ಸರಿಯಾಗಿ ಹೊಂದಾಣಿಕೆಯಾದರಷ್ಟೇ ಗಟ್ಟಿಮೇಳ; ಮದುವೆಗೂ ಮುನ್ನ ಜಾತಕ ನೋಡುವುದು ಏಕೆ, ಇದರ ಮಹತ್ವ ತಿಳಿಯಿರಿ
ಇತ್ತೀಚಿನ ದಿನಗಳಲ್ಲಿ, ವಿವಾಹಪೂರ್ವ ಜಾತಕಗಳನ್ನು ನೋಡಿಕೊಳ್ಳುವ ಮತ್ತು ಜಾತಕಗಳು ಸರಿಯಾರಿ ಹೊಂದಾಣಿಕೆಯಾದರೆ ಮಾತ್ರ ಮದುವೆಯಾಗುವ ಅನೇಕ ಜನರು ಇನ್ನೂ ಇದ್ದಾರೆ. ಈ ಪದ್ಧತಿಯನ್ನು ಅನಾದಿ ಕಾಲದಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ. ಅಷ್ಟಕ್ಕೂ ಮದುವೆಗೆ ಜಾತಕ ಏಕೆ ನೋಡುತ್ತಾರೆ ಎಂಬುದನ್ನು ತಿಳಿಯೋಣ.
ಪ್ರತಿಯೊಬ್ಬರೂ ಮದುವೆಯಾಗಿ ಜೀವನದಲ್ಲಿ ಸಂತೋಷವಾಗಿರಲು ಬಯಸುತ್ತಾರೆ. ಮದುವೆಯ ನಂತರ, ಪ್ರತಿಯೊಬ್ಬರ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತೆ. ಮದುವೆ ಎಂದರೆ ಕೇವಲ ಎರಡು ಮನಸ್ಸುಗಳು ಹತ್ತಿರವಾಗುವುದು, ಎರಡು ಕುಟುಂಬಗಳು ಒಟ್ಟಿಗೆ ಸೇರುವುದು ಮಾತ್ರವಲ್ಲ. ಮದುವೆಗೆ ಮುನ್ನ ಜಾತಕದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವ ಹಾಗೂ ಜಾತಕದಲ್ಲಿ ಸರಿಯಾದ ಹೊಂದಾಣಿಕೆಯಾದರೆ ಮಾತ್ರ ಮದುವೆ ಮಾಡಿಕೊಳ್ಳುವ ಅನೇಕ ಜನರಿದ್ದಾರೆ. ಈ ಅಭ್ಯಾಸವನ್ನು ಅನಾದಿ ಕಾಲದಿಂದಲೂ ಎಲ್ಲರೂ ಅನುಸರಿಸುತ್ತಿದ್ದಾರೆ. ಮದುವೆಗೂ ಮುನ್ನ ಜಾತಕವನ್ನು ಏಕೆ ನೋಡುತ್ತಾರೆ, ವಿವಾಹದಲ್ಲಿ ಜಾತಕದ ಮಹತ್ವವೇನು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಮದುವೆಗೆ ಜಾತಕಗಳನ್ನು ಏಕೆ ನೋಡಬೇಕು?
ಮದುವೆಗೆ ಜಾತಕಗಳನ್ನು ನೋಡುವುದು ಏಕೆ ಮುಖ್ಯವಾಗುತ್ತೆ ಎಂಬುದು ಬಹಳಷ್ಟು ಅವಿವಾಹಿತರ ಪ್ರಶ್ನೆಯಾಗಿರುತ್ತದೆ. ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳೋಣ. ಪ್ರತಿಯೊಬ್ಬರೂ ಮದುವೆಯಾಗುವ ಮೊದಲು ಜಾತಕಗಳನ್ನು ನೋಡುತ್ತಾರೆ. ಇಬ್ಬರ ಜಾತಕದಲ್ಲಿ ಸರಿಯಾದ ಹೊಂದಾಣಿಕೆಯಾದರೆ ಮಾತ್ರ ಮದುವೆಗೆ ಸಿದ್ಧರಾಗುತ್ತಾರೆ. ಮದುವೆಯಾಗುವ ಮೊದಲು ಜಾತಕಗಳನ್ನು ನೋಡುವುದು ಒಂದು ಪ್ರಮುಖ ಪ್ರಕ್ರಿಯೆಯಾಗಿದೆ.
ಮೂಲ ಜಾತಕಗಳ ಹೊಂದಾಣಿಕೆಯ ಅರ್ಥವೇನು?
- ವ್ಯಕ್ತಿಯ ಜಾತಕ, ಹುಟ್ಟಿದ ದಿನಾಂಕ, ಸಮಯ ಮತ್ತು ಸ್ಥಳದ ಆಧಾರದ ಮೇಲೆ ಜಾತಕವನ್ನು ತಯಾರಿಸಲಾಗುತ್ತದೆ. ಮದುವೆಗಾಗಿ ವಧು ಮತ್ತು ವರರು ತಮ್ಮ ಜಾತಕವನ್ನು ನೋಡಿ ಗುಣಗಳು, ಚಂದ್ರಸ್ಥಾನ, ಮಂಗಳ ದೋಷಗಳನ್ನು ಪರಿಶೀಲಿಸುತ್ತಾರೆ.
2. ಜಾತಕವು ಹುಡುಗ, ಹುಡುಗಿ ಮತ್ತು ವೈವಾಹಿಕ ಜೀವನವನ್ನು ನಿರ್ಧರಿಸುತ್ತದೆ. ಇಬ್ಬರೂ ಮದುವೆಯಾದರೆ, ಜೀವನವು ಉತ್ತಮವಾಗಿರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತೀರ್ಮಾನಿಸಲಾಗುತ್ತದೆ.
3. ವಧು ಮತ್ತು ವರನ ಚಂದ್ರ ಗ್ರಹದ ಸ್ಥಾನವನ್ನು ಪರಿಗಣಿಸಲಾಗುತ್ತದೆ.
ಜಾತಕಗಳನ್ನು ನೋಡುವುದು ಏಕೆ ಮುಖ್ಯ?
ಮದುವೆಯಾಗುವ ಇಬ್ಬರನ್ನೂ, ಅವರ ಜೀವನದುದ್ದಕ್ಕೂ ಒಟ್ಟಿಗೆ ಹಿಡಿದಿಡುವ ಬಂಧವಾಗಿದೆ. ಆದ್ದರಿಂದ ಮದುವೆಗೆ ಮೊದಲು, ವಧು ಮತ್ತು ವರನ ಜಾತಕವನ್ನು ನೋಡುತ್ತಾರೆ. ಸಂಬಂಧವು ಯಶಸ್ವಿಯಾಗುತ್ತದೆಯೇ ಎಂಬುದನ್ನು ಪರಿಶೀಲಿಸುತ್ತಾರೆ. ಸರಿಯಾದ ಹೊಂದಾಣಿಕೆ ಇದಿಯಾ, ಒಂದು ವೇಳೆ ಯಾವುದೇ ಅಡೆತಡೆಗಳಿದ್ದರೆ ಅದನ್ನು ಹೇಗೆ ತೆಗೆದುಹಾಕಬಹುದು ಎಂಬುದನ್ನು ನಿರ್ಧರಿಸಲು ಜಾತಕ ಮುಖ್ಯವಾಗುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)