ನಿಮ್ಮ ಮುದ್ದು ಕಂದಮ್ಮನಿಗೆ D ಮತ್ತು E ಅಕ್ಷರದಿಂದ ಪ್ರಾರಂಭವಾಗುವ ಸಂಸ್ಕೃತದ ಹೆಸರು ಇಡಬೇಕಾ? ಈ ಹೆಸರುಗಳ ಪಟ್ಟಿ ನಿಮಗೂ ಇಷ್ಟವಾಗುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮ ಮುದ್ದು ಕಂದಮ್ಮನಿಗೆ D ಮತ್ತು E ಅಕ್ಷರದಿಂದ ಪ್ರಾರಂಭವಾಗುವ ಸಂಸ್ಕೃತದ ಹೆಸರು ಇಡಬೇಕಾ? ಈ ಹೆಸರುಗಳ ಪಟ್ಟಿ ನಿಮಗೂ ಇಷ್ಟವಾಗುತ್ತೆ

ನಿಮ್ಮ ಮುದ್ದು ಕಂದಮ್ಮನಿಗೆ D ಮತ್ತು E ಅಕ್ಷರದಿಂದ ಪ್ರಾರಂಭವಾಗುವ ಸಂಸ್ಕೃತದ ಹೆಸರು ಇಡಬೇಕಾ? ಈ ಹೆಸರುಗಳ ಪಟ್ಟಿ ನಿಮಗೂ ಇಷ್ಟವಾಗುತ್ತೆ

ನಿಮ್ಮ ಹೆಣ್ಣು ಮಗುವಿಗೆ ಹೆಸರಿಡಲು ಡಿ ಮತ್ತು ಇ ಯಿಂದ ಆರಂಭವಾಗುವ ಸಂಸ್ಕೃತದ ಹೆಸರುಗಳನ್ನು ಹುಡುಕುತ್ತಿದ್ದರೆ ನಿಮಗಾಗಿ ಒಂದಿಷ್ಟು ಹೆಸರುಗಳ ಪಟ್ಟಿಯನ್ನು ಮಾಡಲಾಗಿದೆ. ಹೆಸರುಗಳು ಜೊತೆಗೆ ಅವುಗಳ ಅರ್ಥವನ್ನು ಕೊಡಲಾಗಿದೆ. ಜಿ ಅಕ್ಷರದ ಕೆಲವು ಹೆಸರೂಗಳು ಇಲ್ಲಿವೆ.

ಹೆಣ್ಣು ಮಕ್ಕಳಿಗೆ ಇಡಬಹುದಾದ ಸಂಸ್ಕೃತ ಹೆಸರುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಡಿ, ಇ ಹಾಗೂ ಜಿ ಅಕ್ಷರಗಳಿಂದ ಆರಂಭವಾಗುವ ಹೆಸರು ಇಲ್ಲಿವೆ.
ಹೆಣ್ಣು ಮಕ್ಕಳಿಗೆ ಇಡಬಹುದಾದ ಸಂಸ್ಕೃತ ಹೆಸರುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಡಿ, ಇ ಹಾಗೂ ಜಿ ಅಕ್ಷರಗಳಿಂದ ಆರಂಭವಾಗುವ ಹೆಸರು ಇಲ್ಲಿವೆ.

ಮಗಳಿಗೆ ಮುದ್ದಾದ ಹೆಸರು ಇಡಬೇಕು ಎಂಬುದನ್ನು ತಂದೆ-ತಾಯಿಯ ಆಸೆಯಾಗಿರುತ್ತದೆ. ಹೀಗಾಗಿ ಆಯ್ಕೆ ಮಾಡಿಕೊಳ್ಳುವ ಹೆಸರಿನ ಅರ್ಥವನ್ನು ತಿಳಿದುಕೊಳ್ಳುತ್ತಾರೆ. ಇದೇ ಹೆಸರನ್ನು ಇಡಬೇಕಾ, ಬೇಡವೇ ಅಂತ ನಾಲ್ಕೈದು ಬಾರಿ ಯೋಜಿಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಒಂದು ವೇಳೆ ನೀವೇನಾದರೂ ನಿಮ್ಮ ಹೆಣ್ಣು ಮಗಳಿಗೆ ಡಿ, ಇ ಹಾಗೂ ಜಿ ಅಕ್ಷರಗಳಿಂದ ಆರಂಭವಾಗುವ ಸಂಸ್ಕೃತದ ಹೆಸರು ಇಡುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ನಿಮಗಾಗಿ ಇಲ್ಲಿ ಒಂದಿಷ್ಟು ಹೆಸರುಗಳ ಪಟ್ಟಿಯನ್ನು ಮಾಡಲಾಗಿದೆ.

ದಾಕಿನಿ: ಹೆಣ್ಣು ಮಕ್ಕಳು ಇವತ್ತು ಕೇವಲ ಅಡುಗೆ ಮನೆಗೆ ಸೀಮಿತವಾಗಿ ಉಳಿದಿಲ್ಲ. ಸ್ವತಂತ್ರವಾಗಿ ಮನೆಯಿಂದ ಹೊರಬಂದು ಎಲ್ಲಿಬೇಕಾದರೂ ದುಡಿಯುವ ಮಟ್ಟಕ್ಕೆ ತಲುಪಿದ್ದಾಳೆ. ಯಾವುದೇ ಕೆಲಸ ಕೊಟ್ಟರೂ ಜಯಿಸಬಲ್ಲೆ ಎನ್ನುವಷ್ಟು ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ದಾಕಿನಿ ಎಂಬ ಪದದ ಅರ್ಥ ಆಕಾಶದಲ್ಲಿ ನಡೆಯುವವಳು. ನಿಮಗೆ ಈ ಹೆಸರು ಇಟ್ಟವಾದರೆ ನಿಮ್ಮ ಮಗುವಿಗೆ ಇಡಬಹುದು.

ದರ್ಶತ: ಎಲೆಮರೆಯ ಕಾಯಿಯಾಗಿ ದುಡಿಯುತ್ತಿದ್ದ ಹೆಣ್ಣು ಮಕ್ಕಳು ಮುಸುಕಿನ ಮರೆಯಿಂದ ಹೊರ ಬರುತ್ತಿದ್ದಾರೆ. ದರ್ಶತ ಎಂದರೆ ಗೋಚರ ಎಂಬ ಅರ್ಥವನ್ನು ಕೊಡುತ್ತದೆ.

ದರ್ಶನ: ಭಾರತದಲ್ಲಿ ದರ್ಶನ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ದರ್ಶನ ಎಂದರೆ ನೋಡುವುದು ಎಂಬ ಅರ್ಥ ಬರುತ್ತೆ.

ದೀಪಕಲಾ: ದೀಪಕಲಾ ಎಂದರೆ ಸಂಜೆಯ ಸಮಯ. ಇದು ತುಂಬಾ ಆಳವಾದ ಅರ್ಥವನ್ನು ಹೊಂದಿರುವ ಸಂಸ್ಕೃತದಲ್ಲಿರುವ ಸುಂದರವಾದ ಹೆಣ್ಣು ಮಗವಿನ ಹೆಸರಾಗಿದೆ.

ದೇವಾಂಶಿ: ಹಿಂದೂ ಧರ್ಮದ ಪ್ರಕಾರ ಪ್ರತಿಯೊಂದು ಜೀವಿಯು ದೈವಿಕವನ್ನು ಹೊಂದಿರುತ್ತದೆ. ನಿಮ್ಮ ಮಗಳು ಈ ಶಕ್ತಿಯ ಭಾಗವಾಗಬೇಕಾದರೆ ಈ ಹೆಸರನ್ನು ಇಡಬಹುದು. ದೇವಾಂಶಿ ಎಂದರೆ ದೈವಿಕ ಎಂದರ್ಥ.

ದೇವಿ: ಈ ಹೆಸರು ತುಂಬಾ ಹಳೆಯದು ಅಂತ ಅನಿಸಿದರೂ ಹಿಂದೂ ಧರ್ಮದಲ್ಲಿ ಇಂದಿಗೂ ಸಾಕಷ್ಟು ಮಂದಿ ಈ ಹೆಸರನ್ನು ತುಂಬಾ ಇಷ್ಟಪಡುತ್ತಾರೆ. ದೇವಿ ಎಂದರೆ ಎಲ್ಲರ ದೇವತೆ ಎಂಬ ಅರ್ಥವಿದೆ. ಇದು ಸ್ತ್ರೀಲಿಂಗ ಶಕ್ತಿಯನ್ನು ಸಂಕೇತಿಸುತ್ತದೆ.

ಧರಿತ್ರಿ: ತುಂಬಾ ಜನ ಇಷ್ಟ ಪಡುವ ಸಂಸ್ಕೃತದ ಹೆಸರುಗಳಲ್ಲಿ ಧರಿತ್ರಿ ಕೂಡ ಒಂದಾಗಿದೆ. ನಿಮ್ಮ ಮಗಳಿಗೆ ಧರಿತ್ರಿ ಹೆಸರು ಉತ್ತಮ ಆಯ್ಕೆಯಾಗಿದೆ. ಭೂಮಿಯನ್ನು ಧರಿತ್ರಿ ಅಂತಲೂ ಕರೆಯಲಾಗುತ್ತದೆ.

ಧುನಿ: ಪ್ರಕೃತಿಯಿಂದ ಪ್ರೇರಿತವಾದ ಕಾವ್ಯಾತ್ಮಕ ಹೆಸರು ಧುನಿ. ಇದರ ಅರ್ಥ ನದಿ. ಹಿಂದೂ ಧರ್ಮಗಳಲ್ಲಿ ನದಿಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಹೆಸರು ಜೀವನದ ಸಂಕೇತವಾಗಿದೆ.

ದಿಶಿತಾ: ಹೆಣ್ಣು ಮಕ್ಕಗಳಿಗೆ ಸಾಕಷ್ಟು ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳಿರುತ್ತವೆ. ನಿಮ್ಮ ಮಗಳು ಕನಸುಗಳನ್ನು ನನಸು ಮಾಡಿಕೊಳ್ಳಲು ಈ ಹೆಸರು ಇಡಬಹುದು. ಸಂಸ್ಕೃತದಲ್ಲಿ ದಿಕ್ಷಿತಾ ಎಂದರೆ ಫೋಕಸ್ ಎನ್ನುವ ಅರ್ಥವನ್ನು ಕೊಡುತ್ತದೆ.

ದಿವಿಜಾ: ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಗಳು ದೊಡ್ಡ ಎತ್ತರಕ್ಕೆ ಬೆಳೆಯಬೇಕೆಂಬ ಆಸೆ ಇರುತ್ತದೆ. ಮಗಳಲ್ಲಿ ತಮ್ಮ ಆಸೆಗಳನ್ನು ಬಿತ್ತುತ್ತಾರೆ. ದಿವಿಜಾ ಎಂದರೆ ಮಹತ್ಕಾರ್ಯಗಳನ್ನು ಮಾಡಲು ಹುಟ್ಟಿದವರು ಎಂದರ್ಥ.

ದೃಸಾನ: ನಕ್ಷತ್ರದ ಶಕ್ತಿ ಮತ್ತು ಉಷ್ಣತೆಯನ್ನು ಸಂಕೇತಿಸುವ ದೃಸಾನ ಸಂಸ್ಕೃತದ ಹೆಸರುಗಳಲ್ಲಿ ಒಂದಾಗಿದೆ. ದೃಸಾನ ಎಂದರೆ ಸೂರ್ಯನ ಮಗಳು.

ದುರ್ಗಾ: ಹಿಂದೂ ಪುರಾಣಗಳಲ್ಲಿ ಈ ಹೆಸರನ್ನು ತುಂಬಾ ಸಲ ಕೇಳಿರುತ್ತೇವೆ. ದುರ್ಗಾ ದೇವಿಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ. ದುಷ್ಟರ ನಾಶ ಮತ್ತು ಸ್ತ್ರೀಲಿಂಗ ಶಕ್ತಿಯನ್ನು ಈ ಹೆಸರು ಸಂಕೇತಿಸುತ್ತದೆ.

ದ್ಯುತಿ: ಸಂಸ್ಕೃತದಲ್ಲಿ ಬಹಳ ಅಪರೂಪದ ಹೆಸರು ದ್ಯುತಿ. ಇದರ ಅರ್ಥ ಬೆಳಕಿನಷ್ಟು ಪ್ರಕಾಶಮಾನ. ಜೀವನವನ್ನು ಪ್ರಕಾಶಮಾನವನ್ನಾಗಿ ಮಾಡಲು ನಿಮ್ಮ ಮಗಳಿಗೆ ಈ ಹೆಸರು ಇಡಬಹುದು.

ಇ, ಜಿಯಿಂದ ಆರಂಭವಾಗುವ ಸಂಸ್ಕೃತದ ಹೆಸರುಗಳ ಪಟ್ಟಿ

ಏಕಪರ್ಣಿಕಾ: ಮಗಳಿಗೆ ಒಂದು ವಿಶಿಷ್ಟವಾದ ಹೆಸರು ಇಡಬೇಕು ಎನ್ನುವ ಪೋಷಕರಿಗೆ ಏಕಪರ್ಣಿಕಾ ಉತ್ತಮ ಆಯ್ಕೆಯಾಗಿದೆ. ಈ ಹೆಸರು ದುರ್ಗಾ ದೇವಿಯನ್ನು ಸೂಚಿಸುತ್ತದೆ.

ಏಲಾಕ್ಷಿ: ಏಲಾಕ್ಷಿ ಎಂದರೆ ಹೊಳಪು ಕಣ್ಣುಗಳನ್ನು ಹೊಂದಿರುವ ಮಹಿಳೆ. ಕಣ್ಣುಗಳು ಆತ್ಮದ ಕಿಟಕಿಗಳು ಎಂದು ಹೇಳಲಾಗುತ್ತದೆ. ನೀವೇನಾದರೂ ಈ ಹೆಸರನ್ನು ಇಷ್ಟಪಟ್ಟರೆ ನಿಮ್ಮ ಮಗುವಿಗೆ ಇಡಬಹುದು.

ಎರಿಶಾ: ಎರಿಶಾ ಎಂದರೆ ಮಾತು ಎಂಬ ಅರ್ಥವನ್ನು ಕೊಡುತ್ತದೆ. ನಿಮ್ಮ ಮಗು ಓದಿನ ಜೊತೆಗೆ ಮಾತಿನಲ್ಲೂ ಚುರುಕುತನವನ್ನು ತೋರಿಸಲು ಎರಿಶಾ ಎಂಬ ಹೆಸರನ್ನು ಇಡಬಹುದು. ಅಂತಿಮವಾಗಿ ಆಯ್ಕೆ ನಿಮ್ಮದೇ ಆಗಿರುತ್ತದೆ.

ಗುಣನಿಧಿ: ಪೋಷಕರು ಮಗುವಿನ ಆರೋಗ್ಯ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ ಆಕೆಗೆ ಸರಿಯಾದ ಮೌಲ್ಯಗಳನ್ನು ಕಲಿಸುವ ಬಗ್ಗೆಯೂ ಅಷ್ಟೇ ಆಸಕ್ತಿಯನ್ನು ವಹಿಸುತ್ತಾರೆ. ಗುಣನಿಧಿ ಎಂದರೆ ಒಳ್ಳೆಯ ಗುಣಗಳ ಸಂಗ್ರಹ ಎಂದರ್ಥ.

ಗುಂಜಿತಾ: ನಿಸರ್ಗದ ದನಿಗಿಂತ ಚಂದವಿಲ್ಲ. ತುಂಬಾ ಸುಂದರವಾದ ಸಂಸ್ಕೃತದ ಹೆಸರುಗಳಲ್ಲಿ ಗುಂಜಿತಾ ಕೂಡ ಒಂದಾಗಿದೆ. ಗುಂಜಿತಾ ಎಂದರೆ ಜೇನು ನೋಣಗಳ ಗುನುವಿಕೆ.

ಗೋಮೆದಾ: ಇದರ ಅರ್ಥ ರತ್ನದಂತಿರುವವನು. ವಜ್ರಕ್ಕಿಂತ ಹೆಚ್ಚು ಅಮೂಲ್ಯವಾದ ನಿಮ್ಮ ಮಗುವಿಗೆ ಗೋಮೆದಾ ಹೆಸರನ್ನು ಇಡುವ ಆಯ್ಕೆ ನಿಮ್ಮದಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.