ಉತ್ತಮ ಜೀವನಕ್ಕಾಗಿ ತಿಳಿಯಬೇಕಾದ ಅಂಶಗಳು; ಚೈತ್ರ ಮಾಸದಲ್ಲಿ ರಾಮಾಯಣ ಓದಿದರೆ ಎಷ್ಟೊಂದು ಪ್ರಯೋಜನಗಳು-spiritual things for better life benefits of reading ramayana in chaitra masa sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಉತ್ತಮ ಜೀವನಕ್ಕಾಗಿ ತಿಳಿಯಬೇಕಾದ ಅಂಶಗಳು; ಚೈತ್ರ ಮಾಸದಲ್ಲಿ ರಾಮಾಯಣ ಓದಿದರೆ ಎಷ್ಟೊಂದು ಪ್ರಯೋಜನಗಳು

ಉತ್ತಮ ಜೀವನಕ್ಕಾಗಿ ತಿಳಿಯಬೇಕಾದ ಅಂಶಗಳು; ಚೈತ್ರ ಮಾಸದಲ್ಲಿ ರಾಮಾಯಣ ಓದಿದರೆ ಎಷ್ಟೊಂದು ಪ್ರಯೋಜನಗಳು

ವಾಲ್ಮೀಕಿ ಮಹರ್ಷಿಗಳು ಬರೆದಿರುವ ರಾಮಾಯಣ ಹಿಂದೂಗಳ ಪವಿತ್ರ ಗ್ರಂಥವಾಗಿದ್ದು, ಜೀವನಕ್ಕೆ ಹಲವು ಪಾಠಗಳನ್ನು ಇದರಿಂದ ತಿಳಿಯಬಹುದು. ಚೈತ್ರ ಮಾಸದಲ್ಲಿ ರಮಾಯಣ ಓದುವುದರಿಂದ ಸುಖಿಯಾಗಿರಬಹುದು. ಇನ್ನೂ ಏನೆಲ್ಲಾ ಪ್ರಯೋಜಗಳಿವೆ ಅನ್ನೋದನ್ನು ಜ್ಯೋತಿಷಿ ಎಚ್ ಸತೀಶ್ ಅವರು ಬರೆದಿದ್ದಾರೆ.

ಚೈತ್ರ ಮಾಸದಲ್ಲಿ ರಾಮಾಯಣ ಓದಿದರೆ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ಜ್ಯೋತಿಷಿ ಎಚ್ ಸತೀಶ್ ಅವರು ಬರೆದಿದ್ದಾರೆ.
ಚೈತ್ರ ಮಾಸದಲ್ಲಿ ರಾಮಾಯಣ ಓದಿದರೆ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ಜ್ಯೋತಿಷಿ ಎಚ್ ಸತೀಶ್ ಅವರು ಬರೆದಿದ್ದಾರೆ.

ಕಲಿಯುಗದಲ್ಲಿ ಕಲಿಕ ಎಂಬ ವ್ಯಕ್ತಿ ಇರುತ್ತಾನೆ. ಅವನ ಜೀವನ ರೀತಿಯ ವಿಚಿತ್ರವಾಗಿರುತ್ತದೆ. ಸದಾಕಾಲ ಪರಿಸ್ಥಿತಿಯನ್ನು ಅಗೌರವದಿಂದ ಕಾಣುವುದು, ಬೇರೆಯವರ ಹಣವನ್ನು ಕೈವಶ ಮಾಡಿಕೊಳ್ಳುವುದು. ಇಂತಹ ಅಪರಾಧಿ ಪ್ರಕೃತಿ ಅವನಲ್ಲಿ ಮೈಗೂಡಿರುತ್ತದೆ. ತಪ್ಪು ತನ್ನದೇ ಆದರೂ ಪ್ರತಿಯೊಂದು ವಿಚಾರಗಳಿಗೂ ಬೇರೆಯವರನ್ನು ನಿಂದಿಸುವುದು ಇವನ ನಿತ್ಯ ಜೀವನ ಆಗಿರುತ್ತದೆ. ಸನ್ನಡತೆ ಉಳ್ಳ ಜನರನ್ನು, ಪ್ರಾಣಿಗಳನ್ನು, ಅಷ್ಟಲ್ಲದೆ ಲೆಕ್ಕವಿಲ್ಲದಷ್ಟು ಗೋವುಗಳನ್ನು ಹತ್ಯೆ ಮಾಡಿ ಪಾಪದ ಮೂಟೆಯನ್ನು ಹೊತ್ತಿರುತ್ತಾನೆ.

ಸೌವೀರ ಎಂಬ ನಗರವಿತ್ತು. ಆ ನಗರದಲ್ಲಿ ಯಾವುದೇ ರೀತಿಯ ಕಷ್ಟಕಾರ್ಪಣ್ಯಗಳು ಇರುವುದಿಲ್ಲ. ಅಲ್ಲಿಯ ಜನರು ಸುಖ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಆ ನಗರದಲ್ಲಿ ಹಣ, ಒಡವೆ ವೈಡ್ಯೂರ್ಯಕ್ಕೆ ಮತ್ತು ದುಬಾರಿ ವಸ್ತುಗಳಿಗೂ ಕೊರತೆ ಇರುವುದಿಲ್ಲ. ಇಂತಹ ನಗರಕ್ಕೆ ಆಕಸ್ಮಿಕವಾಗಿ ಕಲಿಕನು ಬರುತ್ತಾನೆ. ನಗರದ ಮಧ್ಯೆ ಒಂದು ಉಪವನ ಇತ್ತು. ಅಲ್ಲಿ ಭಗವಾನ್ ವಿಷ್ಣುವಿನ ದೇವಾಲಯವಿತ್ತು. ಇಲ್ಲಿನ ದೇವರನ್ನು ಕೇಶವ ಎಂಬ ಹೆಸಿರಿನಿಂದ ಕರೆಯುತ್ತಿದ್ದರು. ಈ ದೇವಸ್ಥಾನದ ಪ್ರತಿಯೊಂದು ಕಳಶವು ಚಿನ್ನದಿಂದ ಮಾಡಿಸಲ್ಪಟ್ಟಿತ್ತು. ಮೊದಲೇ ಇವನದು ಕಳ್ಳ ಮನಸ್ಸು. ಇಂತಹ ಚಿನ್ನದ ಕಳಶಗಳನ್ನು ನೋಡಿದ ಮೇಲೆ ಕಷ್ಟವಾದರೂ ಸರಿಯೇ ಅದನ್ನು ಕದಿಯಲೇಬೇಕು ಎಂದು ನಿರ್ಧರಿಸಿದನು.

ಆ ದೇವಾಲಯದಲ್ಲಿ ಉತ್ತಂಕ ಎಂಬ ವ್ಯಕ್ತಿಯು ಪೂಜೆಯನ್ನು ಮಾಡಿಕೊಂಡು ದೇವರ ಜ್ಞಾನದಲ್ಲಿ ಮುಳುಗಿ ಜೀವನವನ್ನು ನಡೆಸುತ್ತಿರುತ್ತಾನೆ. ಆ ದೇವಾಲಯಕ್ಕೆ ಬಂದ ಕಲಿಕನು ಇವನನ್ನು ಗಮನಿಸುತ್ತಾನೆ. ಆಗ ಅವನ ಮನಸ್ಸಿನಲ್ಲಿ ನನ್ನ ಕಳ್ಳತನಕ್ಕೆ ಇವನು ಅಡ್ಡಿಯಾಗಬಹುದು ಎಂಬ ಅನುಮಾನ ಉಂಟಾಗುತ್ತದೆ. ಆದ್ದರಿಂದ ಈ ಚಿನ್ನದ ಕಳಶಗಳು ತನ್ನ ಕೈವಶವಾಗಬೇಕೆಂದರೆ ಇವನ ಜೀವ ತೆಗೆಯುವುದೇ ಸರಿ ಎಂಬ ನಿರ್ಧಾರಕ್ಕೆ ಬರುತ್ತಾನೆ. ತಕ್ಷಣವೇ ಅವನನ್ನು ಕೊಲ್ಲಲು ಹೋಗುತ್ತಾನೆ.

ಈ ಘಟನೆಯಿಂದ ಭಯ ಬೀತಗೊಂಡ ಉತ್ತಂಕನು ನಿನಗೆ ನಾನು ಯಾವ ರೀತಿಯಲ್ಲಿ ದ್ರೋಹ ಮಾಡಿದ್ದೇನೆ. ನನ್ನ ತಪ್ಪಾದರೂ ಏನು. ತಪ್ಪು ಮಾಡದೆ ಹೋದವನನ್ನು ಹಿಂಸಿಸುವುದನ್ನು ಭಗವಾನ್ ವಿಷ್ಣು ಕ್ಷಮಿಸುವುದಿಲ್ಲ ಎಂದು ಹೇಳುತ್ತಾನೆ. ನನ್ನನ್ನು ನಂಬಿರುವ ಜನರಿಗೆ ಕಷ್ಟ ನನ್ನ ಸಾವಿನಿಂದ ಕಷ್ಟ ಒದಗುತ್ತದೆ. ಆದ್ದರಿಂದ ನನ್ನ ತಪ್ಪನ್ನು ತಿಳಿಸೆಂದು ಹೇಳುತ್ತಾನೆ. ಸಂಬಂಧಿಕರು ಕೇವಲ ನಮ್ಮ ಹಣ ಮತ್ತು ಅಂತಸ್ತನ್ನು ಉಪಯೋಗಿಸಿಕೊಳ್ಳುತ್ತಾರೆ. ಯಾರೂ ನಮ್ಮ ಹಿಂದೆ ಬರುವುದಿಲ್ಲ. ನಮ್ಮ ಹಿಂದೆ ಬರುವುದು ಕೇವಲ ನಾವು ಮಾಡಿದ ಪಾಪ ಪುಣ್ಯ ಮಾತ್ರ. ಆದ್ದರಿಂದ ನಿನ್ನ ಮನಸ್ಸನ್ನು ಬದಲಾಯಿಸಿ, ಒಳ್ಳೆಯತನವನ್ನು ಬೆಳೆಸಿಕೋ ಎಂದು ಹೇಳುತ್ತಾನೆ. ಈ ಮಾತುಗಳಿಂದ ಕಲಿಕನಲ್ಲಿ ಭಯ ಉಂಟಾಗುತ್ತದೆ.

ತಕ್ಷಣವೇ ಕಲಿತನು ತನ್ನ ಕೈಲಿದ್ದ ಕತ್ತಿಯನ್ನು ಪಕ್ಕಕ್ಕೆ ಬಿಸಾಕಿ, ಕೈಮುಗಿದು ನನ್ನನ್ನು ಕ್ಷಮಿಸಿಬಿಡಿ, ನನಗೆ ತಿಳಿಯದೆ ಮತ್ತು ತಿಳಿದರೂ ಸಹ ಅನೇಕ ರೀತಿಯ ತಪ್ಪುಗಳನ್ನು ಮಾಡಿದ್ದೇನೆ. ಒಳ್ಳೆಯವರು ಕೆಟ್ಟವರು ಎನ್ನದೆ ಎಲ್ಲರನ್ನೂ ಹಿಂಸೆಗೆ ಗುರಿಪಡಿಸಿದ್ದೇನೆ. ಕಾಡು ಮೃಗಗಳಲ್ಲದೆ ಪೂಜೆ ಮಾಡುವ ಗೋವನ್ನು ಹತ್ಯೆಗೈದಿದ್ದೇನೆ ಇದರಿಂದಾಗಿ ನನ್ನ ಪಾಪಕ್ಕೆ ಪ್ರಾಯಶ್ಚಿತವೆ ಇರುವುದಿಲ್ಲ. ನಿಮ್ಮ ಒಳ್ಳೆಯ ಮಾತುಗಳಿಂದಾಗಿ ನನಗೆ ಒಳ್ಳೆಯದಾಗಬೇಕೆಂಬ ಹಂಬಲ ಉಂಟಾಗಿದೆ. ಆದರೆ ನನ್ನಂತಹವನನ್ನು ಶಿಷ್ಯರನ್ನಾಗಿ ಯಾರು ಸ್ವೀಕರಿಸುತ್ತಾರೆ ಎಂದು ದುಃಖಿತನಾಗುತ್ತಾನೆ.

ಆಗ ಉತ್ತಂಕನುಯಾವ ವೇಳೆಯಲ್ಲಿ ನೀನು ಈ ವಿಷ್ಣುವಿನ ಮಂದಿರವನ್ನು ಪ್ರವೇಶ ಮಾಡಿದೆಯೋ ಹಾಗೆ ಆ ಕ್ಷಣದಲ್ಲಿ ನೀನು ಮಾಡಿದ ಪಾಪಗಳೆಲ್ಲ ನಶಿಸಿಹೋಗಿದೆ. ಪಾಪ ಕಾರ್ಯ ಮಾಡುವುದು ಮಾತ್ರವಲ್ಲ ಅದರ ಬಗ್ಗೆ ಚಿಂತಿಸುವುದು ಸಹ ಮಹಾಪಾಪ ಎನಿಸುತ್ತದೆ. ಇದು ಚೈತ್ರ ಮಾಸವಾದ ಕಾರಣ ನಾವು ನಿನಗೆ ರಾಮಾಯಣದ ಕಥೆಯನ್ನು ಹೇಳುತ್ತೇನೆ. ಅದನ್ನು ಮನಸ್ಸಿಟ್ಟು ಕೇಳುವುದರಿಂದ ಅಥವಾ ಒಂದೇ ಮನಸ್ಸಿನಿಂದ ಓದುವುದರಿಂದ ನಾವು ಮಾಡಿರುವ ಪಾಪ ಕಾರ್ಯಗಳಿಂದ ಮುಕ್ತಿ ದೊರೆಯುತ್ತದೆ ಎಂದು ಹೇಳುತ್ತಾನೆ.

ಕಲಿಕನು ಬಲು ಶ್ರದ್ಧಾ ಭಕ್ತಿಯಿಂದ ರಾಮಾಯಣದ ಕಥೆಯನ್ನು ಆಲಿಸುತ್ತಾನೆ. ದಿನಗಳೆದಂತೆ ಕಲಿಕನು ಪ್ರಾಣತ್ಯಾಗ ಮಾಡುತ್ತಾನೆ. ಆಗ ಬಂದ ದೈವ ವಿಮಾನವನ್ನು ಹತ್ತಿ, ಕಲಿಕನು ನೇರವಾಗಿ ಸದ್ಗತಿಯನ್ನು ಪಡೆದು ವಿಷ್ಣು ಲೋಕಕ್ಕೆ ಪ್ರಯಾಣ ಬೆಳೆಸುತ್ತಾನೆ. ಈ ಕತೆಯಿಂದ ಚೈತ್ರಮಾಸದಲ್ಲಿ ರಾಮಾಯಣ ಪಾರಾಯಣ ಮಾಡಿದಲ್ಲಿ ಮಾಡಿದ ಪಾಪವೆಲ್ಲವೂ ನಶಿಸುತ್ತವೆ ಎಂದು ತಿಳಿಯಬಹುದು. ಅಲ್ಲದೆ, ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಿರುತ್ತದೆ ಎಂದು ಹೇಳಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.