ವೃಷಭ ರಾಶಿ ಭವಿಷ್ಯ ಆಗಸ್ಟ್ 27: ವೃತ್ತಿ ಜೀವನದಲ್ಲಿ ಹಿನ್ನಡೆ, ಹಣಕಾಸಿನ ಬಗ್ಗೆ ಎಚ್ಚರವಹಿಸಿ
Taurus Daily Horoscope August 27, 2024: ರಾಶಿಚಕ್ರಗಳ ಪೈಕಿ ಎರಡನೇಯದು ವೃಷಭ ರಾಶಿಚಕ್ರದ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ವೃಷಭ ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಯೇ ವೃಷಭ ರಾಶಿ. ಆಗಸ್ಟ್ 26ರ ವೃಷಭ ರಾಶಿ ಭವಿಷ್ಯದ ಪ್ರಕಾರ,ಸಂಗಾತಿಯೊಂದಿಗೆ ಜಗಳವಾಡುವುದನ್ನು ತಪ್ಪಿಸಿ, ಮಕ್ಕಳಿಗೆ ಆಡುವಾಗ ಗಾಯವಾಗುವ ಸಾಧ್ಯತೆಯಿದೆ. ಹಾಗಾಗಿ ಎಚ್ಚರ ಅವಶ್ಯ.
ವೃಷಭ ರಾಶಿಯವರ ಇಂದಿನ (ಆಗಸ್ಟ್ 27, ಮಂಗಳವಾರ) ದಿನ ಭವಿಷ್ಯದಲ್ಲಿ ಸಂತೋಷವಾಗಿರಿ ಮತ್ತು ಆಪ್ತರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಇಂದು ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಂತೋಷದಿಂದ ಕಳೆಯಿರಿ. ನಿಮ್ಮ ಕಾರ್ಯಕ್ಷಮತೆಯಿಂದ ಕಚೇರಿಯಲ್ಲಿ ಹಿರಿಯರನ್ನು ಸಂತೋಷವಾಗಿರಿಸಿಕೊಳ್ಳಿ. ಆಹಾರ ಪದ್ಧತಿಯ ಮೇಲೆ ಗಮನ ಹರಿಸಿ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ವೃಷಭ ರಾಶಿ ಪ್ರೇಮ ಜೀವನ (Taurus Love Horoscope): ಒಟ್ಟಿಗೆ ಹೆಚ್ಚು ಸಮಯ ಕಳೆಯುವ ಮೂಲಕ ಸಂಬಂಧದಲ್ಲಿ ಸಂತೋಷವನ್ನು ಕಂಡುಕೊಳ್ಳಿ. ನಿಮ್ಮ ಸಂಗಾತಿ ಇಮ್ಮನ್ನು ತುಂಬಾ ಇಷ್ಟ ಪಡುತ್ತಾರೆ. ನೀವು ಭಿನ್ನಾಭಿಪ್ರಾಯಗಳನ್ನು ಹೊಂದಿರುವಾಗ, ನಿಮ್ಮ ಸಂಗಾತಿಯೊಡನೆ ಮುಕ್ತವಾಗಿ ಮಾತನಾಡಿ ಎಲ್ಲವನ್ನೂ ಪರಿಹರಿಸಿಕೊಳ್ಳಿ. ಮಿಯೊಂದಿಗೆ ವಾದ ಮಾಡಬೇಡಿ ಮತ್ತು ಬದಲಿಗೆ ಆರೋಗ್ಯಕರ ಚರ್ಚೆಗಳನ್ನು ಮಾಡಿ. ಪ್ರೇಮ ಜೀವನದಲ್ಲಿ ಹೊರಗಿನವರ ಹಸ್ತಕ್ಷೇಪವನ್ನು ಮಾಡಬಹುದು. ಆದರೆ ಒಬ್ಬರ ಮೇಲೆ ಇನ್ನೊಬ್ಬರು ನಂಬಿಕೆ ಇಟ್ಟುಕೊಂಡರೆ ಉತ್ತಮ.
ವೃಷಭ ರಾಶಿ ವೃತ್ತಿ ಭವಿಷ್ಯ (Taurus Professional Horoscope): ವೃತ್ತಿಪರ ಸಾಮರ್ಥ್ಯವನ್ನು ಸಾಬೀತುಪಡಿಸಲು ಹೊಸ ಸವಾಲುಗಳನ್ನು ತೆಗೆದುಕೊಳ್ಳುವುದರತ್ತ ಗಮನವಿರಲಿ. ನೀವು ಏನು ಎಂಬುದು ನಿಮಗಷ್ಟೇ ತಿಳಿದಿದ್ದರೆ ಸಾಲದು ಇನ್ನೊಬ್ಬರಿಗೂ ತಿಳಿದಿರಬೇಕು. ಆಗ ಮಾತ್ರ ನಿಮ್ಮ ವೃತ್ತಿ ಜೀವನದಲ್ಲಿ ಬೆಳವಣಿಗೆ ಆಗಲು ಸಾಧ್ಯವಾಗುತ್ತದೆ. ನೀವು ಕೆಲಸದ ಕಾರಣಗಳಿಗಾಗಿ ಪ್ರಯಾಣಿಸಬಹುದು ಆದರೆ ಆರೋಗ್ಯ ಮತ್ತು ಐಟಿ ವೃತ್ತಿಪರರು ಜೊತೆಗೆ ಬಾಣಸಿಗರು ಮತ್ತು ಬ್ಯಾಂಕರ್‌ಗಳು ವರ್ಕ್‌ಸ್ಟೇಷನ್‌ನಲ್ಲಿ ಹೆಚ್ಚಿನ ಸಮಯವನ್ನು ಕಳೆಯಬೇಕಾಗುತ್ತದೆ.
ವೃಷಭ ರಾಶಿ ಆರ್ಥಿಕ ಜೀವನ (Taurus Money Horoscope): ಸಂಪತ್ತು ಧನಾತ್ಮಕವಾಗಿರುತ್ತದೆ ಮತ್ತು ಹಿಂದಿನ ಹೂಡಿಕೆಗಳಿಂದ ಉತ್ತಮ ಆದಾಯವನ್ನು ನೀವು ಪಡೆದುಕೊಳ್ಳುತ್ತೀರಿ. ಆ ಕಾರಣದಿಂದ ಯಾವುದೇ ಹೆಚ್ಚಿನ ಆರ್ಥಿಕ ಸಮಸ್ಯೆ ನಿಮಗೆ ಇಂದು ಎದುರಾಗುವುದಿಲ್ಲ. ಬಾಕಿ ಉಳಿದಿರುವ ಎಲ್ಲಾ ಬಾಕಿಗಳನ್ನು ನೀವಿಂದು ಕ್ಲಿಯರ್ ಮಾಡುವಿರಿ. ದಿನದ ದ್ವಿತೀಯಾರ್ಧವು ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಫ್ಯಾಷನ್ ಪರಿಕರಗಳಿಗಾಗಿ ಶಾಪಿಂಗ್ ಮಾಡಲು ಉತ್ತಮವಾಗಿದೆ. ವಿದ್ಯಾರ್ಥಿಗಳು ಇಂದು ಶುಲ್ಕ ಮತ್ತು ಪುಸ್ತಕಗಳಿಗಾಗಿ ಖರ್ಚು ಮಾಡಬೇಕಾಗಬಹುದು.
ವೃಷಭ ರಾಶಿ ಆರೋಗ್ಯ ಭವಿಷ್ಯ (Taurus Health Horoscope): ಆರೋಗ್ಯ ಇಂದು ಸಾಮಾನ್ಯವಾಗಿರುತ್ತದೆ. ಮಧುಮೇಹ ಹೊಂದಿರುವ ಮಹಿಳೆಯರು ಇಂದು ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ಸಮಸ್ಯೆ ಆಗುತ್ತದೆ. ಆಹಾರದ ಮೇಲೆ ನಿಯಂತ್ರಣವನ್ನು ಹೊಂದಿರುವುದು ಅತ್ಯಗತ್ಯ. ಕೆಲವು ಮಕ್ಕಳು ವೈರಲ್ ಜ್ವರದಿಂದ ಬಳಲುತ್ತಾರೆ. ಚರ್ಮದ ಅಲರ್ಜಿಗಳು ಸಹ ಉಂಟಾಗಬಹುದು. ಇಂದು ಆಲ್ಕೋಹಾಲ್ ಮತ್ತು ತಂಬಾಕನ್ನು ತ್ಯಜಿಸಿ. ಗರ್ಭಿಣಿ ಸ್ತ್ರೀಯರು ಹುಷಾರಾಗಿರಿ. ಗರ್ಭಧಾರಣೆಯ ಸಂಬಂಧಿತ ಸಮಸ್ಯೆಗಳ ಸಾಧ್ಯತೆಗಳು ಹೆಚ್ಚು.
ವೃಷಭ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ವೃಷಭ ರಾಶಿಗೆ ಅಧಿಪತಿ: ಶುಕ್ರ, ವೃಷಭ ರಾಶಿಯವರಿಗೆ ಶುಭ ದಿನಾಂಕಗಳು: 5, 6, 15, 18, 19, 20, 25, 29. ವೃಷಭ ರಾಶಿಯವರಿಗೆ ಶುಭ ದಿನಗಳು: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ. ವೃಷಭ ರಾಶಿಯವರಿಗೆ ಶುಭ ಸಂಖ್ಯೆಗಳು: 5, 6, 8. ವೃಷಭ ರಾಶಿಯವರಿಗೆ ಶುಭ ವರ್ಣ: ಪಿಂಕ್, ಹಸಿರು ಮತ್ತು ಬಿಳಿ. ವೃಷಭ ರಾಶಿಯವರಿಗೆ ಅಶುಭ ವರ್ಣ: ಕೆಂಪು ಮತ್ತು ಹಳದಿ. ವೃಷಭ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ ಮತ್ತು ನೈರುತ್ಯ. ವೃಷಭ ರಾಶಿಯವರಿಗೆ ಶುಭ ತಿಂಗಳು: ಜನವರಿ 15 ರಿಂದ ಏಪ್ರಿಲ್15. ವೃಷಭ ರಾಶಿಯವರಿಗೆ ಶುಭ ಹರಳು: ಹಸಿರು ಪಚ್ಚೆ ಮತ್ತು ನೀಲಮಣಿ. ವೃಷಭ ರಾಶಿಯವರಿಗೆ ಶುಭ ರಾಶಿ: ಮಿಥುನ, ಕನ್ಯಾ ಮತ್ತು ಮಕರ. ವೃಷಭ ರಾಶಿಯವರಿಗೆ ಅಶುಭ ರಾಶಿ: ಕಟಕ, ಧನುಸ್ಸು ಮತ್ತು ಮೇಷ.
ವೃಷಭ ರಾಶಿಯವರಿಗೆ ಶುಭಫಲಕ್ಕಾಗಿ ಸರಳ ಪರಿಹಾರಗಳು
1) ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಶ್ರೀ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳಿಸಿಕೊಳ್ಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
2) ಈ ದಾನಗಳಿಂದ ಶುಭ ಫಲ: ಬಿಳಿಬಣ್ಣದ ಬಟ್ಟೆ ಮತ್ತು ಗೋಧಿ ಅಥವಾ ರವೆಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮಕರ. ಮನೆಯಲ್ಲಿಯೂ ಶ್ರೀ ಸತ್ಯನಾರಾಯಣ ಪೂಜೆ ಮಾಡಬಹುದು. ಹೂ ಬಿಡುವ ಗಿಡಗಳನ್ನು ಪೋಷಿಸಿದಲ್ಲಿ ಎಲ್ಲಾರೀತಿಯ ಸಮಸ್ಯೆಗಳು ದೂರವಾಗುತ್ತವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ನೀಲಿ ಮತ್ತು ಹಸಿರು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.