ಬ್ರಹ್ಮ ಮುಹೂರ್ತದಲ್ಲಿ ನಿಮಗೆ ಪದೇ ಪದೆ ಈ ರೀತಿ ಕನಸು ಬರ್ತಿದ್ಯಾ? ಆ ಕನಸುಗಳ ಅರ್ಥ ಹೀಗಿದೆ ನೋಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬ್ರಹ್ಮ ಮುಹೂರ್ತದಲ್ಲಿ ನಿಮಗೆ ಪದೇ ಪದೆ ಈ ರೀತಿ ಕನಸು ಬರ್ತಿದ್ಯಾ? ಆ ಕನಸುಗಳ ಅರ್ಥ ಹೀಗಿದೆ ನೋಡಿ

ಬ್ರಹ್ಮ ಮುಹೂರ್ತದಲ್ಲಿ ನಿಮಗೆ ಪದೇ ಪದೆ ಈ ರೀತಿ ಕನಸು ಬರ್ತಿದ್ಯಾ? ಆ ಕನಸುಗಳ ಅರ್ಥ ಹೀಗಿದೆ ನೋಡಿ

ಬೆಳಗಿನ ಜಾವ ಕಾಣುವ ಕನಸು ನನಸಾಗುತ್ತದೆ ಎಂಬ ಮಾತಿದೆ. ಅದರಲ್ಲೂ ಬ್ರಹ್ಮ ಮುಹೂರ್ತ ಸಮಯದಲ್ಲಿ ಬರುವ ಕನಸುಗಳು ನಿಜವಾಗುತ್ತದೆ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ. ಯಾವ ಕನಸು ಬಂದರೆ ಏನು ಅರ್ಥ ಎಂಬುದರ ಕುರಿತು ಇಲ್ಲಿ ವಿವರವಿದೆ.

ಬ್ರಹ್ಮ ಮುಹೂರ್ತದಲ್ಲಿ ನಿಮಗೆ ಪದೇ ಪದೆ ಈ ರೀತಿ ಕನಸು ಬರ್ತಿದ್ಯಾ? ಆ ಕನಸುಗಳ ಅರ್ಥ ಹೀಗಿದೆ ನೋಡಿ
ಬ್ರಹ್ಮ ಮುಹೂರ್ತದಲ್ಲಿ ನಿಮಗೆ ಪದೇ ಪದೆ ಈ ರೀತಿ ಕನಸು ಬರ್ತಿದ್ಯಾ? ಆ ಕನಸುಗಳ ಅರ್ಥ ಹೀಗಿದೆ ನೋಡಿ (PC: Pixabay)

ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಪ್ರತಿದಿನ ಬೆಳಗ್ಗೆ ಬ್ರಹ್ಮ ಮುಹೂರ್ತದ ಸಮಯದಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಪೂಜೆ ಪುನಸ್ಕಾರ ಕೈಗೊಳ್ಳುವುದು ಬಹಳ ಶುಭ ಎಂದು ಪರಿಗಣಿಸಲಾಗಿದೆ. ನಿತ್ಯವೂ ಬ್ರಹ್ಮ ಮುಹೂರ್ತದಲ್ಲಿ ಏಳುವ ವ್ಯಕ್ತಿಯ ಜೀವನದಲ್ಲಿ ಎದುರಾಗುವ ಹಲವು ಸಮಸ್ಯೆಗಳು ದೂರವಾಗುತ್ತವೆ. ಮಾನಸಿಕವಾಗಿಯೂ ಸದೃಢರಾಗುತ್ತಾರೆ.

ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಂಡು ಧ್ಯಾನ ಮಾಡಿದರೆ ಅಥವಾ ವಿದ್ಯಾಭ್ಯಾಸ ಮಾಡಿದರೆ ಮಾಡಿದರೆ ಅದು ಬಹಳ ಪ್ರಯೋಜನಕಾರಿಯಾಗಿದೆ. ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಆದರೆ ಕೆಲವರಿಗೆ ಬ್ರಹ್ಮ ಮುಹೂರ್ತದಲ್ಲಿ ಕನಸು ಬರುತ್ತದೆ. ಮುಂಜಾನೆ ಕಾಣುವ ಕನಸುಗಳು ನನಸಾಗುತ್ತವೆ ಎಂದು ಹಲವರು ಹೇಳುತ್ತಾರೆ. ಸ್ವಪ್ನಶಾಸ್ತ್ರದ ಪ್ರಕಾರ ಬ್ರಹ್ಮ ಮುಹೂರ್ತದ ಸಮಯದಲ್ಲಿ ಬರುವ ಕೆಲವು ಕನಸುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಿಜ್ಞಾನದ ಪ್ರಕಾರ ಮುಂಜಾನೆ 3 ರಿಂದ 5 ಗಂಟೆಯೊಳಗೆ ಕಂಡ ಕನಸುಗಳು ನನಸಾಗುತ್ತವೆ. ಬ್ರಹ್ಮ ಮುಹೂರ್ತದಲ್ಲಿ ಬರುವ ಕನಸುಗಳು ನಿಮ್ಮ ಭವಿಷ್ಯವನ್ನೂ ಬದಲಾಯಿಸಬಹುದು ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಆ ಕನಸುಗಳು ಯಾವುವು? ಅವುಗಳ ಅರ್ಥವೇನು ತಿಳಿದುಕೊಳ್ಳೋಣ.

ನದಿಯಲ್ಲಿ ಸ್ನಾನ ಮಾಡಿದಂತೆ ಕನಸು

ಸ್ವಪ್ನ ಶಾಸ್ತ್ರದ ಪ್ರಕಾರ, ಬ್ರಹ್ಮ ಮುಹೂರ್ತದ ಸಮಯದಲ್ಲಿ ನೀವು ನದಿಯಲ್ಲಿ ಅಥವಾ ಬೇರೆಯವರು ಸ್ನಾನ ಮಾಡುವುದನ್ನು ನೀವು ನೋಡಿದರೆ ಅದು ಶುಭ ಸಂಕೇತವಾಗಿದೆ. ಇದರರ್ಥ ನೀವು ಇಷ್ಟು ಇದುವರೆಗೂ ಏನಾದರೂ ನಷ್ಟ ಅನುಭವಿಸಿದ್ದರೆ ಅದರಿಂದ ಚೇತರಿಸಿಕೊಳ್ಳುತ್ತೀರಿ ಎಂದು ಅರ್ಥ. ಅಥವಾ ಮತ್ತೊಬ್ಬರಿಗೆ ನೀಡಿದ ಸಾಲದ ಹಣವನ್ನು ಮರಳಿ ಪಡೆಯುತ್ತೀರಿ. ನಿಮ್ಮ ಹಿಂದಿನ ಹೂಡಿಕೆಗಳಿಂದ ಆದಾಯವನ್ನು ಪಡೆಯುವ ಅವಕಾಶವೂ ಇದೆ ಎಂಬ ಅರ್ಥ ನೀಡುತ್ತದೆ.

ಧಾನ್ಯಗಳ ರಾಶಿಯನ್ನು ನೋಡಿದರೆ

ಬ್ರಹ್ಮ ಮುಹೂರ್ತದ ಸಮಯದಲ್ಲಿ ನೀವು ಧಾನ್ಯಗಳ ರಾಶಿಯ ಕನಸು ಕಂಡರೆ ಅಥವಾ ನೀವು ಅದನ್ನು ಏರುತ್ತಿದ್ದೀರಿ ಎಂದು ಕನಸು ಕಂಡರೆ ಆದೂ ಕೂಡಾ, ಶುಭ ಸಂಕೇತವಾಗಿದೆ. ಭವಿಷ್ಯದಲ್ಲಿ ನೀವು ದೊಡ್ಡ ಲಾಭವನ್ನು ಪಡೆಯುತ್ತೀರಿ ಎಂಬುದರ ಸಂಕೇತವಾಗಿದೆ.

ನಗುತ್ತಿರುವ ಮಗು ಕಂಡರೆ

ಕನಸಿನ ವಿಜ್ಞಾನದ ಪ್ರಕಾರ, ನಿಮ್ಮ ಕನಸಿನಲ್ಲಿ ನಗುತ್ತಿರುವ ಮಗು ಅಥವಾ ಮಕ್ಕಳು ಖುಷಿಯಿಂದ ಆಟವಾಡುತ್ತಿರುವುದುನ್ನು ನೋಡಿದರೆ ಶೀಘ್ರದಲ್ಲೇ ನಿಮ್ಮ ಸುವರ್ಣಯುಗ ಪ್ರಾರಂಭವಾಗಲಿದೆ ಎಂದರ್ಥ. ಇದರರ್ಥ ನೀವು ಶೀಘ್ರದಲ್ಲೇ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವಿರಿ ಎಂಬ ಅರ್ಥವನ್ನು ನೀಡುತ್ತದೆ.

ಹಲ್ಲುಗಳು ಮುರಿದಂತೆ ಕನಸು ಕಂಡರೆ

ಬ್ರಹ್ಮ ಮುಹೂರ್ತದ ಸಮಯದಲ್ಲಿ ನೀವು ಹಲ್ಲುಗಳು ಮುರಿದಂತೆ ಕನಸು ಕಂಡರೆ, ಉದ್ಯೋಗ ಅಥವಾ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವ ಸಂಕೇತವಾಗಿದೆ. ಕನಸಿನ ವಿಜ್ಞಾನದ ಪ್ರಕಾರ, ಕನಸಿನಲ್ಲಿ ಮುರಿದ ಹಲ್ಲು ನೋಡುವುದು ಬಹಳ ಮಂಗಳಕರ ಸಂಕೇತವಾಗಿದೆ.

ನೀರಿನ ಮಡಕೆ ಕಾಣಿಸಿಕೊಂಡರೆ

ಕನಸಿನಲ್ಲಿ ನೀರಿನ ಮಡಕೆಯನ್ನು ನೋಡುವುದು ಸಹ ಒಳ್ಳೆಯ ಸಂಕೇತವಾಗಿದೆ. ಕನಸಿನ ವಿಜ್ಞಾನದ ಪ್ರಕಾರ, ನೀವು ಭವಿಷ್ಯದಲ್ಲಿ ದೊಡ್ಡ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ವಿವಿಧ ಮೂಲಗಳಿಂದ ನೀವು ಆದಾಯ ಗಳಿಸಲಿದ್ದೀರಿ.

ನೀವು ಕೆಲಸದ ಇಂಟರ್‌ವ್ಯೂಗೆ ಹೋಗುತ್ತಿದ್ದರೆ

ಬ್ರಹ್ಮ ಮುಹೂರ್ತದ ಸಮಯದಲ್ಲಿ ನೀವು ಕೆಲಸದ ಇಂಟರ್‌ವ್ಯೂಗೆ ಹೋಗುತ್ತಿರುವಂತೆ ಕನಸು ಕಾಣಿಸಿಕೊಳ್ಳುವುದು ಉತ್ತಮ ಸಂಕೇತವೆಂದು ಪರಿಗಣಿಸಲಾಗಿದೆ. ನೀವು ಬಹಳಷ್ಟು ಹಣ ಗಳಿಸಲಿದ್ದೀರಿ ಎಂದರ್ಥ. ಇದು ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳುವ ಸಂಕೇತವಾಗಿದೆ.

ಸತ್ತವರು ಕಂಡರೆ

ಇದು ಅನೇಕ ಜನರ ಆಗಾಗ್ಗೆ ಕಾಣುವ ಕನಸು. ನಿಧನರಾದ ಹಿರಿಯರನ್ನು ಕನಸಿನಲ್ಲಿ ನೋಡುವುದು ತುಂಬಾ ಮಂಗಳಕರ ಮತ್ತು ಅದೃಷ್ಟವನ್ನು ತರುತ್ತದೆ. ನೀವು ಇನ್ಮುಂದೆ ಲಕ್ಷ್ಮೀ ಆಶೀರ್ವಾದ ಪಡೆಯಲಿದ್ದೀರಿ, ನೀವು ಶ್ರೀಮಂತರಾಗಲಿದ್ದೀರಿ ಎಂದು ಅರ್ಥ ಮಾಡಿಕೊಳ್ಳಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.