ಸ್ವಪ್ನ ಶಾಸ್ತ್ರ: ಕನಸಿನಲ್ಲಿ ಕಾಗೆ ಕಂಡರೆ ಏನರ್ಥ; ವಿವಾದಗಳು, ಆರೋಗ್ಯ ಸಮಸ್ಯೆಗಳಿಗೆ ಇದೇ ಕಾರಣವೇ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸ್ವಪ್ನ ಶಾಸ್ತ್ರ: ಕನಸಿನಲ್ಲಿ ಕಾಗೆ ಕಂಡರೆ ಏನರ್ಥ; ವಿವಾದಗಳು, ಆರೋಗ್ಯ ಸಮಸ್ಯೆಗಳಿಗೆ ಇದೇ ಕಾರಣವೇ ತಿಳಿಯಿರಿ

ಸ್ವಪ್ನ ಶಾಸ್ತ್ರ: ಕನಸಿನಲ್ಲಿ ಕಾಗೆ ಕಂಡರೆ ಏನರ್ಥ; ವಿವಾದಗಳು, ಆರೋಗ್ಯ ಸಮಸ್ಯೆಗಳಿಗೆ ಇದೇ ಕಾರಣವೇ ತಿಳಿಯಿರಿ

ಪ್ರತಿಯೊಬ್ಬರು ನಿದ್ದೆಯಲ್ಲಿ ಕನಸು ಕಾಣುತ್ತಾರೆ. ಕೆಲವು ಕನಸುಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತವೆ, ಕೆಲವು ಕಣ್ಣು ತೆರೆದ ನಂತರ ನೆನಪಿನಲ್ಲಿ ಉಳಿಯುವುದಿಲ್ಲ. ಕನಸಿನಲ್ಲಿ ಕಾಗೆ ಕಾಣಿಸಿದರೆ ಏನರ್ಥ ಎಂಬುದನ್ನು ತಿಳಿಯೋಣ.

ಕನಸಿನಲ್ಲಿ ಕಾಗೆ ಕಾಣಿಸುವುದು ಮತ್ತು ಅದರ ಚಲನವಲಗಳಿಂದ ಏನೆಲ್ಲಾ ಪ್ರಯೋಜನ ಹಾಗೂ ಅಶುಭಗಳ ಸಂಕೇತವನ್ನು ತಿಳಿಯಿರಿ
ಕನಸಿನಲ್ಲಿ ಕಾಗೆ ಕಾಣಿಸುವುದು ಮತ್ತು ಅದರ ಚಲನವಲಗಳಿಂದ ಏನೆಲ್ಲಾ ಪ್ರಯೋಜನ ಹಾಗೂ ಅಶುಭಗಳ ಸಂಕೇತವನ್ನು ತಿಳಿಯಿರಿ

ಪಕ್ಷಿಗಳು ಸಾಮಾನ್ಯವಾಗಿ ಆಕಾಶದಲ್ಲಿ ಹಾರಾಡುತ್ತವೆ. ಕೆಲವೊಂದು ಪಕ್ಷಿಗಳು ಕಡಿಮೆ ದೂರವನ್ನು ಕ್ರಮಿಸುತ್ತವೆ. ಕೆಲವು ಪಕ್ಷಿಗಳು ಹಾರಲು ಅಸಮರ್ಥವಾಗುತ್ತವೆ. ಇದರ ಅನ್ವಯ ಕನಸಿನಲ್ಲಿ ಕಾಣುವ ಪಕ್ಷಿಗಳಿಂದ ನಿರ್ದಿಷ್ಟ ಪ್ರಕಾರದ ಫಲಗಳನ್ನು ಪಡೆಯಬಹುದಾಗಿದೆ. ಕನಸಿನಲ್ಲಿ ಕಾಗೆ ಕಾಣಿಸಿಕೊಂಡರೆ ಏನರ್ಥ ಮತ್ತು ಅದರ ಚಲನವಲನಗಳಿಂದಾಗುವ ಶುಭ, ಅಶುಭ ಫಲಿತಾಂಶಗಳ ಬಗ್ಗೆ ತಿಳಿಯೋಣ.

  • ಕನಸಿನಲ್ಲಿ ಕಾಗೆಯು ಮನೆಯ ಮುಂಭಾಗದಿಂದ ಪ್ರವೇಶಿಸಿ ಮತ್ತೊಂದು ಬಾಗಿಲಿನಲ್ಲಿ ಹೊರಹೋದಲ್ಲಿ ಸೋದರ ಅಥವಾ ಸೋದರ ಜೊತೆಯಲ್ಲಿ ವಾದ ವಿವಾದ ಉಂಟಾಗುತ್ತದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಸಮಸ್ಯೆ ತಡೆದೋರುತ್ತದೆ.
  • ಮನೆಯ ಒಳಗಿದ್ದ ಕಾಗೆಯನ್ನು ಕೈಯಲ್ಲಿ ಹಿಡಿದು ಹೊರ ನಡೆಯುವಂತಹ ಕನಸು ಕಂಡರೆ, ಉದ್ಯೋಗ ಬದಲಾಗುವ ಸಂಭವವಿರುತ್ತದೆ. ಮನೆಯಲ್ಲಿರುವ ಕಾಗೆಯನ್ನು ಯಾವುದೇ ವಸ್ತುವಿನಿಂದ ಬಲವಂತವಾಗಿ ಹೊರಗೆ ನೂಕಿದಂತೆ ಕನಸು ಬಿದ್ದರೆ, ದೊರೆವ ಅವಕಾಶವೊಂದು ಕೈ ತಪ್ಪಲಿದೆ. ಮನೆಯ ಹೊರಗಡೆ ಇರುವ ಕಾಗೆಯನ್ನು ಮನೆಯ ಒಳಗೆ ತಂದರೆ ನಿಮ್ಮದೇ ತಪ್ಪಿನಿಂದ ಕುಟುಂಬದಲ್ಲಿ ಮನಸ್ತಾಪ ಉಂಟಾಗುತ್ತದೆ.
  • ಹೊರಗಿರುವ ಕಾಗೆಯನ್ನು ಮನೆಗೆ ತಂದು ಅದನ್ನು ಬಣ್ಣದಿಂದ ಸಿಂಗರಿಸಿದರೆ ನೀವು ಮಾಡಿದ ತಪ್ಪಿನಿಂದ ಹೊರಬರುವಿರಿ ಎಂದರ್ಥವಾಗುತ್ತದೆ. ನಿಮ್ಮ ಮನೆಯ ಬಳಿ ಇರುವ ತುಳಸಿ ಗಿಡದಲ್ಲಿ ಕಾಗೆಯು ಆಹಾರವನ್ನು ಸೇವಿಸುತ್ತಾ ಇದ್ದಲ್ಲಿ ಆರೋಗ್ಯದಲ್ಲಿ ದೊಡ್ಡ ಮಟ್ಟದ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ.
  • ಜೋಡಿ ಕಾಗೆಗಳು ಮನೆಯನ್ನು ಪ್ರವೇಶಿಸಿದರೆ ಕುಟುಂಬದಲ್ಲಿ ದಂಪತಿ ನಡುವೆ ಇರುವ ಮನಸ್ತಾಪವು ದೂರವಾಗುತ್ತವೆ. ಕಾಗೆ ಕೂಗುವ ವೇಳೆ ಅದಕ್ಕಿಂತಲೂ ಜೋರಾಗಿ ನೀವು ಕಾಗೆಯಂತೆ ಸದ್ದನ್ನು ಮಾಡಿದರೆ ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ವಾದ ವಿವಾದಗಳು ಎದುರಾಗುತ್ತವೆ.
  • ಕಾಗೆಯು ಹಾರಿ ಬರುವಾಗ ಹೆದರಿಕೆಯಿಂದ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ, ದೊಡ್ಡದಾದ ವಿವಾದವು ಎದುರಾದರು ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ.
  • ಕನಸಿನಲ್ಲಿ ನಿಮ್ಮ ಪಾಲಿನ ಆಹಾರದಲ್ಲಿ ಕಾಗೆಯು ತನ್ನ ಬಾಯಿಯಲ್ಲಿ ಕಚ್ಚಿಕೊಂಡಿರುವ ಆಹಾರದ ತುಣುಕನ್ನು ಕಂಡರೆ ಉದ್ಯೋಗವು ಬದಲಾಗುತ್ತದೆ ಅಥವಾ ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ.
  • ಕನಸಿನಲ್ಲಿ ನಿಮ್ಮ ಮನೆಯ ಮುಂದೆ ಕಾಗೆಯು ಕುಳಿತಿರುತ್ತದೆ. ಎಚ್ಚರವಾದಾಗ ಮನೆ ಬಾಗಿಲನ್ನು ತೆರೆದರೆ ಅದೇ ಸ್ಥಳದಲ್ಲಿ ನಿಜವಾಗಿಯೂ ಕಾಗೆಯು ಕುಳಿತಿದ್ದರೆ ನಿಮ್ಮ ನಿರೀಕ್ಷೆಯಂತೆ ನಿಮ್ಮ ಕೆಲಸ ಕಾರ್ಯಗಳು ಸುಲಭ ಗತಿಯಲ್ಲಿ ಸಾಗುತ್ತವೆ.
  • ಹಾರಲು ಸಾಧ್ಯವಾಗದೆ ನೆಲದ ಮೇಲೆ ಬಿದ್ದ ಕಾಗೆಯನ್ನು ನೀವು ಹಿಡಿಯಲು ಹೋದಾಗ ಹಾರಿ ಹೋಗುತ್ತದೆ. ಇದರಿಂದ ಬಹುದಿನದಿಂದ ನಡೆಯದೆ ಇರುವ ನಿಮ್ಮ ಕೆಲಸವು ನಿಧಾನಗತಿಯಲ್ಲಿ ಪೂರ್ಣಗೊಳ್ಳುತ್ತದೆ.
  • ಕನಸಿನಲ್ಲಿ ಮನೆಯಲ್ಲಿರುವ ಮಕ್ಕಳ ಮುಂದೆ ಕಾಗೆಯು ನಿಧಾನಗತಿಯಲ್ಲಿ ಶಬ್ದ ಮಾಡಿದರೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶ ಕಂಡು ಬರುತ್ತದೆ.
  • ಮನೆಯೊಳಗಿದ್ದ ಕಾಗೆಯನ್ನು ಬಲವಂತವಾಗಿ ಹೊರಗೆ ನೂಕಿದರು, ಅದು ಪದೇ ಪದೆ ಮನೆಯ ಒಳಗೆ ಬರುತ್ತಿರವಂತೆ ಕನಸು ಕಂಡರೆ, ಮನೆತನಕ್ಕೆ ಸಂಬಂಧಿಸಿದ ಭೂಮಿ ವಿಚಾರದಲ್ಲಿ ವಿವಾದ ಒಂದು ಎದುರಾಗುತ್ತದೆ.
  • ನಿಮ್ಮ ಮನೆಯ ಎದುರಿನಲ್ಲಿರುವ ಗಿಡ ಮರಗಳಿಂದ ಕಾಗೆ ಕಡ್ಡಿ ಅಥವಾ ಎಲೆಗಳನ್ನು ಮನೆಯ ಒಳಗೆ ತಂದು ಹಾಕಿದಲ್ಲಿ ಸ್ವಂತ ಮನೆಯನ್ನು ಕಟ್ಟುವ ಅಥವಾ ಕೊಳ್ಳುವ ಆಸೆಯು ನೆರವೇರುತ್ತದೆ.
  • ಮನೆಯಲ್ಲಿರುವ ಮಂಗಳ ದ್ರವ್ಯಗಳ ಪೊಟ್ಟಣವನ್ನು ಕಾಗೆಯು ಮನೆಯಿಂದ ಹೊರಗಡೆ ತೆಗೆದುಕೊಂಡು ಹೋದಂತಹ ಕನಸು ಬಿದ್ದರೆ ಕುಟುಂಬದಲ್ಲಿ ವಿವಾಹ ಕಾರ್ಯವು ನೆರವೇರುತ್ತದೆ. ಮನೆಯ ಹೊರಗಿನಿಂದ ಮನೆಯ ಒಳಗೆ ಕಾಗೆಯು ಬಂದು ಅಸು ನೀಗಿದಂತಹ ಕನಸು ಕಂಡರೆ, ನಿಮ್ಮದೇ ಆದ ತಪ್ಪಿನಿಂದ ಜೀವನದಲ್ಲಿ ದೊಡ್ಡ ಪ್ರಮಾಣದ ಸಮಸ್ಯೆಯನ್ನು ಎದುರಿಸುವಿರಿ.
  • ನಿಮ್ಮ ಮನೆಯಲ್ಲಿ ಇರುವ ಯಾವುದೇ ವಸ್ತುವನ್ನು ನೆರೆಹೊರೆಯ ಮನೆಯ ಬಳಿ ತೆಗೆದು ಕೊಂಡು ಹೋಗುವಂತಹ ಕನಸು ಕಂಡರೆ ಮಾತುಕತೆಯಿಂದ ವಿವಾದ ಒಂದು ದೂರವಾಗುವುದು. ಮನೆಯಲ್ಲಿ ಮಾಡಿರುವ ಸಿಹಿ ಪದಾರ್ಥವನ್ನು ತೆಗೆದುಕೊಂಡು ಹೊರಗೆ ಹಾರಿದಲ್ಲಿ ಕುಟುಂಬದಲ್ಲಿ ವಿವಾದವೊಂದು ಎದುರಾಗುತ್ತದೆ.

(ಬರಹ: ಎಚ್ ಸತೀಶ್, ಜ್ಯೋತಿಷಿ)

ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.