ಜಗತ್ತು ಯಾವಾಗ ಅಂತ್ಯವಾಗುತ್ತೆ; ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಯ ಸಂಪೂರ್ಣ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜಗತ್ತು ಯಾವಾಗ ಅಂತ್ಯವಾಗುತ್ತೆ; ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಯ ಸಂಪೂರ್ಣ ಪಟ್ಟಿ ಇಲ್ಲಿದೆ

ಜಗತ್ತು ಯಾವಾಗ ಅಂತ್ಯವಾಗುತ್ತೆ; ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಯ ಸಂಪೂರ್ಣ ಪಟ್ಟಿ ಇಲ್ಲಿದೆ

Baba Vanga: ಬಾಬಾ ವಂಗಾ ಅವರು 2024ರ ಬಗ್ಗೆ ಹೇಳಿದ್ದ ಭವಿಷ್ಯವಾಣಿ ಬಹುತೇಕ ಜನಿವಾಗಿವೆ. ಹೀಗಾಗಿ 2025ರ ಬಗ್ಗೆ ಹೇಳಿರುವ ಭವಿಷ್ಯವಾಣಿ ಸತ್ಯವಾಗಲಿವೆ ಎಂಬುದು ಹಲವರ ವಾದ. ಬಾಬಾ ವಂಗಾ ಜಗತ್ತು ಯಾವಾಗ ಅಂತ್ಯವಾಗಲಿದೆ ಅನ್ನೋದನ್ನ ಹೇಳಿದ್ದಾರೆ. 2025 ರಿಂದ ಎಲ್ಲಿಯವರಿಗೆ ಜಗತ್ತು ಇರುತ್ತೆ, ಯಾವ ವರ್ಷ ಏನಾಲಿದೆ ಎಂಬ ಭವಿಷ್ಯವಾಣಿಯ ಪ್ರಮುಖ ಅಂಶಗಳ ಪಟ್ಟಿ ಇಲ್ಲಿವೆ.

Baba Vanga: ಜಗತ್ತು ಯಾವಾಗ ಅಂತ್ಯವಾಗುತ್ತೆ ಎಂಬುದರ ಬಗ್ಗೆ ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಯ ಸಂಪೂರ್ಣ ಪಟ್ಟಿ ಇಲ್ಲಿದೆ
Baba Vanga: ಜಗತ್ತು ಯಾವಾಗ ಅಂತ್ಯವಾಗುತ್ತೆ ಎಂಬುದರ ಬಗ್ಗೆ ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಯ ಸಂಪೂರ್ಣ ಪಟ್ಟಿ ಇಲ್ಲಿದೆ

Baba Vanga: ಭವಿಷ್ಯವಾಣಿ ನುಡಿಯುವುದರಲ್ಲಿ ಜಾಗತಿಕವಾಗಿ ಜನಪ್ರಿಯವಾಗಿರುವ ವಾಂಗೆಲಿಯಾ ಪಾಂಡೆವಾ ಗುಶ್ಟೆರೋವಾ ಅರ್ಥಾತ್ ಬಾಬಾ ವಂಗಾ ಎಂದು ಸಾಮಾನ್ಯವಾಗಿ ಕರೆಯುವ ಇವರು 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದರು. ಬಾಲ್ಯದಿಂದಲೂ ಕುರುಡಾಗಿದ್ದ ಇವರು ಜಗತ್ತಿನಲ್ಲಿ ಮುಂದೆ ಏನೆಲ್ಲಾ ಆಗುತ್ತದೆ ಎಂದು ಭವಿಷ್ಯವಾಣಿ ನುಡಿಯುವ ಮೂಲಕ ಗಮನ ಸೆಳೆದಿದ್ದಾರೆ. ಬಲ್ಗೇರಿಯಾದ ಬೆಲಾಸಿಕಾ ಪರ್ವತಗಳ ರೂಪೈಟ್ ಪ್ರದೇಶದಲ್ಲಿ ತಮ್ಮ ಜೀವನದ ಬಹುಪಾಲ ಸಮಯವನ್ನು ಕಳೆದಿರುವ ಬಾಬಾ ವಂಗಾ, ನುಡಿದಿರುವ ಈವರೆಗಿನ ಎಲ್ಲಾ ಭವಿಷ್ಯವಾಣಿಗಳು ನಿಜವಾಗಿವೆ. ಹೀಗಾಗಿ ಮುಂದೆ ಏನೆಲ್ಲಾ ಆಗುತ್ತೆ ಎಂದು ನುಡುದಿರುವ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಾಗಿವೆ.

ಸಾಮಾನ್ಯವಾಗಿ ಹೊಸ ವರ್ಷ ಆರಂಭವಾಗುತ್ತಿದ್ದಂತೆ ಆ ವರ್ಷದಲ್ಲಿ ಏನೆಲ್ಲಾ ಸಂಭವಿಸಬಹುದು, ಒಳ್ಳೆಯದು ಕೆಟ್ಟದ್ದು ಹೀಗೆ ಭವಿಷ್ಯವನ್ನು ನೋಡಲಾಗುತ್ತದೆ. ಬಾಬಾ ವಂಗಾ ಅವರ ಕೆಲವು ಭವಿಷ್ಯವಾಣಿಗಳು ಆಘಾತರಿಯಾಗಿವೆ. ಆದರೂ ಇವರು ಹೇಳಿರುವುದೆಲ್ಲಾ ನಿಜವಾಗುತ್ತೆ ಎಂದು ನಂಬುವವರು ಸಾಕಷ್ಟು ಮಂದಿ ಇದ್ದಾರೆ. 2024ರ ಇವರ ಭವಿಷ್ಯವಾಣಿಯ ಬಹುತೇಕ ಜನಿವಾಗಿವೆ. ಹೀಗಾಗಿ 2025ರ ಬಗ್ಗೆ ಹೇಳಿರುವ ಭವಿಷ್ಯವಾಣಿಗಳು ಸತ್ಯವಾಗಲಿವೆ ಎಂಬುದು ಹಲವರ ವಾದವಾಗಿದೆ. ಬಾಬಾ ವಂಗಾ ಅವರು ಜಗತ್ತು ಯಾವಾಗ ಅಂತ್ಯವಾಗಲಿದೆ ಎಂಬುದನ್ನೂ ಹೇಳಿದ್ದಾರೆ. 1996ರ ಆಗಸ್ಟ್ 11 ರಂದು ಬಾಬಾ ವಂಗಾ ನಿಧನರಾದರು.

2025 ರಿಂದ ಎಲ್ಲಿಯವರಿಗೆ ಈ ಜಗತ್ತು ಇರುತ್ತೆ, ಯಾವ ವರ್ಷ ಏನಾಲಿದೆ ಎಂದು ಬಾಬಾ ವಂಗಾ ಹೇಳಿರುವ ಪ್ರಮುಖ ಅಂಶಗಳು ಇಲ್ಲಿವೆ

2025: ಯುರೋಪ್ ಜನವಸತಿ ವಿರಳವಾಗುತ್ತದೆ

2028: ಹೊಸ ಶಕ್ತಿಯ ಮೂಲ ಸೃಷ್ಟಿಯಾಗುತ್ತದೆ, ವಿಶ್ವದ ಹಸಿವು ನಿರ್ಮೂಲನೆಯಾಗುತ್ತದೆಸ ಮಾನವರು ಶುಕ್ರವನ್ನು ತಲುವುತ್ತಾರೆ

2033: ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟಗಳು ಏರುತ್ತವೆ

2043: ಯುರೋಪ್ ಉತ್ಕರ್ಷದ ಆರ್ಥಿಕತೆಯನ್ನು ಅನುಭವಿಸುತ್ತದೆ. ಪ್ರಧಾನವಾಗಿ ಇಸ್ಲಾಮಿಕ್ ಆಗುತ್ತದೆ

2046: ಸಂಶ್ಲೇಷಿತ ಅಂಗಗಳನ್ನು ಸಾಮೂಹಿಕವಾಗಿ ಉತ್ಪಾದಿಸಲಾಗುತ್ತದೆ

2066: ಯುಎಸ್ "ಪರಿಸರ ವಿನಾಶಕ" ಆಯುಧವನ್ನು ಕಂಡುಹಿಡಿಯುತ್ತದೆ

2076: ಸಾಮಾಜಿಕ ಜಾತಿ ವ್ಯವಸೆ ಕುಸಿಯುತ್ತದೆ

2084: ಪ್ರಕೃತಿ ಸ್ವತಃ ಪುನರುಜ್ಜಿವನಗೊಳ್ಳಲು ಪ್ರಾರಂಭಿಸುತ್ತದೆ

2088: ವೈರಸ್ ತ್ವರಿತ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ

2097: ವೈರಸ್ ನಿರ್ಮೂಲನೆಯಾಗುತ್ತದೆ

2100: ಕೃತಕ ನೂರ್ಯನು ಭೂಮಿಯ ಕರಾಳ ಭಾಗವನ್ನು ಬಿಸಿಮಾಡುತ್ತಾನೆ

2111: ಮಾನವರು ಹೆಚ್ಚು ಹೆಚ್ಚು ರೋಬೋಟ್‌ಗಳಿಗೆ ಅವಲಂಬಿತರಾಗುತ್ತಾರೆ

2123: ಸಣ್ಣ ರಾಷ್ಟ್ರಗಳು ನಿರಂತರ ಯುದ್ಧದಲ್ಲಿ ತೊಡಗಿರುತ್ತವೆ, ಆದರೆ ಮಹಾಶಕ್ತಿ ರಾಷ್ಟ್ರಗಳು ದೂರವಿರುತ್ತವೆ

2125: ಹಂಗೇರಿ ಆಳವಾದ ಬಾಹ್ಯಾಕಾಶದಿಂದ ಸಂಕೇತಗಳನ್ನು ಪಡೆಯುತ್ತದೆ

2130: ಭೂಮ್ಯತೀತ ಸಹಾಯದಿಂದ ಸಮುದ್ರದೊಳಗಿನ ಸಮಾಜಗಳು ರೂಪುಗೊಳ್ಳುತ್ತವೆ

2154: ಪ್ರಾಣಿಗಳು ಮಾನವನಂತೆ ವಿಕಸನಗೊಳ್ಳುತ್ತವೆ

2167: ಹೊಸ ಧರ್ಮವು ಜಾಗತಿಕ ಜನಪ್ರಿಯತೆಯನ್ನು ಗಳಿಸುತ್ತದೆ

2170: ಭೂಮಿಯು ಒಣಗುತ್ತದೆ ಮತ್ತು ಮರುಭೂಮಿಯಾಗುತ್ತದೆ

2183: ಮಂಗಳ ಗ್ರಹದ ವಸಾಹತು ಸ್ವಾವಲಂಬಿಯಾಗುತ್ತದೆ. ಸಾರ್ವಭೌಮತ್ವವನ್ನು ಬೇಡುತ್ತದೆ

2187: ಜ್ವಾಲಾಮುಖಿ ಸ್ಪೋಟಗಳನ್ನು ಯಶಸ್ವಿಯಾಗಿ ನಿಗ್ರಹಿಸಲಾಗುತ್ತದೆ

2195: ಸ್ವಾಯತ್ತ ನೀರೊಳಗಿನ ಸಮುದಾಯಗಳು ಹೊರಹೊಮ್ಮುತ್ತವೆ.

2196: ಯುರೋಪಿಯನ್ ಮತ್ತು ಏಷ್ಯನ್ ಜನಸಂಖ್ಯೆಯ ವಿಲೀನದಿಂದ ಯುರೋ-ಏಷ್ಯನ್ ಜನಾಂಗವು ರೂವುಗೊಳ್ಳುತ್ತದೆ

2201: ಸೂರ್ಯ ತಣ್ಣಗಾಗುತ್ತದೆ. ಇದು ಬೃಹತ್ ಹವಾಮಾನ ಬದಲಾವಣೆಗಳಿಗೆ ಕಾರಣವಾಗುತ್ತದೆ

2221: ಮಾನವರು ಅನ್ಯಗ್ರಹ ಜೀವಿಗಳ ಬಗ್ಗೆ ಭಯಾನಕ ಸಾಕ್ಷಾತ್ಕಾರಗಳನ್ನು ಎದುರಿಸುತ್ತಾರೆ

2256: ಹಿಂತಿರುಗುವ ರಾಕೆಟ್ ಮೂಲಕ ಇಂಟರ್ ಗ್ಯಾಲಕ್ಟಿಕ್ ವೈರಸ್ ಅನ್ನು ಭೂಮಿಗೆ ಹಿಂತಿರುಗಿಸಲಾಗುತ್ತದೆ

2262: ಮಂಗಳವು ಕ್ಷುದ್ರಗ್ರಹ ನಾಶದ ಬೆದರಿಕೆಯನ್ನು ಎದುರಿಸುತ್ತದೆ

2271: ಭೌತಿಕ ಸ್ಥಿರಾಂಕಗಳು ಬದಲಾಗಿ ವೈಜ್ಞಾನಿಕ ಸೂತ್ರಗಳಿಗೆ ಅಡ್ಡಿಪಡಿಸುತ್ತವೆ

2273: ಅನುವಂಶಿಕ ಮಿಶ್ರಣದಿಂದಾಗಿ ಆಪ್ರೋ-ಯುರೇಷಿಯನ್ ಜನಾಂಗವು ರೂಪುಗೊಳ್ಳುತ್ತದೆ

2279: ಕಪ್ಪು ಕುಳಿಗಳು ಮತ್ತು ಬಾಹ್ಯಾಕಾಶ ವಸ್ತುವಿನ ಬಾಗುವಿಕೆಯಿಂದ ಶಕ್ತಿಯನ್ನು ಕಂಡುಹಿಡಿಯಲಾಗುತ್ತದೆ

2288: ಸಮಯ ಪ್ರಯಾಣವನ್ನು ಕಂಡುಹಿಡಿಯಲಾಗುತ್ತದೆ. ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂವರ್ಕ ಸಾಧಿಸುತ್ತಾರೆ

2291: ಸೂರ್ಯ ಮತ್ತಷ್ಟು ತಣ್ಣಗಾಗುತ್ತಾನೆ. ಮಾನವರು ಅದನ್ನು ಮತ್ತೆ ಬಿಸಿಮಾಡಲು ಪ್ರಯತ್ನಿಸುತ್ತಾರೆ

2292: ಸೌರ ಜ್ವಾಲೆಗಳು ಸಾಮಾನ್ಯವಾಗುತ್ತವೆ, ಗುರುತ್ವಾಕರ್ಷಣೆಯ ಬದಲಾವಣೆಗಳಿಂದಾಗಿ ಉಪಗ್ರಹಗಳು ಅಪ್ಪಳಿಸುತ್ತವೆ

2299: ಫ್ರಾನ್ಸ್ ಇಸ್ಲಾಮಿಕ್ ರಾಜ್ಯದ ವಿರುದ್ಧ ಗೆರಿಲ್ಲಾ ಯುದ್ಧವನ್ನು ನಡೆಸುತ್ತದೆ

2302: ನ್ಯಾಯ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಗಳು, ಸಾರ್ವತ್ರಿಕ ಕಾನೂನುಗಳನ್ನು ಕಂಡುಹಿಡಿಯಲಾಗುತ್ತದೆ

2304: ಮಾನವರು ಚಂದ್ರನನ್ನು ವ್ಯಾವಕವಾಗಿ ಅಧ್ಯಯನ ಮಾಡುತ್ತಾರೆ

2341: ಭೂಮಿಯು ಬಾಹ್ಯಾಕಾಶದಿಂದ ಗಂಭೀರ ಅಪಾಯವನ್ನು ಎದುರಿಸುತ್ತದೆ.

2354: ಅನಿರೀಕ್ಷಿತ ಸಮಸ್ಯೆಗಳಿಂದಾಗಿ ನೀರಿನ ಕೊರತೆ ಉಂಟಾಗುತ್ತದೆ.

2371: ಕ್ಷಾಮ ಜಾಗತಿಕ ಸಮಸ್ಯೆಯಾಗುತ್ತದೆ

2378: ಮಾನವರ ಹೊಸ ಜನಾಂಗ ಹೊರಹೊಮ್ಮುತ್ತದೆ

2480: ಎರಡು ಕೃತಕ ಸೂರ್ಯಗಳ ಡಿಕ್ಕಿಯಿಂದ ಸಂಪೂರ್ಣ ಕತ್ತಲೆಯಾಗುತ್ತದೆ

3005: ಮಂಗಳ ಗ್ರಹದಲ್ಲಿ ಅರಾಜಕತೆ ಮತ್ತು ಯುದ್ಧ ಭುಗಿಲೆಳುತ್ತದೆ. ಗ್ರಹಗಳ ಅಕ್ಷಗಳು ಬದಲಾಗುತ್ತವೆ

3010: ಒಂದು ಕ್ಷುದ್ರಗ್ರಹವು ಚಂದ್ರನಿಗೆ ಡಿಕ್ಕಿ ಹೊಡೆದು ಬೃಹತ್ ಧೂಳಿನ ಮೋಡವನ್ನು ಸೃಷ್ಟಿಸುತ್ತದೆ

3797: ಎಲ್ಲಾ ಜೀವಿಗಳು ಕಣ್ಮರೆಯಾಗುತ್ತವೆ. ಮಾನವರು ಹೊಸ ಸೌರವ್ಯೂಹದಲ್ಲಿ ವಸಾಹತುಗಳನ್ನು ಸ್ಥಾಪಿಸುತ್ತಾರೆ

3803: ವಸಾಹತುಗಳು ವಿರಳ ಜನಸಂಖ್ಯೆಯನ್ನು ಹೊಂದಿರುತ್ತವೆ. ಹವಾಮಾನ ಪರಿಸ್ಥಿತಿಗಳಿಂದಾಗಿ ಅನುವಂಶಿಕ ರೂಪಾಂತರಗಳು ಸಂಭವಿಸುತ್ತವೆ

3805: ಸಂಪನ್ಮೂಲಗಳಿಗಾಗಿ ಯುದ್ಧಗಳು ಜನಸಂಖ್ಯೆಯ ಕುಸಿತಕ್ಕೆ ಕಾರಣವಾಗುತ್ತವೆ

3815: ಯುದ್ಧದ ಅವಧಿ ಕೊನೆಗೊಳ್ಳುತ್ತದೆ

3854: ನಾಗರಿಕತೆಯು ಪ್ರಗತಿಯನ್ನು ನಿಲ್ಲಿಸುತ್ತದೆ. ಮಾನವೀಯತೆಯು ಬುಡಕಟ್ಟು ಜನಾಂಗಕ್ಕೆ ಮರಳುತ್ತದೆ

3871: ಹೊಸ ಧರ್ಮವು ನೈತಿಕತೆ ಮತ್ತು ಆಚರಣೆಗಳನ್ನು ಮರು ವ್ಯಾಖ್ಯಾನಿಸುತ್ತದೆ

3874: ಹೊಸ ಧರ್ಮವು ವ್ಯಾಪಕವಾಗಿ ಜನಪ್ರಿಯವಾಗುತ್ತದೆ

3878: ಚರ್ಚ್ ದೀರ್ಘಕಾಲ ಮರೆತುಹೋದ ವೈಜ್ಞಾನಿಕ ತತ್ವಗಳನ್ನು ಕಲಿಸುತ್ತದೆ

4302: ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡಂತೆ ನಗರಗಳು ಮತ್ತೆ ಹೊರಹೊಮ್ಮುತ್ತವೆ

4308: ಮಾನವ ಮೆದುಳಿನ ಬೆಳವಣಿಗೆಯು ಕಡಿಮೆ ಸ್ವಾರ್ಥಿ ನಡವಳಿಕೆಗೆ ಕಾರಣವಾಗುತ್ತದೆ

4509: ಉನ್ನತ ನೈತಿಕತೆಯಿಂದಾಗಿ ಮಾನವರು ದೇವರೊಂದಿಗೆ ಸಂವಹನ ನಡೆಸುತ್ತಾರೆ

4599: ಅಮರತ್ವವು ರೂಢಿಯಾಗುತ್ತದೆ

4674: ಅನ್ಯಗ್ರಹ ಜೀವಿಗಳ ಮಿಶ್ರಣದೊಂದಿಗೆ ಮಾನವ ಸಮೃದ್ಧಿಯು340 ಶತಕೋಟಿಗೆ ಏರುತ್ತದೆ

5076: ತಿಳಿಯದಿರುವ ವಿಶ್ವದ ಅಂಚನ್ನು ಕಂಡುಹಿಡಿಯಲಾಗುತ್ತದೆ

5078: ಮಾನವೀಯತೆಯು ತಿಳಿದಿರುವ ವಿಶ್ವವನ್ನು ಬಿಡಲು ಪ್ರಯತ್ನಿಸುತ್ತದೆ, ಆದರೆ ಶೇಕಡಾ 40 ರಷ್ಟು ನಿರಾಕರಿಸುತ್ತದೆ

5079: ಪ್ರಪಂಚವು ಕೊನೆಗೊಳ್ಳುತ್ತದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.