Swapna Shastra: ಕನಸಿನಲ್ಲಿ ಗುಲಾಬಿ ಹೂ, ಗಿಳಿ, ಹಣ್ಣಿನಿಂದ ತುಂಬಿದ ಮರ ಕಂಡರೆ ನಿಮ್ಮ ಅದೃಷ್ಟದ ಬೀಗ ತೆರೆದಂತೆ; ಸ್ವಪ್ನ ಶಾಸ್ತ್ರದ ವಿವರ
Meaning of dreams: ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಕೆಲವು ವಸ್ತುಗಳನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಈ ಅಂಶಗಳನ್ನು ಕಾಣುವ ವ್ಯಕ್ತಿ ಭವಿಷ್ಯದಲ್ಲಿ ಯಾವೆಲ್ಲ ಪ್ರಯೋಜನಗಳನ್ನು ಪಡೆಯುತ್ತಾನೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..
ಕನಸು ಕಾಣುವುದು ಸಹಜ ಚಟುವಟಿಕೆ. ರಾತ್ರಿ ಮಲಗುವಾಗ ನಾವೆಲ್ಲರೂ ಖಂಡಿತವಾಗಿಯೂ ಕೆಲವು ಕನಸುಗಳನ್ನು ಕಾಣುತ್ತೇವೆ. ಆದರೆ ಕನಸುಗಳು ನಮಗೆ ಅನೇಕ ರೀತಿಯ ಶುಭ ಅಥವಾ ಅಶುಭ ಸಂಕೇಗಳನ್ನು ನೀಡುತ್ತವೆ. ನಿಜ ಜೀವನದಲ್ಲಿ ನಡೆದದ್ದು ಕನಸಿನಲ್ಲಿ ಬರುವಂತೆ, ಕನಸಿನಲ್ಲಿ ಕಂಡ ಘಟನೆಗಳು ನಿಜ ಜೀವನದಲ್ಲೂ ನಡೆಯುವುದನ್ನು ನೀವು ಅನೇಕ ಬಾರಿ ನೋಡಿರಬಹುದು. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಣುವ ಕೆಲವು ವಿಷಯಗಳು ನಮ್ಮ ಭವಿಷ್ಯಕ್ಕೆ ಸಂಬಂಧಿಸಿವೆ.
ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಕೆಲವು ವಸ್ತುಗಳನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕನಸಿನಲ್ಲಿ ಈ ಅಂಶಗಳನ್ನು ಕಾಣುವ ವ್ಯಕ್ತಿ ಭವಿಷ್ಯದಲ್ಲಿ ಯಾವೆಲ್ಲ ಪ್ರಯೋಜನಗಳನ್ನು ಪಡೆಯುತ್ತಾನೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ..
ಕನಸಿನಲ್ಲಿ ಗುಲಾಬಿ ಹೂವನ್ನು ನೋಡುವುದರ ಅರ್ಥ
ಸ್ವಪ್ನ ಶಾಸ್ತ್ರದ ಪ್ರಕಾರ, ನಿಮ್ಮ ಕನಸಿನಲ್ಲಿ ಗುಲಾಬಿ ಹೂವನ್ನು ಕಂಡರೆ ಅದು ತುಂಬಾ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ರೀತಿಯ ಕನಸು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಸೂಚಿಸುತ್ತದೆ. ಅಂದರೆ ಆರ್ಥಿಕ ಸಂಕಷ್ಟಗಳು ದೂರಾಗುತ್ತವೆ ಅಥವಾ ಆರ್ಥಿಕವಾಗಿ ನೀವು ಸಬಲರಾಗುತ್ತೀರಿ. ಈ ಕನಸಿನ ಒಂದು ಅರ್ಥವೆಂದರೆ ಶೀಘ್ರದಲ್ಲೇ ನಿಮ್ಮ ಮನೆಯಲ್ಲಿ ಸಂತೋಷ ಪಸರಿಸುತ್ತದೆ ಅಥವಾ ನಿಮ್ಮ ದೀರ್ಘಾವಧಿಯ ಕನಸುಗಳಲ್ಲಿ ಒಂದು ಶೀಘ್ರ ಈಡೇರುತ್ತದೆ.
ಕನಸಿನಲ್ಲಿ ಗಿಳಿಯನ್ನು ನೋಡುವುದರ ಅರ್ಥ
ಜ್ಯೋತಿಷ್ಯದಲ್ಲಿ ಗಿಳಿಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಕನಸಿನಲ್ಲಿ ಕೂಡ ಗಿಳಿಯನ್ನು ಕಂಡರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಶೀಘ್ರದಲ್ಲೇ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಲಿದ್ದೀರಿ ಎಂದು ಅದು ಹೇಳುತ್ತದೆ, ನಿಮ್ಮ ಜೀವನ ಸಂತೋಷ ಮತ್ತು ಸಮೃದ್ಧಿಯಿಂದ ತುಂಬುತ್ತದೆ.
ಕನಸಿನಲ್ಲಿ ಹಣ್ಣುಗಳಿಂದ ತುಂಬಿದ ಮರವನ್ನು ನೋಡುವುದು
ವ್ಯವಹಾರದಲ್ಲಿ ತೊಡಗಿರುವ ವ್ಯಕ್ತಿಗಳು ತನ್ನ ಕನಸಿನಲ್ಲಿ ಹಣ್ಣುಗಳಿಂದ ತುಂಬಿದ ಮರವನ್ನು ನೋಡಿದರೆ, ಅವರು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಲಿದ್ದಾನೆ ಎಂದರ್ಥ. ಆ ವ್ಯಕ್ತಿಗಳು ಬಹಳಷ್ಟು ಸಂತೋಷ ಮತ್ತು ಸಂಪತ್ತನ್ನು ಪಡೆಯಲಿದ್ದಾನೆ ಎಂದು ಅದು ಹೇಳುತ್ತದೆ. ಅಲ್ಲದೇ ಅವರ ವ್ಯವಹಾರವು ವೇಗವಾಗಿ ವಿಸ್ತರಿಸುತ್ತದೆ.