ಕುಂಭ ರಾಶಿಯಲ್ಲಿ ರವಿಯ ಸಂಚಾರ: ಸಿಂಹ ರಾಶಿಗೆ ಉದ್ಯೋಗ ಸಮಸ್ಯೆ, ಕನ್ಯಾಕ್ಕೆ ದಾಂಪತ್ಯದಲ್ಲಿ ವಿರಸ, ತುಲಾ–ವೃಶ್ಚಿಕಕ್ಕೆ ಮಿಶ್ರಫಲ
ಸದ್ಯದಲ್ಲೇ ಸೂರ್ಯನು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಇದರ ಪರಿಣಾಮ ದ್ವಾದಶ ರಾಶಿಗಳ ಮೇಲಾಗಲಿದೆ. ರವಿ ಸಂಚಾರದಿಂದ ಸಿಂಹದಿಂದ ವೃಶ್ಚಿಕ ರಾಶಿವರೆಗೆ ಏನೆಲ್ಲಾ ಬದಲಾವಣೆಗಳಾಗಲಿವೆ ನೋಡಿ. (ಬರಹ: ಎಚ್. ಸತೀಶ್, ಜ್ಯೋತಿಷಿ)

ಫೆ 12 ರಂದು ರಾತ್ರಿ ಸುಮಾರು 9 ಗಂಟೆಗೆ ಸೂರ್ಯನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಮಾರ್ಚ್ ತಿಂಗಳ 14 ರವರೆಗೂ ಕುಂಭರಾಶಿಯಲ್ಲಿ ಸಂಚರಿಸುತ್ತಾನೆ. ಕುಂಭ ರಾಶಿಯ ಅಧಿಪತಿಯು ಶನಿ. ಶನಿಗೆ ಈ ರಾಶಿಯು ಸ್ವಕ್ಷೇತ್ರ ಮತ್ತು ಮೂಲತ್ರಿಕೋನ ರಾಶಿಯಾಗುತ್ತದೆ. ರವಿ ಮತ್ತು ಶನಿ ಗ್ರಹಗಳು ಪರಸ್ಪರ ಶತ್ರುಗಳಾಗುತ್ತಾರೆ. ರವಿಯನ್ನು ರಾಜಗ್ರಹ ಎಂದು ಕರೆಯುತ್ತೇವೆ. ಅಂದರೆ ರವಿಯು ಉನ್ನತ ಮಟ್ಟದಲ್ಲಿರುವ ಅಧಿಕಾರಿಗಳನ್ನು ಸೂಚಿಸುತ್ತದೆ. ಒಂದು ಕುಟುಂಬದ ಹಿರಿಯ ವ್ಯಕ್ತಿಯನ್ನು ಸೂಚಿಸುತ್ತಾನೆ. ಸಮಾಜದ ಗಣ್ಯವ್ಯಕ್ತಿಗಳನ್ನು ಸಹ ರವಿಯಿಂದ ತಿಳಿಯಬಹುದು. ಆದರೆ ಶನಿಯು ಕುಂಭದಲ್ಲಿ ಇರುವ ಕಾರಣ ರವಿಗಿಂತಲೂ ಶನಿಯ ಶಕ್ತಿಯೇ ಹೆಚ್ಚಾಗುತ್ತದೆ. ಅಂದರೆ ಕುಂಭದಲ್ಲಿ ರವಿ ಚಲಿಸುತ್ತಿರುವವರೆಗೂ ಹಿರಿಯ ಅಧಿಕಾರಿಗಳು, ಮನೆಗೆ ಹಿರಿಯರು, ತಂದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಉತ್ತಮ ಅವಕಾಶ ಮತ್ತು ಉತ್ತಮ ಪ್ರಯತ್ನಗಳ ನಡುವೆಯೂ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ನಿಧಾನತೆ ಕಂಡುಬರುತ್ತದೆ. ಪ್ರತಿಯೊಂದು ರಾಶಿಗಳ ಭವಿಷ್ಯದಲ್ಲಿ ವ್ಯತ್ಯಾಸವು ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿ ರಾಶಿಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಈ ಬರಹದಲ್ಲಿ ವಿವರ ಇದೆ. ಕುಂಭ ರಾಶಿಯಲ್ಲಿ ರವಿಯ ಸಂಚಾರದಿಂದ ಸಿಂಹದಿಂದ ವೃಶ್ಚಿಕ ರಾಶಿವರೆಗೆ ಏನೆಲ್ಲಾ ಪರಿಣಾಮ ಆಗಲಿದೆ ಎನ್ನುವ ವಿವರ ಇಲ್ಲಿದೆ.
ಸಿಂಹ ರಾಶಿ
ನಿಮ್ಮದೇ ತಪ್ಪು ನಿರ್ಧಾರಗಳಿಂದ ತೊಂದರೆಗೆ ಸಿಲುಕುವಿರಿ. ಉದ್ಯೋಗದ ಸಮಸ್ಯೆಗಳು ದೂರವಾಗುತ್ತವೆ. ಅಧಿಕಾರಿಗಳು ಮತ್ತು ಸಹೋದ್ಯೋಗಿಗಳ ನಡುವೆ ಉತ್ತಮ ಬಾಂಧವ್ಯ ಮೂಡುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುವ ಸೂಚನೆಗಳಿವೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಎಲ್ಲರೊಡನೆ ಹೊಂದಿಕೊಂಡು ಬಾಳುವ ಗುಣವಿರುತ್ತದೆ. ಸ್ವಂತ ಮನೆಯ ಕನಸು ನನಸಾಗಬಹುದು. ವೈವಾಹಿಕ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಇರುತ್ತದೆ. ವಿವಾಹ ಕಾರ್ಯ ಮುಂದೂಡಲ್ಪಡುತ್ತದೆ. ಅನಿರೀಕ್ಷಿತ ಧನಲಾಭವಿರುತ್ತದೆ. ಉದ್ಯೋಗ ಬದಲಿಸುವ ಅವಕಾಶವಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಮಾರ್ಪಾಡುಗಳು ಉಂಟಾಗುತ್ತವೆ. ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ. ಮಕ್ಕಳಿಂದ ಸಂತೋಷದ ವರ್ತಮಾನವನ್ನು ದೊರೆಯಲಿದೆ. ಹಣಕಾಸಿನ ವ್ಯವಹಾರದಲ್ಲಿ ನಿರೀಕ್ಷಿಸಿದ ಫಲಿತಾಂಶ ದೊರೆಯುತ್ತದೆ. ಬೇರೆಯವರ ವಿವಾದದಲ್ಲಿ ಮಧ್ಯವರ್ತಿಯಾಗಿ ಪರಿಹಾರವನ್ನು ಕಂಡುಹಿಡಿಯುವಿರಿ. ಕುಟುಂಬದ ಗೃಹಿಣಿಯರಿಗೆ ಹಣದ ಅನುಕೂಲ ದೊರೆಯಲಿದೆ. ಹಣಕಾಸಿನ ವ್ಯವಹಾರದಲ್ಲಿ ಯಾವುದೇ ಸಮಸ್ಯೆಯು ಕಂಡುಬರುವುದಿಲ್ಲ.
ಕನ್ಯಾ ರಾಶಿ
ಜೀವನದಲ್ಲಿ ನಿರೀಕ್ಷಿಸಿದ ಯಶಸ್ಸು ದೊರೆಯುತ್ತದೆ. ನಿಮ್ಮ ಪ್ರತಿಯೊಂದು ಚಟುವಟಿಕೆಗಳನ್ನು ಆತ್ಮೀಯರು ಗಮನಿಸುತ್ತಾರೆ. ನಿಮ್ಮ ಕಷ್ಟದ ಕಾಲದಲ್ಲಿ ಸ್ನೇಹಿತರ ನೆರವು ದೊರೆಯಲಿದೆ. ಬಂಧು-ಬಳಗದವರಿಂದ ದೂರ ಉಳಿಯಲು ಪ್ರಯತ್ನಿಸುವಿರಿ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಒತ್ತಡಕ್ಕೆ ಮಣಿದು ಬದಲಾಯಿಸಬೇಕಾಗುತ್ತದೆ. ತಪ್ಪನ್ನು ಕಂಡಾಗ ನಿಷ್ಪಕ್ಷಪಾತವಾಗಿ ಖಂಡಿಸುವಿರಿ. ಒಂದಕ್ಕಿಂತಲೂ ಹೆಚ್ಚಿನ ಮೂಲಗಳಿಂದ ಆದಾಯವಿರುತ್ತದೆ. ಚಿಕ್ಕಮಕ್ಕಳ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ನಿಮ್ಮ ಮನಸ್ಸಿನ ವಿಚಾರಗಳನ್ನು ರಹಸ್ಯವಾಗಿ ಇಡುವಿರಿ. ಎಲ್ಲರ ಮೇಲು ಅಧಿಕಾರ ಚಲಾವಣೆ ಮಾಡುವಿರಿ. ಉದ್ಯೋಗಸ್ಥರಿಗೆ ಅನಿರೀಕ್ಷಿತ ಯಶಸ್ಸು ಲಭಿಸುತ್ತದೆ. ದಾಂಪತ್ಯ ಜೀವನದಲ್ಲಿ ಬೇಸರದ ಸನ್ನಿವೇಶ ಎದುರಾಗುತ್ತದೆ. ವಿವಾಹಿತರ ಜೀವನದಲ್ಲಿ ಆಕಸ್ಮಿಕ ಬದಲಾವಣೆಗಳು ಕಂಡುಬರಲಿ. ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಆರಂಭಿಸಿದ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಜನಸೇವೆ ಮಾಡುವ ಅಧಿಕಾರವು ನಿಮಗೆ ದೊರೆಯಲಿದೆ. ಮನಬಿಚ್ಚಿ ಮಾತನಾಡಿದರೆ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ತುಲಾ ರಾಶಿ
ನೀವು ತೆಗೆದುಕೊಳ್ಳುವ ಆತುರದ ನಿರ್ಧಾರಗಳು ವಿವಾದವನ್ನು ಉಂಟುಮಾಡುತ್ತದೆ. ಹಟದ ಸ್ವಭಾವದಿಂದ ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಉನ್ನತಮಟ್ಟವನ್ನು ತಲುಪಲಿದ್ದಾರೆ. ಉನ್ನತ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡುತ್ತದೆ. ಕುಟುಂಬದ ಸಮಸ್ಯೆಗಳು ಕ್ರಮೇಣವಾಗಿ ಪರಿಹಾರಗೊಳ್ಳುತ್ತದೆ. ಉದ್ಯೋಗದಲ್ಲಿನ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಮನೆತನದ ಆಸ್ತಿಯನ್ನು ಹೆಚ್ಚಿಸುವ ಪ್ರಯತ್ನ ಸಫಲವಾಗುತ್ತದೆ. ನಿಮ್ಮದಲ್ಲದ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಉದ್ಯೋಗವನ್ನು ಬದಲಿಸುವಿರಿ. ಹಣಕಾಸಿನ ವ್ಯವಹಾರವು ಸರಾಗವಾಗಿ ನಡೆಯಲಿದೆ. ಮಕ್ಕಳ ಜೀವನದಲ್ಲಿ ಅನಿರೀಕ್ಷಿತ ಯಶಸ್ಸು ಕಂಡು ಬರುತ್ತದೆ. ಜಗಳ ಕದನಗಳನ್ನು ಇಷ್ಟಪಡದೆ ಮೌನದಿಂದ ಇರಲು ಪ್ರಯತ್ನಿಸುವಿರಿ. ನಿಮ್ಮದಲ್ಲದ ವಿಚಾರಗಳಿಗೆ ಆಸಕ್ತಿ ತೋರುವುದಿಲ್ಲ. ಆತ್ಮವಿಶ್ವಾಸದ ಕೊರತೆಯ ಕಾರಣ ಎಲ್ಲರೊಂದಿಗೆ ಹೊಂದಿಕೊಂಡು ಬಾಳುವಿರಿ. ವಿದೇಶಿ ವಿನಿಮಯದಲ್ಲಿ ಲಾಭವಿದೆ. ನೀರಿನಿಂದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ. ಸಾಲದ ವ್ಯವಹಾರದಲ್ಲಿ ನಂಬಿಕೆ ಇರುವುದಿಲ್ಲ. ಗೃಹಿಣಿಯರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಗರ್ಭಿಣಿಯರು ಎಚ್ಚರಿಕೆಯಿಂದ ಬಾಳಬೇಕು.
ವೃಶ್ಚಿಕ ರಾಶಿ
ಮಾಡಿದ ತಪ್ಪನ್ನು ಸುಲಭವಾಗಿ ಒಪ್ಪುವುದಿಲ್ಲ. ಬೇರೆಯವರ ಸಲಹೆಯನ್ನು ಸ್ವೀಕರಿಸದೆ ನಿಮ್ಮ ಮನಸ್ಸಿನಂತೆ ನಡೆದುಕೊಳ್ಳುವಿರಿ. ಸಣ್ಣಪುಟ್ಟ ತಪ್ಪುಗಳಿಗೂ ಕೋಪದಿಂದ ವರ್ತಿಸುವಿರಿ. ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ದಾಂಪತ್ಯ ಜೀವನದಲ್ಲಿ ಸಂತಸ ಇರುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಲಾಭವಿದೆ. ಬಾಳ ಸಂಗಾತಿಯ ಉದ್ಯೋಗದಲ್ಲಿ ಉತ್ತಮ ರೀತಿಯ ಬದಲಾವಣೆಗಳಿವೆ. ಹಳೆಯ ಮನೆಯನ್ನು ನವೀಕರಿಸುವಿರಿ. ಉದ್ಯೋಗದಲ್ಲಿ ನಿರೀಕ್ಷಿಸಿದಂತೆ ಉತ್ತಮ ಪ್ರಗತಿ ಕಂಡು ಬರುತ್ತದೆ. ಅಧಿಕಾರಿಗಳಿಗೆ ವಿಶೇಷವಾದ ಅನುಕೂಲತೆಗಳಿವೆ. ಸಹೋದ್ಯೋಗಿಗಳೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಬೇಗನೆ ಕೋಪ ಬರುತ್ತದೆ. ಮಕ್ಕಳ ಜೀವನದಲ್ಲಿ ಸಂತೋಷಕರ ಬದಲಾವಣೆಗಳಿವೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ವಿದ್ಯಾರ್ಥಿಗಳು ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಆಯೋಜಿಸಿದ್ದ ಪ್ರವಾಸವನ್ನು ರದ್ದುಪಡಿಸುವಿರಿ. ಕುಟುಂಬದ ಸದಸ್ಯರ ಕೋಪಕ್ಕೆ ಒಳಗಾಗುವಿರಿ. ನಿಮ್ಮ ಸ್ವಂತ ಕೆಲಸ ಕಾರ್ಯಗಳಲ್ಲಿ ಯಾವುದೇ ಹಿನ್ನಡೆ ಲಭಿಸುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ಇರುವುದಿಲ್ಲ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
