ಸಿಸ್ಟೈನ್ ಚಾಪೆಲ್ ಚಿಮಣಿಯಿಂದ ಹೊರಹೊಮ್ಮಿದ ಬಿಳಿ ಹೊಗೆ; ಅಮೆರಿಕದ ರಾಬರ್ಟ್ ಫ್ರಾನ್ಸಿಸ್ ಪ್ರಿವೊಸ್ಟ್ ನೂತನ ಪೋಪ್
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಿಸ್ಟೈನ್ ಚಾಪೆಲ್ ಚಿಮಣಿಯಿಂದ ಹೊರಹೊಮ್ಮಿದ ಬಿಳಿ ಹೊಗೆ; ಅಮೆರಿಕದ ರಾಬರ್ಟ್ ಫ್ರಾನ್ಸಿಸ್ ಪ್ರಿವೊಸ್ಟ್ ನೂತನ ಪೋಪ್

ಸಿಸ್ಟೈನ್ ಚಾಪೆಲ್ ಚಿಮಣಿಯಿಂದ ಹೊರಹೊಮ್ಮಿದ ಬಿಳಿ ಹೊಗೆ; ಅಮೆರಿಕದ ರಾಬರ್ಟ್ ಫ್ರಾನ್ಸಿಸ್ ಪ್ರಿವೊಸ್ಟ್ ನೂತನ ಪೋಪ್

ರಾಬರ್ಟ್ ಫ್ರಾನ್ಸಿಸ್ ಪ್ರಿವೊಸ್ಟ್ ನೂತನ ಪೋಪ್ ಆಗಿ ಆಯ್ಕೆಯಾಗಿದ್ದಾರೆ. ಪೋಪ್ ಲಿಯೋ 14 ಇತಿಹಾಸದಲ್ಲೇ ಮೊದಲ ಅಮೆರಿಕನ್ ಪೋಪ್ ಎನಿಸಿದ್ದಾರೆ. ರೋಮನ್ ಕ್ಯಾಥೋಲಿಕ್ ಚರ್ಚ್ ನ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಾರೆ.

 ಹೊಸದಾಗಿ ನೇಮಕವಾಗಿರುವ ಪೋಪ್ ಲಿಯೋ 14, ಕಾರ್ಡಿನಲ್ ರಾಬರ್ಟ್ ಪ್ರಿವೊಸ್ಟ್ ಸೆಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಿಂದ ಕ್ರೈಸ್ತ ಬಾಂಧವರತ್ತ ಕೈ ಬೀಸಿದ್ದಾರೆ.
ಹೊಸದಾಗಿ ನೇಮಕವಾಗಿರುವ ಪೋಪ್ ಲಿಯೋ 14, ಕಾರ್ಡಿನಲ್ ರಾಬರ್ಟ್ ಪ್ರಿವೊಸ್ಟ್ ಸೆಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಿಂದ ಕ್ರೈಸ್ತ ಬಾಂಧವರತ್ತ ಕೈ ಬೀಸಿದ್ದಾರೆ. (REUTERS)

ಕ್ರೈಸ್ತರು ಹೊಸ ಧರ್ಮ ಗುರುವಿನ ನೇಮಕವಾಗಿದೆ. ಅಮೆರಿಕ ಮೂಲದ ಕಾರ್ಡಿನಲ್ ರಾಬರ್ಟ್ ಪ್ರಾನ್ಸಿಸ್ ಪ್ರಿವೊಸ್ಟ್ 267ನೇ ಪೋಪ್ ಆಗಿ ಗುರುವಾರ (ಮೇ 8) ಆಯ್ಕೆಯಾಗಿದ್ದಾರೆ. ಚಿಕಾಗೋದ 69 ವರ್ಷದ ಇಲಿನಾಯ್ಸ್ ಅವರು ಧರ್ಮಗುರು ಲಿಯೋ-14 ಅವರನ್ನು ಪೋಪ್ ಆಗಿ ಆಯ್ಕೆ ಮಾಡಿದ್ದಾರೆ. ರಾಬರ್ಟ್ ಪ್ರಾನ್ಸಿಸ್ ಪ್ರಿವೊಸ್ಟ್ ಅವರು ರೋಮನ್ ಕ್ಯಾಥೋಲಿಕ್ ಚರ್ಚ್ ನಾಯಕ ಅಥವಾ ಪೋಪ್ ಆಗಿ ನೇಮವಾಗಿರುವ ಮೊದಲ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಪೋಪ್ ಆಯ್ಕೆಗಾಗಿ ರಹಸ್ಯವಾಗಿ ನಡೆದ ಮತದಾನದಲ್ಲಿ 133 ಕಾರ್ಡಿನಲ್ ಗಳ ಪೈಕಿ 89 ಕಾರ್ಡಿನಲ್ ಗಳು ರಾಬರ್ಟ್ ಪ್ರಾನ್ಸಿಸ್ ಪರ ಮತಗಳನ್ನು ಚಲಾಯಿಸಿದ್ದರು. ಎರಡು ಬಾರಿ ನಡೆದಿದ್ದ ಸಮಾವೇಶಗಳಲ್ಲಿ ಪೋಪ್ ಆಯ್ಕೆ ಸಾಧ್ಯವಾಗಿರಲಿಲ್ಲ. ಆದರೆ ಮೂರನೇ ಬಾರಿಗೆ ಪೋಪ್ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಸಿಸ್ಟೈನ್ ಚಾಪೆಲ್ ಚಿಮಣಿಯಲ್ಲಿ ಬಿಳಿ ಹೊಗೆ ಕಾಣಿಸಿಕೊಂಡಿತು. ಇದು ಕ್ಯಾಪೋಲಿಕ್ ಆಯ್ಕೆಯಾಗಿರುವುದನ್ನು ದೃಢಪಡಿಸಿತು. ಬಿಳಿ ಹೊಗೆ ಹೊರಹೊಮ್ಮಿದ ಸುಮಾರು 70 ನಿಮಿಷಗಳ ನಂತರ ಸೇಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಲ್ಲಿ ಪೋಪ್ ಲಿಯೋ 14 ಕಾಣಿಸಿಕೊಂಡರು. ಇವರ ಗುರುತನ್ನು ಫ್ರಾನ್ಸ್ ನ ಕಾರ್ಡಿನಲ್ ಡೊಮಿನಿಕ್ ಮಾಂಬರ್ಟಿ ಲ್ಯಾಟಿನ್ ಪದಗಳಾದ "ಹೇಬೆಮಸ್ ಪಾಪಮ್" ನೊಂದಿಗೆ ಘೋಷಿಸಿದರು, ಇದರರ್ಥ "ನಮಗೆ ಪೋಪ್ ಇದ್ದಾರೆ".

ಫಾಕ್ಸ್ 11 ರ ಪ್ರಕಾರ, ಲಿಯೋ ಎಂಬ ಪೋಪ್ ಹೆಸರಿನ ಕೊನೆಯ ಕ್ಯಾಥೊಲಿಕ್ ಚರ್ಚ್ ನಾಯಕ ಪೋಪ್ ಲಿಯೋ XIII, ಅವರು 1878 ರಿಂದ 1903 ರವರೆಗೆ ಸೇವೆ ಸಲ್ಲಿಸಿದರು. ಅವರು ತಮ್ಮ ಬೌದ್ಧಿಕ ಕೊಡುಗೆಗಳು ಮತ್ತು ಸಾಮಾಜಿಕ ಬೋಧನೆಗಳಿಗೆ ಹೆಸರುವಾಸಿಯಾಗಿದ್ದರು.

ಸೇಂಟ್ ಪೀಟರ್ಸ್ ಸ್ಕ್ವೇರ್ ನಲ್ಲಿ ನೆರೆದಿದ್ದ ಜನಸಮೂಹವನ್ನು ಉದ್ದೇಶಿ ಮಾತನಾಡಿರುವ ಹೊಸ ಪೋಪ್, ತಮ್ಮ ಮೊದಲ ಮಾತುಗಳನ್ನಾಡಿ "ನಿಮ್ಮೆಲ್ಲರಿಗೂ ಶಾಂತಿ ಇರಲಿ." "ಇದು ದೇವರಿಗಾಗಿ ತನ್ನ ಜೀವನವನ್ನು ತ್ಯಾಗ ಮಾಡಿದ ಪುನರುತ್ಥಾನಗೊಂಡ ಕ್ರಿಸ್ತನ ಮೊದಲ ಶುಭಾಶಯವಾಗಿದೆ" ಎಂದು ಹೇಳಿದ್ದಾರೆ. "ಶಾಂತಿಯ ಈ ಶುಭಾಶಯವು ನಮ್ಮ ಹೃದಯಗಳಿಗೆ ಮತ್ತು ನಮ್ಮ ಕುಟುಂಬಗಳನ್ನು ಪ್ರವೇಶಿಸಲು ನಾನು ಬಯಸುತ್ತೇನೆ" ಎಂದಿದ್ದಾರೆ.

ರಾಬರ್ಟ್ ಫ್ರಾನ್ಸಿಸ್ ಪ್ರಿವೊಸ್ಟ್ ತಮ್ಮ ಪೂರ್ವಾಧಿಕಾರಿ ಪೋಪ್ ಫ್ರಾನ್ಸಿಸ್ ಅವರಿಗೆ ಭಾವನಾತ್ಮಕ ಗೌರವ ಸಲ್ಲಿಸಿದರು. "ರೋಮ್ ಅನ್ನು ಆಶೀರ್ವದಿಸುವ ಪೋಪ್ ಫ್ರಾನ್ಸಿಸ್ ಅವರ ಸೌಮ್ಯ ಧ್ವನಿಯನ್ನು ನಾವು ನಮ್ಮ ಕಿವಿಗಳಲ್ಲಿ ಇಟ್ಟುಕೊಳ್ಳೋಣ. ರೋಮ್ ಅನ್ನು ಆಶೀರ್ವದಿಸಿದ ಪೋಪ್, ಈಸ್ಟರ್ ನ ಆ ಬೆಳಿಗ್ಗೆ ಇಡೀ ಜಗತ್ತಿಗೆ ತನ್ನ ಆಶೀರ್ವಾದವನ್ನು ನೀಡಿದರು. ಆ ಆಶೀರ್ವಾದವನ್ನು ಅನುಸರಿಸಲು ನನಗೆ ಅವಕಾಶ ನೀಡಿ. ದೇವರು ನಮ್ಮನ್ನು ಪ್ರೀತಿಸುತ್ತಾನೆ. ದೇವರು ಎಲ್ಲರನ್ನೂ ಪ್ರೀತಿಸುತ್ತಾನೆ. ದುಷ್ಟತನವು ಮೇಲುಗೈ ಸಾಧಿಸುವುದಿಲ್ಲ" ಎಂದು ಶಾಂತಿಯ ಮಂತ್ರ ಜಪಿಸಿದ್ದಾರೆ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.