Vasantha Panchami 2025: ವಸಂತ ಪಂಚಮಿ ಯಾವಾಗ; ಮಕ್ಕಳ ಜ್ಞಾನಾರ್ಜನೆಗಾಗಿ ಈ ದಿನ ಸರಸ್ವತಿ ದೇವಿಯನ್ನು ಪೂಜಿಸುವ ವಿಧಾನ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vasantha Panchami 2025: ವಸಂತ ಪಂಚಮಿ ಯಾವಾಗ; ಮಕ್ಕಳ ಜ್ಞಾನಾರ್ಜನೆಗಾಗಿ ಈ ದಿನ ಸರಸ್ವತಿ ದೇವಿಯನ್ನು ಪೂಜಿಸುವ ವಿಧಾನ ತಿಳಿಯಿರಿ

Vasantha Panchami 2025: ವಸಂತ ಪಂಚಮಿ ಯಾವಾಗ; ಮಕ್ಕಳ ಜ್ಞಾನಾರ್ಜನೆಗಾಗಿ ಈ ದಿನ ಸರಸ್ವತಿ ದೇವಿಯನ್ನು ಪೂಜಿಸುವ ವಿಧಾನ ತಿಳಿಯಿರಿ

Vasant Panchami: ಈ ಬಾರಿ ವಸಂತ ಪಂಚಮಿಯನ್ನು ಫೆಬ್ರವರಿ 2 ರಂದು ಆಚರಿಸಲಾಗುತ್ತದೆ. ಶಿಕ್ಷಣ, ಮಾತು ಮತ್ತು ಜ್ಞಾನದ ದೇವತೆಯಾದ ಸರಸ್ವತಿ ದೇವಿಯನ್ನು ಪೂಜಿಸುವುದರಿಂದ ವಿಶೇಷ ಫಲಿತಾಂಶಗಳನ್ನು ಪಡೆಯಬಹುದು. ವಸಂತ ಪಂಚಮಿಯಂದು ಏನು ಮಾಡಬೇಕು ಮತ್ತು ದೇವಿಯ ಪೂಜಾ ವಿಧಾನವನ್ನು ತಿಳಿಯೋಣ.

Vasant Panchami 2025: ವಸಂತ ಪಂಚಮಿ ಯಾವಾಗ ಮತ್ತು ಈ ದಿನ ಸರಸ್ವತಿ ದೇವಿಯನ್ನು ಪೂಜಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
Vasant Panchami 2025: ವಸಂತ ಪಂಚಮಿ ಯಾವಾಗ ಮತ್ತು ಈ ದಿನ ಸರಸ್ವತಿ ದೇವಿಯನ್ನು ಪೂಜಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ. (pinterest)

ವಸಂತ ಪಂಚಮಿಯನ್ನು ಪ್ರತಿವರ್ಷ ಮಾಘ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ವಸಂತ ಪಂಚಮಿ 2025ರ ಫೆಬ್ರವರಿ 2 (ಭಾನುವಾರ) ಆಚರಿಸಲಾಗುತ್ತದೆ. ಶಿಕ್ಷಣ, ಮಾತು ಹಾಗೂ ಜ್ಞಾನದ ದೇವತೆಯಾದ ಸರಸ್ವತಿ ದೇವಿಯನ್ನು ಪೂಜಿಸುವುದರಿಂದ ವಿಶೇಷ ಫಲಿತಾಂಶಗಳನ್ನು ಪಡೆಯಬಹುದು. ಆದ್ದರಿಂದ, ವಿದ್ಯಾರ್ಥಿಗಳು ತಪ್ಪದೇ ಆ ದಿನ ಸರಸ್ವತಿ ದೇವಿಯನ್ನು ಪ್ರಾರ್ಥಿಸುತ್ತಾರೆ. ವಸಂತ ಪಂಚಮಿಯಂದು ಬೆಳಿಗ್ಗೆ 7:09 ರಿಂದ ಮಧ್ಯಾಹ್ನ 12:35 ರವರೆಗೆ ಸರಸ್ವತಿ ದೇವಿಯನ್ನು ಪೂಜಿಸಲು ಉತ್ತಮ ಸಮಯ. ಮಾಘ ಶುಕ್ಲ ಪಂಚಮಿ ಫೆಬ್ರವರಿ 2 ರಂದು ಬೆಳಿಗ್ಗೆ 9:14 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 3 ರಂದು ಬೆಳಿಗ್ಗೆ 6:52 ರವರೆಗೆ ಇರುತ್ತದೆ.

ವಸಂತ ಪಂಚಮಿಯಂದು ಏನು ಮಾಡಿದರೆ ಒಳ್ಳೆಯದಾಗುತ್ತೆ?

  1. ವಸಂತ ಪಂಚಮಿಯ ದಿನವನ್ನು ಶುಭ ದಿನವೆಂದು ಪರಿಗಣಿಸಲಾಗಿದೆ.
  2. ವಿವಾಹದಿಂದ ಗೃಹ ಪ್ರವೇಶದವರಿಗೆ ಹಲವು ರೀಶಿಯ ಶುಭ ಕಾರ್ಯಗಳನ್ನು ವಂಸತ ಪಂಚಮಿ ದಿನ ಮಾಡಲಾಗುತ್ತದೆ.
  3. ಅಂದು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಿದರೂ ಖಂಡಿತವಾಗಿಯೂ ಅದರಲ್ಲಿ ಯಶಸ್ಸನ್ನು ಪಡೆಯಲಾಗುತ್ತದೆ ಎಂಬ ನಂಬಿಕೆ ಇದೆ.
  4. ಧರ್ಮಗ್ರಂಥಗಳ ಪ್ರಕಾರ, ಈ ದಿನವನ್ನು ಉತ್ತಮ ಮುಹೂರ್ತವೆಂದು ಪರಿಗಣಿಸಲಾಗುತ್ತದೆ. ಪಂಚಾಂಗವನ್ನು ನೋಡುವ ಅಗತ್ಯವಿಲ್ಲ. ಈ ದಿನ ಮುಹೂರ್ತವನ್ನು ನೋಡದೆ ಶುಭ ಕಾರ್ಯಗಳನ್ನು ಮಾಡಬಹುದು.

ವಸಂತ ಪಂಚಮಿ ಪೂಜೆ

  1. ಮಕ್ಕಳು ಅಧ್ಯಯನದಲ್ಲಿ ಹಿಂದುಳಿದಿದ್ದರೆ ಅಥವಾ ಶಿಕ್ಷಣದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರೆ, ವಸಂತ ಪಂಚಮಿ ದಿನದಂದು ಬೆಳಿಗ್ಗೆ ಪವಿತ್ರ ಸರಸ್ವತಿ ಯಂತ್ರವನ್ನು ಮನೆಯ ಪೂಜಾ ಕೋಣೆಯಲ್ಲಿ ಇಡಬೇಕು.
  2. ಬಿಳಿ ಶ್ರೀಗಂಧ, ಹಳದಿ ಮತ್ತು ಬಿಳಿ ಹೂವುಗಳನ್ನು ಅರ್ಪಿಸಬೇಕು
  3. ಧೂಪ ಮತ್ತು ದೀಪಗಳನ್ನು ಬೆಳಗಿಸಬೇಕು
  4. 'ಓಂ ಹ್ರೀಂ ಹ್ರೀಂ ಹ್ರೀಂ ಸರಸ್ವತಿಯೇ ನಮಃ' ಮಂತ್ರವನ್ನು ಪಠಿಸಿ. ಈ ಮಂತ್ರವನ್ನು 11 ಬಾರಿ ಪಠಿಸುವುದರಿಂದ ಬೌದ್ಧಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ
  5. ವಸಂತ ಪಂಚಮಿಯಂದು ಸರಸ್ವತಿ ದೇವಿಯನ್ನು ಪೂಜಿಸುವುದು ಮತ್ತು ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುವುದರಿಂದ ಶುಭ ಫಲಗಳಿವೆ
  6. ಅಗತ್ಯವಿರುವ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುವುದರಿಂದ ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಮಗುವಿನ ಮನಸ್ಸಿನಲ್ಲಿ ಅಧ್ಯಾತ್ಮಿಕತೆಗೆ ಆಸಕ್ತಿ ಮೂಡಿಸುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.