Friday Remedies: ಶುಕ್ರವಾರ ಲಕ್ಷ್ಮಿ ದೇವಿ ಮುಂದೆ ಹೀಗೆ ಮಾಡಿ ನೋಡಿ; ಹಣದ ಕೊರತೆ ಇರಲ್ಲ, ಸಂಪತ್ತು ಹೆಚ್ಚಾಗುತ್ತೆ
Friday Remedies: ನೀವು ಶುಕ್ರವಾರ ಇಲ್ಲಿ ನೀಡಿರುವ ಕ್ರಮಗಳನ್ನು ಅನುಸರಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿರುತ್ತಾಳೆ. ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಸಂಪತ್ತು ಹೆಚ್ಚಾಗುತ್ತದೆ. ಆರ್ಥಿಕ ತೊಂದರೆಗಳಿಂದ ಹೊರಬರುತ್ತೀರಿ. ಈ ಪರಿಹಾರದ ಕ್ರಮಗಳನ್ನು ತಿಳಿಯಿರಿ.

Friday Remedies: ಹಿಂದೂ ಧರ್ಮದಲ್ಲಿ ಪ್ರಕಾರ, ಶುಕ್ರವಾರ ಲಕ್ಷ್ಮಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇದರಿಂದ ಅನೇಕ ಶುಭಫಲಗಳು ಸಿಗುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ. ಲಕ್ಷ್ಮಿ ದೇವಿಯ ಆಶೀರ್ವಾದ ಮತ್ತು ಪರಿಹಾರಗಳಿಗಾಗಿ ಭಕ್ತರು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ, ಆದರೆ ವಾಸ್ತವವಾಗಿ, ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಕೆಲವು ಪರಿಹಾರಗಳು ಅದ್ಭುತವಾಗಿ ಕಾರ್ಯನಿರ್ವಹಿಸುತ್ತವೆ.
ಇಲ್ಲಿ ನೀಡಲಾಗಿರುವ ಪರಿಹಾರದ ಕ್ರಮಗಳನ್ನು ಅನುಸರಿಸಿದರೆ ಹಣದ ಕೊರತೆ ಇರುವುದಿಲ್ಲ, ಆದರೆ ಶುಕ್ರವಾರ ಇದನ್ನು ಮಾಡಿದರೆ, ನೀವು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿರುತ್ತಾಳೆ. ಲಕ್ಷ್ಮಿ ದೇವಿಯ ಆಶೀರ್ವಾದದಿಂದ, ಸಂಪತ್ತು ಹೆಚ್ಚಾಗುತ್ತದೆ ಮತ್ತು ಆರ್ಥಿಕ ತೊಂದರೆಗಳಿಂದ ಹೊರಬರುತ್ತೀರಿ. ಶುಕ್ರವಾರ ಏನು ಪರಿಹಾರ ಕ್ರಮಗಳನ್ನು ಅನುಸರಿಸಬೇಕೆಂಬುದನ್ನು ತಿಳಿಯೋಣ.
ಆರ್ಥಿಕ ಸಮಸ್ಯೆಗಳ ಪರಿಹಾರಕ್ಕಾಗಿ ಶುಕ್ರವಾರ ಹೀಗಿ ಮಾಡಿ
- ಐದು ವೀಳ್ಯದೆಲೆಗಳನ್ನು ತೆಗೆದುಕೊಳ್ಳಿ. ಈ ಐದು ಎಲೆಗಳಿಗೆ ಶ್ರೀಗಂಧವನ್ನು ಲೇಪಿಸಿದ ನಂತರ ಅರಿಶಿನ ಕುಂಕುಮ ಇಡಿ
- ನಂತರ ಎಲೆಗಳನ್ನು ಗುಂಡಾಗಿ ಸುತ್ತಿ ಅದರ ಮೇಲೆ ಒಂದು ಮಣ್ಣಿನ ದೀಪವನ್ನು ಇಡಿ
- ಈ ಮಣ್ಣಿನ ದೀಪಕ್ಕೂ ಗಂಧ, ಅರಿಶಿನ ಕುಂಕುಮ, ಹೂವುಗಳಿಂದ ಸಿಂಗರಿಸಿ
- ನಂತರ ದೀಪದಲ್ಲಿ ಕಲ್ಲು ಉಪ್ಪು ಹಾಕಿದ ನಂತರ ಅರಿಶಿನ ಕುಂಕುಮ ಹಚ್ಚಿ. ದೀಪದ ತುಂಬಾ ಉಪ್ಪು ಹಾಕುವುದನ್ನು ಮರಿಯಬೇಡಿ.
- ನಂತರ ಇನ್ನೊಂದು ದೀಪವನ್ನು ತೆಗೆದುಕೊಂಡು, ಅದಕ್ಕೆ ಹಸುವಿನ ತುಪ್ಪ ಸೇರಿಸಿ. ಎರಡು ಬತ್ತಿಗಳನ್ನು ಒಂದಾಗಿ ಮಾಡಿ ಉಪ್ಪು ತುಂಬಿಸಿರುವ ದೀಪದ ಮೇಲೆ ಇಟ್ಟು ದೀಪವನ್ನು ಹಚ್ಚಬೇಕು
- ನಂತರ ಈ ದೀಪದ ಸುತ್ತ ಹೂವುಗಳನ್ನು ಇಟ್ಟು ಅಲಂಕರಿಸಬೇಕು
- ದೀಪಕ್ಕೆ ಆರತಿಯನ್ನು ಬೆಳಗಬೇಕು. ಅಕ್ಷತೆಕಾಳು ಹಾಕಿದ ನಂತರ ನಮಸ್ಕಾರ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಅನುಗ್ರಹ ದೊರೆತು ಸಂತೋಷದಿಂದ ಇರುತ್ತೀರಿ.
ಇದನ್ನೂ ಓದಿ: ಶುಕ್ರವಾರ ಹೊರತುಪಡಿಸಿ ವಾರದ ಬೇರೆ ಯಾವ ದಿನಗಳು ಚಿನ್ನ ಖರೀದಿಸಬಹುದು? ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾದ ಆ ವಾರಗಳು ಯಾವುವು?
ಶುಕ್ರವಾರ ಸಂಜೆ ನೀವು ಇವುಗಳನ್ನು ಅನುಸರಿಸಿದರೆ, ಉತ್ತಮ ಫಲಿತಾಂಶ ಸಿಗುತ್ತದೆ.
- ಶುಕ್ರವಾರದಂದು, ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಹಸುಗಳಿಗೆ ಹಸಿರು ಮೇವಿನ ಆಹಾರವನ್ನು ನೀಡಬೇಕು. ಇಲ್ಲದಿದ್ದರೆ ಬೆಲ್ಲ ಬೆರೆಸಿದ ಆಹಾರವನ್ನು ನೀಡಬೇಕು
- ಶುಕ್ರವಾರ ಮಲಗುವ ಮೊದಲು ಲಕ್ಷ್ಮಿ ದೇವಿಯ ವಿಗ್ರಹಕ್ಕೆ ಮಲ್ಲಿಗೆ ಹೂವುಗಳನ್ನು ಅರ್ಪಿಸುವುದು ಒಳ್ಳೆಯದು. ಹೀಗೆ ಮಾಡಿದರೆ ಹಣದ ಸಮಸ್ಯೆ ಇರುವುದಿಲ್ಲ.
- ವೈವಾಹಿಕ ಜೀವನದಲ್ಲಿ ತೊಂದರೆಗಳಿದ್ದರೆ, ಲಕ್ಷ್ಮಿ ದೇವಿಗೆ ಗುಲಾಬಿಗಳನ್ನು ಅರ್ಪಿಸುವುದು ಉತ್ತಮ. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.
- ಶುಕ್ರವಾರ ಸಂಜೆ, ಲಕ್ಷ್ಮಿ ದೇವಿಯ ಮುಂದೆ ಐದು ದೀಪಗಳನ್ನು ಬೆಳಗಿಸಿ ಆರತಿ ಮಾಡಿದರೆ, ಉತ್ತಮ ಫಲಿತಾಂಶವೂ ಸಿಗುತ್ತದೆ. ಇದನ್ನು ಪಂಚಮುಖಿ ದೀಪಂ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲಾಗುತ್ತದೆ. ನೀವು ಸಂತೋಷವಾಗಿರುತ್ತೀರಿ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
