Guru Pradosh Vrat: ನವೆಂಬರ್ ತಿಂಗಳ ಕೊನೆಯ ಪ್ರದೋಷ ವ್ರತ ಯಾವಾಗ? ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ ಹೀಗಿರುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Guru Pradosh Vrat: ನವೆಂಬರ್ ತಿಂಗಳ ಕೊನೆಯ ಪ್ರದೋಷ ವ್ರತ ಯಾವಾಗ? ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ ಹೀಗಿರುತ್ತೆ

Guru Pradosh Vrat: ನವೆಂಬರ್ ತಿಂಗಳ ಕೊನೆಯ ಪ್ರದೋಷ ವ್ರತ ಯಾವಾಗ? ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ ಹೀಗಿರುತ್ತೆ

ಗುರು ಪ್ರದೋಷ ವ್ರತ: ಹಿಂದೂ ಧರ್ಮದಲ್ಲಿ ಪ್ರದೋಷ ವ್ರತಕ್ಕೆ ವಿಶೇಷ ಮಹತ್ವವಿದೆ. ಪ್ರದೋಷ ವ್ರತದ ದಿನದಂದು ಶಿವಲಿಂಗಕ್ಕೆ ಜಲಾಭಿಷೇಕ ಮಾಡುವುದರಿಂದ, ವೈವಾಹಿಕ ಜೀವನ ಸಂತೋಷದಿಂ ಕೂಡಿರುತ್ತದೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ. ನವೆಂಬರ್ ತಿಂಗಳ ಕೊನೆಯ ಪ್ರದೋಷ ವ್ರತ ಯಾವಾಗ ಎಂಬುದನ್ನುು ತಿಳಿಯಿರಿ.

ನವೆಂಬರ್ ತಿಂಗಳ ಗುರು ಪ್ರದೋಷ ವ್ರತ ಯಾವಾಗ ಎಂಬುದರ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ,
ನವೆಂಬರ್ ತಿಂಗಳ ಗುರು ಪ್ರದೋಷ ವ್ರತ ಯಾವಾಗ ಎಂಬುದರ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ,

ಗುರು ಪ್ರದೋಷ ವ್ರತ 2024: ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ಗುರು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಇದು ನವೆಂಬರ್ ತಿಂಗಳ ಕೊನೆಯ ಪ್ರದೋಷ ಉಪವಾಸವೂ ಆಗಿರುತ್ತದೆ. ಪ್ರದೋಷ ವ್ರತವನ್ನು ಶಿವನಿಗೆ ಅರ್ಪಿಸಲಾಗಿದೆ. ಈ ದಿನ ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಆರ್ಥಿಕ ಸಮೃದ್ಧಿ ಸಿಗುತ್ತದೆ ಎಂದು ನಂಬಲಾಗಿದೆ. ಪ್ರದೋಷ ಉಪವಾಸವನ್ನು ಆಚರಿಸುವ ಮೂಲಕ ನಮ್ಮಲ್ಲಿನ ಪಾಪಗಳನ್ನು ತೊಡೆದುಹಾಕುತ್ತದೆ ಮತ್ತು ಆಶೀರ್ವಾದವನ್ನು ಪಡೆಯಬಹುದು ಎಂದು ನಂಬಲಾಗಿದೆ. ನವೆಂಬರ್ ತಿಂಗಳ ಕೊನೆಯ ಪ್ರದೋಷ ವ್ರತ ಯಾವಾಗ, ಶಿವನ ಪೂಜಾ ವಿಧಾನವನ್ನು ತಿಳಿಯಿರಿ.

ತ್ರಯೋದಶಿ ದಿನಾಂಕವು ಯಾವ ಸಮಯದಿಂದ ಯಾವ ಸಮಯದವರೆಗೆ ಇರುತ್ತದೆ: ತ್ರಯೋದಶಿ 2024ರ ನವೆಂಬರ್ 28 ಬೆಳಿಗ್ಗೆ 06:23 ಕ್ಕೆ ಪ್ರಾರಂಭವಾಗುತ್ತದೆ ಮತ್ತು ತ್ರಯೋದಶಿ 2024ರ ನವೆಂಬರ್ 29ರ ಬೆಳಿಗ್ಗೆ 08:39 ಕ್ಕೆ ಕೊನೆಗೊಳ್ಳುತ್ತದೆ.

ನವೆಂಬರ್ ತಿಂಗಳಲ್ಲಿ ಗುರು ಪ್ರದೋಷ ವ್ರತ ಯಾವಾಗ: ಉದಯತಿಥಿ ಮಾನ್ಯವಾಗಿರುವುದರಿಂದ ಗುರು ಪ್ರದೋಷ ವ್ರತವನ್ನು 2024 ರ ನವೆಂಬರ್ 28ರ ಗುರುವಾರ ಆಚರಿಸಲಾಗುತ್ತದೆ.

ಗುರು ಪ್ರದೋಷ ಪೂಜಾ ಮುಹೂರ್ತ: ಪ್ರದೋಷ ವ್ರತ ಪೂಜಾ ಮುಹೂರ್ತವು ನವೆಂಬರ್ 28ರ ಗುರುವಾರ ಸಂಜೆ 05:23 ರಿಂದ ರಾತ್ರಿ 08:05 ರವರೆಗೆ ಇರುತ್ತದೆ. ಈ ಸಮಯದಲ್ಲಿ, ಪ್ರದೋಷ ಅವಧಿ ಇರುತ್ತದೆ. ಪ್ರದೋಷದ ಅವಧಿಯಲ್ಲಿ ಶಿವನನ್ನು ಪೂಜಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಪೂಜಿಸುವುದರಿಂದ ಶುಭ ಫಲಿತಾಂಶಗಳು ಬರುತ್ತವೆ ಎಂದು ನಂಬಲಾಗಿದೆ.

ಗುರು ಪ್ರದೋಷ ವ್ರತ ಶುಭ ಮುಹೂರ್ತ

ಉತ್ತಮ: ಬೆಳಿಗ್ಗೆ 06:53 ರಿಂದ ಬೆಳಿಗ್ಗೆ 08:12

ಲಾಭ: ಉನ್ನತಿ: ಮಧ್ಯಾಹ್ನ 12:08 ರಿಂದ ಮಧ್ಯಾಹ್ನ 01:27

ಅಮೃತ - ಅತ್ಯುತ್ತಮ: ಮಧ್ಯಾಹ್ನ 01:27 ರಿಂದ 02:46 ಶುಭ

ಉತ್ತಮ: ಸಂಜೆ 04:04 ರಿಂದ 05:23 ಅಮೃತ್

ಅತ್ಯುತ್ತಮ: ಸಂಜೆ 05:23 ರಿಂದ 07:04

ಗುರು ಪ್ರದೋಷ ವ್ರಚ ಆಚರಣೆಯಿಂದ ಸಿಗುವ ಪ್ರಯೋಜನಗಳು: ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಗುರು ಪ್ರದೋಷ ಉಪವಾಸವನ್ನು ಆಚರಿಸುವುದರಿಂದ ಕೀರ್ತಿ, ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಹೆಚ್ಚಾಗುತ್ತದೆ. ವ್ಯಕ್ತಿಯ ದೈಹಿಕ ಸಂತೋಷಗಳು ಹೆಚ್ಚಾಗುತ್ತವೆ. ಗುರುವಾರ ಬರುವ ಪ್ರದೋಷ ವ್ರತದ ಪ್ರಾಮುಖ್ಯತೆ ಹೆಚ್ಚಿರುತ್ತೆ. ಏಕೆಂದರೆ ಗುರುವಾರ ವಿಷ್ಣುವಿಗೆ ಸಮರ್ಪಿತವಾದ ದಿನ. ಇಂಥ ಪರಿಸ್ಥಿತಿಯಲ್ಲಿ, ಈ ದಿನದಂದು ಶಿವನೊಂದಿಗೆ ವಿಷ್ಣುವಿನ ಆಶೀರ್ವಾದವನ್ನೂ ಪಡೆಯಬಹುದು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.