ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಿಂದ ಶ್ರೀಶೈಲಕ್ಕೆ ಹೋಗಲು ರೈಲುಗಳ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಿಂದ ಶ್ರೀಶೈಲಕ್ಕೆ ಹೋಗಲು ರೈಲುಗಳ ವಿವರ

ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಿಂದ ಶ್ರೀಶೈಲಕ್ಕೆ ಹೋಗಲು ರೈಲುಗಳ ವಿವರ

ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಿಂದ ಶ್ರೀಶೈಲಂಗೆ ರೈಲು ಸೇವೆಗಳು ಲಭ್ಯ ಇವೆ. ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಿಂದ ಶ್ರೀಶೈಲಕ್ಕೆ ಹೋಗುವ ರೈಲುಗಳ ವಿವರ ಇಲ್ಲಿದೆ.

ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಿಂದ ಶ್ರೀಶೈಲಕ್ಕೆ ಹೋಗಲು ರೈಲುಗಳ ವಿವರವನ್ನು ಇಲ್ಲಿ ನೀಡಲಾಗಿದೆ.
ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಿಂದ ಶ್ರೀಶೈಲಕ್ಕೆ ಹೋಗಲು ರೈಲುಗಳ ವಿವರವನ್ನು ಇಲ್ಲಿ ನೀಡಲಾಗಿದೆ.

ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿರುವ ಶ್ರೀಶೈಲ ಮಹಾಕ್ಷೇತ್ರವನ್ನು ಭೂಮಿಯ ಮೇಲಿನ ಕೈಲಾಸವೆಂದು ಪರಿಗಣಿಸಲಾಗಿದೆ. ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾಗಿರುವ ಶ್ರೀಶೈಲಕ್ಕೆ ಭೇಟಿ ನೀಡುವುದರಿಂದ ಗಳಿಸುವ ಪುಣ್ಯವು ಬ್ರಹ್ಮಾಂಡದಲ್ಲಿರುವ ಎಲ್ಲಾ ದೈವಿಕ ಶಕ್ತಿಯನ್ನು ಪೂಜಿಸುವುದಕ್ಕೆ ಸಮಾನವಾಗಿದೆ ಎಂದು ಇತಿಹಾಸ ಮತ್ತು ಸಂಪ್ರದಾಯಗಳು ಹೇಳುತ್ತವೆ.

ಶ್ರೀಶೈಲ ಮಹಾಕ್ಷೇತ್ರವು ಪ್ರಾಚೀನ ಮತ್ತು ಅಧ್ಯಾತ್ಮಿಕ-ಸಾಂಸ್ಕೃತಿಕ ಸಂಪ್ರದಾಯಗಳು ಹಾಗೂ ಮೌಲ್ಯಗಲ ಜೀವಂತಕ್ಕೆ ಸಾಕ್ಷಿಯಾಗಿದೆ. ಶ್ರೀರಾಮ, ಆದಿ ಶಂಕರಾಚಾರ್ಯ ಹಾಗೂ ಇತರೆ ಹಲವಾರು ಅಧ್ಯಾತ್ಮಿಕ ವ್ಯಕ್ತಿಗಳ ಜೊತೆಗೆ ಮಹಾನ್ ಸಂತರು ಕೂಡ ಇಲ್ಲಿಗೆ ಭೇಟಿ ನೀಡಿದ್ದಾರೆ. ಶ್ರೀಶೈಲವು ಅಧ್ಯಾತ್ಮಿಕ ಸತ್ಯದ ಅತ್ಯುನ್ನತ ಭಂಡರವಾಗಿದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ನೀವೇನಾದರೂ ಉತ್ತರ ಕರ್ನಾಟಕದ ಭಾಗದವರಾಗಿದ್ದು ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿ ನೀಡಬೇಕೆಂದರೆ ರೈಲು ಸೇವೆಗಳು ಬಗ್ಗೆ ತಿಳಿಯಬೇಕು. ಇವರ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಲಾಗಿದೆ. ಅದರಲ್ಲೂ ಹುಬ್ಬಳ್ಳಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣಗಳಿಂದ ಶ್ರೀಶೈಲಕ್ಕೆ ಹೋಗಲು ರೈಲುಗಳ ವಿವರಗಳು ಇಲ್ಲಿವೆ.

ಶ್ರೀಶೈಲಕ್ಕೆ ನೇರ ರೈಲು ಸಂಪರ್ಕ ಇಲ್ಲ. ಆದರೆ ಶ್ರೀಶೈಲ ಸಮೀಪದ ಮಾರ್ಕಪುರಂರೋಡ್ ರೈಲು ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ಶ್ರೀಶೈಲಂಗೆ ಹೋಗಬಹುದು. ಮಾರ್ಕಪುರಂರೋಡ್ ರೈಲು ನಿಲ್ದಾಣದಿಂದ ಶ್ರೀಶೈಲಂಗೆ ಅಂದಾಜು 85-90 ಕಿಲೋಮೀಟರ್ ಅಂತರವಿದೆ. ಯಾವ ರೈಲು ಯಾವ ನಿಲ್ದಾಣದಿಂದ ಎಷ್ಟು ಗಂಟೆಗೆ ಹೊರಡಲಿದೆ ಎಂಬುನ್ನು ಇಲ್ಲಿ ವಿವರಿಸಲಾಗಿದೆ.

18048 ವಾಸ್ಕೋ ಡ ಗಾಮಾ - ಶಾಲಿಮಾರ್ ಅಮರಾವತಿ ಎಕ್ಸ್ ಪ್ರೆಸ್ ರೈಲು

ಪ್ರತಿ ಭಾನುವಾರ, ಮಂಗಳವಾರ, ಗುರು ಮತ್ತು ಶುಕ್ರವಾರ ಈ ರೈಲು ಸೇವೆ ಇರುತ್ತೆ

  • ಹುಬ್ಬಳ್ಳಿ ಜಂ. ಬೆಳಿಗ್ಗೆ 11:55
  • ಗದಗ ಜಂ. ಮಧ್ಯಾಹ್ನ 12:58
  • ಕೊಪ್ಪಳ ಮಧ್ಯಾಹ್ನ 01:50
  • ಹೊಸಪೇಟೆ ಜಂ. ಮಧ್ಯಾಹ್ನ 02:28
  • ಬಳ್ಳಾರಿ ಜಂ. ಸಂಜೆ 04:18 ಹೊರಟು, ರಾತ್ರಿ 10:04ಕ್ಕೆ ಮಾರ್ಕಪುರಂರೋಡ್ ರೈಲು ನಿಲ್ದಾಣ ತಲುಪುತ್ತದೆ.

17226 ಹುಬ್ಬಳ್ಳಿ - ನರಸಾಪುರ ಅಮರಾವತಿ ಎಕ್ಸ್ ಪ್ರೆಸ್ ರೈಲು ಪ್ರತಿದಿನ ಸಂಚಾರ

  • ಹುಬ್ಬಳ್ಳಿ ಜಂ. ಮಧ್ಯಾಹ್ನ 01:00
  • ಗದಗ ಜಂ. ಮಧ್ಯಾಹ್ನ 01:50
  • ಕೊಪ್ಪಳ ಮಧ್ಯಾಹ್ನ 02:49
  • ಹೊಸಪೇಟೆ ಜಂ. ಮಧ್ಯಾಹ್ನ 03:25
  • ಬಳ್ಳಾರಿ ಜಂ. ಸಂಜೆ 05:30 ಹೊರಟು, ರಾತ್ರಿ 11:09ಕ್ಕೆ ಮಾರ್ಕಪುರಂರೋಡ್ ರೈಲು ನಿಲ್ದಾಣ ತಲುಪುತ್ತದೆ.

17329 ಹುಬ್ಬಳ್ಳಿ - ವಿಜಯವಾಡ ಎಕ್ಸ್ ಪ್ರೆಸ್ ರೈಲು ಸೇವೆ

  • ಹುಬ್ಬಳ್ಳಿ ಜಂ. ಸಂಜೆ 07:30
  • ಗದಗ ಜಂ. ರಾತ್ರಿ 08:28
  • ಕೊಪ್ಪಳ ರಾತ್ರಿ 09:21
  • ಹೊಸಪೇಟೆ ಜಂ. ರಾತ್ರಿ 10:05
  • ಬಳ್ಳಾರಿ ಜಂ. ಮಧ್ಯರಾತ್ರಿ 12:05 ಹೊರಟು, ಮರುದಿನ ಬೆಳಿಗ್ಗೆ 07:09ಕ್ಕೆ ಮಾರ್ಕಪುರಂರೋಡ್ ರೈಲು ನಿಲ್ದಾಣ ತಲುಪುತ್ತದೆ.

ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.