Vastu Tips: ವಾಸ್ತುಪ್ರಕಾರ ಮನೆಯಲ್ಲಿ ಕ್ಯಾಲೆಂಡರ್ ಯಾವ ದಿಕ್ಕಿಗೆ ಇರಬೇಕು, ಈ ಬದಲಾವಣೆ ಮಾಡುವುದರಿಂದ ಶಾಂತಿ, ನೆಮ್ಮದಿ ನೆಲೆಸುತ್ತೆ
ಹೊಸ ವರ್ಷ ಆರಂಭವಾಗಿ ತಿಂಗಳು ಕಳೆದಿದೆ. ಪ್ರತಿ ಹೊಸ ವರ್ಷಕ್ಕೂ ಹೊಸ ಕ್ಯಾಲೆಂಡರ್ ತಂದು ನೇತು ಹಾಕುತ್ತೇವೆ. ಆದರೆ ಕ್ಯಾಲೆಂಡರ್ ಇರಿಸಲು ಕೂಡ ವಾಸ್ತು ನಿಯಮಗಳಿವೆ. ತಪ್ಪಾದ ಜಾಗದಲ್ಲಿ ಕ್ಯಾಲೆಂಡರ್ ಇರಿಸುವುದರಿಂದ ಮನೆಯಲ್ಲಿ ನೆಮ್ಮದಿ, ಸಂತೋಷ ಇಲ್ಲದಂತಾಗಬಹುದು. ಹಾಗಾದರೆ ವಾಸ್ತುಪ್ರಕಾರ ಕ್ಯಾಲೆಂಡರ್ ಇರಿಸಲು ಸರಿಯಾದ ಜಾಗ ಯಾವುದು ನೋಡಿ.

ವಾಸ್ತುಶಾಸ್ತ್ರವು ಮನೆಯ ಪ್ರತಿ ವಸ್ತು ಎಲ್ಲಿ, ಹೇಗಿರಬೇಕು ಎಂಬುದನ್ನು ಸೂಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವರು ವಾಸ್ತು ನಿಯಮಗಳನ್ನು ಪಾಲಿಸುತ್ತಾರೆ. ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ. ಅದೃಷ್ಟವೂ ಜೊತೆಯಾಗುತ್ತದೆ.
ಮನೆ ಕಟ್ಟುವುದು ಮಾತ್ರವಲ್ಲ, ಮನೆಯಲ್ಲಿ ನಾವು ಇರಿಸುವ ವಸ್ತುಗಳನ್ನೂ ಕೂಡ ವಾಸ್ತು ನಿಯಮಗಳಿಗೆ ಅನುಸಾರವಾಗಿ ಇರಿಸಬೇಕು. ಪೀರೋಪಕರಣ ಸೇರಿ ಯಾವುದೇ ವಸ್ತುವಾಗಲಿ ವಾಸ್ತು ನಿಯಮಕ್ಕೆ ಸರಿಯಾಗಿ ಇರಿಸಿದರೆ ವಾಸ್ತುದೋಷಗಳು ಎದುರಾಗುವುದಿಲ್ಲ. ಕ್ಯಾಲೆಂಡರ್ ಇರಿಸಲು ಕೂಡ ಈ ವಾಸ್ತು ನಿಯಮ ಪಾಲನೆ ಮಾಡಬೇಕು. ನೀವು ಈಗಾಗಲೇ ಮನೆ ಗೋಡೆಯ ಮೇಲೆ 2025ರ ಹೊಸ ಕ್ಯಾಲೆಂಡರ್ ನೇತು ಹಾಕಿರಬಹುದು. ಆದರೆ ಹೆಚ್ಚಿನವರಿಗೆ ಕ್ಯಾಲೆಂಡರ್ ಎಲ್ಲಿ ಇರಿಸಬೇಕು ಎನ್ನುವ ತಿಳಿದಿರುವುದಿಲ್ಲ. ಆದರೆ ವಾಸ್ತು ನಿಯಮದಂತೆ ಕ್ಯಾಲೆಂಡರ್ ಇರಿಸುವುದರಿಂದ ಮನೆಯಲ್ಲಿ ಶಾಂತಿ, ಸಂತೋಷ ತುಂಬಿರುತ್ತದೆ.
ನಿಮ್ಮ ಮನೆಯಲ್ಲಿ ಕ್ಯಾಲೆಂಡರ್ ಇರಿಸಲು ವಾಸ್ತು ನಿಯಮಗಳನ್ನು ಅನುಸರಿಸಿದ್ದೀರಾ ಎಂಬುದನ್ನು ನೋಡಿ, ನೀವು ಕ್ಯಾಲೆಂಡರ್ ಇರಿಸಿದ ಸ್ಥಳ ತಪ್ಪಾಗಿದ್ದರೆ ಇಂದೇ ಬದಲಿಸಿ. ಈ ಸಣ್ಣ ಬದಲಾವಣೆಯು ಮನೆಯಲ್ಲಿ ಸಕರಾತ್ಮಕ ಶಕ್ತಿಯ ಹರಿವಿಗೆ ಸಹಾಯ ಮಾಡುತ್ತದೆ.
ಕ್ಯಾಲೆಂಡರ್ ಇಡಲು ಯಾವ ದಿಕ್ಕು ಉತ್ತಮ?
ಹೆಚ್ಚಿನವರು ತಮಗೆ ಇಷ್ಟ ಬಂದ ದಿಕ್ಕಿನಲ್ಲಿ ಅಥವಾ ಗೋಡೆ ಮೇಲೆ ಮೊಳೆ ಎಲ್ಲಿದೆ ಅಲ್ಲಿ ಕ್ಯಾಲೆಂಡರ್ ನೇತು ಹಾಕುತ್ತಾರೆ. ಇದು ನಕಾರಾತ್ಮಕ ಶಕ್ತಿಯ ಹರಿವಿಗೆ ಕಾರಣವಾಗುತ್ತದೆ. ಆದರೆ ವಾಸ್ತು ಪ್ರಕಾರ ಮನೆಯ ವಾಯುವ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಕ್ಯಾಲೆಂಡರ್ ಇರಿಸುವುದು ಸೂಕ್ತ. ಪೂರ್ವ ದಿಕ್ಕು ಯಶಸ್ಸು ಮತ್ತು ಆರ್ಥಿಕ ಸ್ಥಿರತೆಯನ್ನು ಉತ್ತೇಜಿಸುತ್ತದೆ.
ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಇಡುವುದರಿಂದ ವರ್ಷವಿಡೀ ಸಮೃದ್ಧಿ ಮತ್ತು ಪ್ರಗತಿ ಬರುತ್ತದೆ.
ಹಳೆಯ ಕ್ಯಾಲೆಂಡರ್ ತೆಗೆಯಬೇಕು ಏಕೆ?
ಹಲವರು ಹಳೆಯ ಕ್ಯಾಲೆಂಡರ್‌ಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇದು ಸಕಾರಾತ್ಮಕ ಶಕ್ತಿಯನ್ನು ಹರಡುವ ಬದಲು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಹಳೆಯ ಕ್ಯಾಲೆಂಡರ್‌ಗಳು ಹೊಸ ಶಕ್ತಿಯ ಹರಿವಿಗೆ ಅಡ್ಡಿಪಡಿಸುತ್ತವೆ. ಹೊಸ ಅವಕಾಶಗಳು ಬರುವುದನ್ನು ತಡೆಯಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಹಾಗಾಗಿ ಹಳೆಯ ಕ್ಯಾಲೆಂಡರ್ ಮನೆಯಲ್ಲಿ ಇದ್ದರೆ ಇಂದೇ ತೆಗೆದು ಹೊರಗಡೆ ಹಾಕಿ.
ಸಕಾರಾತ್ಮಕ ಬದಲಾವಣೆಗಳನ್ನು ಸ್ವಾಗತಿಸಲು ಹಳೆಯ ಕ್ಯಾಲೆಂಡರ್‌ಗಳನ್ನು ತೊಡೆದುಹಾಕುವುದು ಒಳ್ಳೆಯದು. ನೀವು ಈ ರೀತಿ ವಾಸ್ತು ನಿಯಮಗಳನ್ನು ಅನುಸರಿಸಿದರೆ, ನಿಮ್ಮಲ್ಲಿ ಸಕಾರಾತ್ಮಕ ಶಕ್ತಿಯು ಹರಿಯುತ್ತದೆ ಮತ್ತು ಸಂತೋಷವಾಗಿರಬಹುದು. ನಿಮ್ಮ ಮನೆಯಲ್ಲಿ ಸಾಮರಸ್ಯ ತುಂಬಿ, ಸಂತೋಷದಿಂದ ಜೀವಿಸಬಹುದು. ಈ ವರ್ಷವನ್ನು ಯಶಸ್ವಿ ವರ್ಷವನ್ನಾಗಿ ಪರಿವರ್ತಿಸಬಹುದು.
(ಗಮನಿಸಿ: ಇದು ಶಾಸ್ತ್ರ ಮತ್ತು ನಂಬಿಕೆಗಳನ್ನು ಆಧರಿಸಿದ ಬರಹ. ಅನುಸರಿಸುವ ಮೊದಲು ತಜ್ಞರೊಂದಿಗೆ ಚರ್ಚಿಸಿ. ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ)
