೋಭೆಗಳಿಗೆ ಪರಿಹಾರ ಪಡೆಯಬಹುದು. ಚಂದ್ರಬಾಧೆಯಿಂದ ಪರಿಹಾರ ಪಡೆಯಲು ಈ ದಿನ ಉತ್ತಮ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.