ಅರ್ಧ ಕುಂಭ, ಪೂರ್ಣ ಕುಂಭ, ಮಹಾ ಕುಂಭ ನಡುವಿನ ವ್ಯತ್ಯಾಸವೇನು? ತಿಳಿಯಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅರ್ಧ ಕುಂಭ, ಪೂರ್ಣ ಕುಂಭ, ಮಹಾ ಕುಂಭ ನಡುವಿನ ವ್ಯತ್ಯಾಸವೇನು? ತಿಳಿಯಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ

ಅರ್ಧ ಕುಂಭ, ಪೂರ್ಣ ಕುಂಭ, ಮಹಾ ಕುಂಭ ನಡುವಿನ ವ್ಯತ್ಯಾಸವೇನು? ತಿಳಿಯಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ

ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಮಹಾ ಕುಂಭಮೇಳ ನಡೆಯಲಿದೆ. ಈ ಕುಂಭಮೇಳದಲ್ಲಿ ದೇಶ ಮತ್ತು ಪ್ರಪಂಚದಾದ್ಯಂತದ ಜನರು ಭಾಗವಹಿಸುತ್ತಾರೆ. ಪ್ರಯಾಗರಾಜ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ ಎಂಬ ನಾಲ್ಕು ಪವಿತ್ರ ಯಾತ್ರಾ ಸ್ಥಳಗಳಲ್ಲಿ ಕುಂಭಮೇಳವನ್ನು ನಡೆಸಲಾಗುತ್ತದೆ. ಅರ್ಧ ಕುಂಭ, ಪೂರ್ಣ ಕುಂಭ ಹಾಗೂ ಮಹಾ ಕುಂಭಮೇಳದ ನಡುವಿನ ವ್ಯತ್ಯಾಸವನ್ನು ತಿಳಿಯೋಣ.

ಅರ್ಧ ಕುಂಭ, ಪೂರ್ಣ ಕುಂಭ ಹಾಗೂ ಮಹಾ ಕುಂಭಮೇಳ ನಡುವಿನ ವ್ಯತ್ಯಾಸ ತಿಳಿಯಿರಿ (ಫೋಟೊ-ಫೈಲ್)
ಅರ್ಧ ಕುಂಭ, ಪೂರ್ಣ ಕುಂಭ ಹಾಗೂ ಮಹಾ ಕುಂಭಮೇಳ ನಡುವಿನ ವ್ಯತ್ಯಾಸ ತಿಳಿಯಿರಿ (ಫೋಟೊ-ಫೈಲ್)

ಸನಾತನ ಧರ್ಮದಲ್ಲಿ ಕುಂಭಕ್ಕೆ ವಿಶೇಷ ಮಹತ್ವವಿದೆ. ಕುಂಭಮೇಳದಲ್ಲಿ ದೇಶ ಮತ್ತು ಪ್ರಪಂಚದಾದ್ಯಂತದ ಜನರು ಭಾಗವಹಿಸುತ್ತಾರೆ. ವಿವಿಧ ಪ್ರದೇಶಗಳಿಂದ ನಾಗಾ ಸಾಧುಗಳು ಸಹ ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಪ್ರಯಾಗ್ ರಾಜ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ ಎಂಬ ನಾಲ್ಕು ಪವಿತ್ರ ಯಾತ್ರಾ ಸ್ಥಳಗಳಲ್ಲಿ ಕುಂಭಮೇಳವನ್ನು ನಡೆಸಲಾಗುತ್ತದೆ. 2025ರಲ್ಲಿ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭಮೇಳ ನಡೆಯಲಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಮಹಾ ಕುಂಭವು 2025 ರ ಜನವರಿ 13 ರಂದು ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 26 ರವರೆಗೆ (ಮಹಾಶಿವರಾತ್ರಿ) ಇರುತ್ತದೆ. ಕುಂಭಮೇಳವು ಮೂರು ರೀತಿಯಲ್ಲಿ ಇರುತ್ತದೆ. ಅರ್ಧ ಕುಂಭ, ಪೂರ್ಣಕುಂಭ ಹಾಗೂ ಮಹಾಕುಂಭ. ಅರ್ಧ ಕುಂಭ, ಪೂರ್ಣಕುಂಭ ಮತ್ತು ಮಹಾಕುಂಭಗಳ ನಡುವಿನ ವ್ಯತ್ಯಾಸವೇನು ಎಂದು ತಿಳಿಯೋಣ.

ಸ್ಥಳವನ್ನು ಹೇಗೆ ನಿರ್ಧರಿಸಲಾಗುತ್ತದೆ?
ಕುಂಭಮೇಳದ ಸ್ಥಳವನ್ನು ಸೂರ್ಯ, ಚಂದ್ರ ಮತ್ತು ಗುರುವಿನ ಸ್ಥಾನವನ್ನು ನೋಡಿ ನಿರ್ಧರಿಸಲಾಗುತ್ತದೆ. ಸೂರ್ಯ ಮತ್ತು ಚಂದ್ರರು ಮಕರ ರಾಶಿಯಲ್ಲಿ ಮತ್ತು ಗುರು ವೃಷಭ ರಾಶಿಯಲ್ಲಿದ್ದಾಗ, ಕುಂಭ ಮೇಳವನ್ನು ಪ್ರಯಾಗ್ ರಾಜ್ ನಲ್ಲಿ ನಡೆಸಲಾಗುತ್ತದೆ. ಅದೇ ಸಮಯದಲ್ಲಿ, ಸೂರ್ಯನು ಮೇಷ ರಾಶಿಯಲ್ಲಿ ಮತ್ತು ಗುರು ಕುಂಭ ರಾಶಿಯಲ್ಲಿದ್ದಾಗ, ಕುಂಭ ಮೇಳವನ್ನು ಹರಿದ್ವಾರದಲ್ಲಿ ಆಯೋಜಿಸಲಾಗುತ್ತದೆ. ಸಿಂಹ ರಾಶಿಯಲ್ಲಿ ಸೂರ್ಯ ಮತ್ತು ಸಿಂಹ ರಾಶಿಯಲ್ಲಿ ಗುರು ಇರುವಾಗ, ಕುಂಭ ಮೇಳವನ್ನು ಉಜ್ಜಯಿನಿಯಲ್ಲಿ ನಡೆಸಲಾಗುತ್ತದೆ. ಸಿಂಹ ರಾಶಿಯಲ್ಲಿ ಸೂರ್ಯ ಮತ್ತು ಗುರು, ಸಿಂಹ ಅಥವಾ ಕಟಕ ರಾಶಿಯಲ್ಲಿದ್ದಾಗ, ಕುಂಭ ಮೇಳವನ್ನು ನಾಸಿಕ್ ನಲ್ಲಿ ನಡೆಸಲಾಗುತ್ತದೆ.

ಅರ್ಧ ಕುಂಭ ಮೇಳ

ಅರ್ಧ ಕುಂಭ ಮೇಳವನ್ನು ಪ್ರತಿ ಆರು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಅರ್ಧ ಕುಂಭವು ಪ್ರಯಾಗ್ ರಾಜ್ ಮತ್ತು ಹರಿದ್ವಾರದಲ್ಲಿ ಮಾತ್ರ ನಡೆಯುತ್ತದೆ.

ಪೂರ್ಣ ಕುಂಭ ಮೇಳ

ಪೂರ್ಣಕುಂಭ ಮೇಳವನ್ನು 12 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಈ ಮೇಳವನ್ನು ಪ್ರಯಾಗ್ ರಾಜ್ ನ ಸಂಗಮ್ ದಡದಲ್ಲಿ ಆಯೋಜಿಸಲಾಗುತ್ತದೆ. 2013ರಲ್ಲಿ ಇಲ್ಲಿ ಕೊನೆಯ ಬಾರಿಗೆ ಪೂರ್ಣ ಕುಂಭಮೇಳ ನಡೆದಿತ್ತು.

ಮಹಾ ಕುಂಭ ಮೇಳವು

2025ರ ಜನವರಿಯಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಪ್ರಯಾಗ್ ರಾಜ್ ನಲ್ಲಿ 12 ಪೂರ್ಣ ಕುಂಭಗಳು ನಡೆದಾಗ, ಅದಕ್ಕೆ ಮಹಾಕುಂಭ ಎಂಬ ಹೆಸರನ್ನು ನೀಡಲಾಗುತ್ತದೆ. ಮಹಾ ಕುಂಭವು 12 ಪೂರ್ಣಕುಂಭಗಳಲ್ಲಿ ಒಮ್ಮೆ ನಡೆಯುತ್ತದೆ. ಮಹಾ ಕುಂಭ ಮೇಳವು 144 ವರ್ಷಗಳಿಗೊಮ್ಮೆ ನಡೆಯುತ್ತದೆ.

ಪುಷ್ಯ ಪೂರ್ಣಿಮಾ 2025 ರ ಜನವರಿ 13 ರಂದು ಮಹಾಕುಂಭ ಪ್ರಾರಂಭವಾಗುವುದರೊಂದಿಗೆ ಮೊದಲ ರಾಜ ಸ್ನಾನ ನಡೆಯಲಿದೆ.

ಎರಡನೇ ರಾಜ ಸ್ನಾನವು ಮಕರ ಸಂಕ್ರಾಂತಿಯಂದು ಅಂದರೆ 2025 ರ ಜನವರಿ 14 ರಂದು ನಡೆಯಲಿದೆ.

ಮೂರನೇ ಶಾಹಿ ಸ್ನಾನ- ಮೌನಿ ಅಮಾವಾಸ್ಯೆ ದಿನ 2025 ರ ಜನವರಿ 29 ರಂದು ನಡೆಯಲಿದೆ.

ನಾಲ್ಕನೇ ರಾಜ ಸ್ನಾನವು ವಸಂತ ಪಂಚಮಿಯಂದು ಅಂದರೆ 2025ರ ಫೆಬ್ರವರಿ 3 ರಂದು ನಡೆಯಲಿದೆ.

ಐದನೇ ರಾಜ ಸ್ನಾನವು 2025 ರ ಫೆಬ್ರವರಿ 12 ರಂದು ಮಾಘ ಪೂರ್ಣಿಮಾದಂದು ನಡೆಯಲಿದೆ.

ಆರನೇ ಶಾಹಿ ಸ್ನಾನವು 2025 ರ ಫೆಬ್ರವರಿ 26 ರಂದು ಮಹಾಶಿವರಾತ್ರಿ ಮತ್ತು ಮಹಾಕುಂಭದ ಕೊನೆಯ ದಿನದಂದು ನಡೆಯಲಿದೆ.

ಮಹಾಕುಂಭದಲ್ಲಿ 5.5 ಕೋಟಿ ರುದ್ರಾಕ್ಷಿ, 12 ಜ್ಯೋತಿರ್ಲಿಂಗಗಳ ಆಕರ್ಷಣೆ

ಈ ಬಾರಿಯ ಮಹಾ ಕುಂಭದಲ್ಲಿ 5.5 ಕೋಟಿ ರುದ್ರಾಕ್ಷಿಯೊಂದಿಗೆ 12 ಜ್ಯೋತಿರ್ಲಿಂಗಗಳನ್ನು ಸಿದ್ಧಪಡಿಸಲಾಗುತ್ತಿದೆ. 11,000 ತ್ರಿಶೂಲಗಳನ್ನು ಸಹ ಬಳಸಲಾಗುತ್ತಿದೆ. ಆರಂಭಿಕ ರಚನೆಯನ್ನು ಸಿದ್ಧಪಡಿಸಲಾಗಿದೆ. ಮೊದಲ ಸ್ನಾನಕ್ಕೆ ಮೊದಲು ಎಲ್ಲಾ 12 ಜ್ಯೋತಿರ್ಲಿಂಗಗಳನ್ನು ಸಿದ್ಧಪಡಿಸಲಾಗುತ್ತದೆ. ಇದು ಮಹಾಕುಂಭಕ್ಕೆ ಬರುವ ಭಕ್ತರ ಪ್ರಮುಖ ಆಕರ್ಷಣೆಯ ಕೇಂದ್ರವಾಗಲಿದೆ.

ವಿಶಿಷ್ಟ ಜ್ಯೋತಿರ್ಲಿಂಗವನ್ನು ಅಮೇಥಿಯ ಮಹಾಕುಂಭ ಸೆಕ್ಟರ್ 6 ರಲ್ಲಿರುವ ಸಂತ ಪರಮಹಂಸ ಆಶ್ರಮದ ಶಿಬಿರದಲ್ಲಿ ನಿರ್ಮಿಸಲಾಗುತ್ತಿದೆ. ಶಿಬಿರವು ನಾಗವಾಸುಕಿ ದೇವಾಲಯದ ಮುಂದೆ ಇದೆ. ಇದಕ್ಕಾಗಿ ನೇಪಾಳ ಮತ್ತು ಮಲೇಷ್ಯಾದಿಂದ ರುದ್ರಾಕ್ಷಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಪ್ರತಿ ಜ್ಯೋತಿರ್ಲಿಂಗವು 9 ಅಡಿ ಅಗಲ ಮತ್ತು 11 ಅಡಿ ಎತ್ತರವಿರುತ್ತದೆ. ಇದರಲ್ಲಿ ಬಳಸಲಾದ 11,000 ತ್ರಿಶೂಲಗಳನ್ನು ಬಿಳಿ, ಕಪ್ಪು, ಹಳದಿ ಮತ್ತು ಕೆಂಪು ಬಣ್ಣಗಳಲ್ಲಿ ಚಿತ್ರಿಸಲಾಗಿದೆ.

ಜನವರಿ 12 ರೊಳಗೆ 12 ಜ್ಯೋತಿರ್ಲಿಂಗಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಜನವರಿ 13 ರಿಂದ ಫೆಬ್ರವರಿ 26 ರ ನಡುವೆ ಭಕ್ತರು ಇವುಗಳನ್ನು ಕಣ್ತುಂಬಿಕೊಳ್ಳಬಹುದು ಮತ್ತು ಪೂಜಿಸಲು ಅವಕಾಶ ನೀಡಲಾಗುತ್ತದೆ.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.
kannada.hindustantimes.com/astrology/yearly-horoscope

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.