Sun Transit: ಮೇ 14ರಂದು ವೃಷಭ ರಾಶಿ ಪ್ರವೇಶಿಸಲಿರುವ ಸೂರ್ಯ; ದ್ವಾದಶ ರಾಶಿಗಳಿಗೆ ರಾಜಗ್ರಹ ರವಿ ನೀಡುವ ಫಲಗಳೇನು?
Sun Transit: ಸೂರ್ಯನು ತಿಂಗಳಿಗೊಮ್ಮೆ ರಾಶಿಯನ್ನು ಬದಲಿಸುತ್ತಾನೆ. ಇದರಿಂದ ಎಲ್ಲಾ 12 ರಾಶಿಗಳಿಗೆ ವಿಧ ಫಲಗಳು ದೊರೆಯುತ್ತದೆ. ಮೇ 14ರಂದು ಸೂರ್ಯ ವೃಷಭ ರಾಶಿ ಪ್ರವೇಶಿಸುತ್ತಿದ್ದಾನೆ. ಇದರಿಂದ ದ್ವಾದಶ ರಾಶಿಗಳಿಗೆ ರಾಜಗ್ರಹ ರವಿ ಏನು ಫಲಗಳನ್ನು ನೀಡುತ್ತಾನೆ ನೋಡೋಣ.
ಗೋಚಾರದಲ್ಲಿ ಸೂರ್ಯನು ತಿಂಗಳಿಗೊಮ್ಮೆ ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತಾನೆ. ಆದರೆ ದೊರೆವ ಫಲಾಫಲಗಳು ವಿಭಿನ್ನವಾಗಿರುತ್ತದೆ. ಸೂರ್ಯನನ್ನು ಜ್ಯೋತಿಷ್ಯದಲ್ಲಿ ರಾಜಗ್ರಹ ಎಂದು ಕರೆಯುತ್ತಾರೆ. ಜನ್ಮಕುಂಡಲಿಯಲ್ಲಿಯಾಗಲಿ ಅಥವಾ ಮದುವೆ, ಗೃಹಪ್ರವೇಶ ಮುಂತಾದುವುಗಳ ಮುಹೂರ್ತದಲ್ಲಿ ಸೂರ್ಯನು ಸಶಕ್ತನಾಗಿದ್ದಾಲ್ಲಿ ಅಧಿಕ ಶುಭಫಲಗಳು ದೊರೆಯುತ್ತವೆ.
2024ರ ಮೇ 14ರಂದು ಸಂಜೆ 05.17ಕ್ಕೆ ಸೂರ್ಯನು ಮೇಷ ರಾಶಿಯಿಂದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ರವಿಗೆ ಇದು ಶತ್ರು ಕ್ಷೇತ್ರವಾಗುತ್ತದೆ. ಸೂರ್ಯನು ಗುರುವಿನ ಜೊತೆ ಇರುವ ಕಾರಣ ಶಕ್ತಿಶಾಲಿಯಾಗಿರುತ್ತಾನೆ. ಇದರಿಂದ ಕೆಲವು ರಾಶಿಗಳಿಗೆ ಉತ್ತಮ, ಕೆಲವು ರಾಶಿಗಳಿಗೆ ಮಧ್ಯಮ ಮತ್ತು ಇನ್ನೂ ಕೆಲವು ರಾಶಿಗಳಿಗೆ ಸಾಧಾರಣ ಫಲಗಳನ್ನು ನೀಡುತ್ತಾನೆ. ಸೂರ್ಯನು ಯಾವ ರಾಶಿಗಳಿಗೆ ಯಾವ ಫಲ ನೀಡುತ್ತಾನೆ ನೋಡೋಣ.
ಮೇಷ
ಬುದ್ಧಿವಂತಿಕೆಯಿಂದ ಕುಟುಂಬವನ್ನು ಯಶಸ್ವಿನತ್ತ ಮುನ್ನಡೆಸುವಿರಿ. ಯಾರ ಸಲಹೆಯನ್ನು ಒಪ್ಪದೇ ಸ್ವಂತ ನಿರ್ಧಾರಗಳಿಗೆ ಬದ್ದರಾಗುವಿರಿ. ನೇರ ಮತ್ತು ನಿಷ್ಠುರದ ಮಾತುಕತೆಯಿಂದ ಕೆಲವರ ವಿರೋಧ ಉಂಟಾಗುತ್ತದೆ. ಸಾಧ್ಯವಾದಷ್ಟು ಉಷ್ಣದ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ದಂಪತಿ ನಡುವೆ ಅನಾವಶ್ಯಕವಾದ ವಾದ ವಿವಾದ ಇರುತ್ತವೆ. ಮಕ್ಕಳಿಗೆ ಉದ್ಯೋಗದಲ್ಲಿ ಉನ್ನತ ಹುದ್ದೆ ಲಭಿಸುತ್ತದೆ. ಜೀವನದ ನಿಮ್ಮ ಆಶೋತ್ತರಗಳು ಕೈಗೂಡಲಿವೆ. ವಿದ್ಯಾರ್ಥಿಗಳು ಅನಗತ್ಯ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುತ್ತಾರೆ. ಬೇರೆಯವರು ಸುಲಭವಾಗಿ ನಿಮ್ಮ ಪ್ರಭಾವಕ್ಕೆ ಒಳಗಾಗುತ್ತಾರೆ.
ವೃಷಭ
ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು ಗಳಿಸುತ್ತಾರೆ. ಸಂಗಾತಿ ಜೊತೆಯಲ್ಲಿ ಉತ್ತಮ ಬಾಂಧವ್ಯ ನೆಲೆಸುತ್ತದೆ. ನಿಮ್ಮ ಮನಸ್ಸನ್ನು ಬದಲಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಹಟದ ಸ್ವಭಾವದ ಕಾರಣ ವಿರೋಧಿಗಳು ಸೋಲೊಪ್ಪುತ್ತಾರೆ. ಕುಟುಂಬದಲ್ಲಿ ತಾಯಿ ಅಥವಾ ಅತ್ತೆಯ ಪ್ರಾಬಲ್ಯತೆ ಇರುತ್ತದೆ. ಸೋದರಿ ಅಥವಾ ಮಗಳಿಗೆ ಉಡುಗೊರೆ ನೀಡುವಿರಿ. ಭೂ ವಿವಾದವಿದ್ದರೆ ಕಾನೂನಿನ ಮೂಲಕ ಜಯ ಗಳಿಸುವಿರಿ. ತಂದೆ ತಾಯಿ ನಡುವೆ ಇದ್ದ ಬಿನ್ನಾಭಿಪ್ರಾಯ ಕೊನೆಯಾಗುವುದು. ಸ್ವಂತ ಮನೆ ಅಥವಾ ಆಸ್ತಿ ಕೊಳ್ಳಲು ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ.
ಮಿಥುನ
ಡೃಢವಾದ ನಂಬಿಕೆ ಮತ್ತು ವಿಶ್ವಾಸದಿಂದ ಅಸಾಧ್ಯವಾದ ಕೆಲಸಗಳಲ್ಲಿ ಯಶಸ್ಸು ಸಾಧಿಸುವಿರಿ. ಉದ್ಯೋಗದಲ್ಲಿ ವಿರೋಧಿ ಜನರಿಂದ ದೂರವಿರುವಿರಿ. ಕೋಪ ಬರುವುದಿಲ್ಲ. ಎಲ್ಲರ ಜೊತೆ ಶಾಂತಿ ಸಂಯಮದಿಂದ ವ್ಯವಹರಿಸುವಿರಿ. ಸಮಾಜದಲ್ಲಿ ಉನ್ನತ ಸ್ಥಾನ ಗಳಿಸುವ ಆಸೆ ಇರುತ್ತದೆ. ಮನದಲ್ಲಿ ಇರುವ ಆಸೆ ಆಕಾಂಕ್ಷೆಗಳನ್ನು ವ್ಯಕ್ತ ಪಡಿಸುವುದಿಲ್ಲ. ಮಾತು ಕಡಿಮೆ ಮಾಡಿ ಮೌನದಿಂದ ಕೆಲಸ ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ಸೋದರಿಯ ಉದ್ಯೋಗದಲ್ಲಿ ಏರಿಳಿತ ಉಂಟಾಗುತ್ತದೆ. ಸ್ತ್ರೀಯರಿಗೆ ತವರಿನ ನಂಟು ಬಲಗೊಳ್ಳುತ್ತದೆ. ಉದ್ಯೋಗ ಬದಲಿಸುವಿರಿ. ಹಣದ ತೊಂದರೆ ಕಾಣುವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ನಿರೀಕ್ಷಿಸುವಿರಿ.
ಕಟಕ
ಸಮಯ, ಸಂದರ್ಭವನ್ನು ಅರ್ಥಮಾಡಿಕೊಂಡು ವರ್ತಿಸುವಿರಿ. ಸದಾಕಾಲ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ನಿರತರಾಗುವಿರಿ. ವಿದ್ಯಾರ್ಥಿಗಳು ಗುರುಹಿರಿಯರ ಮಾರ್ಗದರ್ಶನದಲ್ಲಿ ಕಲಿಕೆಯಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಅನೀಕ್ಷಿತ ದನಲಾಭ ಇರುತ್ತದೆ. ಆತ್ಮೀಯರ ಸಹಾಯದಿಂದ ಕಷ್ಟ ನಷ್ಟಗಳು ಕ್ರಮೇಣ ದೂರವಾಗುತ್ತದೆ. ಹೆಚ್ಚಿನ ಜ್ಞಾನ ಸಂಪಾದನೆಗಾಗಿ ವಿದೇಶಕ್ಕೆ ತೆರಳುವಿರಿ. ಕುಟುಂಬದಲ್ಲಿ ಮಂಗಳ ಕಾರ್ಯವನ್ನುಯಶಸ್ವಿಯಾಗಿ ನಿರ್ವಹಿಸುವಿರಿ. ಸಂತಾನ ಯೋಗ ಇರುತ್ತದೆ. ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿ ನಿಮ್ಮದಾಗುತ್ತದೆ. ಯಶಸ್ವಿ ನಾಯಕರಾಗಿ ಜೀವನದಲ್ಲಿ ಮುಂದುವರೆಯುವಿರಿ.
ಸಿಂಹ
ಸ್ವಂತ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ನಂತರ ಉಳಿದ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಸೋಲುವ ವೇಳೆ ಧೈರ್ಯಗೆಡದೆ ಸತತ ಪ್ರಯತ್ನದಿಂದ ಜಯ ಗಳಿಸುವಿರಿ. ವಿಶಾಲವಾದ ಮನೆಯನ್ನು ಕೊಳ್ಳಲು ಯೋಜನೆ ರೂಪಿಸುವಿರಿ. ತಾಯಿಯ ಆದೇಶದಂತೆ ನಡೆದು ತೊಂದರೆಯಿಂದ ಪಾರಾಗುವಿರಿ. ಕುಟುಂಬದ ಹಿರಿಯರಿಂದ ಹಣದ ವ್ಯವಹಾರದಲ್ಲಿ ಅಡಚಣೆ ಉಂಟಾಗಲಿದೆ. ಮುಂಗೋಪದಿಂದ ವರ್ತಿಸಿದಲ್ಲಿ ಆತ್ಮೀಯರೊಬ್ಬರು ದೂರವಾಗಬಹುದು. ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚುತ್ತದೆ. ಹಣದ ಕೊರತೆ ಕಡಿಮೆಯಾಗುತ್ತದೆ. ಕೆಲಸದ ಮಧ್ಯೆ ವಿಶ್ರಾಂತಿ ಪಡೆದು ನೆಮ್ಮದಿಯಿಂದ ಬಾಳುವಿರಿ. ದಂಪತಿ ನಡುವೆ ಉತ್ತಮ ಸಂಬಂಧ ಬೆಳೆಯುತ್ತದೆ.
ಕನ್ಯಾ
ಅರೆ ಮನಸ್ಸಿನಿಂದ ಅನಾವಶ್ಯಕ ಖರ್ಚು ವೆಚ್ಚಗಳನ್ನು ಮಾಡುವಿರಿ. ಟೀಕಿಸುವ ಗುಣದಿಂದ ಆತ್ಮೀಯರು ಬೇಸರಕ್ಕೆ ಒಳಗಾಗುತ್ತಾರೆ. ಸೋಲನ್ನು ಒಪ್ಪದೆ ಬೇರೆಯವರನ್ನು ದೂರುವಿರಿ. ಆತಂಕದ ಪರಿಸ್ಥಿತಿಯಲ್ಲಿ ಬುದ್ಧಿವಂತಿಕೆಯಿಂದ ಪಾರಾಗುವಿರಿ. ಸತತ ಪ್ರಯತ್ನದಿಂದ ಮಾತ್ರ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ವಂಶದ ಆಸ್ತಿ ವಿಚಾರದಲ್ಲಿ ಇದ್ದ ವಿವಾದ ಕೊನೆಗೊಳ್ಳುತ್ತದೆ. ವಯಸ್ಸಿನ ತಾರತಮ್ಯ ಇಲ್ಲದೆ ಮಕ್ಕಳ ಮಾತಿಗೂ ಗೌರವ ನೀಡುವಿರಿ. ತೆಗೆದುಕೊಂಡ ತೀರ್ಮಾನಗಳನ್ನು ಅನಾವಶ್ಯಕವಾಗಿ ಬದಲಾಯಿಸಿದರೆ ತೊಂದರೆ ಇರುವುದಿಲ್ಲ. ಮನಸ್ಸು ಎಷ್ಟೇ ಒಳ್ಳೆಯದಾದರೂ ಆಡುವ ಮಾತಿನಿಂದ ಕೆಟ್ಟ ಹೆಸರನ್ನು ಗಳಿಸುವಿರಿ. ಖರ್ಚು ವೆಚ್ಚಗಳು ಹೆಚ್ಚಾಗಿರುತ್ತದೆ.
ತುಲಾ
ಸಹನೆ ತೋರದೆ ಆತುರದಲ್ಲಿ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ನ್ಯಾಯದ ಪಕ್ಷಪಾತಿಗಳು. ನೀವು ತಪ್ಪು ಮಾಡಿದರೆ ಮನೆಯವರನ್ನೂ ಕ್ಷಮಿಸುವುದಿಲ್ಲ. ನೇರ ನಿಷ್ಟುರದಿಂದ ಮಾತನಾಡುವ ಕಾರಣ ವಿರೋಧಿಗಳು ಹೆಚ್ಚುತ್ತಾರೆ. ಕ್ರಿಯಾಶೀಲ ವ್ಯಕ್ತಿತ್ವ ಎಲ್ಲರ ಮನ ಗೆಲ್ಲುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡಲು ಮುಂದಾಳತ್ವ ವಹಿಸುವಿರಿ. ಉತ್ತಮ ಪ್ರಯತ್ನದಿಂದ ಹೆಚ್ಚಿನ ಹಣವನ್ನು ಗಳಿಸುವಿರಿ. ಸಮಾಜದಲ್ಲಿ ವಿಶೇಷ ಗೌರವ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ವಿವಾದ ಒಂದನ್ನು ಎದುರಿಸುವಿರಿ. ಹಿರಿಯ ಸೋದರ ಅಥವಾ ತಂದೆ ಹಣದ ಸಹಾಯ ಮಾಡುತ್ತಾರೆ. ಲಾಭವಿಲ್ಲದ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ.
ವೃಶ್ಚಿಕ
ಅಪೂರ್ಣಗೊಂಡ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಕುಟುಂಬದ ಹಣದ ವ್ಯವಹಾರಗಳು ಸುಲಭವಾಗಿ ಕೈಗೂಡುತ್ತವೆ. ಬೇರೆಯವರ ಸಲಹೆಯನ್ನುಒಪ್ಪಿಕೊಳ್ಳದೆ ಮುನ್ನಡೆಯುವಿರಿ. ಕೇವಲ ತಂದೆ ತಾಯಿಗಳ ಮಾತನ್ನು ಗೌರವಿಸುವಿರಿ. ನಿಮ್ಮ ಮೇಲೆ ಯಾರೂ ಅಧಿಕಾರ ಚಲಾಯಿಸಲಾರರು. ತಂದೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳನ್ನು ಮನಸ್ಸಿಟ್ಟು ಪೂರೈಸುವಿರಿ. ಈ ಅವಧಿಯಲ್ಲಿಅಪಜಯದ ನೆರಳು ನಿಮ್ಮನ್ನು ಸೋಕದು. ಕೋಪ ಕಡಿಮೆ ಮಾಡಿಕೊಳ್ಳುವುದು ಬಹಳ ಮುಖ್ಯ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಬೇಕು. ಅಧಿಕಾರಿ ವರ್ಗದವರಿಗೆ ಕಾರ್ಮಿಕರ ಸಹಕಾರ ದೊರೆಯುವುದಿಲ್ಲ. ಬಹಳ ದಿನದಿಂದ ಕಾಯುತ್ತಿರುವವರಿಗೆ ಉನ್ನತ ಅಧಿಕಾರ ದೊರೆಯುತ್ತದೆ.
ಧನಸ್ಸು
ಅತಿ ಮುಖ್ಯ ಕೆಲಸ ಕಾರ್ಯಗಳನ್ನು ಮನಸ್ಸಿಟ್ಟು ಸಾಧಿಸುವಿರಿ. ಅರ್ಧಕ್ಕೆ ನಿಂತ ಆಸ್ತಿ ವಿವಾದವನ್ನು ಮುಂದುವರಿಸುವಿರಿ. ಹೆಚ್ಚಿನ ಪ್ರಯತ್ನದಿಂದ ಸ್ವಂತ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ನಿಮ್ಮ ಮಕ್ಕಳು ಜೀವನದಲ್ಲಿ ಉನ್ನತ ಮಟ್ಟ ತಲುಪುತ್ತಾರೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಕಲಿಕೆಯಲ್ಲಿ ಮುಂದುವರೆಯವರು. ಆತ್ಮೀಯರ ಸಹಾಯದಿಂದ ಅಲ್ಪ ಪ್ರಮಾಣದ ಬಂಡವಾಳದ ವ್ಯಾಪಾರವನ್ನು ಆರಂಭಿಸುವಿರಿ. ಗೆಲ್ಲುವವರೆಗೂ ಯಾವುದೇ ಕೆಲಸವನ್ನು ನಿಲ್ಲಿಸುವುದಿಲ್ಲ. ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸದಿರಿ. ಮಾಡಿದ ತಪ್ಪನ್ನು ಮುಚ್ಚಿಡಲು ವಾದ ವಿವಾದದಲ್ಲಿ ತೊಡಗುವಿರಿ. ಒಮ್ಮೆ ಯೋಚಿಸಿ ನೋಡಿದರೆ ಯಾವ ಕೆಲಸವೂ ಕಷ್ಟವಲ್ಲ.
ಮಕರ
ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಮಕ್ಕಳಿಗೆ ಕುಟುಂಬದ ಹಿರಿಯರ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾದ ನಿರ್ಧಾರದಲ್ಲಿ ದೃಢ ನಿಲುವು ಇರದು. ಸಂತಾನ ಲಾಭವಿದೆ. ಕುಟುಂಬಕ್ಕೆ ಸಂಬಂಧಿಸಿದ ಆಸ್ತಿಯ ವಿವಾದದಲ್ಲಿ ಕಾನೂನಾತ್ಮಕ ಗೆಲುವು ದೊರೆಯುತ್ತದೆ. ತಂದೆ ಅಥವಾ ಹಿರಿಯ ಸೋದರಿಯಿಂದ ಹಣದ ಸಹಾಯ ದೊರೆಯಲಿದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯವೊಂದು ವಿಜೃಂಭಣೆಯಿಂದ ನಡೆಯಲಿದೆ. ದುಡುಕುತನದ ಮಾತುಕತೆಯಿಂದ ವಿವಾದಕ್ಕೆ ಸಿಲುಕುವಿರಿ. ಮಾತನ್ನು ಕಡಿಮೆ ಮಾಡಿ ಸಮಯಕ್ಕೆ ತಕ್ಕಂತೆ ವರ್ತಿಸುವ ಅಗತ್ಯತೆ ಇದೆ. ಸೇಡಿನ ಮನೋಭಾವನೆ ತೊರೆದು ಎಲ್ಲರೊಂದಿಗೆ ಸಂತಸದಿಂದ ಬಾಳಿರಿ.
ಕುಂಭ
ಮೌನವಾಗಿ ನಿಮ್ಮ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಚಿಕ್ಕವರಾಗಲಿ ದೊಡ್ಡವರಾಗಲಿ ಮನದಲ್ಲಿರುವ ವಿಚಾರಗಳನ್ನು ಯಾರಿಗೂ ಹೇಳುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಹಣಕಾಸಿನ ವಿವಾದದಲ್ಲಿ ಅನಿರೀಕ್ಷಿತ ಯಶಸ್ಸು ದೊರೆಯಲಿದೆ. ಹಣದ ಕೊರತೆ ಕಾಣದು. ವಂಶಕ್ಕೆ ಸೇರಿದ ಆಸ್ತಿ ಅಥವಾ ಹಣ ಕೈ ಸೇರುತ್ತದೆ. ಕುಟುಂಬದಲ್ಲಿ ಹಿರಿಯರ ಮಾತನ್ನು ಮೀರಲಾರಿರಿ. ಎಲ್ಲರೂ ನಿಮ್ಮ ತೀರ್ಮಾನವನ್ನು ಗೌರವಿಸಬೇಕಾಗುತ್ತದೆ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಇರಲಿದೆ. ನಿಮಗೆ ಅರೆ ತಲೆನೋವು ಕಂಡು ಬರುತ್ತದೆ. ಇರುವ ಮನೆಯನ್ನು ಆಕರ್ಷಕವಾಗಿ ವಿನ್ಯಾಸಗೊಳಿಸುವಿರಿ. ಸಂಘ ಸಂಸ್ಥೆಯ ಜವಾಬ್ದಾರಿ ದೊರೆಯುತ್ತದೆ.
ಮೀನ
ನಿಮ್ಮ ಕರ್ತವ್ಯ ನಿರ್ವಹಣೆಯನ್ನು ಮೆಚ್ಚಿ ಉನ್ನತ ಅಧಿಕಾರಿಗಳಿಂದ ಉಡುಗೊರೆ ದೊರೆಯಲಿದೆ. ದಂಪತಿ ಶುಭ ಸುದ್ದಿ ಕೇಳಲಿದ್ದಾರೆ. ಮಕ್ಕಳಿಗೆ ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ದೊರೆಯುತ್ತದೆ. ಮಹಿಳೆಯರಿಗೆ ಉದ್ಯೋಗ ದೊರೆಯಲಿದೆ. ಕುಟುಂಬದ ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ದೊರೆಯುತ್ತದೆ. ಆಡುವ ಮಾತಿಗೆ ಸಮಾಜದಲ್ಲಿ ವಿಶೇಷವಾದ ಗೌರವ ಲಭಿಸುತ್ತದೆ. ಹಣಕಾಸಿನ ತೊಂದರೆ ನಿವಾರಣೆ ಆಗಲಿದೆ. ರಾಜಕೀಯದಲ್ಲಿ ಉನ್ನತ ಗೌರವ ಲಭ್ಯವಾಗಲಿದೆ. ಯಾತ್ರಾಸ್ಥಳಕ್ಕೆ ದೀರ್ಘಕಾಲದ ಪ್ರವಾಸ ಮಾಡುವಿರಿ. ಆತ್ಮೀಯರ ವಿವಾಹ ಕಾರ್ಯದಲ್ಲಿ ಪಾಲೊಳ್ಳುವಿರಿ. ವಂಶಾದಾರಿತ ವ್ಯಾಪಾರವೊಂದನ್ನು ಆರಂಭಿಸುವಿರಿ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).