ವೈಕುಂಠ ಏಕಾದಶಿ 2025: ಬೆಂಗಳೂರು ಇಸ್ಕಾನ್ ನಲ್ಲಿ ನಡೆಯುವ ವಿಶೇಷ ಸೇವೆಗಳು, ದರ್ಶನ ಸಮಯದ ಮಾಹಿತಿ ಇಲ್ಲಿದೆ
ಜನವರಿ 10 ರಂದು ಎಲ್ಲೆಡೆ ಅದ್ಧೂರಿಯಾಗಿ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಬೆಂಗಳೂರಿನ ಇಸ್ಕಾನ್ ದೇವಾಲಯಗಳಲ್ಲಿ ಯಾವೆಲ್ಲಾ ಸೇವೆಗಳು ಲಭ್ಯ ಇವೆ, ದರ್ಶನ ಸಮಯ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಿಂದೂ ಸಂಪ್ರದಾಯದ ಪ್ರಕಾರ, ವೈಕುಂಠ ಏಕಾದಶಿಯನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಬೆಳಯುತ್ತಿರುವ ಅಥವಾ ಕ್ಷೀಣಿಸುತ್ತಿರುವ ಚಂದ್ರನ ಹದಿನೈದು ದಿನಗಳ ಹನ್ನೊಂದನೇ ದಿನವಾಗಿದೆ. ಇದು ತಿಂಗಳಿಗೆ ಎರಡು ಬಾರಿ ಸಂಭವಿಸುತ್ತದೆ. ಆದರೆ ಮಾರ್ಗಶಿರ ಮಾಸದಲ್ಲಿ (ಡಿಸೆಂಬರ್ - ಜನವರಿ) ಬರುವ ಹೈದಿನೈದು ದಿನಗಳಲ್ಲಿ ಬರುವ ಏಕಾದಶಿಯು ವಿಶೇಷ ಪ್ರಾಮುಖ್ಯವನ್ನು ಹೊಂದಿದೆ. ವೈಕುಂಠ ಏಕಾದಶಿ ದಿನ ಭಗವಂತನ ವಾಸಸ್ಥಾನ ವೈಕುಂಠದ ದ್ವಾರಗಳು ಆತನ ಭಕ್ತರಿಗೆ ತೆರೆದುಕೊಳ್ಳುತ್ತವೆ ಎಂಬ ನಂಬಿಕೆ ಇದೆ.
ಈ ವರ್ಷ ಜನವರಿ 10 ರಂದು ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ. ಅಂದು ವಿಷ್ಣುವಿನ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಅಲಂಕಾರಗಳನ್ನು ಮಾಡಲಾಗುತ್ತದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದು ಹಬ್ಬವಾಗಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆ ದಿನ ದೇವಾಲಯಗಳಿಗೆ ಹೂವು ಹಾಗೂ ದೀಪಾಲಂಕಾರ ಮಾಡಲಾಗುತ್ತದೆ. ನೂರಾರು ಭಕ್ತರು ದೇವಾಲಯಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಬೆಂಗಳೂರಿನ ಇಸ್ಕಾನ್ ದೇವಾಲಯಲ್ಲೂ ವೈಕುಂಠ ಏಕಾದಶಿಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ.
ವೈಕುಂಠ ಏಕಾದಶಿಯಂದು ವಿಷ್ಣುವಿನ ಭಕ್ತರು ಏಕಾದಶಿ ವ್ರತವನ್ನು ಆಚರಿಸುತ್ತಾರೆ. ಶ್ಲೋಕಗಳನ್ನು ಪಠಿಸುತ್ತಾರೆ. ಹಾಡು, ಭಜನೆಗಳ ಮೂಲಕ ಪರಮಾತ್ಮನನ್ನು ಸ್ಮರಿಸುತ್ತಾರೆ. ಧಾರ್ಮಿಕ ಮೂಲಗಳು ಪ್ರಕಾರ, ಒಬ್ಬ ಮಹಾನ್ ಭಕ್ತ ನಮ್ಮಾಳ್ವಾರ್ ಈ ದಿನ ವೈಕುಂಠ ದ್ವಾರದ ಮೂಲಕ ದೇವರ ಬಳಿಗೆ ಬರುತ್ತಾನೆ. ಈ ಘಟನೆಯ ನೆನಪಿಗಾಗಿ ಎಲ್ಲಾ ವಿಷ್ಣು ದೇವಾಲಯಗಳನ್ನು ತೆರೆದು ಪೂಜೆ ಮಾಡಲಾಗುತ್ತದೆ.
ವೈಕುಂಠ ಏಕಾದಶಿಯ ಶುಭ ಸಂದರ್ಭದಲ್ಲಿ ಭಗವಂತನನ್ನು ಮೆಚ್ಚಿಸಲು ಮಾಡಬೇಕಾದ ಕೆಲಸಗಳು
- ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ ಪೂಜೆಗೆ ಸಿದ್ಧವಾಗುವುದು
- ನಿಮ್ಮ ಹತ್ತಿರದ ವಿಷ್ಣು ಅಥಾ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಭಗವಂತನ ಆಶೀರ್ವಾದ ಪಡೆಯಿರಿ
- ಸಾಧ್ಯವಾದಷ್ಟು ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸಿ
- ಭಗವದ್ಗೀತೆಯನ್ನು ಓದಿ ಮತ್ತು ಭಗವಂತನ ಉಪದೇಶಗಳನ್ನು ಪಾಲಿಸಿ
- ಏಕಾದಶಿ ಉಪವಾಸವನ್ನು ಆಚರಿಸಿ ಮತ್ತು ಪ್ರವಾಸದವನ್ನು ವಿತರಿಸಿ
ಬೆಂಗಳೂರಿನ ಇಸ್ಕಾನ್ ದೇವಾಯಗಳಲ್ಲಿ ದರ್ಶನ ಸಮಯ
- ರಾಜಾಜಿನಗರದಲ್ಲಿರುವ ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಸ್ಥಾನದಲ್ಲಿ ದರ್ಶನದ ಸಮಯ ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ
- ವಸಂತಪುರದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ದರ್ಶನದ ಸಮಯ ಬೆಳಗ್ಗೆ 5.30 ರಿಂದ ರಾತ್ರಿ 10 ರವರೆಗೆ
ಇಸ್ಕಾನ್ ದೇವಾಲಯಗಳಲ್ಲಿ ವಿವಿಧ ಸೇವೆಗಳನ್ನು ಸಲ್ಲಿಸಲಾಗುತ್ತದೆ. ಆಸಕ್ತ ಭಕ್ತರು ಸ್ವಯಂ ಪ್ರೇರಿತವಾಗಿ ಸೇವೆಗಳನ್ನು ಮಾಡಿಸಬಹುದು.
ಇಸ್ಕಾನ್ ದೇವಾಲಯದಲ್ಲಿನ ಸೇವೆಗಳು
- ತುಳಸಿ ಅರ್ಚನಾ ಸೇವೆ
- ವೈಕುಂಠ ದ್ವಾರ ಪೂಜೆ
- ಲಡ್ಡು ಪ್ರಸಾದ ಸೇವೆ
- ಶ್ರೀವಾರಿ ಅಭಿಷೇಕ
- ಅನ್ನದಾನ ಸೇವೆ
- ವಸ್ತ್ರ ಅಲಂಕಾರ ಸೇವೆ
- ಶ್ರೀವಾರಿ ಹುಂಡಿ ಸೇವೆ
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.