ಕೃಷ್ಣ ಜನ್ಮಾಷ್ಟಮಿ ದಿನ ಈ ರುದ್ರಾಕ್ಷಿ ಮಾಲೆ ಧರಿಸಿದರೆ ಸಂತಾನ ಪ್ರಾಪ್ತಿ ಸೇರಿ ಎಷ್ಟೊಂದು ಲಾಭಗಳಿವೆ -Krishna Janmashtami-spiritual wearing rudraksha mala on krishna janmashtami brings many benefits including fertility rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೃಷ್ಣ ಜನ್ಮಾಷ್ಟಮಿ ದಿನ ಈ ರುದ್ರಾಕ್ಷಿ ಮಾಲೆ ಧರಿಸಿದರೆ ಸಂತಾನ ಪ್ರಾಪ್ತಿ ಸೇರಿ ಎಷ್ಟೊಂದು ಲಾಭಗಳಿವೆ -Krishna Janmashtami

ಕೃಷ್ಣ ಜನ್ಮಾಷ್ಟಮಿ ದಿನ ಈ ರುದ್ರಾಕ್ಷಿ ಮಾಲೆ ಧರಿಸಿದರೆ ಸಂತಾನ ಪ್ರಾಪ್ತಿ ಸೇರಿ ಎಷ್ಟೊಂದು ಲಾಭಗಳಿವೆ -Krishna Janmashtami

Garbha Gauri Rudrksha: ಪುತ್ರ ಸಂತಾನ ಬೇಕೆನ್ನುವ ದಂಪತಿ ಜನ್ಮಾಷ್ಟಮಿಯಂದು ಮುದ್ದು ಕೃಷ್ಣನಿಗೆ ಭಕ್ತಿಯಿಂದ ಪೂಜೆ ಮಾಡಿದರೆ. ಇದರಿಂದ ಸಂತೃಪ್ತಿಗೊಳ್ಳುವ ಗೋಪಾಲನು ಪುತ್ರನನ್ನು ದಯಪಾಲಿಸುತ್ತಾನೆ ಎಂಬ ನಂಬಿಕೆಯಿದೆ. ಗರ್ಭ ಗೌರಿ ರುದ್ರಾಕ್ಷಿ ಮಾಲೆಯ ಬಗ್ಗೆ ತಿಳಿಯಿರಿ.

ಕೃಷ್ಣ ಜನ್ಮಾಷ್ಟಮಿಯಂದು ಮಗುವಿನ ಕೃಷ್ಣನ ವೇಷ ಹಾಕಿರುವುದು
ಕೃಷ್ಣ ಜನ್ಮಾಷ್ಟಮಿಯಂದು ಮಗುವಿನ ಕೃಷ್ಣನ ವೇಷ ಹಾಕಿರುವುದು (Pixabay)

ದೇಶಾದ್ಯಂತ ನಾಳೆ (ಆಗಸ್ಟ್ 26, ಸೋಮವಾರ) ಅದ್ಧೂರಿ ಕೃಷ್ಣ ಜನ್ಮಾಷ್ಟಮಿಯನ್ನು (Krishna Janmashtami 2024) ಆಚರಿಸಲಾಗುತ್ತದೆ. ಈ ಶುಭ ಸಮಯದಲ್ಲಿ ಮಗನನ್ನು ಹೊಂದಲು ಬಯಸುವ ದಂಪತಿ ಶ್ರೀಕೃಷ್ಣ ಜನ್ಮಾಷ್ಟಮಿಗಿಂತ ಉತ್ತಮವಾದ ಹಬ್ಬವಿಲ್ಲ. ಶ್ರೀಕೃಷ್ಣನ ಜನ್ಮದಿನವಾದ್ದರಿಂದ ಸಂತಾನ ಭಾಗ್ಯ ಬಯಸುವವರು ಅದರಲ್ಲೂ ಪುನ್ನನನ್ನು ನರಕದಿಂದ ಪಾರು ಮಾಡುವ ಮಗನನ್ನು ಪಡೆಯಬೇಕೆಂದು ಬಯಸುವವರು ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಲು ಹಾರೈಸುತ್ತಾರೆ.

ವಾಸ್ತವವಾಗಿ ಪೋಷಕರ ದೃಷ್ಟಿಯಲ್ಲಿ ಪುತ್ರ ಮತ್ತು ಪುತ್ರಿ ನಡುವೆ ವಿಶೇಷ ವ್ಯತ್ಯಾಸವಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರೂ ಪುರುಷರಿಗೆ ಸರಿಸಮನಾಗಿ ಪೈಪೋಟಿ ನೀಡಿ ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಆದರೆ ಪ್ರತಿ ದಂಪತಿ ತಮ್ಮ ಕುಲವನ್ನು ಮುನ್ನಡೆಸುವ ಮತ್ತು ಕುಟುಂಬಕ್ಕೆ ಕೀರ್ತಿ ಮತ್ತು ಪ್ರತಿಷ್ಠೆಯನ್ನು ತರುವ ಮಗನನ್ನು ಹೊಂದಬೇಕೆಂದು ಹಾರೈಸುತ್ತಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರವೂ ಮಗನಿಲ್ಲ ಎಂಬ ದುಃಖವನ್ನು ಅನೇಕ ಪೋಷಕರು ಅನುಭವಿಸುತ್ತಾರೆ.

ಪುರಾಣಗಳ ಪ್ರಕಾರ, ಮೋಕ್ಷವನ್ನು ಪಡೆಯಲು ಮತ್ತು ಇತರ ಸಾಮಾಜಿಕ ಜವಾಬ್ದಾರಿಗಳನ್ನು ಪೂರೈಸಲು ಹಿಂದೂ ಧರ್ಮದಲ್ಲಿ ಮಗನ ಪಾತ್ರವು ಬಹಳ ಮುಖ್ಯವಾಗಿದೆ. ಕೆಲವರಿಗೆ ತಮ್ಮ ಹಿಂದಿನ ಜನ್ಮಗಳ ಕರ್ಮಫಲಗಳಿಂದಾಗಿ ಮಗುವಾಗುವುದಿಲ್ಲ ಅಥವಾ ವಿಳಂಬವಾಗುತ್ತದೆ. ಅಂತಹವರು ಈ ಜನ್ಮಾಷ್ಟಮಿಯಂದು ಶ್ರೀಕೃಷ್ಣನನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ ಆಶೀರ್ವಾದ ಪಡೆದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ.

ಜನ್ಮಾಷ್ಟಮಿಯ ದಿನದಂದು ದಂಪತಿ ಸಂಪೂರ್ಣ ಭಕ್ತಿ ಮತ್ತು ನಂಬಿಕೆಯಿಂದ ಉಪವಾಸವನ್ನು ಆಚರಿಸಬೇಕು. ಶ್ರೀಕೃಷ್ಣನ 'ಲಡ್ಡು ಗೋಪಾಲನನ್ನು ಪೂಜಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ. ಅನೇಕ ದಂಪತಿ ಗೋಪಾಲನು ತಮ್ಮ ಎಲ್ಲಾ ಚಿಂತೆಗಳನ್ನು ತೊಡೆದುಹಾಕುತ್ತಾನೆ ಮತ್ತು ಮಗನನ್ನು ನೀಡುತ್ತಾನೆ ಎಂದು ನಂಬುತ್ತಾರೆ. ಕೃಷ್ಣ ಜನ್ಮಾಷ್ಟಮಿಯಂದು ಮುದ್ದು ಕೃಷ್ಣನಿಗೆ ಪೂಜಿಸಿದರೆ ನಿಮ್ಮೆಲ್ಲಾ ಸಮಸ್ಯೆಗಳು ಬಗೆ ಹರಿಯುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಸಿ ನೆಮ್ಮದಿಯಿಂದ ಜೀವಿಸುತ್ತೀರಿ. ಆರ್ಥಿಕವಾಗಿಯೂ ಬಲಗೊಳ್ಳುತ್ತೀರಿ.

ಗರ್ಭ ಗೌರಿ ರುದ್ರಾಕ್ಷಿಯಿಂದಾಗುವ ಲಾಭಗಳು

ಪ್ರಕೃತಿಯ ಕೊಡುಗೆಯಾದ ಗರ್ಭ ಗೌರಿ ರುದ್ರಾಕ್ಷಿಯನ್ನು ಧರಿಸಿ ಶ್ರೀಕೃಷ್ಣನನ್ನು ಪೂಜಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ. ಗರ್ಭ ಗೌರಿ ರುದ್ರಾಕ್ಷ ಸಾಮಾನ್ಯ ರುದ್ರಾಕ್ಷವಲ್ಲ. ಇದು ಪ್ರಕೃತಿಯ ಕೊಡುಗೆಯಾಗಿದೆ ಮತ್ತು ಸಂತಾನೋತ್ಪತ್ತಿಯಲ್ಲಿ ಬಹಳ ಮುಖ್ಯವಾಗಿದೆ. ದಂಪತಿ ಜನ್ಮಾಷ್ಟಮಿಯ ದಿನದಂದು ಈ ರುದ್ರಾಕ್ಷಿಯನ್ನು ಧರಿಸಿ ಪೂಜೆ ಮಾಡಿದರೆ ಅವರು ಬಯಸಿದ ಮಗುವಿಗೆ ಜನ್ಮ ನೀಡುವುದು ಖಚಿತ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.