ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೇ 14 ರಂದು ವೃಷಭ ರಾಶಿ ಪ್ರವೇಶಿಸಲಿರುವ ಸೂರ್ಯ; ಮೇಷ ಸೇರಿದಂತೆ ಈ ನಾಲ್ಕೂ ರಾಶಿಯವರನ್ನು ಆಶೀರ್ವದಿಸಲಿದ್ದಾನೆ ಭಾಸ್ಕರ

ಮೇ 14 ರಂದು ವೃಷಭ ರಾಶಿ ಪ್ರವೇಶಿಸಲಿರುವ ಸೂರ್ಯ; ಮೇಷ ಸೇರಿದಂತೆ ಈ ನಾಲ್ಕೂ ರಾಶಿಯವರನ್ನು ಆಶೀರ್ವದಿಸಲಿದ್ದಾನೆ ಭಾಸ್ಕರ

Sun Transit: ಮೇ 14 ರಂದು ಸೂರ್ಯನ ವೃಷಭ ರಾಶಿ ಪ್ರವೇಶಿಸಲಿದ್ದಾನೆ. ಇದರಿಂದ ನಾಲ್ಕೂ ರಾಶಿಯವರಿಗೆ ಅದೃಷ್ಟ ಒಲಿದುಬರಲಿದೆ. ಮೇಷ ಸೇರಿದಂತೆ ಸೂರ್ಯ ಸಂಕ್ರಮಣದಿಂದ ಯಾವೆಲ್ಲಾ ರಾಶಿಚಕ್ರದವರು ಆಶೀರ್ವಾದ ಪಡೆಯಲಿದ್ದಾರೆ ನೋಡೋಣ.

ಮೇ 14 ರಂದು ವೃಷಭ ರಾಶಿ ಪ್ರವೇಶಿಸಲಿರುವ ಸೂರ್ಯ
ಮೇ 14 ರಂದು ವೃಷಭ ರಾಶಿ ಪ್ರವೇಶಿಸಲಿರುವ ಸೂರ್ಯ

ವೈದಿಕ ಜ್ಯೋತಿಷ್ಯದ ಪ್ರಕಾರ ಸುಮಾರು 30 ದಿನಗಳ ನಂತರ ಸೂರ್ಯದೇವ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಇರುತ್ತದೆ. ಅದರಲ್ಲೂ ಮೇಷ ರಾಶಿ ಸೇರಿದಂತೆ ಕೆಲವೊಂದು ರಾಶಿಗಳು ಸೂರ್ಯ ಸಂಕ್ರಮಣದಿಂದ ಲಾಭ ಪಡೆಯಲಿವೆ. ಯಾವೆಲ್ಲಾ ರಾಶಿಗಳು ಸೂರ್ಯದೇವನ ಆಶೀರ್ವಾದ ಪಡೆಯುತ್ತಾರೆ ನೋಡೋಣ.

ದೃಕ್‌ ಪಂಚಾಂಗದ ಪ್ರಕಾರ 11 ಮೇ 2024 ರಂದು 07:13 ಬೆಳಗ್ಗೆ ಸೂರ್ಯನು ಕೃತ್ತಿಕಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಇದರ ನಂತರ, ಮೇ 14, 2024 ರಂದು ಸಂಜೆ 06:04 ಕ್ಕೆ ವೃಷಭ ರಾಶಿಯಲ್ಲಿ ಸಾಗಲಿದ್ದಾನೆ. 3 ದಿನದಲ್ಲಿ ಸೂರ್ಯದೇವನ ಸಂಚಾರ ಮತ್ತು ರಾಶಿಯ ಬದಲಾವಣೆಯಿಂದ ಕೆಲವು ರಾಶಿಗಳಿಗೆ ಶುಭ ಫಲ ದೊರೆಯುತ್ತದೆ. ಈ ನಾಲ್ಕೂ ರಾಶಿಯವರಿಗೆ ಸಂಪತ್ತು ಮತ್ತು ಆಸ್ತಿಯಲ್ಲಿ ಹೆಚ್ಚಳದ ಸಾಧ್ಯತೆಗಳಿವೆ. ಅದೃಷ್ಟ ನಿಮ್ಮ ಕಡೆ ಇರುತ್ತದೆ. ಕೆಲ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಯಶಸ್ವಿಯಾಗಲಿವೆ. ಸೂರ್ಯನ ಈ ಚಲನೆಯಿಂದ ಯಾವ ರಾಶಿಚಕ್ರದ ಚಿಹ್ನೆಗಳು ಪರಿಣಾಮ ಬೀರುತ್ತವೆ ನೋಡೋಣ.

ಮೇಷ ರಾಶಿ : ಸೂರ್ಯ ಸಂಕ್ರಮಣದ ಪ್ರಭಾವದಿಂದ ಮೇಷ ರಾಶಿಯವರ ಜೀವನದಲ್ಲಿ ಸಂತೋಷ ಮಾತ್ರ ಇರುತ್ತದೆ. ಹಣದ ಒಳ ಹರಿವು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಸರ್ಕಾರಿ ನೌಕರರರು ವರ್ಗಾವಣೆ ಆಗುವ ಸಾಧ್ಯತೆ ಇದೆ. ಕಾನೂನು ವಿಷಯಗಳಲ್ಲಿ ಜಯ ದೊರೆಯಲಿದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನೀವು ಪೋಷಕರ ಬೆಂಬಲವನ್ನು ಪಡೆಯುತ್ತೀರಿ. ಯಾವುದೇ ಅಡೆತಡೆಯಿಲ್ಲದೆ ಪ್ರತಿಯೊಂದು ಕೆಲಸವೂ ಯಶಸ್ವಿಯಾಗುತ್ತದೆ.

ವೃಷಭ ರಾಶಿ: ಈ ರಾಶಿಯಲ್ಲಿ ಸೂರ್ಯನ ಸಂಚಾರವು ಅನೇಕ ಮಂಗಳಕರ ಸಂಯೋಜನೆಗಳನ್ನು ಸೃಷ್ಟಿಸುತ್ತದೆ. ಅದರ ಪರಿಣಾಮದಿಂದಾಗಿ, ವೃಷಭ ರಾಶಿಯ ಜನರು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಸಮಾಜದಲ್ಲಿ ಮನ್ನಣೆ ಸಿಗಲಿದೆ. ವ್ಯಕ್ತಿತ್ವ ಸುಧಾರಿಸುತ್ತದೆ. ಸೌಕರ್ಯ ಹೆಚ್ಚಳವಾಗುತ್ತದೆ. ಮುಂಬರುವ ಸಮಯವು ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಅಡೆ ತಡೆಗಳನ್ನು ನಿವಾರಿಸಲಿದೆ. ಎಲ್ಲಾ ಕಾರ್ಯಗಳಲ್ಲಿ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಶುಭ ಫಲಿತಾಂಶ ದೊರೆಯುತ್ತದೆ. ಜೀವನದಲ್ಲಿ ನೀವು ಏನು ಬಯಸುತ್ತೀರೋ ಅದು ಲಭ್ಯವಾಗುತ್ತದೆ.

ಸಿಂಹ: ಸೂರ್ಯನ ಸಂಕ್ರಮಣದಿಂದ ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಗಳಿವೆ. ನೀವು ಕಛೇರಿಯಲ್ಲಿ ಹೊಸ ಕೆಲಸಗಳ ಜವಾಬ್ದಾರಿಯನ್ನು ಪಡೆಯಬಹುದು. ಉನ್ನತ ಅಧಿಕಾರಿಗಳಿಂದ ಬೆಂಬಲ ಸಿಗಲಿದೆ. ಇದರಿಂದಾಗಿ ವೃತ್ತಿಜೀವನದ ಪ್ರಗತಿಗೆ ಅನೇಕ ಸುವರ್ಣ ಅವಕಾಶಗಳಿವೆ. ಉದ್ಯೋಗಿಗಳ ಬಡ್ತಿ ಅಥವಾ ಮೌಲ್ಯಮಾಪನದ ಸಾಧ್ಯತೆಗಳು ಹೆಚ್ಚಾಗುತ್ತವೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ.

ಮಕರ ರಾಶಿ: ಈ ರಾಶಿಯವರಿಗೆ ಸೂರ್ಯನ ಸಂಕ್ರಮಣ ಮತ್ತು ರಾಶಿಯ ಬದಲಾವಣೆಯಿಂದ ಬಹಳ ಶುಭ ಫಲಿತಾಂಶಗಳು ಸಿಗುತ್ತವೆ. ಕುಟುಂಬ ಮತ್ತು ಸ್ನೇಹಿತರ ಸಹಾಯದಿಂದ ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ದೊರೆಯುತ್ತದೆ. ವ್ಯಾಪಾರದಲ್ಲಿ ಬೆಳವಣಿಗೆಯ ಸಾಧ್ಯತೆಗಳು ಹೆಚ್ಚಾಗುತ್ತವೆ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅಗಾಧ ಯಶಸ್ಸನ್ನು ಪಡೆಯುತ್ತಾರೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಕೆಲವರಿಗೆ ಬಹುಕಾಲದಿಂದ ಮತ್ತೊಬ್ಬರ ಬಳಿ ಉಳಿದ ಹಣ ವಾಪಸ್‌ ದೊರೆಯಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.