ಸ್ವಪ್ನಶಾಸ್ತ್ರ: ನೀವೇ ಮದುವೆಯಾದಂತೆ ಪದೇಪದೆ ಕನಸು ಬೀಳ್ತಿದ್ಯಾ? ಅದಕ್ಕೊಂದು ಅರ್ಥವಿದೆ; ಇದು ಶುಭವೋ, ಸಮಸ್ಯೆಯ ಮುನ್ಸೂಚನೆಯೋ?ಇಲ್ಲಿದೆ ವಿವರ
Swapna Shasthra: ಪ್ರತಿಯೊಬ್ಬರಿಗೂ ನಿದ್ರೆಯಲ್ಲಿ ಕನಸು ಬರುವುದು ಸಹಜ. ಆದರೆ ಕೆಲವರಿಗೆ ಮದುವೆ ಆಗುತ್ತಿರುವಂತೆ ಆಗ್ಗಾಗ್ಗೆ ಕನಸು ಬೀಳುತ್ತದೆ. ಸ್ವಪ್ನಶಾಸ್ತ್ರ: ನೀವೇ ಮದುವೆಯಾದಂತೆ ಪದೇಪದೆ ಕನಸು ಬೀಳ್ತಿದ್ಯಾ? ಅದಕ್ಕೊಂದು ಅರ್ಥವಿದೆ; ಇದು ಶುಭವೋ, ಸಮಸ್ಯೆಯ ಮುನ್ಸೂಚನೆಯೋ?ಇಲ್ಲಿದೆ ವಿವರ
ಮದುವೆಯು ಪ್ರತಿಯೊಬ್ಬರ ಜೀವನದಲ್ಲೂ ಬಹಳ ಪ್ರಮುಖ ಘಟ್ಟ. ತನ್ನ ಕೈ ಹಿಡಿಯುವ ಸಂಗಾತಿಯ ಬಗ್ಗೆ ಎಲ್ಲರೂ ನೂರಾರು ಕನಸು ಕಂಡಿರುತ್ತಾರೆ. ನಾನು ಮದುವೆ ಆಗುವ ಹುಡುಗ ಶ್ರೀಮಂತನಾಗಿರಬೇಕು ಎಂದು ಕೆಲವು ಯುವತಿಯರು ಕನಸು ಕಂಡರೆ ಕೆಲವರು ಆತ ಶ್ರೀಮಂತನಲ್ಲದಿದ್ದರೂ ಹೃದಯ ಶ್ರೀಮಂತಿಕೆ ಇದ್ದರೆ ಸಾಕು, ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂಬ ಆಸೆ ಹೊಂದಿರುತ್ತಾರೆ.
ಅದೇ ರೀತಿ ಹುಡುಗರು ಕೂಡಾ ತಮ್ಮ ಮನೆ ಮನಸ್ಸಿಗೆ ಬರುವ ಹುಡುಗಿ ಮನೆಯವರಿಗೆ ಹೊಂದಿಕೊಂಡು ನಗು ನಗುತ್ತಾ ಬಾಳಬೇಕು ಎಂದು ಕನಸು ಕಂಡರೆ, ಇನ್ನೂ ಕೆಲವರು ಹುಡುಗಿ ನೋಡಲು ಸುಂದರಿಯಾಗಿರಬೇಕು ಎಂದುಕೊಳ್ಳುತ್ತಾರೆ. ಹೀಗೆ ಒಬ್ಬೊಬ್ಬರೂ ತಮ್ಮ ಮದುವೆ ಬಗ್ಗೆ ಕನಸು ಕಾಣುತ್ತಾರೆ. ಆದರೆ ನಿದ್ರಿಸುವಾಗ ನೀವು ಮದುವೆ ಆಗುತ್ತಿರುವುದಾಗಿ ಕನಸು ಕಂಡರೆ ಆ ಕನಸಿಗೆ ಅನೇಕ ಅರ್ಥವಿದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಕನಸಿನಲ್ಲಿ ಅರಿಶಿನ ಶಾಸ್ತ್ರ, ತಾಳಿ ಕಟ್ಟುವುದು, ಎರಡನೇ ಮದುವೆ ಆಗುತ್ತಿರುವುದು, ಪತಿಯೊಂದಿಗೆ ಜಗಳ ಮಾಡುವುದು ಹೀಗೆ ಒಬ್ಬೊಬ್ಬರಿಗೆ ಒಂದೊಂದು ಕನಸು ಬರುತ್ತಲೇ ಇರುತ್ತದೆ. ಸ್ವಪ್ನಶಾಸ್ತ್ರದ ಪ್ರಕಾರ ಈ ಕನಸುಗಳ ಅರ್ಥವೇನು ನೋಡೋಣ.
ಇದನ್ನೂ ಓದಿ: ಕನಸಿನಲ್ಲಿ ಮಿಂಚುವುದನ್ನು ನೋಡಿದರೆ ಏನು ಅರ್ಥ
ಮದುವೆ ಕನಸಿನ ಬಗ್ಗೆ ಸ್ವಪ್ನ ಶಾಸ್ತ್ರ ಹೀಗೆ ಹೇಳುತ್ತದೆ
- ನೀವು ಯಾರದ್ದೋ ಮದುವೆಯಲ್ಲಿ ಅಲಂಕೃತಗೊಂಡು, ಸಂತೋಷದಿಂದ ಇದ್ದರೆ ಅದು ಶುಭ ಸೂಚಕ. ಮುಂದೆ ನಿಮ್ಮ ಬದುಕಿನಲ್ಲಿ ಏನೋ ಶುಭ ಕಾದಿದೆ ಎಂದು ಅರ್ಥ. ಒಂದು ವೇಳೆ ನೀವು ಬಹಳ ಸರಳ ಉಡುಗೆ ತೊಟ್ಟು, ನೋವಿನಿಂದ ಇರುವುದಾಗಿ ಕನಸು ಕಂಡರೆ ಅದು ಅಶುಭ ಎನ್ನುತ್ತದೆ ಸ್ವಪ್ನಶಾಸ್ತ್ರ.
- ನೀವೇ ಮದುವೆ ಆಗುತ್ತಿರುವುದಾಗಿ ಕನಸು ಬಂದರೆ ಅದು ಶುಭ ಸೂಚಕವಲ್ಲ,ಮುಂದಿನ ದಿನಗಳಲ್ಲಿ ನೀವು ಬಹಳ ಜಾಗರೂಕರಾಗಿರಬೇಕು ಎಂದು ಅರ್ಥ. ಹಾಗೇ ನಿಮ್ಮ ಆಪ್ತರು, ಸ್ನೇಹಿತರ ಮದುವೆಯನ್ನು ನೋಡುವುದು ಕೂಡಾ ಶುಭವಲ್ಲ.
- ನೀವು ಎರಡನೇ ಮದುವೆ ಆಗುತ್ತಿರುವುದಾಗಿ ಕನಸು ಕಂಡರೆ ಅದು ನಿಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲಿದೆ ಎಂಬ ಮುನ್ಸೂಚನೆ ನೀಡುವ ಕನಸು. ಆದ್ದರಿಂದ ನೀವು ಪ್ರತಿ ಹೆಜ್ಜೆಯಲ್ಲೂ ಬಹಳ ಜಾಗರೂಕರಾಗಿಬೇಕು.
- ನಿಮ್ಮ ಕನಸಿನಲ್ಲಿ ನೀವು , ಅಲಂಕೃತಗೊಂಡಿರುವ ಯುವತಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಏನೋ ಶುಭ ಜರುಗುವುದು, ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ ಎಂದು ಅರ್ಥ.
ಇದನ್ನೂ ಓದಿ: ಪದೇ ಪದೆ ಹಾವಿಗೆ ಸಂಬಂಧಿಸಿದ ಕನಸು ಕಾಣುತ್ತಿದ್ದೀರಾ? ಅದಕ್ಕೆ ಸ್ವಪ್ನ ಶಾಸ್ತ್ರ ಹೇಳುವುದೇನು? ಮಾಹಿತಿ ಇಲ್ಲಿದೆ
- ನಿಮಗೆ ಮದುವೆ ಆಗುವ ಇಚ್ಛೆ ಇಲ್ಲದಿದ್ದರೂ ನೀವು ಮದುವೆ ಆಗುತ್ತಿರುವುದಾಗಿ ಕನಸು ಕಂಡರೆ ನೀವು ಯಾರಿಗೂ ಯಾವುದೋ ವಿಚಾರವಾಗಿ ಒಪ್ಪಿಸಲು ಬಹಳ ಪ್ರಯತ್ನ ಮಾಡುತ್ತಿದ್ದೀರಿ ಎಂದು ಅರ್ಥ ನೀಡುತ್ತದೆ.
- ನೀವು ಮದುವೆಯಲ್ಲಿ ಅರಿಶಿನ ಹಚ್ಚಿಕೊಳ್ಳುವಂತೆ ಕನಸು ಕಂಡರೆ ಅದು ಶುಭ ಸೂಚಕ, ನಿಮ್ಮ ಜೀವನದಲ್ಲಿ ಏನೋ ಒಂದು ಹೊಸ ಅಧ್ಯಾಯ ಆರಂಭವಾಗುತ್ತಿದೆ ಎಂದು ಅರ್ಥ.
- ಯಾರದ್ದೋ ಮದುವೆಗೆ ಹಣ ಉಳಿಸುತ್ತಿರುವುದಾಗಿ ಪದೇ ಪದೆ ಕನಸು ಕಂಡರೆ ಅದೂ ಕೂಡಾ ಶೀಘ್ರದಲ್ಲೇ ಮನೆಯಲ್ಲಿ ಮಂಗಳ ಕಾರ್ಯ ನೆರವೇರಲಿದೆ ಎಂಬ ಅರ್ಥವನ್ನು ಸೂಚಿಸುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಇದನ್ನೂ ಓದಿ: ಕನಸಿನಲ್ಲಿ ಈ 5 ಗಿಡಗಳನ್ನು ಕಂಡರೆ ಬಹಳ ಶುಭ