Swapna Shastra: ಕನಸಿನಲ್ಲಿ ಬೆಂಕಿ ಕಾಣಿಸುವುದರ ಸೂಚನೆಯೇನು, ಸ್ವಪ್ನಶಾಸ್ತ್ರದ ಪ್ರಕಾರ ಈ ಕನಸಿನ ಅರ್ಥವಿದು
ಬೆಂಕಿಯ ಬಗ್ಗೆ ಕನಸು ಕಾಣುವುದು ಎಂದರೆ ಜ್ವಾಲಾಮುಖಿಯಂತೆ ಸ್ಪೋಟಗೊಳ್ಳಲಿರುವ ಕೋಪವನ್ನು ನಿಗ್ರಹಿಸುವುದು. ಈ ರೀತಿ ಕನಸು ಬಿದ್ದಾಗ ನೀವು ನಿಮ್ಮ ಪರಿಸ್ಥಿತಿಯನ್ನು ವಿಶ್ಲೇಷಿಸಬೇಕು. ಯಾವುದೋ ಅರಿಯದ ಕೋಪವನ್ನು ನಿಮ್ಮೊಳಗೆ ಬಚ್ಚಿಟ್ಟುಕೊಂಡು ಪೊರೆಯುತ್ತಿದ್ದೀರಾ ಎಂಬುದನ್ನು ವಿಶ್ಲೇಷಿಸಬೇಕು.

ಬೆಂಕಿ ಎಂದರೆ ಎಲ್ಲರೂ ಭಯ ಪಡುವುದು ಸಹಜ. ಬೆಂಕಿ ಅನಾಹುತದ ಸೂಚಕವೂ ಹೌದು. ಹಾಗಾದರೆ ಕನಸಿನಲ್ಲಿ ಬೆಂಕಿ ಕಂಡರೆ ಏನರ್ಥ? ಇದು ಅಪಾಯವೇ, ಇದರಿಂದ ನಮಗೆ ಭವಿಷ್ಯದಲ್ಲಿ ಕೆಟ್ಟ ಸಂಭವಿಸುವುದೇ? ಎಂದೆಲ್ಲಾ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಸಹಜ. ಇಂದಿನ ಸ್ವಪ್ನಶಾಸ್ತ್ರದಲ್ಲಿ ಕನಸಿನಲ್ಲಿ ಬೆಂಕಿ ಕಂಡರೆ ಏನರ್ಥ ತಿಳಿಯೋಣ.
ಬೆಂಕಿಯು ಶಕ್ತಿಯ ಸಂಕೇತವಾಗಿದೆ. ಬೆಂಕಿಯಿಂದ ಅಪಾಯದಷ್ಟೇ ಉಪಯೋಗವೂ ಇದೆ. ಬೆಂಕಿ ಎಂದರೆ ಕಿಚ್ಚು ಎಂದುಕೊಂಡರೆ ನಮ್ಮೊಳಗಿನ ಕಿಚ್ಚಿನಿಂದಲೇ ನಾವು ಏನನ್ನಾದರೂ ಸಾಧಿಸಲು ಸಾಧ್ಯ.
ನಾವು ಕಾಣುವ ಪ್ರತಿ ಕನಸಿಗೂ ಅರ್ಥ ಇರುವಂತೆ ಬೆಂಕಿಯ ಕನಸಿಗೂ ಅರ್ಥವಿದೆ. ನೀವು ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಯಾಗಿದ್ದು, ನೀವು ಬೆಂಕಿಯ ಕನಸು ಕಂಡರೆ ಅದು ನಿಮ್ಮೊಳಗಿನ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ. ಆ ಕಾರಣಕ್ಕೆ ಬೆಂಕಿಯ ಕನಸು ಎಂದರೆ ನಮ್ಮೊಳಗಿನ ಕಿಚ್ಚನ್ನು ಅದು ಪ್ರತಿನಿಧಿಸುತ್ತಿದೆ ಎಂದರ್ಥ. ನಾವು ಆಧ್ಯಾತ್ಮ ಜೀವನ ಬಯಸುತ್ತಿದ್ದು, ಬೆಂಕಿಯ ಕನಸು ಕಂಡರೆ ಇದು ಬುದ್ಧವಂತಿಕೆ ಸಂಕೇತವಾಗಿ ಕಾಣಬಹುದು. ಅಂದರೆ ನೀವು ಪ್ರಬುದ್ಧರಾಗಲು ಬಯಸುತ್ತಿದ್ದೀರಿ ಎಂದರ್ಥ. ಬೆಂಕಿಯನ್ನು ಶುದ್ಧೀಕರಣಕ್ಕಾಗಿಯೂ ಬಳಸಲಾಗುತ್ತದೆ. ಬೆಂಕಿ ಕನಸು ಬಿದ್ದರೆ ನಿಮ್ಮ ಮನಸ್ಸಿನಲ್ಲಿ ಕಲ್ಮಶವನ್ನು ಹೊಡೆದೋಡಿಸಿ ಎಂಬುದು ಸೂಚಕವೂ ಹೌದು. ಅಂದರೆ ನಮ್ಮಲ್ಲಿನ ಆಲೋಚನೆಗಳನ್ನು ಬದಲಿಸಬೇಕು ಎಂಬುದನ್ನು ಈ ಕನಸು ಹೇಳುತ್ತದೆ.
ನಾವು ಕನಸನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದರೆ, ನೀವು ಬೆಂಕಿಗೆ ಹೆದರುತ್ತೀರಿ ಎಂದು ಸಹ ಅರ್ಥೈಸಬಹುದು. ಆದ್ದರಿಂದ ಭವಿಷ್ಯದಲ್ಲಿ ಅಂತಹ ಕನಸನ್ನು ತಪ್ಪಿಸಲು ನೀವು ಮಾಡಬಹುದಾದ ಉತ್ತಮ ಕೆಲಸವೆಂದರೆ ನೀವು ಎಚ್ಚರವಾಗಿರುವಾಗ ಗೊಂದಲದ ಆಲೋಚನೆಗಳಿಂದ ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸುವುದು.
ಇದನ್ನು ಓದಿ
Swapna Shastra: ಕನಸಿನಲ್ಲಿ ತಾಯಿ, ಸಂಬಂಧಿಕರು ಕಂಡರೆ ಏನರ್ಥ; ಈ ಕನಸಿನ ಸೂಚನೆ ಏನು; ಸ್ವಪ್ನಶಾಸ್ತ್ರದ ಉತ್ತರ
ಕನಸು ಎಲ್ಲರೂ ಕಾಣುತ್ತಾರೆ. ರಾತ್ರಿ ಮಲಗಿದ್ದಾಗ ನಾವು ಕಾಣುವ ಚಿತ್ರ ವಿಚಿತ್ರ ಕನಸುಗಳು ನಮಗೆ ಆಶ್ವರ್ಯ ಹುಟ್ಟಿಸುವುದು ಸುಳ್ಳಲ್ಲ. ಕೆಲವು ಕನಸುಗಳು ಭಯ ಪಡಿಸಿದರೆ ಕೆಲವು ಕನಸುಗಳು ನಗು ತರಿಸುತ್ತವೆ. ಇನ್ನೂ ಕೆಲವು ಕನಸುಗಳು ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ಒಟ್ಟಾರೆ ಕನಸುಗಳಿಗೆ ನಾವು ಅರ್ಥ ಹುಡುಕುವುದಂತೂ ನಿಜ. ಇಂದಿನ ಸ್ವಪ್ನಶಾಸ್ತ್ರದಲ್ಲಿ ನಮ್ಮ ಆತ್ಮೀಯರು ಕನಸಿನಲ್ಲಿ ಬಂದರೆ ಏನರ್ಥ ಎಂಬುದನ್ನು ತಿಳಿಯೋಣ.