ಉತ್ತರಾಖಂಡ್: 12 ವರ್ಷಗಳ ಬಳಿಕ ಸರಸ್ವತಿ ಪುಷ್ಕರ; ಚಮೋಲಿಯ ಕೇಶವ್ ಪ್ರಯಾಗ್ ನಲ್ಲಿ ಭಕ್ತರಿಂದ ಪುಷ್ಕರ ಕುಂಭ ಸ್ನಾನ
2025ರ ಮೇ 14 ರಿಂದ 26 ರವರೆಗೆ ಉತ್ತರಾಖಂಡ್ ನ ಚಮೋಲಿ ಜಿಲ್ಲೆಯ ಮನ ಸಮೀಪದ ಕೇಶವ್ ಪ್ರಯೋಗ್ ನಲ್ಲಿ ನಡೆಯುತ್ತಿರುವ ಪುಷ್ಕರ ಕುಂಭದಲ್ಲಿ ನೂರಾರು ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ.

ಪುಷ್ಕರ ಕುಂಭದಲ್ಲಿ ಪುಣ್ಯ ಸ್ನಾನಕ್ಕಾಗಿ ನೂರಾರು ಮಂದಿ ಭಕ್ತರು ಭಾನುವಾರು (ಮೇ 18) ಕೇಶವ ಪ್ರಯಾಗದಲ್ಲಿ ಜಯಾಸಿದ್ದಾರೆ. ಉತ್ತರಾಖಂಡ್ ನ ಚೋಮಲಿ ಜಿಲ್ಲೆಯ ಗಡಿ ಗ್ರಾಮವಾದ ಮಾನಾ ಸಮೀಪದ ಕೇಶವ್ ಪ್ರಯಾಗ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. 12 ವರ್ಷಗಳ ಬಳಿಕ ಈ ಪುಷ್ಕರ ಕುಂಭ ನಡೆಯುತ್ತಿದೆ.
ಉತ್ತರಾಖಂಡ್ ಸಿಎಂ ಕಚೇರಿಯ ಮಾಹಿತಿ ಪ್ರಕಾರ, ಅಲಕಾನಂದ ಮತ್ತು ಸ್ವರಸ್ವತಿ ನದಿಗಳಲ್ಲಿ ಸಂಗಮವಾದ ಕೇಶವ್ ಪ್ರಯಾಗ್ ನಲ್ಲಿ ಮೇ 14 ರಿಂದ 26 ರವರೆಗೆ ಆಯೋಜಿಸಿರು ಪುಷ್ಕರ ಕುಂಭದಲ್ಲಿ ಈಗಾಗಲೇ ಸಾವಿರಾರು ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ. ದಕ್ಷಿಣ ಭಾರತದಿಂದ ಹೆಚ್ಚು ಭಕ್ತರು ಪುಣ್ಯ ಸ್ನಾನಕ್ಕಾಗಿ ಇಲ್ಲಿಗೆ ಆಗಮಿಸುತ್ತಿರುವುದು ವಿಶೇಷ ಎಂದು ಸಿಎಂಒ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.
ಬದರೀನಾಥ ಧಾಮದ ಬಳಿಯ ಭಾರತದ ಮೊದಲ ಗ್ರಾಮವಾದ ಮಾನಾದಲ್ಲಿ 12 ವರ್ಷಗಳ ನಂತರ ಪುಷ್ಕರ್ ಕುಂಭ ಆರಂಭವಾಗಿದೆ. ಇದು ನಂಬಿಕೆಯ ಮಹಾನ್ ಹಬ್ಬವಾಗಿದ್ದು, ನಮ್ಮ ಶಾಶ್ವತ ಸಂಪ್ರದಾಯಗಳ ದೈವತ್ವದ ಜೀವಂತ ಉದಾಹರಣೆಯಾಗಿದೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಕುಂಭ ಮೇಳಕ್ಕಾಗಿ ಪಾದಚಾರಿ ಮಾರ್ಗವನ್ನು ಸರಿಪಡಿಸಲಾಗಿದೆ. ಸುಗಮ ಸಂಚಾರಕ್ಕಾಗಿ ಪಾದಚಾರಿ ಮಾರ್ಗದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇಲ್ಲಿ ಸಂಗಮ್ ಕರಾವಳಿ ಎಸ್ ಡಿಆರ್ ಎಫ್ ಸೈನಿಕರನ್ನು ಸಹ ನಿಯೋಜಿಸಲಾಗಿದೆ. ಎಲ್ಲವನ್ನು ಮೇಲ್ವಿಚಾರಣೆ ಮಾಡಲು ತಹಸೀಲ್ದಾರ್ ಮಟ್ಟದ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ ಮಾಹಿತಿ ನೀಡಿದ್ದಾರೆ.
ಗುರು ಗ್ರಹವು 12 ವರ್ಷಗಳ ನಂತರ ಮಿಥುನ ರಾಶಿಯವನ್ನು ಪ್ರವೇಶಿಸಿದಾಗ ಮಾನ ಗ್ರಾಮದ ಅಲಂಕನಂದಾ ಮತ್ತು ಸರಸ್ವತಿ ನದಿಗಳ ಸಂಗಮ ಕೇಶವ ಪ್ರಯಾಗದಲ್ಲಿ ಪುಷ್ಕರ ಕುಂಭ ಮೇಳವನ್ನು ನಡೆಸಲಾಗುತ್ತದೆ. ದಕ್ಷಿಣ ಭಾರತದ ವೈಷ್ಣವ ಅನುಯಾಯಿಗಳು ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಭಾಗವಹಿರುತ್ತಾರೆ.