Swapna Shastra: ನಿಮಗೆ ಪದೇ ಪದೆ ಈ 4 ಕನಸುಗಳು ಬೀಳುತ್ತಿವೆಯಾ; ಸದ್ಯದಲ್ಲೇ ದೊಡ್ಡ ಯಶಸ್ಸು ಪಡೆಯುತ್ತೀರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Swapna Shastra: ನಿಮಗೆ ಪದೇ ಪದೆ ಈ 4 ಕನಸುಗಳು ಬೀಳುತ್ತಿವೆಯಾ; ಸದ್ಯದಲ್ಲೇ ದೊಡ್ಡ ಯಶಸ್ಸು ಪಡೆಯುತ್ತೀರಿ

Swapna Shastra: ನಿಮಗೆ ಪದೇ ಪದೆ ಈ 4 ಕನಸುಗಳು ಬೀಳುತ್ತಿವೆಯಾ; ಸದ್ಯದಲ್ಲೇ ದೊಡ್ಡ ಯಶಸ್ಸು ಪಡೆಯುತ್ತೀರಿ

Swapna Shastra: ಕನಸುಗಳಿಂದ ನಾವು ಭವಿಷ್ಯದಲ್ಲಿ ಯಾವ ಬದಲಾವಣೆಗಳು ಸಂಭವಿಸಲಿವೆ ಎಂಬುದನ್ನು ಸಹ ನಾವು ಅರ್ಥಮಾಡಿಕೊಳ್ಳಬಹುದು. ಅಂತಹ ಕನಸುಗಳು ಬಂದರೆ ಮತ್ತು ಅವುಗಳ ಅರ್ಥವನ್ನು ತಿಳಿಯೋಣ.

Swapna Shastra: ಈ 4 ಕನಸುಗಳು ಪದೇ ಪದೆ ಬಂದರೆ ಏನು ಅರ್ಥ ಎಂಬುದನ್ನು ಇಲ್ಲಿ ವಿವರಿಸಲಾಗಿದೆ
Swapna Shastra: ಈ 4 ಕನಸುಗಳು ಪದೇ ಪದೆ ಬಂದರೆ ಏನು ಅರ್ಥ ಎಂಬುದನ್ನು ಇಲ್ಲಿ ವಿವರಿಸಲಾಗಿದೆ

ಪ್ರತಿದಿನ ಸಾಕಷ್ಟು ಕನಸು ಕಾಣುತ್ತೇವೆ. ಕೆಲವು ಕನಸುಗಳನ್ನು ನೆನಪಿನಲ್ಲಿ ಉಳಿಯುತ್ತವೆ ಮತ್ತು ಕೆಲವು ಕನಸುಗಳನ್ನು ಮರೆತುಬಿಡುತ್ತೇವೆ. ಆದರೆ ಸ್ವಪ್ನಶಾಸ್ತ್ರದ ಪ್ರಕಾರ, ಕನಸುಗಳ ಹಿಂದೆ ಅರ್ಥಗಳಿವೆ. ನಿದ್ದೆಯಲ್ಲಿದ್ದಾಗ ನಮಗೆ ಬೀಳುವ ಕನಸಿನ ಹಿಂದಿನ ಅರ್ಥವನ್ನು ಅರ್ಥಮಾಡಿಕೊಳ್ಳಬಹುದು. ಈ 4 ಕನಸುಗಳು ಪದೇ ಪದೆ ಬರುತ್ತಿದ್ದರೆ ನೀವು ಶೀಘ್ರದಲ್ಲೇ ಯಶಸ್ಸನ್ನು ಸಾಧಿಸುತ್ತೀರಿ. ಕನಸುಗಳು ಜೀವನದ ಕೆಲವೊಂದು ಸುಳಿವುಗಳನ್ನು ನೀಡುತ್ತವೆ. ಕನಸುಗಳು ನಿಜ ಜೀವನದೊಂದಿಗೆ ಸಂಬಂಧ ಹೊಂದಿವೆ. ಕೆಲವೊಮ್ಮೆ ಭಯಾನಕ ಕನಸುಗಳು ಇರುತ್ತವೆ. ಆದರೆ ಬಂದ ಕನಸುಗಳ ಆಧಾರದ ಮೇಲೆ ನಾವು ಬಹಳಷ್ಟು ವಿಷಯಗಳನ್ನು ಹೇಳಬಹುದು. ಭವಿಷ್ಯದಲ್ಲಿ ಯಾವ ಬದಲಾವಣೆಗಳು ಸಂಭವಿಸಲಿವೆ ಎಂದು ಅಂದಾಜಿಸಬಹುದು. ಅಂತಹ ಕನಸುಗಳು ಬಂದರೆ ಯಶಸ್ಸಿನ ಸಂಕೇತವಾಗಿರುತ್ತವೆ. ನೀವು ಏನು ಮಾಡಲು ಬಯಸುತ್ತೀರಿ, ಸಾಧಿಸುತ್ತೀರಿ ಎಂದು ಈ ಕನಸುಗಳು ನಿಮಗೆ ಹೇಳುತ್ತವೆ.

ನೀವು ಈ ಕನಸು ಕಂಡರೆ, ಯಶಸ್ಸು ನಿಮ್ಮದಾಗುತ್ತದೆ

  1. ಸ್ವಪ್ನಶಾಸ್ತ್ರದ ಪ್ರಕಾರ, ಮಹಿಳೆ ಕನಸಿನಲ್ಲಿ ನಾಣ್ಯಗಳನ್ನು ಹಿಡಿದಿರುವುದು ಕಂಡುಬಂದರೆ, ಅದು ತುಂಬಾ ಒಳ್ಳೆಯ ಸಂಕೇತವಾಗಿದೆ. ಈ ಕನಸು, ನೀವು ಶೀಘ್ರದಲ್ಲೇ ಯಶಸ್ಸನ್ನು ಪಡೆಯುತ್ತೀರಿ ಎಂದು ಹೇಳುತ್ತದೆ. ಇಂತಹ ಕನಸನ್ನು ಹೊಂದಿದ್ದರೆ, ಲಕ್ಷ್ಮಿ ದೇವಿಗೆ ಕೆಂಪು ಹೂವುಗಳನ್ನು ಅರ್ಪಿಸಿ. ಹಾಗೆ ಮಾಡುವುದರಿಂದ, ಹಣದ ಹರಿವು ಇರುತ್ತದೆ.
  2. ವಯಸ್ಸಾದ ವ್ಯಕ್ತಿಯ ಪಾದಗಳಿಗೆ ನಮಸ್ಕರಿಸುವ ಕನಸು ಕಂಡರೆ ಅದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಸ್ವಪ್ನಶಾಸ್ತ್ರದ ಪ್ರಕಾರ, ಬಡ್ತಿ ತ್ವರಿತವಾಗಿ ಬರುತ್ತದೆ. ನೀವು ಅಂತಹ ಕನಸನ್ನು ಕಂಡರೆ, ಉದ್ಯೋಗದಲ್ಲಿನ ಬದಲಾವಣೆಯಿಂದ ನೀವು ಸಂತೋಷಪಡುತ್ತೀರಿ. ಈ ರೀತಿಯ ಕನಸು ಕಂಡೆ ಬಾಳೆ ಮರಕ್ಕೆ ನೀರು ಹಾಕಿ. ಹೀಗೆ ಮಾಡುವುದರಿಂದ, ನಿಮ್ಮ ಕನಸು ನನಸಾಗುತ್ತದೆ. ನೀವು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ.
  3. ನಿಮ್ಮ ಪಾದಗಳ ಕೆಳಗೆ ಕಸ ಇರುವ ಕನಸು ಬಿದ್ದಿದ್ದರೆ ನೀವು ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ಮತ್ತು ಯಶಸ್ಸನ್ನು ಸಾಧಿಸುತ್ತೀರಿ ಎಂದರ್ಥ. ಇದು ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ ಎಂಬುದರ ಸಂಕೇತವಾಗಿದೆ. ಇಂತಹ ಕನಸನ್ನು ಹೊಂದಿರುವಾಗ ನಿಮ್ಮ ಯೋಜನೆಯ ಬಗ್ಗೆ ಇತರರಿಗೆ ಹೇಳಬೇಡಿ.
  4. ಕಸವನ್ನು ಕಸದಬುಟ್ಟಿಗೆ ಎಸೆಯುವ ಕನಸು ಕಂಡರೆ ಭವಿಷ್ಯದಲ್ಲಿ ನಿಮ್ಮ ಎಲ್ಲಾ ತೊಂದರೆಗಳು ಪರಿಹಾರವಾಗುತ್ತವೆ ಎಂದರ್ಥ. ಇಂತಹ ಕನಸಿನ ಅರ್ಥವನ್ನು ನೋಡುವುದಾದರೆ ನೀವು, ಭಾವನೆಗಳ ಹೊರೆಯಿಂದ ನಿಮ್ಮನ್ನು ಮುಕ್ತಗೊಳಿಸಿ ಜೀವನದಲ್ಲಿ ಮುಂದುವರಿಯಿರಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.