ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬುಧ, ಸೂರ್ಯ, ಗುರು, ಶುಕ್ರ ಸಂಚಾರದಿಂದ ಈ ರಾಶಿಯವರಿಗೆ ಭಾರಿ ಲಾಭ; ಕನಸು ನನಸಾಗುವ ಕಾಲವಿದು

ಬುಧ, ಸೂರ್ಯ, ಗುರು, ಶುಕ್ರ ಸಂಚಾರದಿಂದ ಈ ರಾಶಿಯವರಿಗೆ ಭಾರಿ ಲಾಭ; ಕನಸು ನನಸಾಗುವ ಕಾಲವಿದು

ವೃಷಭ ರಾಶಿಯಲ್ಲಿ ಬುಧನ ಸಂಚಾರದಿಂದ ಚತುಗ್ರಹಿ ಯೋಗವು ರೂಪುಗೊಳ್ಳುವುದು. ಶುಕ್ರ, ಸೂರ್ಯ, ಬುಧ ಮತ್ತು ಗುರು ಗ್ರಹ ಪ್ರಭಾವದಿಂದ ಕೆಲವು ರಾಶಿಯವರಿಗೆ ಅನುಕೂಲವಾಗಲಿದೆ. ಆ ರಾಶಿಯವರ ಕನಸು ನನಸಾಗುವ ಕಾಲ ಇದು. ಹಾಗಾದರೆ ಯಾವ ರಾಶಿಯವರಿಗೆ ಲಾಭವಾಗಲಿದೆ ತಿಳಿಯಲು ಮುಂದೆ ಓದಿ.

ಬುಧ, ಸೂರ್ಯ, ಗುರು, ಶುಕ್ರ ಸಂಚಾರದಿಂದ ಈ ರಾಶಿಯವರಿಗೆ ಭಾರಿ ಲಾಭ
ಬುಧ, ಸೂರ್ಯ, ಗುರು, ಶುಕ್ರ ಸಂಚಾರದಿಂದ ಈ ರಾಶಿಯವರಿಗೆ ಭಾರಿ ಲಾಭ

Sun Mercury Jupiter and Venus Transit: ದ್ವಾದಶ ರಾಶಿಗಳಲ್ಲಿ ಸೂರ್ಯ, ಗುರು, ಶುಕ್ರ ಮತ್ತು ಬುಧನ ಸಂಚಾರವು ಬಹಳ ಮಹತ್ವಪೂರ್ಣವಾಗಿದೆ ಎಂಬ ನಂಬಿಕೆ ಇದೆ. ಸದ್ಯದಲ್ಲೇ ಈ ನಾಲ್ಕು ದೊಡ್ಡ ಗ್ರಹಗಳು ವೃಷಭ ರಾಶಿಯಲ್ಲಿ ಸಂಧಿಸಲಿವೆ. ಇದೇ ಮೇ 31ರಂದು ವೃಷಭ ರಾಶಿಯಲ್ಲಿ ಬುಧನ ಗೋಚರವಾಗುತ್ತಲೇ ಚತುರ್ಗ್ರಾಹಿ ಯೋಗವು ನಿರ್ಮಾಣವಾಗಲಿದೆ‌‌‌‌. ಶುಕ್ರ, ಸೂರ್ಯ, ಬುಧ ಮತ್ತು ಗುರುವಿನ ಸಂಯೋಗದಿಂದ ಉಂಟಾಗುವ ಚತುರ್ಗ್ರಾಹಿ ಯೋಗವು ಬಹಳ ವರ್ಷದ ನಂತರ ವೃಷಭ ರಾಶಿಯಲ್ಲಿ ರೂಪುಗೊಳ್ಳುತ್ತಿದೆ. ಬುಧ, ಗುರು, ಶುಕ್ರ ಮತ್ತು ಸೂರ್ಯನ ಪ್ರಭಾವದಿಂದ ಕೆಲವು ರಾಶಿಯವರಿಗೆ ಭಾರಿ ಅನುಕೂಲವಾಗಲಿದೆ. ವೃಷಭ ರಾಶಿಯಲ್ಲಿ ಈ ನಾಲ್ಕು ದೊಡ್ಡ ಗ್ರಹಗಳ ಸಂಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗಲಿದೆ ಇಲ್ಲಿದೆ ಓದಿ.

ವೃಷಭ ರಾಶಿ

ಬುಧ, ಗುರು, ಶುಕ್ರ ಮತ್ತು ಸೂರ್ಯನ ಸಂಚಾರವು ವೃಷಭ ರಾಶಿಯವರಿಗೆ ಹೆಚ್ಚಿನ ಲಾಭವನ್ನು ತರಲಿದೆ. ಉದ್ಯೋಗಸ್ಥರಾಗಿದ್ದರೆ, ನಿಮಗೆ ನಿಮ್ಮ ಮೇಲಾಧಿಕಾರಿಗಳಿಂದ ಹೆಚ್ಚಿನ ಬೆಂಬಲ ಸಿಗಲಿದೆ. ಜೊತೆಗೆ ಹೆಚ್ಚಿನ ಅವಕಾಶಗಳು ಸಿಗಲಿವೆ. ನಿಮ್ಮ ಸಂಪಾದನೆಗೆ ಮತ್ತು ಹಣ ಉಳಿತಾಯ ಮಾಡಲು ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿದೆ. ಆದರೆ ಅದು ನೀವು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಮೇಲೆಯೇ ಅವಲಂಬಿಸಿದೆ. ಹಣಕಾಸಿನ ವಿಚಾರದಲ್ಲಿ ನೀವು ರಿಸರ್ಚ್‌ ಮಾಡಿ ತೆಗೆದುಕೊಂಡ ನಿರ್ಣಯಗಳು ನಿಮಗೆ ಲಾಭ ತರುತ್ತದೆ. ಸೌಂದರ್ಯ ಮತ್ತು ಆರೋಗ್ಯಕ್ಕೂ ಈ ಸಮಯ ಉತ್ತಮವಾಗಿದೆ. ಜಂಕ್‌ ಫುಡ್‌ಗಳಿಂದ ದೂರವಿರಿ.

ಕಟಕ ರಾಶಿ

ಕಟಕ ರಾಶಿಯ ಜಾತಕದವರಿಗೆ ಸೂರ್ಯ, ಬುಧ, ಶುಕ್ರ ಮತ್ತು ಗುರುವಿನ ಸಂಚಾರವು ಲಾಭವನ್ನು ತರಲಿದೆ. ನೌಕರಿಯ ಹುಡುಕಾಟದಲ್ಲಿರುವವರಿಗೆ ಅವರ ಕನಸು ನನಸಾಗುವ ಸಂಭವವಿದೆ. ಆರ್ಥಿಕವಾಗಿ ಸದೃಢವಾಗಿರಲು ಹಣವನ್ನು ಹೂಡಿಕೆ ಮಾಡುವುದರ ಜೊತೆಗೆ ಉಳಿತಾಯ ಯೋಜನೆಗಳನ್ನು ಮಾಡುವುದು ಉತ್ತಮ. ಆರೋಗ್ಯಕರ ಡಯಟ್‌ ಪಾಲಿಸುವುದು ಒಳ್ಳೆಯದು. ಇದರೊಂದಿಗೆ ಯಥೇಚ್ಛವಾಗಿ ನೀರು ಕುಡಿಯುವುದರೊಂದಿಗೆ ಹೈಡ್ರೇಟ್‌ ಆಗಿ ಇರುವುದರ ಮುಖಾಂತರ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ರಾಶಿ-ಭವಿಷ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಮಕರ ರಾಶಿ

ಸೂರ್ಯ, ಬುಧ, ಗುರು ಮತ್ತು ಶುಕ್ರ ಗ್ರಹಗಳ ಸಂಯೋಜನೆಯು ಮಕರ ರಾಶಿಯವರಿಗೆ ಹೆಚ್ಚಿನ ಲಾಭಾಂಶವನ್ನು ತಂದುಕೊಡಲಿದೆ. ವ್ಯಾಪಾರದಲ್ಲಿ ಹೊಸ ಹೊಸ ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಆರ್ಥಿಕ ಸ್ಥಿತಿ ಉತ್ತಮವಿದ್ದವರು, ಹಣಕಾಸಿನ ವಿಷಯದಲ್ಲಿ ಏಳು ಬೀಳುಗಳನ್ನು ನೋಡಬಹುದು. ಹಣವನ್ನು ಯೋಚಿಸಿ ಹೂಡಿಕೆಗಳಲ್ಲಿ ತೊಡಗಿಸುವುದರಿಂದ ಲಾಭದಾಯಕವಾಗಲಿದೆ. ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ತೋರಿಸಿ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

ವಿಭಾಗ