ಸ್ವಪ್ನಶಾಸ್ತ್ರ: ದಿನನಿತ್ಯದ ಕೆಲಸ ಕಾರ್ಯಗಳು ಕನಸಿನಲ್ಲಿ ಕಾಣಿಸಿದರೆ ಏನರ್ಥ; ಆಸಕ್ತಿಕರ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸ್ವಪ್ನಶಾಸ್ತ್ರ: ದಿನನಿತ್ಯದ ಕೆಲಸ ಕಾರ್ಯಗಳು ಕನಸಿನಲ್ಲಿ ಕಾಣಿಸಿದರೆ ಏನರ್ಥ; ಆಸಕ್ತಿಕರ ಮಾಹಿತಿ ಇಲ್ಲಿದೆ

ಸ್ವಪ್ನಶಾಸ್ತ್ರ: ದಿನನಿತ್ಯದ ಕೆಲಸ ಕಾರ್ಯಗಳು ಕನಸಿನಲ್ಲಿ ಕಾಣಿಸಿದರೆ ಏನರ್ಥ; ಆಸಕ್ತಿಕರ ಮಾಹಿತಿ ಇಲ್ಲಿದೆ

ಕನಸುಗಳನ್ನು ಜೀವನದ ಕನ್ನಡಿ ಎಂದು ಪರಿಗಣಿಸಲಾಗುತ್ತದೆ. ಸ್ವಪ್ನ ಶಾಸ್ತ್ರದಲ್ಲಿ, ಕನಸುಗಳು ಮತ್ತು ಅವುಗಳ ಅರ್ಥವನ್ನು ತಿಳಿದುಕೊಳ್ಳಬಹುದು. ದಿನ ನಿತ್ಯದ ಕೆಲಸ ಕಾರ್ಯಗಳು, ಚಟುವಟಿಕೆಗಳು ಕನಸಿನಲ್ಲಿ ಕಂಡರೆ ಏನರ್ಥ ಎಂಬುದನ್ನು ತಿಳಿಯಿರಿ.

ನಮ್ಮ ದಿನ ನಿತ್ಯದ ಕೆಲಸ ಕಾರ್ಯಗಳು ಕನಸಿನಲ್ಲಿ ಕಂಡರೆ ಏನು ಅರ್ಥವನ್ನು ಕೊಡುತ್ತವೆ ಎಂಬುದನ್ನು ಸ್ವಪ್ನಶಾಸ್ತ್ರದಲ್ಲಿ ತಿಳಿದುಕೊಳ್ಳೋಣ.
ನಮ್ಮ ದಿನ ನಿತ್ಯದ ಕೆಲಸ ಕಾರ್ಯಗಳು ಕನಸಿನಲ್ಲಿ ಕಂಡರೆ ಏನು ಅರ್ಥವನ್ನು ಕೊಡುತ್ತವೆ ಎಂಬುದನ್ನು ಸ್ವಪ್ನಶಾಸ್ತ್ರದಲ್ಲಿ ತಿಳಿದುಕೊಳ್ಳೋಣ.

ನಾವು ದಿನನಿತ್ಯ ಮಾಡುವ ಚಟುವಟಿಕೆಗಳು ಕನಸಿನಲ್ಲಿ ಕಾಣುತ್ತೇವೆ. ಕನಸಿನಲ್ಲಿ ಕಾಣುವ ಪ್ರತಿಯೊಂದು ಚಟುವಟಿಕೆಗಳಿಗೆ ವಿಭಿನ್ನವಾದ ಫಲಗಳು ದೊರೆಯುತ್ತವೆ. ಕನಸಿನಲ್ಲಿ ನಾವು ಬಲಮೊಗ್ಗುಲಲ್ಲಿ ಎದ್ದಲ್ಲಿ ಹೊಸ ಕೆಲಸವೊಂದು ಆರಂಭವಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ. ಕೆಲವೊಮ್ಮೆ ಬಲಮುಗ್ಗಲಲ್ಲಿ ಎದ್ದು ಪುನಃ ಮಲಗಿ ಕೊಂಡರೆ ಆರಂಭಿಸಿದ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತವೆ. ಬಲ ಮೊಗ್ಗಲಲ್ಲಿ ಎದ್ದು ಮಲಗಿ ಪುನಃ ಎಡಮೊಗ್ಗಲಲ್ಲಿ ಎದ್ದರೆ, ನೀವು ಆರಂಭಿಸುವ ಕೆಲಸ ಕಾರ್ಯಗಳಿಗೆ ಕುಟುಂಬದ ಹಿರಿಯರ ಸಹಾಯ ದೊರೆಯುತ್ತದೆ. ಅಥವಾ ಕುಟುಂಬದ ಹಿರಿಯರು ಮಾಡುತ್ತಿದ್ದ ಕೆಲಸವೊಂದನ್ನು ಅನುಸರಿಸುವಿರಿ. ಕನಸಿನಲ್ಲಿ ಬಲ ಅಥವಾ ಎಡಮೊಗ್ಗಲಲ್ಲಿ ಮೇಲೇಳದೆ ಅಂಗಾತವಾಗಿ ಎದ್ದರೆ, ಇಂದಿನ ಕೆಲಸ ಕಾರ್ಯಗಳನ್ನು ಆತುರದಿಂದ ಪೂರ್ಣಗೊಳಿಸುವಿರೆಂಬ ಅರ್ಥ ಬರುತ್ತದೆ.

ಇದೇ ರೀತಿ ಕನಸಿನಲ್ಲಿ ಮೇಲೇಳದೆ ಬೋರಲಾಗಿ ಮಲಗಿಕೊಂಡರೆ ನೀವು ಆರಂಭಿಸುವ ಕೆಲಸ ಕಾರ್ಯಗಳು ಆತುರದ ಮನಸ್ಥಿತಿಯ ಕಾರಣ ಅಪೂರ್ಣಗೊಳ್ಳುವುದಲ್ಲದೆ ನಿಮ್ಮ ಪ್ರಯತ್ನಗಳೂ ವಿಫಲವಾಗುತ್ತವೆ. ಅನಾರೋಗ್ಯದಿಂದ ಬಳಲುತ್ತಿರುವವರ ಕನಸಿನಲ್ಲಿ ಅವರನ್ನು ಬೆನ್ನಿಗೆ ಆಸರೆಯಾಗಿ ನಿಲ್ಲಲು ಸಹಾಯ ಮಾಡಿದಲ್ಲಿ, ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಉತ್ತಮ ಆರೋಗ್ಯ ಇರುವವರ ಕನಸಿನಲ್ಲಿ ಅವರ ಬೆನ್ನಿಗೆ ಆಸರೆಯಾಗಿ ನಿಲ್ಲಲು ಸಹಾಯ ಮಾಡಿದಲ್ಲಿ ಅವರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರನ್ನು ಅವರ ಕನಸಿನಲ್ಲಿ ಬೇರೆಯವರು ಆಸರೆ ನೀಡಿ ನಿಲ್ಲಿಸಿದಲ್ಲಿ ಸಂಪೂರ್ಣ ಆರೋಗ್ಯ ದೊರೆಯುತ್ತದೆ. ಆರೋಗ್ಯವಾದವರನ್ನು ಕನಸಿನಲ್ಲಿ ಬೇರೆಯವರು ಆಸರೆಯಾಗಿ ನಿಲ್ಲಿಸಿದಲ್ಲಿ, ಜೀವನದಲ್ಲಿ ಎದುರಾಗುವ ಸಮಸ್ಯೆಯೊಂದು ಆತ್ಮೀಯರ ಸಹಾಯದಿಂದ ದೂರವಾಗುತ್ತದೆ. ಕನಸಿನಲ್ಲಿ ನಿದ್ದೆಯಿಂದ ಮೇಲೆಳುವ ವೇಳೆ ಧರಿಸಿದ್ದ ವಸ್ತ್ರವು ಹರಿದು ಹೋದಲ್ಲಿ ಅನಿರೀಕ್ಷಿತವಾದ ಖರ್ಚು ವೆಚ್ಚಗಳನ್ನು ಸೂಚಿಸುತ್ತದೆ.

ಕನಸಿನಲ್ಲಿ ನಿದ್ದೆಯಿಂದ ಮೇಲೆಳುವ ವೇಳೆ ಧರಿಸಿದ್ದ ವಸ್ತ್ರವು ಹರಿದು ಹೋದಾಗ ಮತ್ತೊಂದು ವಸ್ತ್ರವನ್ನು ಹೊದ್ದುಕೊಂಡಲ್ಲಿ ಖರ್ಚು ವೆಚ್ಚಗಳಿದ್ದರೂ ಉತ್ತಮ ಆದಾಯ ದೊರೆಯುತ್ತದೆ. ಕನಸಿನಲ್ಲಿ ಎದ್ದು ಕಪ್ಪು ಬಟ್ಟೆಯನ್ನು ಧರಿಸಿ ಹೊರ ನಡೆದಲ್ಲಿ ಉದ್ಯೋಗದಲ್ಲಿ ತೊಂದರೆ ಉಂಟಾಗುತ್ತದೆ. ಹೊಸ ಉದ್ಯೋಗವನ್ನು ಹುಡುಕಬೇಕಾಗುತ್ತದೆ. ಕೆಲಸ ಕಳೆದುಕೊಂಡವರ ಕನಸಿನಲ್ಲಿ ಉದ್ಯೋಗದ ಸಮವಸ್ತ್ರವನ್ನು ಧರಿಸಿ ಹೊರ ನಡೆದರೆ, ಕಳೆದು ಹೋದ ವೃತ್ತಿಯು ಮರಳಿ ದೊರೆಯುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರು ಕನಸಿನಲ್ಲಿ ಆಹಾರವನ್ನು ಸೇವೆಸುವಂತಹ ಕನಸು ಕಂಡಲ್ಲಿ, ಅನಾರೋಗ್ಯವು ಹೆಚ್ಚುತ್ತದೆ ಎಂಬ ಅರ್ಥ ಬರುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರು ಕನಸಿನಲ್ಲಿ ಸೇವಿಸುತ್ತಿದ್ದ ಆಹಾರವನ್ನು ಬೇರೆಯವರು ಕಸಿದುಕೊಂಡಲ್ಲಿ, ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರು ಕನಸಿನಲ್ಲಿ ಔಷಧಿ ಸೇವಿಸುತ್ತಿದ್ದಲ್ಲಿ ದೀರ್ಘಕಾಲದವರೆಗೆ ಅನಾರೋಗ್ಯವು ಕಾಡುತ್ತದೆ. ಕನಸಿನಲ್ಲಿ ಬಲಮೊಗ್ಗಲ್ಲಲ್ಲಿ ಎದ್ದು ಹಾಳಾದ ಮುಂಬಾಗಿಲನ್ನು ಸರಿಪಡಿಸಿದಲ್ಲಿ ಮನೆಗೆ ಆತ್ಮೀಯರ ಅಗಮನ ಆಗುವುದೆಂಬ ಅರ್ಥ ಬರುತ್ತದೆ.

ಎದ್ದ ತಕ್ಷಣ ಒಲೆಯನ್ನು ಅಂಟಿಸಿ ಬೆಂಕಿ ನೋಡುವಂತಹ ಕನಸು ಕಂಡರೆ ಏನು ಅರ್ಥ

ಕನಸಿನಲ್ಲಿ ಎದ್ದ ತಕ್ಷಣ ಒಲೆಯನ್ನು ಅಂಟಿಸಿದಾಗ ಬೆಂಕಿ ಕಂಡುಬಂದರೆ ಹಣಕಾಸಿನ ಕೊರತೆ ಕಡಿಮೆ ಆಗುತ್ತದೆ ಮತ್ತು ಕುಟುಂಬದ ಹಿರಿಯರೊಬ್ಬರು ಆಪತ್ತಿನಿಂದ ಪಾರಾಗುತ್ತಾರೆ ಎಂಬ ಅರ್ಥ ಬರುತ್ತದೆ. ಕನಸಿನಲ್ಲಿ ಎದ್ದ ತಕ್ಷಣ ಒಲೆಯನ್ನು ಅಂಟಿಸಿದಾಗ ಬೆಂಕಿ ಕಾಣದೆ ಹೊಗೆ ಕಂಡುಬಂದರೆ ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಇದೆ ಎಂಬ ಅರ್ಥ ಬರುತ್ತದೆ. ಕನಸಿನಲ್ಲಿ ನಿದ್ದೆಯಿಂದ ಎಚ್ಚರವಾದ ತಕ್ಷಣ ಮನೆಯ ಜನರೊಂದಿಗೆ ಮಾತನಾಡುವ ಮಾತುಗಳನ್ನು ನಿಜವಾಗಿ ಎಲ್ಲರಿಗೂ ಕೇಳುವಂತೆ ಉಚ್ಚರಿಸಿದರೆ, ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ ಕಂಡುಬರುತ್ತದೆ. ಕನಸಿನಲ್ಲಿ ನಿದ್ದೆಯಿಂದ ಎಚ್ಚರವಾದ ತಕ್ಷಣ ಮನೆಯ ಜನರೊಂದಿಗೆ ಮಾತನಾಡುತ್ತಿದ್ದಲ್ಲಿ ಕುಟುಂಬದಲ್ಲಿ ಅನಾವಶ್ಯಕ ವಾದ ವಿವಾದಗಳು ಎದುರಾಗುತ್ತವೆ ಎಂಬ ಅರ್ಥ ಬರುತ್ತದೆ. ಸಾಮಾನ್ಯವಾಗಿ ಬೆಳಗಿನ ಝಾವದಲ್ಲಿ ಕಾಣುವ ಕನಸುಗಳು ನಿಜಜೀವನದಲ್ಲಿ ನನಸಾಗುತ್ತದೆ.

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ವಪ್ನಶಾಸ್ತ್ರವನ್ನು ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.