ವೃಷಭ ರಾಶಿ ವಾರ ಭವಿಷ್ಯ: ಬದುಕಿನಲ್ಲಿ ಹಲವು ಏರಿಳಿತಗಳು ಎದುರಾಗಲಿವೆ, ಹೃದ್ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಷಭ ರಾಶಿ ವಾರ ಭವಿಷ್ಯ: ಬದುಕಿನಲ್ಲಿ ಹಲವು ಏರಿಳಿತಗಳು ಎದುರಾಗಲಿವೆ, ಹೃದ್ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕು

ವೃಷಭ ರಾಶಿ ವಾರ ಭವಿಷ್ಯ: ಬದುಕಿನಲ್ಲಿ ಹಲವು ಏರಿಳಿತಗಳು ಎದುರಾಗಲಿವೆ, ಹೃದ್ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕು

Taurus Weekly Horoscope 2024 July 28 - August 3: ರಾಶಿಚಕ್ರಗಳ ಪೈಕಿ ಎರಡನೇಯದು ವೃಷಭ ರಾಶಿಚಕ್ರದ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ವೃಷಭ ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಯೇ ವೃಷಭ ರಾಶಿ. ಜುಲೈ 28 ರಿಂದ ಆಗಸ್ಟ್‌ 3 ರವರೆಗಿನ ವೃಷಭ ರಾಶಿ ಭವಿಷ್ಯದ ಪ್ರಕಾರ, ಜೀವನದಲ್ಲಿ ಹಲವು ಸವಾಲುಗಳು ಎದುರಾಗಬಹುದು. ಆರೋಗ್ಯದ ಬಗ್ಗೆ ನಿಗಾ ವಹಿಸಿ.

ವೃಷಭ ರಾಶಿ ವಾರ ಭವಿಷ್ಯ: ಬದುಕಿನಲ್ಲಿ ಹಲವು ಏರಿಳಿತಗಳು ಎದುರಾಗಲಿವೆ, ಹೃದ್ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕು
ವೃಷಭ ರಾಶಿ ವಾರ ಭವಿಷ್ಯ: ಬದುಕಿನಲ್ಲಿ ಹಲವು ಏರಿಳಿತಗಳು ಎದುರಾಗಲಿವೆ, ಹೃದ್ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕು

ವೃಷಭ ರಾಶಿಯವರ ವಾರದ (ಜುಲೈ 28 ರಿಂದ ಆಗಸ್ಟ್‌ 3) ಭವಿಷ್ಯದಲ್ಲಿ ಈ ವಾರ ವೃಷಭ ರಾಶಿಯವರ ವೃತ್ತಿ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ. ಹಣಕಾಸಿನ ವಿಷಯಗಳಲ್ಲಿ ಅದೃಷ್ಟವು ನಿಮ್ಮ ಪಾಲಿಗಿದ್ದು, ಹಲವು ಅನುಕೂಲಗಳು ಒದಗಿ ಬರುತ್ತವೆ. ಸಾಂಸಾರಿಕ ಜೀವನವನ್ನು ಸರಿಪಡಿಸಲು ಇದು ಉತ್ತಮ ವಾರ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ.

ವೃಷಭ ರಾಶಿಯವರ ಪ್ರೇಮ ಜೀವನದ ವಾರ ಭವಿಷ್ಯ (Taurus Weekly Love Horoscope)

ಈ ವಾರ ನಿಮ್ಮ ಪ್ರೇಮ ಜೀವನದಲ್ಲಿ ಹಲವು ಏರಿಳಿತಗಳು ಎದುರಾಗಲಿವೆ. ನಿಮ್ಮ ಸಣ್ಣ ಅಹಂ ಭಾವವು ಸಂಬಂಧಗಳಲ್ಲಿ ಮನಸ್ತಾಪಕ್ಕೆ ಕಾರಣವಾಗಬಹುದು. ಸಂಗಾತಿಯೊಂದಿಗೆ ಹಿಂದೆ ನಡೆದ ವಿಚಾರಗಳ ಚರ್ಚೆ ಬೇಡ. ವೃಷಭ ರಾಶಿಯ ಕೆಲವರಿಗೆ ಬ್ರೇಕ್‌ಅಪ್‌ ಆಗುವ ಸಾಧ್ಯತೆ ಇದೆ. ಈ ರಾಶಿಯ ಮಹಿಳೆಯರು ಮನಸ್ಸಿಗೆ ಹಿಡಿಸಿದ ವ್ಯಕ್ತಿಯ ಮುಂದೆ ಪ್ರೇಮನಿವೇದನೆ ಮಾಡಬಹುದು. ನಿಮ್ಮ ಆಲೋಚನೆಗಳು ಸಂಗಾತಿಗೆ ಹೊಂದಿಕೆಯಾಗದೇ ಇರಬಹುದು. ಈ ವಾರ ನೀವು ಸಂಗಾತಿ ಅಥವಾ ಪೋಷಕರನ್ನು ಭೇಟಿ ಮಾಡಬಹುದು.

ವೃಷಭ ರಾಶಿಯವರ ವೃತ್ತಿ ಜೀವನದ ವಾರದ ಭವಿಷ್ಯ (Taurus Weekly Professional Horoscope)

ವೃತ್ತಿಪರ ಜೀವನದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಿ. ಕಚೇರಿಯಲ್ಲಿ ನಡೆಯುವ ರಾಜಕೀಯವು ನಿಮ್ಮ ನಿಮ್ಮ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಕಚೇರಿಯಲ್ಲಿ ಯಾರಾದರೂ ನಿಮ್ಮ ಇಮೇಜ್ ಹಾಳು ಮಾಡಲು ಪ್ರಯತ್ನಿಸಬಹುದು. ಮೀಟಿಂಗ್‌ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವಾಗ ಜಾಗರೂಕರಾಗಿರಿ. ಕಚೇರಿಯಲ್ಲಿ ಪ್ರಮುಖ ಯೋಜನೆಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಾಗಿರಿ. ಈ ವಾರ ನೀವು ಉದ್ಯೋಗ ಬದಲಿಸುವ ಯೋಚನೆ ಮಾಡಬಹುದು. ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ವೃದ್ಧಿಸಲು ಹೊಸ ಅವಕಾಶಗಳನ್ನು ಪಡೆಯುತ್ತಾರೆ. ನೀವು ಆತ್ಮವಿಶ್ವಾಸದಿಂದ ಮುಂದೆ ಸಾಗಿದರೆ ಹೊಸ ವ್ಯಾಪಾರ ಮಾಡಲು ಸಾಧ್ಯವಾಗುತ್ತದೆ.

ವೃಷಭ ರಾಶಿಯವರ ಆರ್ಥಿಕ ಜೀವನದ ವಾರ ಭವಿಷ್ಯ (Taurus Weekly Money Horoscope)

ಈ ವಾರ ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಜೀವನದಲ್ಲಿ ಸಂತೋಷ, ಸಮೃದ್ಧಿ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಹೊಸ ವಾಹನ ಖರೀದಿಗೆ ಈ ವಾರ ಶುಭಕರವಾಗಿರುತ್ತದೆ. ಆಸ್ತಿಗೆ ಸಂಬಂಧಿಸಿದ ಕಾನೂನು ವಿವಾದಗಳಲ್ಲಿ ಯಶಸ್ಸು ಇರುತ್ತದೆ. ಉದ್ಯಮಿಗಳು ಹೊಸ ಸ್ಥಳಗಳಿಂದ ಸುಲಭವಾಗಿ ಹಣವನ್ನು ಪಡೆಯುತ್ತಾರೆ. ಈ ವಾರ ನೀವು ಆಪ್ತ ಸ್ನೇಹಿತ ಅಥವಾ ಒಡಹುಟ್ಟಿದವರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗುವ ಪರಿಸ್ಥಿತಿ ಎದುರಾಗಬಹುದು.

ವೃಷಭ ರಾಶಿಯವರ ವಾರದ ಆರೋಗ್ಯ ಭವಿಷ್ಯ (Taurus Weekly Health Horoscope)

ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ. ವ್ಯಾಯಾಮದೊಂದಿಗೆ ದಿನವನ್ನು ಪ್ರಾರಂಭಿಸಿ. ನಿಮ್ಮ ಆಹಾರದಲ್ಲಿ ಪ್ರೋಟೀನ್ ಮತ್ತು ಪೋಷಣೆಯಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇರಿಸಿ. ಹೃದ್ರೋಗಿಗಳು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು.

ವೃಷಭ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ವೃಷಭ ರಾಶಿಗೆ ಅಧಿಪತಿ: ಶುಕ್ರ, ವೃಷಭ ರಾಶಿಯವರಿಗೆ ಶುಭ ದಿನಾಂಕಗಳು: 5, 6, 15, 18, 19, 20, 25, 29. ವೃಷಭ ರಾಶಿಯವರಿಗೆ ಶುಭ ದಿನಗಳು: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ. ವೃಷಭ ರಾಶಿಯವರಿಗೆ ಶುಭ ಸಂಖ್ಯೆಗಳು: 5, 6, 8. ವೃಷಭ ರಾಶಿಯವರಿಗೆ ಶುಭ ವರ್ಣ: ಪಿಂಕ್, ಹಸಿರು ಮತ್ತು ಬಿಳಿ. ವೃಷಭ ರಾಶಿಯವರಿಗೆ ಅಶುಭ ವರ್ಣ: ಕೆಂಪು ಮತ್ತು ಹಳದಿ. ವೃಷಭ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ ಮತ್ತು ನೈರುತ್ಯ. ವೃಷಭ ರಾಶಿಯವರಿಗೆ ಶುಭ ತಿಂಗಳು: ಜನವರಿ 15 ರಿಂದ ಏಪ್ರಿಲ್15. ವೃಷಭ ರಾಶಿಯವರಿಗೆ ಶುಭ ಹರಳು: ಹಸಿರು ಪಚ್ಚೆ ಮತ್ತು ನೀಲಮಣಿ. ವೃಷಭ ರಾಶಿಯವರಿಗೆ ಶುಭ ರಾಶಿ: ಮಿಥುನ, ಕನ್ಯಾ ಮತ್ತು ಮಕರ. ವೃಷಭ ರಾಶಿಯವರಿಗೆ ಅಶುಭ ರಾಶಿ: ಕಟಕ, ಧನುಸ್ಸು ಮತ್ತು ಮೇಷ.

ವೃಷಭ ರಾಶಿಯವರಿಗೆ ಶುಭಫಲಕ್ಕಾಗಿ ಸರಳ ಪರಿಹಾರಗಳು

1)ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಶ್ರೀ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳಿಸಿಕೊಳ್ಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

2)ಈ ದಾನಗಳಿಂದ ಶುಭ ಫಲ: ಬಿಳಿಬಣ್ಣದ ಬಟ್ಟೆ ಮತ್ತು ಗೋಧಿ ಅಥವಾ ರವೆಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.

3)ದೇವಸ್ಥಾನ ಮತ್ತು ದೇವರ ಪೂಜೆ:ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮಕರ. ಮನೆಯಲ್ಲಿಯೂ ಶ್ರೀ ಸತ್ಯನಾರಾಯಣ ಪೂಜೆ ಮಾಡಬಹುದು. ಹೂ ಬಿಡುವ ಗಿಡಗಳನ್ನು ಪೋಷಿಸಿದಲ್ಲಿ ಎಲ್ಲಾರೀತಿಯ ಸಮಸ್ಯೆಗಳು ದೂರವಾಗುತ್ತವೆ.

4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ನೀಲಿ ಮತ್ತು ಹಸಿರು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.