ಕನ್ಯಾ ರಾಶಿಯಲ್ಲಿ ಸೂರ್ಯ-ಕೇತು ಸಂಯೋಗ; ದ್ವಾದಶ ರಾಶಿಗಳ ಆರೋಗ್ಯ, ವೃತ್ತಿ ಜೀವನದ ಮೇಲೆ ಯಾವ ಪರಿಣಾಮ ಬೀರಲಿದೆ
ಸೆಪ್ಟೆಂಬರ್ 16, ಸೋಮವಾರಂದು ಕನ್ಯಾ ರಾಶಿಯಲ್ಲಿ ಸೂರ್ಯ ಹಾಗೂ ಕೇತು ಸಂಯೋಗ ಉಂಟಾಗಿದೆ. ಇದು ಜನರ ಮನಸ್ಸಿನ ಮೇಲೆ ಶುಭ ಹಾಗೂ ಅಶುಭ ಪರಿಣಾಮಗಳನ್ನು ಬೀರುತ್ತದೆ. ಜೊತೆಗೆ ಆರ್ಥಿಕ, ವೃತ್ತಿ, ಪ್ರೀತಿ ಮತ್ತು ಆರೋಗ್ಯ ಜೀವನದ ಮೇಲೆ ಹೇಗೆ ಪರಿಣಾಮ ಬೀರಲಿದೆ ನೋಡೋಣ.
ಜ್ಯೋತಿಷ್ಯದಲ್ಲಿ ಸೂರ್ಯ-ಕೇತು ಸಂಯೋಗವನ್ನು ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಾಧ್ಯತೆಗಳ ಪೂರ್ಣ ಅಂಶವೆಂದು ಪರಿಗಣಿಸಲಾಗಿದೆ. ದೃಕ್ ಪಂಚಾಂಗದ ಪ್ರಕಾರ ಸೆಪ್ಟೆಂಬರ್ 16 ಸೋಮವಾರ ಬೆಳಗ್ಗೆ 07:52 ಕ್ಕೆ ಸೂರ್ಯನು ಕನ್ಯಾರಾಶಿಗೆ ಪ್ರವೇಶಿಸಿದ್ದಾನೆ.
ಸೂರ್ಯ ಮತ್ತು ಕೇತುವಿನ ಸಂಯೋಜನೆಯು ಕೆಲವರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ಅಕ್ಟೋಬರ್ 17ವರೆಗೂ ಇದೇ ಪರಿಸ್ಥಿತಿ ಇರಲಿದೆ. ಸೂರ್ಯನು ಮಹತ್ವಾಕಾಂಕ್ಷೆ ಮತ್ತು ನಿರ್ಣಯಕ್ಕೆ ಹೆಸರುವಾಸಿಯಾಗಿದ್ದಾನೆ. ಅದೇ ಸಮಯದಲ್ಲಿ ಕೇತು ತ್ಯಜಿಸುವಿಕೆ ಮತ್ತು ಸ್ವಾತಂತ್ರ್ಯವನ್ನು ಸಂಕೇತಿಸುತ್ತದೆ. ಸೂರ್ಯ-ಕೇತುಗಳ ಸಂಯೋಜನೆಯು ಗ್ರಹಣ ಯೋಗಕ್ಕೆ ಕಾರಣವಾಗುತ್ತದೆ . ಇದು ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ.
ಕನ್ಯಾರಾಶಿಯಲ್ಲಿ ಸೂರ್ಯ ಮತ್ತು ಕೇತುಗಳ ಸಂಯೋಜನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕಠಿಣ ಪರಿಶ್ರಮ, ಸ್ಪಷ್ಟತೆ ಮತ್ತು ಆತ್ಮಾವಲೋಕನವನ್ನು ಪ್ರೇರೇಪಿಸುತ್ತದೆ. ಜೀವನದಲ್ಲಿ ಅನಗತ್ಯ ವಿಷಯಗಳನ್ನು ಬಿಡಬೇಕು. ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಉತ್ತಮವಾಗಿರಲು ಪ್ರಯತ್ನಿಸಿ. ಈ ಸಮಯದಲ್ಲಿ ನಿಮ್ಮ ವೃತ್ತಿ, ಸಂಬಂಧಗಳು, ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಸುಧಾರಿಸಲು ಪ್ರಯತ್ನಿಸಬೇಕು. ಜೊತೆಗೆ ಸೂರ್ಯ-ಕೇತು ಒಟ್ಟಿಗೆ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ.
ವೃತ್ತಿ ಜೀವನದ ಮೇಲೆ ಪರಿಣಾಮ
ಸೂರ್ಯ ಮತ್ತು ಕೇತುಗಳ ಸಂಯೋಜನೆಯು ವೃತ್ತಿ ಮತ್ತು ಆರ್ಥಿಕ ಗುರಿಗಳಲ್ಲಿ ಬದಲಾವಣೆಗಳನ್ನು ತರುತ್ತದೆ. ನಿಮ್ಮ ವೃತ್ತಿಯ ಬಗ್ಗೆ ನೀವು ಚಿಂತಿಸುತ್ತೀರಿ. ಇದು ನಿಮ್ಮನ್ನು ಕಷ್ಟಪಟ್ಟು ಕೆಲಸ ಮಾಡಲು ಪ್ರೇರೇಪಿಸುತ್ತದೆ. ಕೆಲಸವನ್ನು ಸುಧಾರಿಸಲು ಸೂರ್ಯನು ಪ್ರೇರಣೆಯನ್ನು ಹೆಚ್ಚಿಸುತ್ತಾನೆ. ಆದರೆ ಕೇತುವಿನ ಪ್ರಭಾವದಿಂದ ವೃತ್ತಿಯಲ್ಲಿ ಬದಲಾವಣೆಗಳಾಗಬಹುದು. ನಾವು ಮಾಡುತ್ತಿರುವುದು ಸರಿಯಾಗಿದೆಯೇ ಎಂದು ಅನೇಕ ಬಾರಿ ನಮಗೆ ಆಶ್ಚರ್ಯವಾಗುತ್ತದೆ. ನಿಮ್ಮ ಕೆಲಸವನ್ನು ನೀವು ಆನಂದಿಸದಿದ್ದರೆ ಅಥವಾ ಅಲ್ಲಿ ಸಮಸ್ಯೆ ಇದೆ ಎನಿಸಿದರೆ, ವಿರಾಮ ತೆಗೆದುಕೊಳ್ಳಲು ಇದು ಉತ್ತಮ ಸಮಯ. ಹೊಸ ಅವಕಾಶಗಳು ನಿಮ್ಮ ದಾರಿಯಲ್ಲಿ ಬರಬಹುದು. ಇದು ನಿಮಗೆ ಮುಂದೆ ಸಾಗಲು ಸಹಾಯ ಮಾಡುತ್ತದೆ.
ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ
ಸೂರ್ಯ ಮತ್ತು ಕೇತುಗಳ ಸಂಯೋಜನೆಯಿಂದ ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಎಚ್ಚರಿಕೆಯ ಅಗತ್ಯವಿದೆ. ಹಣದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ. ನಿಮ್ಮ ಹಣಕಾಸಿನ ಬಗ್ಗೆ ಗಮನ ಕೊಡಿ. ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ಹೂಡಿಕೆಗೆ ಇದು ಒಳ್ಳೆಯ ಸಮಯವಲ್ಲ, ಏಕೆಂದರೆ ಕೇತುವಿನ ಪ್ರಭಾವವು ಹಣದ ನಷ್ಟಕ್ಕೆ ಕಾರಣವಾಗಬಹುದು. ಹಣವು ಇಂದು ಕಡಿಮೆ ಪ್ರಾಮುಖ್ಯತೆಯನ್ನು ತೋರಬಹುದು. ಐಷಾರಾಮಿ ಜೀವನಕ್ಕೆ ಹಣ ಖರ್ಚು ಮಾಡುವ ಬದಲು ಕುಟುಂಬದ ಅಗತ್ಯಗಳಿಗಾಗಿ ಖರ್ಚು ಮಾಡಿ.
ಪ್ರೀತಿಯ ಜೀವನದ ಮೇಲೆ ಪರಿಣಾಮ
ಸೂರ್ಯ-ಕೇತು ಪ್ರೇಮ ಜೀವನವೂ ಪರಿಣಾಮ ಬೀರುತ್ತದೆ . ಈ ಅವಧಿಯಲ್ಲಿ ಸಂಬಂಧದಲ್ಲಿ ಯಾವುದೇ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಿ. ಪ್ರೀತಿಯ ಜೀವನದ ಸಮಸ್ಯೆಗಳನ್ನು ಪರಿಹರಿಸಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಭಾವನಾತ್ಮಕ ಬಂಧವನ್ನು ನಿರ್ಮಿಸಿ. ಈ ಅವಧಿಯಲ್ಲಿ ಸಂಬಂಧದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸದಿದ್ದರೆ, ಪರಿಸ್ಥಿತಿ ಹದಗೆಡಬಹುದು. ಕೇತುವಿನ ಪ್ರಭಾವವು ಸಂಬಂಧಗಳಲ್ಲಿ ದೂರವನ್ನು ಉಂಟುಮಾಡಬಹುದು. ಗಂಭೀರ ಸಂಬಂಧದಲ್ಲಿರುವ ಜನರು ಸಂಪರ್ಕದ ಕೊರತೆಯನ್ನು ಅನುಭವಿಸುತ್ತಾರೆ. ಪ್ರತ್ಯೇಕತೆಯ ಸಾಧ್ಯತೆ ಇರುವುದಿಲ್ಲ. ಸ್ವಾರ್ಥಿಯಾಗುವ ಬದಲು ನಿಮ್ಮ ಸಂಗಾತಿಯ ಆಸೆಗಳ ಮೇಲೆ ಕೇಂದ್ರೀಕರಿಸುವ ಸಮಯ ಇದು. ಇದು ಸಂಬಂಧಗಳಲ್ಲಿ ಪರಸ್ಪರ ತಿಳುವಳಿಕೆಯನ್ನು ಸುಧಾರಿಸುತ್ತದೆ. ಪ್ರೇಮ ಜೀವನದಲ್ಲಿ ಪ್ರೀತಿ ಬೆಳೆಯುತ್ತದೆ.
ಒಂಟಿ ಜನರಿಗೆ ಇದು ಹೊಸ ಸಂಬಂಧವನ್ನು ಪ್ರಾರಂಭಿಸಲು ಉತ್ತಮ ಸಮಯವಲ್ಲ. ಆದರೆ ಅವರ ಬಗ್ಗೆ ತಿಳಿದುಕೊಳ್ಳುವ ಸಮಯ ಇರಬಹುದು. ಈ ಸಮಯವು ಸಾಂದರ್ಭಿಕ ಸಂಬಂಧದ ಕಡೆಗೆ ಚಲಿಸುವ ಬದಲು ನಿಮ್ಮ ಸಂಗಾತಿಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮನ್ನು ಪ್ರೇರೇಪಿಸುತ್ತದೆ. ಕೇತುವಿನ ಪ್ರಭಾವವು ಹಿಂದಿನ ಸಂಬಂಧದ ಸಮಸ್ಯೆಗಳನ್ನು ಪರಿಹರಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಆರೋಗ್ಯದ ಮೇಲೆ ಪರಿಣಾಮ
ಸೂರ್ಯ ಮತ್ತು ಕೇತುವಿನ ಸಂಯೋಗದ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಇದು ಉತ್ತಮ ಸಮಯವಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಪ್ರಯತ್ನಿಸಬೇಕು. ಆರೋಗ್ಯಕರ ಆಹಾರಶೈಲಿ ಹಾಗೂ ವ್ಯಾಯಾಮ ಸೇರಿದಂತೆ ಹೊಸ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಇದು ಸೂಕ್ತ ಸಮಯ. ಇದರೊಂದಿಗೆ ಬದಲಾವಣೆಯನ್ನು ನೀವೇ ಗಮನಿಸಬಹುದು. ನಿಮ್ಮ ಜೀವನಶೈಲಿಯನ್ನು ಬದಲಾಯಿಸಿ. ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿ ಬೆಳಗ್ಗೆ ಬೇಗ ಏಳಬೇಕು. ಸಾಕಷ್ಟು ನೀರು ಕುಡಿಯಿರಿ. ಇದು ನಿಮ್ಮ ಆರೋಗ್ಯವನ್ನು ಇನ್ನಷ್ಟು ಸುಧಾರಿಸುತ್ತದೆ.
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).