ಸಿಂಧೂರ, ಕುಂಕುಮ ಎರಡೂ ಒಂದೇನಾ? ಮದುವೆಯಾದ ಮಹಿಳೆಯರು ಯಾವುದನ್ನ ಬಳಸಬೇಕು; ಆಸಕ್ತಿಕರ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಿಂಧೂರ, ಕುಂಕುಮ ಎರಡೂ ಒಂದೇನಾ? ಮದುವೆಯಾದ ಮಹಿಳೆಯರು ಯಾವುದನ್ನ ಬಳಸಬೇಕು; ಆಸಕ್ತಿಕರ ಮಾಹಿತಿ ಇಲ್ಲಿದೆ

ಸಿಂಧೂರ, ಕುಂಕುಮ ಎರಡೂ ಒಂದೇನಾ? ಮದುವೆಯಾದ ಮಹಿಳೆಯರು ಯಾವುದನ್ನ ಬಳಸಬೇಕು; ಆಸಕ್ತಿಕರ ಮಾಹಿತಿ ಇಲ್ಲಿದೆ

ಮಹಿಳೆ ಮದುವೆಯಾಗಿದ್ದಾಳೆ ಎಂಬುದರ ಸಂಕೇತವೆಂದರೆ ಆಕೆ ತನ್ನ ಹಣೆಯಲ್ಲಿ ಇಟ್ಟಿರುವ ಸಿಂಧೂರ. ಆದರೆ ಕುಂಕುಮ ಮತ್ತು ಸಿಂಧೂರ ಎರಡೂ ಒಂದೇ ಎಂದು ಹಲವರು ಭಾವಿಸುತ್ತಾರೆ. ಆದರೆ ಇವೆರಡರ ನಡುವೆ ಅಗಾಧ ವ್ಯತ್ಯಾಸವಿದೆ. ಈ ಕುರಿತ ಆಸಕ್ತಿಕರ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

ಮದುವೆಯಾದ ಮಹಿಳೆಯರು ಸಿಂಧೂರ ಅಥವಾ ಕುಂಕುಮ ಎರಡರಲ್ಲಿ ಯಾವುದನ್ನು ಬಳಸಬೇಕು ಎಂಬುದನ್ನು ತಿಳಿಯಿರಿ
ಮದುವೆಯಾದ ಮಹಿಳೆಯರು ಸಿಂಧೂರ ಅಥವಾ ಕುಂಕುಮ ಎರಡರಲ್ಲಿ ಯಾವುದನ್ನು ಬಳಸಬೇಕು ಎಂಬುದನ್ನು ತಿಳಿಯಿರಿ

ಹಿಂದೂ ಸಂಪ್ರದಾಯದಲ್ಲಿ ಪ್ರತಿ ವಿವಾಹಿತ ಮಹಿಳೆಯ ಹಣೆಯ ಮೇಲೆ ಸಿಂಧೂರ ಇರುತ್ತದೆ. ಹಿಂದೂ ಆಚರಣೆಗಳು ಮತ್ತು ಸಮಾರಂಭಗಳಲ್ಲಿ ಬಳಸುವ ಎರಡು ಸಾಮಾನ್ಯವಾದವುಗಳೆಂದರೆ ಕುಂಕುಮ ಮತ್ತು ಸಿಂಧೂರ. ಆದರೆ ಇವೆರಡೂ ಕೆಂಪು ಬಣ್ಣದ್ದಾಗಿರುವುದರಿಂದ ಅವುಗಳನ್ನು ಒಂದೇ ಎಂದು ಪರಿಗಣಿಸಲಾಗುತ್ತದೆ. ಆದರೆ ಸಿಂಧೂರ ಮತ್ತು ಕುಂಕುಮ ಒಂದಕ್ಕೊಂದು ಭಿನ್ನ. ಅವುಗಳ ಬಳಕೆಯು ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದು ಅನೇಕ ಜನರಿಗೆ ತಿಳಿದಿಲ್ಲ.

ಸಿಂಧೂರ ಎಂದರೇನು?

ಸಿಂಧೂರ ಎಂದರೆ ಕೆಂಪು, ಕಿತ್ತಳೆ ಅಥವಾ ಗುಲಾಬಿ ಬಣ್ಣದ ಪುಡಿ ಎಂದರ್ಥ. ಇದನ್ನು ವಿವಾಹಿತ ಮಹಿಳೆಯರು ಬಳಸುತ್ತಾರೆ. ವೈವಾಹಿಕ ಸ್ಥಿತಿಯ ಸಂಕೇತವೆಂದು ಪರಿಗಣಿಸಲಾಗಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ ಸಿಂಧೂರ ಕೆಂಪು ಬಣ್ಣವನ್ನು ಬಳಸಲಾಗುತ್ತದೆ. ಆದರೆ ಪೂರ್ವ ಭಾಗದಲ್ಲಿ ಗುಲಾಬಿ ಮತ್ತು ಕಿತ್ತಳೆ ಬಣ್ಣದ ಪುಡಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಸಿಂಧೂರವನ್ನು ಅರಿಶಿನ, ಸುಣ್ಣ ಅಥವಾ ಸೀಸ ಮತ್ತು ಖನಿಜ ಸಿನ್ನಬಾರ್‌ನಿಂದ ತಯಾರಿಸಲಾಗುತ್ತದೆ. ಅರಿಶಿನ, ಸೀಸ ಮತ್ತು ಸುಣ್ಣದ ಮಿಶ್ರಣವು ಪ್ರಕಾಶಮಾನವಾದ ಕೆಂಪು ಬಣ್ಣವನ್ನು ನೀಡುತ್ತದೆ. ಅಲ್ಲದೆ, ಗುಲಾಬಿ ಮತ್ತು ಕಿತ್ತಳೆ ಬಣ್ಣಗಳಲ್ಲಿ ಕಂಡುಬರುವ ಸಿಂಧೂರವನ್ನು ರಾಸಾಯನಿಕವಾಗಿ ತಯಾರಿಸಲಾಗುತ್ತದೆ.

ಕುಂಕುಮ ಎಂದರೇನು?

ಕುಂಕುಮ ಎಂದರೆ ಕೆಂಪು. ಇದು ನೋಡೋಕೆ ಸಿಂಧೂರ ರೀತಿಯಲ್ಲೇ ಇರುತ್ತದೆ, ಆದರೆ ವಿಭಿನ್ನವಾಗಿದೆ. ಇದನ್ನು ಹೆಚ್ಚಾಗಿ ಪ್ರಾರ್ಥನೆಗಳು, ಧಾರ್ಮಿಕ ಸಮಾರಂಭಗಳು ಮತ್ತು ಆಚರಣೆಗಳಲ್ಲಿ ಬಳಸಲಾಗುತ್ತದೆ. ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ಇದನ್ನು ಬಳಸಬಹುದು. ಕುಂಕುಮವನ್ನು ಅರಿಶಿನ, ಕುಂಕುಮ ಮತ್ತು ಸುಣ್ಣದ ಮಿಶ್ರಣದಿಂದ ತಯಾರಿಸಲಾಗುತ್ತದೆ. ಆದ್ದರಿಂದ ಇದು ಕೆಂಪು ಬಣ್ಣದ್ದಾಗಿದೆ. ಸಾಮಾನ್ಯವಾಗಿ, ಕುಂಕುಮವನ್ನು ತಿಲಕವನ್ನು ಲೇಪಿಸಲು, ದೇವತೆಗಳು ಮತ್ತು ವಿಗ್ರಹಗಳಿಗೆ ಬೊಟ್ಟು ಇಡಲು ಬಳಸಲಾಗುತ್ತದೆ. ಅಲ್ಲದೇ ಕೆಲವರು ಕುಂಕುಮ ಪುಡಿಯನ್ನು ಕೈಕಾಲುಗಳಿಗೆ ಹಚ್ಚಿಕೊಳ್ಳುತ್ತಾರೆ.

ಇವೆರಡರ ನಡುವಿನ ವ್ಯತ್ಯಾಸವೇನು?

ಇವೆರಡೂ ಕೆಂಪು ಬಣ್ಣದಲ್ಲಿ ಸಿಗುವುದರಿಂದ ಎರಡಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಸಿಂಧೂರವನ್ನು ವಿವಾಹಿತ ಮಹಿಳೆಯರು ಮಾತ್ರ ಧರಿಸುತ್ತಾರೆ. ಇದು ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿದೆ. ಕುಂಕುಮವನ್ನು ಯಾರು ಬೇಕಾದರೂ ಬಳಸಬಹುದು. ಹೆಚ್ಚಾಗಿ ಧಾರ್ಮಿಕ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಇದಕ್ಕೂ ಮದುವೆಗೂ ಸಂಬಂಧವಿಲ್ಲ. ಇದನ್ನು ಪುರುಷರು, ಅವಿವಾಹಿತ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಯಾರು ಬೇಕಾದರೂ ಧರಿಸಬಹುದು. ಇದನ್ನು ಹಣೆಯ ಮೇಲಿನ ತಿಲಕವನ್ನಾಗಿ ಧರಿಸಬಹುದು.

ಸಿಂಧೂರವನ್ನು ಎಲ್ಲಿ ಬಳಸಬೇಕು

ವರನು ವಧುವಿನ ಕೊರಳಿಗೆ ತಾಳಿ ಕಟ್ಟಿದ ನಂತರ ಆಕೆಯ ಹಣೆಗೆ ಸಿಂಧೂರವನ್ನು ಇಡಲಾಗುತ್ತದೆ. ಅಂದಿನಿಂದ ಮಹಿಳೆ ಪ್ರತಿದಿನ ಸಿಂಧೂರವನ್ನು ಹಣೆಗೆ ಹಚ್ಚಿಕೊಳ್ಳಲು ಶುರು ಮಾಡುತ್ತಾಳೆ. ಮಹಿಳೆಯರು ತಮ್ಮ ಪತಿಗೆ ಶುಭ ಹಾರೈಸಲು ಪ್ರತಿದಿನ ಹಣೆಯ ಮೇಲೆ ಸಿಂಧೂರವನ್ನು ಧರಿಸುತ್ತಾರೆ. ಮತ್ತೊಂದೆಡೆ, ಬಂಗಾಳಿಗಳು ದುರ್ಗಾ ಪೂಜೆಯ ಕೊನೆಯ ದಿನವನ್ನು ಪರಸ್ಪರ ಸಿಂಥೂರವನ್ನು ಬರೆಯುವ ಮೂಲಕ ಆಚರಿಸುತ್ತಾರೆ.

ಕುಂಕುಮವನ್ನು ಸಾಮಾನ್ಯವಾಗಿ ಬೊಟ್ಟು ಎಂದು ಬಳಸಲಾಗುತ್ತದೆ. ಇದನ್ನು ಮೂರನೇ ಕಣ್ಣು ಎಂದು ಪರಿಗಣಿಸುವ ಆಜ್ಞಾ ಚಕ್ರದಲ್ಲಿ ಧರಿಸಲಾಗುತ್ತದೆ. ಇದು ಉತ್ತಮ ಅಂತಃಪ್ರಜ್ಞೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಕೆಲವು ಸಂಪ್ರದಾಯಗಳಲ್ಲಿ, ಮದುವೆಗಳು, ಪೂಜೆಗಳು ಮತ್ತು ಆಚರಣೆಗಳ ಸಮಯದಲ್ಲಿ, ಕೈ ಮತ್ತು ಪಾದಗಳಿಗೆ ಅರಿಶಿನ ಮತ್ತು ಕುಂಕುಮವನ್ನು ಹಚ್ಚಲಾಗುತ್ತದೆ.

ಸಿಂಧೂರ ಮತ್ತು ಕುಂಕುಮ ಎರಡೂ ಒಂದೇ. ಆದರೆ ಅವರಿಗೆ ಎರಡು ವಿಭಿನ್ನ ಸ್ವಭಾವಗಳಿವೆ. ಸಿಂಧೂರವನ್ನು ಇತರ ಮಹಿಳೆಯರೊಂದಿಗೆ ಹಂಚಿಕೊಳ್ಳುವುದಿಲ್ಲ ಏಕೆಂದರೆ ಹಾಗೆ ಮಾಡುವುದು ಅಶುದ್ಧವೆಂದು ಪರಿಗಣಿಸಲಾಗಿದೆ. ಆದರೆ ಎಲ್ಲರೂ ಕುಂಕುಮವನ್ನು ಧರಿಸುತ್ತಾರೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.