ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Sun Transit: ವೃಷಭದಿಂದ ಮಿಥುನ ರಾಶಿಗೆ ಸೂರ್ಯನ ಸಂಚಾರ; ಸಿಂಹ ಸೇರಿದಂತೆ ಈ 3 ರಾಶಿಯವರು ಬಯಸಿದ್ದೆಲ್ಲವನ್ನೂ ಗಳಿಸಲು ಇದು ಸಕಾಲ

Sun Transit: ವೃಷಭದಿಂದ ಮಿಥುನ ರಾಶಿಗೆ ಸೂರ್ಯನ ಸಂಚಾರ; ಸಿಂಹ ಸೇರಿದಂತೆ ಈ 3 ರಾಶಿಯವರು ಬಯಸಿದ್ದೆಲ್ಲವನ್ನೂ ಗಳಿಸಲು ಇದು ಸಕಾಲ

Sun Transit: ಸೂರ್ಯನು ಸುಮಾರು 1 ವರ್ಷದ ನಂತರ ರಾಶಿ ಬದಲಿಸುತ್ತಿದ್ದಾನೆ. ಇಷ್ಟು ದಿನಗಳ ಕಾಲ ವೃಷಭ ರಾಶಿಯಲ್ಲಿದ್ದ ಸೂರ್ಯ ಜೂನ್‌ 15 ರಂದು ಮಿಥುನ ರಾಶಿಗೆ ಸಂಚರಿಸುತ್ತಿದ್ದಾನೆ. ಈ ಸಮಯದಲ್ಲಿ ಸಿಂಹ ಸೇರಿದಂತೆ ಈ 3 ರಾಶಿಯವರು ಬಯಸಿದ್ದೆಲ್ಲವನ್ನೂ ಗಳಿಸಲು ಇದು ಸಕಾಲ.

ವೃಷಭದಿಂದ ಮಿಥುನ ರಾಶಿಗೆ ಸೂರ್ಯನ ಸಂಚಾರ; ಸಿಂಹ ಸೇರಿದಂತೆ ಈ 3 ರಾಶಿಯವರು ಬಯಸಿದ್ದೆಲ್ಲವನ್ನೂ ಗಳಿಸಲು ಇದು ಸಕಾಲ
ವೃಷಭದಿಂದ ಮಿಥುನ ರಾಶಿಗೆ ಸೂರ್ಯನ ಸಂಚಾರ; ಸಿಂಹ ಸೇರಿದಂತೆ ಈ 3 ರಾಶಿಯವರು ಬಯಸಿದ್ದೆಲ್ಲವನ್ನೂ ಗಳಿಸಲು ಇದು ಸಕಾಲ

ಸೂರ್ಯ ಸಂಚಾರ: ನವಗ್ರಹಗಳಲ್ಲಿ ಸೂರ್ಯ ಅತ್ಯಂತ ಶಕ್ತಿಶಾಲಿ ಗ್ರಹ. ಅದಕ್ಕಾಗಿಯೇ ಅವನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಪ್ರತಿ ತಿಂಗಳು ಸೂರ್ಯನ ಸಂಕ್ರಮಣ ಇರುತ್ತದೆ. ಸೂರ್ಯನು ಎಲ್ಲಾ 12 ರಾಶಿಗಳ ಸುತ್ತ ಒಂದು ವರ್ಷ ತೆಗೆದುಕೊಳ್ಳುತ್ತಾನೆ.

ಸದ್ಯಕ್ಕೆ ಸೂರ್ಯನು ವೃಷಭ ರಾಶಿಯಲ್ಲಿದ್ದು ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಕೆಲವೇ ದಿನಗಳಲ್ಲಿ ಬುಧನು ವೃಷಭದಿಂದ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಒಂದು ವರ್ಷದ ನಂತರ, ಸೂರ್ಯ ಮಿಥುನ ರಾಶಿಯಲ್ಲಿ ಚಲಿಸಲಿದ್ದಾನೆ. ಸೂರ್ಯನು ಪವಿತ್ರ ಸ್ಥಾನದಲ್ಲಿದ್ದರೆ, ಅದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಜೂನ್ 15 ರಂದು ಮಿಥುನ ರಾಶಿಗೆ ಸೂರ್ಯ ಪ್ರವೇಶಿಸುತ್ತಿದ್ದು ಇದು ಕೆಲವು ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ.

ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರವು ವ್ಯಕ್ತಿಯ ಸಂವಹನ ಕೌಶಲ್ಯವನ್ನು ಸುಧಾರಿಸುತ್ತದೆ. ಇತರರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಲು ಇದು ಉತ್ತಮ ಸಮಯವಾಗಿದೆ. ಮಿಥುನ ರಾಶಿಯನ್ನು ಬುಧನು ಆಳುತ್ತಾನೆ. ಬುಧವನ್ನು ಸಂವಹನದ ಅಧಿಕಾರಿ ಎಂದು ಪರಿಗಣಿಸಲಾಗುತ್ತದೆ. ಸೂರ್ಯ ಸಂಕ್ರಮಣದ ಸಮಯದಲ್ಲಿ ಹೊಸ ವಿಷಯಗಳನ್ನು ಮತ್ತು ಕೌಶಲ್ಯಗಳನ್ನು ಕಲಿಯಲು ಉತ್ತಮ ಸಮಯವಾಗಿದೆ. ನಿಮ್ಮ ಧೈರ್ಯ ದ್ವಿಗುಣಗೊಳ್ಳುತ್ತದೆ. ಶಕ್ತಿಯ ದಕ್ಷತೆ ಹೆಚ್ಚಾಗುತ್ತದೆ. ಆಧ್ಯಾತ್ಮದಲ್ಲಿ ಕೂಡಾ ನೀವು ಆಸಕ್ತಿ ಹೊಂದಲಿದ್ದೀರಿ.

ಮಿಥುನ ರಾಶಿ

ಗ್ರಹಗಳ ರಾಜನಾದ ಸೂರ್ಯನು ಮಿಥುನ ರಾಶಿಯನ್ನು ಪ್ರವೇಶಿಸುವ ಪರಿಣಾಮ ಈ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ಒಪ್ಪಂದಗಳಿಗೆ ಸಹಿ ಹಾಕಲಿದ್ದೀರಿ. ನೀವು ಮಾಡುವ ವ್ಯವಹಾರಗಳು ದೊಡ್ಡ ಆರ್ಥಿಕ ಲಾಭವನ್ನು ನೀಡುತ್ತದೆ. ಸಂಗಾತಿಯೊಂದಿಗೆ ಉಂಟಾಗಿದ್ದ ಮನಸ್ತಾಪ ಕ್ರಮೇಣ ದೂರಾಗುತ್ತದೆ. ಸೂರ್ಯನ ಶುಭ ಪ್ರಭಾವದಿಂದ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಜೀವನದಲ್ಲಿ ಮಹತ್ತರ ಬದಲಾವಣೆಗಳಾಗಲಿವೆ. ಇದು ಸಮೃದ್ಧಿ ಮತ್ತು ಯಶಸ್ಸಿಗೆ ಕಾರಣವಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯ ಅಧಿಪತಿ ಸೂರ್ಯ. ಆದ್ದರಿಂದ ಸಿಂಹ ರಾಶಿಯವರಿಗೆ ಸೂರ್ಯನ ಸಂಚಾರವು ಅತ್ಯಂತ ಶುಭ ಲಾಭಗಳನ್ನು ತರುತ್ತದೆ. ಇದುವರೆಗೂ ನೀವು ಅರ್ಧಕ್ಕೆ ನಿಲ್ಲಿಸಿದ್ದ ಕೆಲಸ ಕಾರ್ಯಗಳು ಮತ್ತೆ ಮುಂದುವರೆಯಲಿದೆ. ಕೆಲಸದ ಸ್ಥಳದಲ್ಲಿ ನೀವು ಪ್ರಮೋಷನ್‌ ಪಡೆಯುವ ಸಾಧ್ಯತೆ ಇದೆ. ಉದ್ಯೋಗ ಸಂಬಂಧಿ ವಿದೇಶ ಪ್ರಯಾಣ ಸಾಧ್ಯತೆ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ಈ ರಾಶಿಯ ಜನರು ತಾವು ಇಷ್ಟಪಟ್ಟ ಎಲ್ಲವನ್ನೂ ಪಡೆಯುತ್ತಾರೆ. ಕುಟುಂಬ ಯಾವಾಗಲೂ ಸುಖ, ಶಾಂತಿ ನೆಲೆಸಿರುತ್ತದೆ. ಹೊಸ ಉದ್ಯೋಗ ಹುಡುಕುತ್ತಿದ್ದರೆ, ಕೆಲಸ ಬದಲಿಸಲು ಇದು ಸಕಾಲ.

ಕನ್ಯಾ ರಾಶಿ

ಒಂದು ವರ್ಷದ ನಂತರ, ಮಿಥುನ ರಾಶಿಗೆ ಪ್ರವೇಶಿಸುವ ಸೂರ್ಯನು ಕನ್ಯಾ ರಾಶಿಯವರಿಗೆ ಬಹಳಷ್ಟು ಒಳ್ಳೆಯದನ್ನು ಮಾಡಲಿದ್ದಾನೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವೆಚ್ಚಗಳು ಹೆಚ್ಚಾಗುತ್ತದೆ, ಖರ್ಚುಗಳನ್ನು ನಿಯಂತ್ರಿಸಬೇಕು. ದುಂದು ವೆಚ್ಚವನ್ನು ಆದಷ್ಟು ನಿಯಂತ್ರಣದಲ್ಲಿಡಬೇಕು. ಈ ಸಮಯದಲ್ಲಿ ಹೊಸ ಕೆಲಸಗಳನ್ನು ಪ್ರಾರಂಭಿಸುವುದು ಶುಭ ಫಲಗಳನ್ನು ನೀಡುತ್ತದೆ. ದಾಂಪತ್ಯ ಜೀವನ ಸುಂದರವಾಗಿರುತ್ತದೆ. ಜೀವನದಲ್ಲಿ ಪ್ರಗತಿ ಹೊಂದಲಿದ್ದೀರಿ. ಹೊಸ ವ್ಯಾಪಾರ ವ್ಯವಹಾರಗಳನ್ನು ಮಾಡಲು ಇದು ಉತ್ತಮ ಸಮಯ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)