ಸಕಲ ವಿದ್ಯಾಕಾರಕ ಯಂತ್ರದಿಂದ ಯಾವ ರಾಶಿಯ ವಿದ್ಯಾರ್ಥಿಗಿಳಿಗೆ ಏನೆಲ್ಲಾ ಪ್ರಯೋಜನಗಳಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಕಲ ವಿದ್ಯಾಕಾರಕ ಯಂತ್ರದಿಂದ ಯಾವ ರಾಶಿಯ ವಿದ್ಯಾರ್ಥಿಗಿಳಿಗೆ ಏನೆಲ್ಲಾ ಪ್ರಯೋಜನಗಳಿವೆ

ಸಕಲ ವಿದ್ಯಾಕಾರಕ ಯಂತ್ರದಿಂದ ಯಾವ ರಾಶಿಯ ವಿದ್ಯಾರ್ಥಿಗಿಳಿಗೆ ಏನೆಲ್ಲಾ ಪ್ರಯೋಜನಗಳಿವೆ

ಕೆಲವರಲ್ಲಿ ಜ್ಞಾಪಕ ಶಕ್ತಿಯ ಕೊರತೆ ಇರುತ್ತದೆ. ಇನ್ನೂ ಕೆಲವರಿಗೆ ಓದಿನ ವಿಚಾರದಲ್ಲಿ ಸೋಮಾರಿತನ ಕಾಡುತ್ತದೆ. ಇಂತಹ ಹತ್ತು ಹಲವು ಆತಂಕಗಳ ನಿವಾರಣೆಗೆ ಇರುವ ಯಂತ್ರವೇ ಸಕಲ ವಿದ್ಯಾ ಕಾರಕ ಯಂತ್ರ. (ಬರಹ: ಎಚ್ ಸತೀಶ್, ಜ್ಯೋತಿಷಿ)

ಸಕಲ ವಿದ್ಯಾಕಾರಕ ಯಂತ್ರದಿಂದ ವಿದ್ಯಾರ್ಥಿಗಿಳಿಗೆ ಸಾಕಷ್ಟು ಪ್ರಯೋಜನಗಳಿವೆ. ರಾಶಿವಾರು ಫಲಿತಾಂಶಗಳನ್ನು ತಿಳಿಯಿರಿ
ಸಕಲ ವಿದ್ಯಾಕಾರಕ ಯಂತ್ರದಿಂದ ವಿದ್ಯಾರ್ಥಿಗಿಳಿಗೆ ಸಾಕಷ್ಟು ಪ್ರಯೋಜನಗಳಿವೆ. ರಾಶಿವಾರು ಫಲಿತಾಂಶಗಳನ್ನು ತಿಳಿಯಿರಿ

ಹೆಸರೇ ಸೂಚಿಸುವಂತೆ ವಿದ್ಯಾಭ್ಯಾಸದಲ್ಲಿ ಎದುರಾಗುವ ಅಡ್ಡಿ ಆತಂಕಗಳಿಂದ ದೂರವಾಗಲು ಬಳಸುವ ಯಂತ್ರವೇ ಸಕಲ ವಿದ್ಯಾ ಕಾರಕ ಯಂತ್ರ. ಈ ಯಂತ್ರವೇ ಸೂಚಿಸುವಂತೆ ವಿದ್ಯಾರ್ಥಿಗಳ ಜೀವನದಲ್ಲಿ ಪ್ರತಿಯೊಂದು ಘಟ್ಟವು ಬಹಳ ಮುಖ್ಯವಾಗುತ್ತದೆ. ಹಲವು ಕಾರಣಗಳಿಂದ ಕಲಿಕೆಯ ವಿಚಾರದಲ್ಲಿ ವಿದ್ಯಾರ್ಥಿಗಳು ಹಿಂದೆ ಉಳಿಯುವ ಸಾಧ್ಯತೆಗಳಿರುತ್ತದೆ. ಕೆಲವರಲ್ಲಿ ಮನನ ಶಕ್ತಿ ಕಡಿಮೆ ಇರುತ್ತದೆ. ಇನ್ನೂ ಕೆಲವರಲ್ಲಿ ಜ್ಞಾಪಕ ಶಕ್ತಿಯ ಕೊರತೆ ಇರುತ್ತದೆ. ಇನ್ನೂ ಕೆಲವರಿಗೆ ಓದಿನ ವಿಚಾರದಲ್ಲಿ ಸೋಮಾರಿತನ ಕಾಡುತ್ತದೆ. ಇಂತಹ ಹತ್ತು ಹಲವು ಆತಂಕಗಳ ನಿವಾರಣೆಗೆ ಇರುವ ಯಂತ್ರವೇ ಸಕಲ ವಿದ್ಯಾ ಕಾರಕ ಯಂತ್ರ. ವಿದ್ಯಾರ್ಥಿಗಳ ಪಾಲಿಗೆ ಉತ್ತಮ ಅಭ್ಯಾಸ ಮಾಡುವುದು ಸಹ ಒಂದು ಕರ್ತವ್ಯವಾಗಿದೆ. ಅವರ ಕೆಲಸವು ಸಮಯಕ್ಕೆ ಸರಿಯಾಗಿ ಕಲಿಯುವುದೇ ಆಗುತ್ತದೆ. ಜ್ಯೋತಿಷ್ಯದಲ್ಲಿ ಕೆಲಸ ಕಾರ್ಯಗಳನ್ನು ಸೂಚಿಸುವ ಗ್ರಹ ಶನಿಗ್ರಹವಾಗಿದೆ. ಆದ್ದರಿಂದ ಈ ಯಂತ್ರದಲ್ಲಿ ಶನಿದೇವರಿಗೆ ಸಂಬಂಧಿಸಿದ ಮಂತ್ರಗಳ ಕೆಲವು ಭಾಗಗಳು ಅಥವಾ ಬೀಜಾಕ್ಷರಗಳು ಇರುತ್ತವೆ. ಈ ಕಾರಣದಿಂದ ಈ ಯಂತ್ರವನ್ನು ಧರಿಸಿದಲ್ಲಿ ಆತುರದ ಗುಣ ಇರುವುದಿಲ್ಲ. ಕಾದು ನೋಡುವ ತಂತ್ರವನ್ನು ಅನುಸರಿಸುತ್ತಾರೆ. ನಿಧಾನ ಗತಿಯಲ್ಲಿ ತಮ್ಮ ಕಾರ್ಯವಿಧಾನವನ್ನು ಬದಲಿಸಿಕೊಳ್ಳುತ್ತಾರೆ. ಒಟ್ಟಾರೆ ವಿದ್ಯಾಭ್ಯಾಸವನ್ನು ಸಹ ತಮ್ಮ ಕರ್ತವ್ಯವೆಂದು ಭಾವಿಸುತ್ತಾರೆ.

ಎಷ್ಟೇ ಬುದ್ದಿವಂತರಾದರು ಸಾಮಾನ್ಯವಾಗಿ ಮಿಥುನ, ಕನ್ಯಾ, ಧನು ಮತ್ತು ಮೀನ ಲಗ್ನದಲ್ಲಿ ಜೆನಿಸಿದವರು ಕೇವಲ ವಿದ್ಯಾಭ್ಯಾಸವಲ್ಲದೆ, ತಮ್ಮ ಕೆಲಸ ಕಾರ್ಯಗಳಲ್ಲಿಯೂ ಸಾಮಾನ್ಯವಾಗಿ ತೊಂದರೆಗೆ ಒಳಗಾಗುತ್ತಾರೆ. ಅದರಲ್ಲಿಯೂ ಪ್ರಮುಖವಾಗಿ ಧನು ಲಗ್ನದವರು ಮತ್ತು ಮಿಥುನ ಲಗ್ನದವರು ತಮ್ಮ ಕರ್ತವ್ಯ ಪಾಲನೆಯಲ್ಲಿ ಹಿಂದೆ ಉಳಿಯುತ್ತಾರೆ. ಈ ವಿಚಾರವು ಮಿಥುನ, ಕನ್ಯಾ, ಧನು ಮತ್ತು ಮೀನ ರಾಶಿಗಳಿಗೂ ಅನ್ವಯವಾಗುತ್ತದೆ. ಇವರ ಉದ್ಯೋಗದಲ್ಲಿಯೂ ಸ್ಥಿರತೆ ಇರುವುದಿಲ್ಲ. ಇವರ ವಿದ್ಯಾಭ್ಯಾಸದಲ್ಲಿಯೂ ಪರಿಪೂರ್ಣತೆ ಕಾಣುವುದಿಲ್ಲ. ಇವರಿಗೆ ಇರುವ ಬುದ್ಧಿ ಶಕ್ತಿ ಮತ್ತು ಜ್ಞಾಪಕ ಶಕ್ತಿಗಳು ಪ್ರಯೋಜನಕ್ಕೆ ಬಾರದು. ಆದ್ದರಿಂದ ಈ ನಾಲ್ಕು ಲಗ್ನ ಅಥವಾ ರಾಶಿಯವರು ಈ ಯಂತ್ರವನ್ನು ಪೂಜಿಸುವುದು ಹೆಚ್ಚು ಲಾಭಕರ. ಪ್ರತಿಯೊಂದು ಲಗ್ನ ಮತ್ತು ರಾಶಿಗಳಿಗೂ ಬುಧ ಮತ್ತು ಗುರು ಗ್ರಹಗಳು ಅತಿ ಮುಖ್ಯವಾಗುತ್ತವೆ. ಕಾರಣವೆಂದರೆ ಬುಧನು ವಿದ್ಯಾಕಾರಕನಾಗುತ್ತಾನೆ. ಇದೇ ರೀತಿ ಗುರುವು ಜ್ಞಾನಕಾರಕವಾಗುತ್ತಾನೆ. ಈ ಕಾರಣದಿಂದಾಗಿ ಬುಧ, ಗುರು ಮತ್ತು ಶನಿಗ್ರಹಗಳ ಪ್ರೀತ್ಯರ್ಥ ಇರುವ ಈ ಯಂತ್ರವು ಬಲು ಮುಖ್ಯವಾಗುತ್ತದೆ.

ಈ ಪರಿಹಾರಗಳನ್ನು ಮಾಡಿದರೆ ನೀವು ಪ್ರಯೋಜನ ಪಡೆಯಬಹುದು

ಮೇಷ, ಕಟಕ, ಸಿಂಹ, ವೃಶ್ಚಿಕ, ಧನು ಮತ್ತು ಮೀನ ಲಗ್ನದವರು ಅಥವಾ ರಾಶಿಯವರು ಈ ಯಂತ್ರವನ್ನು ಪೂಜಿಸಬಹುದು, ಇದರಿಂದ ಅವರಲ್ಲಿನ ಗ್ರಹಣ ಶಕ್ತಿಯು ಹೆಚ್ಚುತ್ತದೆ. ಒಮ್ಮೆ ಕಲಿತ ವಿಚಾರವು ಬಹುಕಾಲ ಅವರ ನೆನಪಿನಲ್ಲಿ ಉಳಿಯುತ್ತದೆ. ಜ್ಞಾಪಕ ಶಕ್ತಿಯು ವಿಶೇಷವಾಗಿರುತ್ತದೆ. ಉನ್ನತ ವಿದ್ಯಾಭ್ಯಾಸದಲ್ಲಿ ಎದುರಾಗಬಹುದಾದ ಅಡೆತಡೆಗಳು ದೂರವಾಗುತ್ತವೆ. ಇವರ ವಿದ್ಯೆಗಿಂತಲೂ ಇವರಲ್ಲಿರುವ ಬುದ್ಧಿಶಕ್ತಿಯೇ ವಿಶೇಷವಾಗಿರುತ್ತದೆ. ಪ್ರತಿದಿನವೂ ಪುರುಷ ಸೂಕ್ತ ಮತ್ತು ಸರಸ್ವತಿ ಸೂಕ್ತಗಳನ್ನು ಪಠಿಸುವುದು ಒಳ್ಳೆಯದು. ಸಾಧ್ಯವಾಗದೆ ಹೋದಲ್ಲಿ ಕೇಳುವುದು ಸಹ ಲಾಭಕರ. ಇದರ ಜೊತೆಯಲ್ಲಿ ಹೆಸರುಕಾಳು ಮತ್ತು ಹಸಿರು ಬಟ್ಟೆಯನ್ನು ದಾನ ನೀಡಬೇಕು.

ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಮತ್ತು ಕುಂಭ ಲಗ್ನದವರು ಅಥವಾ ರಾಶಿಯವರು ಈ ಯಂತ್ರವನ್ನು ಪೂಜಿಸಬಹುದು. ಇದರಿಂದ ಅವರಲ್ಲಿನ ವಿದ್ಯಾಭ್ಯಾಸದಲ್ಲಿನ ಆಸಕ್ತಿಯು ಹೆಚ್ಚುತ್ತದೆ. ಅವರಲ್ಲಿರುವ ಕೋಪದ ಗುಣವೂ ಕಡಿಮೆಯಾಗಿ ಸಹಪಾಠಿಗಳ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಕರು ಮತ್ತು ಗುರು ಹಿರಿಯರ ಸಹಾಯವು ದೊರೆಯುವ ಕಾರಣ ವಿದ್ಯಾಭ್ಯಾಸದಲ್ಲಿನ ಅಡ್ಡಿ ಆತಂಕಗಳು ಮರೆಯಾಗುತ್ತದೆ. ಆತುರದ ಬುದ್ಧಿ ತೋರದೆ ನಿಧಾನಗತಿಯಲ್ಲಿ ಎಲ್ಲಾ ವಿಚಾರಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಆದರೂ ಇವರ ಗ್ರಹಣ ಶಕ್ತಿಯು ಕಡಿಮೆ ಇರುತ್ತದೆ. ಆದ್ದರಿಂದ ನಿರಂತರ ಪ್ರಯತ್ನದಿಂದ ಇವರು ತಮ್ಮ ಗುರಿ ಸಾಧಿಸುತ್ತಾರೆ. ಈ ಯಂತ್ರವನ್ನು ಪೂಜಿಸುವುದರ ಜೊತೆಯಲ್ಲಿ ಪ್ರತಿದಿನವೂ ಇವರು ವಿಷ್ಣು ಸಹಸ್ರನಾಮವನ್ನು ಪಠಿಸುವುದು ಸೂಕ್ತ. ಸಾಧ್ಯವಾಗದೆ ಹೋದಲ್ಲಿ ಇದನ್ನು ಆಲಿಸಬೇಕು. ಕಡಲೆಬೇಳೆ ಮತ್ತು ಹಳದಿ ವಸ್ತ್ರವನ್ನು ದಾನ ನೀಡುವುದು ಬಲು ಮುಖ್ಯ.

(ಬರಹ: ಎಚ್ ಸತೀಶ್, ಜ್ಯೋತಿಷಿ)

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.