Tulsi Puja 2024: ಪ್ರತಿ ದಿನ ತುಳಸಿ ಪೂಜೆ ಏಕೆ ಮಾಡಬೇಕು? ಮಹತ್ವ ಮತ್ತು ಪೂಜಾ ವಿಧಾನ ಹೀಗಿರುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tulsi Puja 2024: ಪ್ರತಿ ದಿನ ತುಳಸಿ ಪೂಜೆ ಏಕೆ ಮಾಡಬೇಕು? ಮಹತ್ವ ಮತ್ತು ಪೂಜಾ ವಿಧಾನ ಹೀಗಿರುತ್ತೆ

Tulsi Puja 2024: ಪ್ರತಿ ದಿನ ತುಳಸಿ ಪೂಜೆ ಏಕೆ ಮಾಡಬೇಕು? ಮಹತ್ವ ಮತ್ತು ಪೂಜಾ ವಿಧಾನ ಹೀಗಿರುತ್ತೆ

ತುಳಸಿ ಗಿಡವಿಲ್ಲದ ಹಿಂದೂ ಮನೆಗಳು ಸಿಗುವುದು ತುಂಬಾ ಅಪರೂಪ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಎದ್ದು ತುಳಸಿ ಗಿಡಕ್ಕೆ ಪೂಜೆ ಮಾಡಿದ ನಂತರ ದಿನವನ್ನು ಆರಂಭಿಸುವ ವಾಡಿಕೆ ಇರುತ್ತದೆ. ಪ್ರತಿ ದಿನ ತುಳಸಿ ಪೂಜೆ ಏಕೆ ಮಾಡಬೇಕು ಮತ್ತು ಅದರ ಮಹತ್ವವನ್ನು ತಿಳಿಯೋಣ.

ಪ್ರತಿದಿನ ತುಳಸಿ ಪೂಜೆಯನ್ನು ಏಕೆ ಮಾಡಬೇಕು, ಇದರಿಂದ ಸಿಗುವ ಶುಭ ಫಲಗಳನ್ನು ತಿಳಿಯೋಣ
ಪ್ರತಿದಿನ ತುಳಸಿ ಪೂಜೆಯನ್ನು ಏಕೆ ಮಾಡಬೇಕು, ಇದರಿಂದ ಸಿಗುವ ಶುಭ ಫಲಗಳನ್ನು ತಿಳಿಯೋಣ

ತುಳಸಿಯನ್ನು ಪೂಜಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ತುಳಸಿ ಮಾತೆಯನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ ಎಂದು ನಂಬಲಾಗಿದೆ. ವಿಷ್ಣು ತುಳಸಿಯನ್ನು ತುಂಬಾ ಇಷ್ಟಪಡುತ್ತಾನೆ. ತುಳಸಿ ಇಲ್ಲದೆ ಯಾವುದೇ ಭೋಗವನ್ನು ಸ್ವೀಕರಿಸುವುದಿಲ್ಲ. ಮನೆಯಲ್ಲಿ ತುಳಸಿ ಇದ್ದರೆ, ತುಳಸಿ ಪೂಜೆಯ ನಿಯಮಗಳನ್ನು ಅನುಸರಿಸಬೇಕು. ಇದಕ್ಕಾಗಿ ಪ್ರಮುಖ ದಿನಾಂಕಗಳನ್ನು ನಿಗದಿಪಡಿಸಲಾಗಿದೆ, ಆ ದಿನಾಂಕಗಳಲ್ಲಿ ತುಳಸಿಯನ್ನು ಕೀಳಬಾರದು. ಭಾನುವಾರ ತುಳಸಿಯಲ್ಲಿ ನೀರು ನೀಡಬಾರದು, ಮನೆಯಲ್ಲಿ ಹಣದ ಕೊರತೆಯಿದ್ದರೆ, ತುಳಸಿ ಮಂಜರಿಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಹಣ ಇಡುವ ಸ್ಥಳದಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆ ಬಗೆಹರಿಯುತ್ತದೆ. ತುಳಸಿಯನ್ನು ಪ್ರತಿದಿನ ಏಕೆ ಪೂಜಿಸಬೇಕು ಮತ್ತು ಇದರ ಮಹತ್ವವೇನು ಎಂಬುದನ್ನು ತಿಳಿಯೋಣ.

ತುಳಸಿ ಗಿಡವಿಲ್ಲದ ಹಿಂದೂ ಮನೆಗಳು ಸಿಗುವುದು ತುಂಬಾ ಅಪರೂಪ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಎದ್ದು ತುಳಸಿ ಗಿಡಕ್ಕೆ ಪೂಜೆ ಮಾಡಿದ ನಂತರ ದಿನವನ್ನು ಆರಂಭಿಸುವ ವಾಡಿಕೆ ಇರುತ್ತದೆ. ಪ್ರತಿ ದಿನ ತುಳಸಿ ಪೂಜೆ ಏಕೆ ಮಾಡಬೇಕು ಮತ್ತು ಅದರ ಮಹತ್ವವನ್ನು ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯವು ತುಳಸಿಯಲ್ಲಿ ನೆಲೆಸಿದ್ದಾಳೆ ಎಂದು ಪರಿಗಣಿಸಲಾಗಿದೆ. ತುಳಸಿಯನ್ನು ನಿತ್ಯ ಪೂಜಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿಯನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ. ತುಳಸಿಯನ್ನು ಪೂಜಿಸುವವರಿಗೆ ಅಪಾರವಾದ ಸುಖ ಮತ್ತು ಪುಣ್ಯ ಸಿಗುತ್ತದೆ. ತುಳಸಿಯನ್ನು ನಿತ್ಯ ಪೂಜಿಸುವುದರಿಂದ ರೋಗಗಳು ನಿವಾರಣೆಯಾಗುತ್ತವೆ. ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.

ತುಳಸಿ ಪೂಜಾ ವಿಧಾನ

ಬೆಳಗ್ಗೆ ಬೇಗ ಎದ್ದು ಸ್ನಾನವನ್ನು ಮುಗಿಸಿ ತುಳಸಿಗೆ ನೀರು ಅರ್ಪಿಸಬೇಕು. ಈ ವೇಳೆ ತುಳಸಿ ಸ್ತೋತ್ರವನ್ನು ಪಠಿಸುತ್ತಾ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಪಾಪಗಳಿಂದ ಬಿಡುಗಡೆ ಪಡೆಯಬಹುದು. ತುಳಸಿ ಎಳೆಯನ್ನು ಶ್ರಾದ್ಧ ಮತ್ತು ಯಾಗದಲ್ಲಿ ಇಟ್ಟು ಪೂಜಿಸಲಾಗುತ್ತದೆ. ಹೀಗೆ ಮಾಡುವುದರಿಂದ ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ.

ತುಳಸಿಯನ್ನು ಪೂಜಿಸಿ ದೀಪವನ್ನು ಹಚ್ಚುವುದರಿಂದ ಸಂಪತ್ತು ಲಭಿಸುತ್ತದೆ ಮತ್ತು ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಜೊತೆಗೆ ಧನಾತ್ಮಕ ಶಕ್ತಿಯೂ ಅಲ್ಲಿ ನೆಲೆಸಿರುತ್ತದೆ. ತುಳಸಿಯನ್ನು ನಿತ್ಯ ಪೂಜಿಸಿ ನೀರುಣಿಸುವುದು ನಿಯಮವಾಗಿದ್ದರೂ ಧಾರ್ಮಿಕ ನಂಬಿಕೆಗಳ ಪ್ರಕಾರ ಮಂಗಳವಾರ, ಭಾನುವಾರ ಹಾಗೂ ಏಕಾದಶಿಯಂದು ತುಳಸಿ ಗಿಡಕ್ಕೆ ನೀರುಣಿಸುವುದು ನಿಷಿದ್ಧವಾಗಿದೆ.

ಪೌರಾಣಿಕ ನಂಬಿಕೆಯ ಪ್ರಕಾರ, ಲಕ್ಷ್ಮಿ ದೇವಿಯು ಭಾನುವಾರ ಮತ್ತು ಏಕಾದಶಿಯಂದು ಶ್ರೀಹರಿಗೆ ನಿರ್ಜಲ ವ್ರತವನ್ನು ಆಚರಿಸುತ್ತಾಳೆ. ಇಂತಹ ಸಂದರ್ಭದಲ್ಲಿ ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ನೀರು ಕೊಟ್ಟರೆ ವ್ರತ ಭಂಗವಾಗುತ್ತದೆ. ಹಾಗಾಗಿ ಈ ಎರಡೂ ದಿನ ತುಳಸಿ ಗಿಡಕ್ಕೆ ನೀರು ಹಾಕುವಂತಿಲ್ಲ. ಅಲ್ಲದೆ, ಈ ದಿನ ತುಳಸಿಗೆ ನೀರನ್ನು ಅರ್ಪಿಸಿದರೆ, ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುತ್ತವೆ. ಇದರ ಹೊರತಾಗಿ ಮಂಗಳವಾರ ತುಳಸಿಗೆ ನೀರನ್ನು ಅರ್ಪಿಸುವುದರಿಂದ ಭಗವಾನ್ ಶಂಕರ್ ಕೋಪಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ.

ತುಳಸಿ ಗಿಡವನ್ನು ಯಾವಾಗಲೂ ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಈ ದಿಕ್ಕಿನಲ್ಲಿ ದೇವರುಗಳು ಇರುತ್ತಾರೆ ಎಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿಗೆ ಇಡಬಾರದು. ಈ ದಿಕ್ಕು ಪಿತೃದೇವತೆಗಳಿಗೆ ಸೇರಿದ ದಿಕ್ಕಾಗಿದೆ. ದಕ್ಷಿಣ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡ್ಡರೆ ಆರ್ಥಿಕ ನಷ್ಟ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ಲಾಸ್ಟಿಕ್ ಬದಲು ಯಾವಾಗಲೂ ಮಣ್ಣಿ ಮಡಿಕೆಯಲ್ಲಿ ತುಳಸಿ ಗಿಡವನ್ನು ಇಡುವುದು ಶುಭಕರ ಎಂದು ಹೇಳಲಾಗುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.