Yellu Amavasya: ಇಂದು 2024ರ ಎಳ್ಳಮಾವಾಸ್ಯೆ; ಆಚರಣೆಯ ಮಹತ್ವ ಮತ್ತು ಶುಭ ಮುಹೂರ್ತ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Yellu Amavasya: ಇಂದು 2024ರ ಎಳ್ಳಮಾವಾಸ್ಯೆ; ಆಚರಣೆಯ ಮಹತ್ವ ಮತ್ತು ಶುಭ ಮುಹೂರ್ತ ತಿಳಿಯಿರಿ

Yellu Amavasya: ಇಂದು 2024ರ ಎಳ್ಳಮಾವಾಸ್ಯೆ; ಆಚರಣೆಯ ಮಹತ್ವ ಮತ್ತು ಶುಭ ಮುಹೂರ್ತ ತಿಳಿಯಿರಿ

2024ರ ಡಿಸೆಂಬರ್ 30 ರ ಸೋಮವಾರ ಎಳ್ಳಮಾವಾಸ್ಯೆ ಇದೆ. ಇದನ್ನು ಸೋಮಾವತಿ ಅಮಾವಾಸ್ಯೆ ಅಂತಲೂ ಕರೆಯಲಾಗುತ್ತೆ. ಪುಷ್ಯ ಮಾಸದ ಅಮಾವಾಸ್ಯೆ ಸೋಮವಾರ ಬರುವುದರಿಂದ, ಇದರ ಪ್ರಾಮುಖ್ಯತೆ ನೂರು ಪಟ್ಟು ಹೆಚ್ಚಾಗಿದೆ. ಈ ದಿನ ವಿಷ್ಣು ಮತ್ತು ಶಿವನನ್ನು ಪೂಜಿಸುವುದರಿಂದ ವಿಶೇಷ ಶುಭ ಫಲಗಳು ಸಿಗುತ್ತವೆ ಎಂಬ ನಂಬಿಕೆ ಇದೆ. ಎಳ್ಳಮಾವಾಸ್ಯೆ ಶುಭ ಮುಹೂರ್ತ ಮತ್ತು ಮಹತ್ವ ಇಲ್ಲಿದೆ.

2024ರ ಎಳ್ಳಮಾವಾಸ್ಯೆ ಶುಭ ಮುಹೂರ್ತ ಮತ್ತು ಮಹತ್ವ ತಿಳಿಯಿರಿ
2024ರ ಎಳ್ಳಮಾವಾಸ್ಯೆ ಶುಭ ಮುಹೂರ್ತ ಮತ್ತು ಮಹತ್ವ ತಿಳಿಯಿರಿ

ಎಳ್ಳುಮಾವಾಸ್ಯೆ 2024: ಸಹಬಾಳ್ವೆ, ಸೌಹಾರ್ದತೆಯ ಸಂಕೇತ ಹಾಗೂ ಏಕತೆಯಿಂದ ಬೆರೆತು ಮೃಷ್ಟಾನ ಭೋಜನ ಸವಿಯುತ್ತಾ ಭೂಮಾತೆಗೆ ನಮನ ಸಲ್ಲಿಸುವ ನಾಡಿನ ರೈತಾಪಿ ಜನರ ಹೆಮ್ಮೆಯ ಹಬ್ಬವಾದ ಎಳ್ಳಮಾವಾಸ್ಯೆಯನ್ನು ಇಂದು (2024ರ ಡಿಸೆಂಬರ್ 30, ಸೋಮವಾರ) ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಶೇಷವಾಗಿ ಈ ದಿನ ಭೂಮಾತೆಗೆ ಪೂಜೆ ಸಲ್ಲಿಸಿ ಹೊಲ, ಗದ್ದೆಗಳಲ್ಲಿ ರೈತ ಕುಟುಂಬಗಳ ಮನೆಮಂದಿ ಸಾಮೂಹಿಕವಾಗಿ ಊಟವನ್ನು ಸವಿಯುತ್ತಾರೆ. ಕಲಬುರಗಿ, ಬೀದರ್, ಗದಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಳ್ಳುಮಾವಾಸ್ಯೆಯನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸುತ್ತಾರೆ.

ಪ್ರತಿ ತಿಂಗಳು ಬರುವ ಅಮಾವಾಸ್ಯೆಗಿಂತ ಪುಷ್ಯ ಮಾಸದ ಅಮಾವಾಸ್ಯೆಗೆ ಬಹಳ ಮಹತ್ವವಿದೆ. ಈ ಮಾಸದಲ್ಲಿನ ಅಮಾವಾಸ್ಯೆಯನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಎಳ್ಳಮಾವಾಸ್ಯೆ, ಸೋಮಾವತಿ ಅಮಾವಾಸ್ಯೆ ಹಾಗೂ ಮಾರ್ಗಶೀರ್ಷ ಅಮಾವಾಸ್ಯೆ ಅಂತಲೂ ಕರೆಲಾಗುತ್ತದೆ. ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ಪಾಪಗಳು ಕಳೆದು ಪುಣ್ಯವನ್ನು ಪಡೆಯಬಹುದು ಎಂಬ ನಂಬಿಕೆ ಇದೆ.

ಪುಷ್ಯ ಮಾಸದಲ್ಲಿ ಅಮಾವಾಸ್ಯೆ ಸೋಮವಾರ ಬರುವುದರಿಂದ, ಅದರ ಪ್ರಾಮುಖ್ಯತೆ ನೂರು ಪಟ್ಟು ಹೆಚ್ಚಾಗಿದೆ. ಈ ದಿನ ವಿಷ್ಣು ಮತ್ತು ಶಿವನನ್ನು ಪೂಜಿಸುವುದರಿಂದ ವಿಶೇಷ ಫಲಿತಾಂಶಗಳು ಸಿಗುತ್ತವೆ. ಹಿಂದೂ ಧರ್ಮದಲ್ಲಿ ಸೋಮಾವತಿ (ಎಳ್ಳಮಾವಾಸ್ಯೆಗೆ) ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಈ ಅಮಾವಾಸ್ಯೆಯನ್ನು ಸೋಮವಾರ ಆಚರಿಸಲಾಗುತ್ತದೆ. ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯಲು ಇಂದು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಈ ದಿನ, ವೃದ್ಧಿ ಯೋಗ ಹಾಗೂ ಮೂಲ ನಕ್ಷತ್ರದ ಶುಭ ಸಂಯೋಜನೆಯೂ ರೂಪುಗೊಳ್ಳುತ್ತದೆ. ಇದರಿಂದ ಮತ್ತಷ್ಟು ಪವಿತ್ರ ಮತ್ತು ಫಲಪ್ರದವಾಗಿಸುತ್ತದೆ.

ಎಳ್ಳಮಾವಾಸ್ಯೆಯ ಶುಭ ಮುಹೂರ್ತ

ಅಮಾವಾಸ್ಯೆಯ ತಿಥಿ ಆರಂಭ: 2024ರ ಡಿಸೆಂಬರ್ 30ರ ಸೋಮವಾರ ಬೆಳಿಗ್ಗೆ 04:01

ಅಮಾವಾಸ್ಯೆಯ ತಿಥಿ ಮುಕ್ತಾಯ: 2024ರ ಡಿಸೆಂಬರ್ 31ರ ಮಂಗಳವಾರ ಬೆಳಿಗ್ಗೆ 03:56

ಸ್ನಾನದ ಸಮಯ: ಡಿಸೆಂಬರ್ 30 ರ ಸೋಮವಾರ ದಿನವಿಡೀ ಸ್ನಾನ ಮಾಡಬಹುದು

ಬ್ರಹ್ಮ ಮುಹೂರ್ತ: ಬೆಳಿಗ್ಗೆ 05:24 ರಿಂದ 06:19

ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:03 ರಿಂದ 12:45

ವಿಜಯ್ ಮುಹೂರ್ತ: ಮಧ್ಯಾಹ್ನ 02:07 ರಿಂದ 02:49

ಗೋಧೂಳಿ ಮುಹೂರ್ತ: ಸಂಜೆ 05:32 ರಿಂದ 05:59, ಸಂಜೆ 05:34 ರಿಂದ 06:56

ಅಮೃತ್ ಕಾಲ: ಸಂಜೆ 05:24 ರಿಂದ 07:02

ನಿಶಿತಾ ಮುಹೂರ್ತ: ರಾತ್ರಿ 11:57 ರಿಂದ 12:51 ರವರೆಗೆ, ಡಿಸೆಂಬರ್ 31

ಪೂಜಾ ವಿಧಾನ: ಬೆಳಿಗ್ಗೆ ಸ್ನಾನ ಮಾಡಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸಿ ಮತ್ತು ಗಂಗಾ ನೀರನ್ನು ಅರ್ಪಿಸಿ. ಈ ಮರವನ್ನು 108 ಬಾರಿ ಪ್ರದಕ್ಷಿಣೆ ಹಾಕಿ ಮತ್ತು ಓಂ ನಮಃ ಶಿವಾಯ ಅಥವಾ ಓಂ ವಿಷ್ಣುವೇ ನಮಃ ಎಂದು ಪಠಿಸಿ. ಹಸಿ ಹಾಲು, ನೀರು, ಅರಿಶಿನ ಮತ್ತು ಅಕ್ಕಿಯನ್ನು ಅರಳಿ ಮರಕ್ಕೆ ಅರ್ಪಿಸಿ. ಅಂತಿಮವಾಗಿ ಕೈಮುಗಿದು ಕುಟುಂಬದ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿ.

ಪಿತೃ ತರ್ಪಣ ಮತ್ತು ದಾನದ ಮಹತ್ವ: ಈ ದಿನ ಪೂರ್ವಜರ ಆತ್ಮಗಳ ಶಾಂತಿಗಾಗಿ ಅರ್ಪಣೆ ಮತ್ತು ದಾನಗಳನ್ನು ಅರ್ಪಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಹಸುಗಳಿಗೆ ಆಹಾರ ನೀಡುವುದು, ಬಡವರಿಗೆ ಆಹಾರ ನೀಡುವುದು ಹಾಗೂ ಬಟ್ಟೆ ಅಥವಾ ಹಣವನ್ನು ದಾನ ಮಾಡಿದರೆ ಹೆಚ್ಚಿನ ಶುಭ ಫಲಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.