Shani Transit: ವಸಂತ ಪಂಚಮಿಯಂದೇ ಶನಿಯ ಸ್ಥಾನಪಲ್ಲಟ; 3 ರಾಶಿಯವರಿಗೆ ಸುವರ್ಣ ದಿನಗಳ ಆರಂಭ, ಸಂಪತ್ತು–ಸಮೃದ್ಧಿ ನಿಮ್ಮದಾಗುವ ಕಾಲ
ವಸಂತ ಪಂಚಮಿ ಹಿಂದೂಗಳಲ್ಲಿ ಆಚರಿಸುವ ಪ್ರಮುಖ ಆಚರಣೆ, ಈ ದಿನ ಸರಸ್ವತಿ ಪೂಜೆಗೆ ಮಹತ್ವ ನೀಡಲಾಗುತ್ತದೆ. ಈ ಬಾರಿ ವಸಂತ ಪಂಚಮಿಯ ದಿನ ಶನಿಯು ಭಾದ್ರಪದ ನಕ್ಷತ್ರದ ಮೊದಲ ಪಾದದಿಂದ ಎರಡನೇ ಪಾದಕ್ಕೆ ಚಲಿಸಲಿದ್ದಾನೆ. ಶನಿಯ ಸ್ಥಾನಪಲ್ಲಟವು 3 ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಇದು ಅವರಿಗೆ ಸುವರ್ಣ ದಿನಗಳ ಆರಂಭಕ್ಕೆ ಮುನ್ನುಡಿ ಬರೆಯಲಿದೆ.

ಒಂಬತ್ತು ಗ್ರಹಗಳಲ್ಲಿ, ಶನಿಯು ಅತ್ಯಂತ ಧರ್ಮನಿಷ್ಠ ಗ್ರಹ. ಶನಿಯ ಸ್ಥಾನ ಬದಲಾವಣೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಈ ತಿಂಗಳಲ್ಲಿ ಶನಿಯ ಸಂಚಾರವಾಗಲಿದ್ದು, ಇದು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಫೆಬ್ರವರಿ 2, ವಸಂತ ಪಂಚಮಿಯಂದು ಶನಿಯ ಸಂಚಾರ ನಡೆಯಲಿದೆ.
ಫೆಬ್ರುವರಿ 2ರ ಬೆಳಿಗ್ಗೆ 8:01ಕ್ಕೆ, ಶನಿಯು ಪೂರ್ವ ಭಾದ್ರಪದ ನಕ್ಷತ್ರದ ಮೊದಲ ಪಾದದಿಂದ ಎರಡನೇ ಪಾದಕ್ಕೆ ಚಲಿಸುತ್ತಾನೆ. ಪೂರ್ವ ಭಾದ್ರಪದ ನಕ್ಷತ್ರದ ಅಧಿಪತಿ ಗುರು. ಆದರೆ, ವಸಂತ ಪಂಚಮಿಯಂದು ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿಯು ಒಂದು ಪಾದದಿಂದ ಇನ್ನೊಂದು ಪಾದಕ್ಕೆ ಚಲಿಸುತ್ತಾನೆ. ಶನಿಯ ಸ್ಥಾನ ಬದಲಾವಣೆಯ ಕೆಲವು ರಾಶಿಯವರಿಗೆ ಅದೃಷ್ಟವನ್ನು ತರಲಿದೆ. 3 ರಾಶಿಯವರಿಗೆ ಶನಿಯ ಕಾರಣದಿಂದ ಸುವರ್ಣ ದಿನಗಳು ಆರಂಭವಾಗಲಿದೆ.
ಮಕರ, ಕಟಕ ಮತ್ತು ಮಿಥುನ ರಾಶಿಯವರವರಿಗೆ ಶನಿ ಸಂಕ್ರಮಣದಿಂದ ಶುಭವಾಗಲಿದೆ. ವಸಂತ ಪಂಚಮಿ ದಿನದಿಂದ ಈ 3 ರಾಶಿಯವರಿಗೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
1. ಮಕರ ರಾಶಿ
ಮಕರ ರಾಶಿಯವರಿಗೆ ಶನಿಯ ಸಂಚಾರವು ಶುಭವನ್ನು ತರುತ್ತದೆ. ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಮಕ್ಕಳಿಂದ ನಿಮಗೆ ಶುಭ ಸುದ್ದಿ ಸಿಗಲಿದೆ. ಹಣಕ್ಕೆ ಸಂಬಂಧಿಸಿದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ನೀವು ಸಂತೋಷವಾಗಿರಬಹುದು. ನೀವು ಕುಟುಂಬ ಸದಸ್ಯರೊಂದಿಗೆ ಮೋಜಿನ ಸಮಯವನ್ನು ಕಳೆಯಬಹುದು. ಧಾರ್ಮಿಕ ತೀರ್ಥಯಾತ್ರೆಗಳಿಗೆ ಹೋಗುವ ಸಾಧ್ಯತೆಯೂ ಇದೆ. ಸಾಡೇ ಸಾತಿಯ ಅಶುಭ ಪರಿಣಾಮಗಳು ಸಹ ಕಡಿಮೆಯಾಗುತ್ತವೆ.
2. ಕಟಕ ರಾಶಿ
ವಸಂತ ಪಂಚಮಿ ದಿನದಿಂದ ಕಟಕ ರಾಶಿಯಲ್ಲಿ ಜನಿಸಿದವರಿಗೆ ಶನಿದೇವನು ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಪೂರ್ವಾಭಾದ್ರಪದ ನಕ್ಷತ್ರದಲ್ಲಿ ಶನಿಗ್ರಹವು ಸಾಗುವುದರಿಂದ ಕೆಲಸದಲ್ಲಿ ಬಡ್ತಿ ದೊರೆಯುವ ಸಾಧ್ಯತೆಯಿದೆ. ಈ ಸಮಯ ಹೂಡಿಕೆಗೂ ಅನುಕೂಲಕರವಾಗಿದೆ.
3. ಮಿಥುನ ರಾಶಿ
ಮಿಥುನ ರಾಶಿಯವರಿಗೆ ಶನಿಯ ಸಂಚಾರ ಶುಭವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಅನಗತ್ಯ ಖರ್ಚುಗಳು ಕಡಿಮೆಯಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
