Swapna Shastra: ಕನಸಿನಲ್ಲಿ ದೆವ್ವದೊಂದಿಗೆ ಹೋರಾಡಿ ಅದನ್ನು ಸೋಲಿಸಿದ್ದೀರಾ? ಇದರರ್ಥ ಒಳ್ಳೆಯದೇ
Meaning of Dreams: ಪ್ರತಿಯೊಂದು ಕನಸಿಗೂ ತನ್ನದೇ ಆದ ವಿಶೇಷ ಅರ್ಥವಿದೆ. ಹಾಗಂತ ಅವುಗಳ ಕುರಿತು ಹೆಚ್ಚು ಚಿಂತಿಸಿ ಪ್ರಯೋಜನವಿಲ್ಲ. ಅದರ ಅರ್ಥ ತಿಳಿದು ಜಾಗರೂಕರಾಗಿದ್ದರೆ ಸಾಕು. ನಿಮ್ಮ ಕನಸಿನಲ್ಲಿ ಎಂದಾದರೂ ಭೂತವನ್ನು ಕಂಡಿದ್ದೀರಾ? ದೆವ್ವದೊಂದಿಗೆ ಫೈಟ್ ಮಾಡಿದ್ದೀರಾ? ಹಾಗಾದ್ರೆ ಸ್ವಪ್ನ ಶಾಸ್ತ್ರದ ಪ್ರಕಾರ ಅದರ ಅರ್ಥ ಏನು ತಿಳಿಯೋಣ..
ಎಲ್ಲರಿಗೂ ರಾತ್ರಿ ಕನಸು ಬೀಳತ್ತೆ. ಇದು ಸಹಜ ಚಟುವಟಿಕೆ. ಕೆಲ ಕನಸುಗಳು ಸಿಹಿಗನಸು ಆಗಿರುತ್ತವೆ. ಆದರೆ ಕೆಲವೊಂದು ದುಸ್ವಪ್ನವಾಗುತ್ತದೆ. ಕೆಲವೊಮ್ಮೆ ಭಯಾನಕ ಕನಸು ನಮ್ಮನ್ನು ಹೆದರಿಸಿ ಎದ್ದು ಕೂರುವಂತೆ ಮಾಡುತ್ತವೆ ಮತ್ತು ಕೆಲವೊಮ್ಮೆ ತಮಾಷೆಯ ಕನಸು ನಮ್ಮನ್ನು ನಗಿಸುತ್ತದೆ. ಕೆಲವೊಮ್ಮೆ ನಿಗೂಢ ಕನಸು ನಮ್ಮನ್ನು ದಿನವಿಡೀ ಯೋಚಿಸುವಂತೆ ಮಾಡುತ್ತದೆ.
ಪ್ರತಿಯೊಂದು ಕನಸಿಗೂ ತನ್ನದೇ ಆದ ವಿಶೇಷ ಅರ್ಥವಿದೆ. ಹಾಗಂತ ಅವುಗಳ ಕುರಿತು ಹೆಚ್ಚು ಚಿಂತಿಸಿ ಪ್ರಯೋಜನವಿಲ್ಲ. ಅದರ ಅರ್ಥ ತಿಳಿದು ಜಾಗರೂಕರಾಗಿದ್ದರೆ ಸಾಕು. ನಿಮ್ಮ ಕನಸಿನಲ್ಲಿ ಎಂದಾದರೂ ಭೂತವನ್ನು ಕಂಡಿದ್ದೀರಾ? ದೆವ್ವದೊಂದಿಗೆ ಫೈಟ್ ಮಾಡಿದ್ದೀರಾ? ಹಾಗಾದ್ರೆ ಸ್ವಪ್ನ ಶಾಸ್ತ್ರದ ಪ್ರಕಾರ ಅದರ ಅರ್ಥ ಏನು ತಿಳಿಯೋಣ..
ಕನಸಿನಲ್ಲಿ ದೆವ್ವ ನೋಡಿದರೆ ಏನು ಅರ್ಥ?
ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ದೆವ್ವ ನೋಡಿದರೆ ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ನಿಮಗೆ ಹಣದ ನಷ್ಟ ಉಂಟಾಗಬಹುದು. ನೀವು ಹಣವನ್ನು ಕಳೆದುಕೊಳ್ಳಲಿದ್ದೀರಿ ಅಥವಾ ನಿಷ್ಪ್ರಯೋಜಕ ವಸ್ತುಗಳಿಗೆ ಹಣವನ್ನು ಖರ್ಚು ಮಾಡಲಿದ್ದೀರಿ ಎಂದರ್ಥ. ಹಾಗೆಯೇ ನಿಮ್ಮ ಕನಸಿನಲ್ಲಿ ಪ್ರೇತವನ್ನು ನೋಡಿದರೆ ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗೃತರಾಗಿರಬೇಕು ಎಂದರ್ಥ. ಏಕೆಂದರೆ ಭವಿಷ್ಯದಲ್ಲಿ ನಿಮಗೆ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳು ಎದುರಾಗಬಹುದು.
ಕನಸಿನಲ್ಲಿ ದೆವ್ವದೊಂದಿಗೆ ಹೋರಾಡಿ ಅದನ್ನು ಸೋಲಿಸಿದರೆ ಏನರ್ಥ?
ನಿಮ್ಮ ಕನಸಿನಲ್ಲಿ ದೆವ್ವದೊಂದಿಗೆ ಹೋರಾಡಿ ಅದನ್ನು ಸೋಲಿಸಿದರೆ, ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮ್ಮ ಜೀವನದಲ್ಲಿ ಬರುವ ಅಡೆತಡೆಗಳಿಂದ ನೀವು ಶೀಘ್ರದಲ್ಲೇ ಮುಕ್ತರಾಗುತ್ತೀರಿ. ಜೀವನದ ತೊಂದರೆಗಳು ಕೊನೆಗೊಳ್ಳಲಿವೆ ಎಂದರ್ಥ.
ಹಾರುತ್ತಿರುವ ಭೂತವನ್ನು ನೋಡಿದರೆ ಏನರ್ಥ?
ನಿಮ್ಮ ಕನಸಿನಲ್ಲಿ ಹಾರುವ ಪ್ರೇತವನ್ನು ನೀವು ನೋಡಿದರೆ, ಸ್ವಪ್ನ ಶಾಸ್ತ್ರದ ಪ್ರಕಾರ ಪ್ರಕಾರ, ಶತ್ರುಗಳು ನಿಮಗೆ ಹಾನಿ ಮಾಡಬಹುದು ಎಂದರ್ಥ. ಆದ್ದರಿಂದ, ನೀವು ಅಂತಹ ಕನಸು ಕಂಡಾಗ ನೀವು ಜಾಗರೂಕರಾಗಿರಬೇಕು.
ವಿಭಾಗ