ವೃಷಭ ರಾಶಿ ವಾರ ಭವಿಷ್ಯ; ವಾಹನ ಖರೀದಿ ಯೋಗ, ಹಟದ ಸ್ವಭಾವ ಕೊಂಚ ಸಮಸ್ಯೆ ಉಂಟುಮಾಡಬಹುದು, ಆರೋಗ್ಯ ಜೋಪಾನ
Taurus Weekly Horoscope 2024 July 14 - 20: ರಾಶಿಚಕ್ರಗಳಪೈಕಿ ಎರಡನೇಯದು ವೃಷಭ ರಾಶಿಚಕ್ರದ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ವೃಷಭ ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಯೇ ವೃಷಭ. ಈ ವಾರ ವೃಷಭ ರಾಶಿ ವಾರ ಭವಿಷ್ಯ ಪ್ರಕಾರ, ವಾಹನ ಖರೀದಿ ಯೋಗ, ಹಟದ ಸ್ವಭಾವ ಕೊಂಚ ಸಮಸ್ಯೆ ಉಂಟುಮಾಡಬಹುದು. ಆರೋಗ್ಯ ಜೋಪಾನಮಾಡಬೇಕು ಎನ್ನುತ್ತಿದೆ ರಾಶಿ ಭವಿಷ್ಯ.
ಬಹುತೇಕ ಜನರು ತಮ್ಮ ದಿನಚರಿ ಆರಂಭಿಸುವ ಮೊದಲು, ಮಹತ್ವದ ಕೆಲಸ ಕೈಗೊಳ್ಳುವ ಮೊದಲು ತಮ್ಮ ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ನೀಡಿರುವ ವಾರ ಭವಿಷ್ಯವನ್ನು ಆಧರಿಸಿದ ವೃಷಭ ರಾಶಿಯ ವಾರ ಭವಿಷ್ಯ ಇಲ್ಲಿದೆ.
ವೃಷಭ ರಾಶಿ ವಾರ ಭವಿಷ್ಯ ಪ್ರಕಾರ ಈ ವಾರ ಅಂದರೆ ಜುಲೈ 14 ರಿಂದ 20ರ ಅವಧಿಯಲ್ಲಿ ಕುಟುಂಬ ಸದಸ್ಯರ ಸಹಕಾರ ಚೆನ್ನಾಗಿರಲಿದೆ. ವಾಹನ ಖರೀದಿ ಯೋಗವೂ ಇದೆ. ಹಟ ಸ್ವಭಾವ ಕೊಂಚ ಸಮಸ್ಯೆ ಉಂಟುಮಾಡಬಹುದು.
ವೃಷಭ ರಾಶಿ ಪ್ರೇಮ ಜೀವನ (Taurus Love Horoscope): ವೃಷಭ ರಾಶಿಯವರ ಪ್ರೇಮ ಜೀವನ ಈ ವಾರ ಉತ್ತಮವಾಗಿರಲಿದೆ. ವಿವಾಹಿತರ ನಡುವೆ ಉತ್ತಮ ಅನುಬಂಧ ಕಂಡುಬರುತ್ತದೆ. ಮದುವೆಯಾಗದವರ ಬಾಳಿನಲ್ಲೂ ಉತ್ತಮ ದಿನಗಳಿವೆ. ಇನ್ನು ಕೌಟುಂಬಿಕವಾಗಿ ನೋಡುವುದಾದರೆ ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಈ ರಾಶಿಯವರದ್ದೇ ಆಗಲಿದೆ.
ವೃಷಭ ರಾಶಿ ವಾರ ಭವಿಷ್ಯ; ಉದ್ಯೋಗ, ಆದಾಯ, ಆರೋಗ್ಯ
ವೃಷಭ ರಾಶಿ ವೃತ್ತಿ ಭವಿಷ್ಯ (Taurus Professional Horoscope): ವೃತ್ತಿ ಕ್ಷೇತ್ರದಲ್ಲಿ ಈ ವಾರ ಉತ್ತಮ ಬೆಳವಣಿಗೆಗಳನ್ನು ನಿರೀಕ್ಷಿಸಬಹುದು. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆಗಳು ಉಂಟಾಗಬಹುದು. ಅನಿರೀಕ್ಷಿತ ಕೆಲಸಕಾರ್ಯಗಳ ಕಾರಣ ದೈನಂದಿನ ಕಾರ್ಯಕ್ರಮಗಳ ಬದಲಾವಣೆ ಮಾಡಬೇಕಾಗುತ್ತದೆ. ಹಠದ ಗುಣವನ್ನು ಕಡಿಮೆ ಮಾಡುವುದು ಎಲ್ಲರಿಂದಲೂ ಒಳ್ಳೆಯದು.
ವೃಷಭ ರಾಶಿ ಆರ್ಥಿಕ ಜೀವನ (Taurus Money Horoscope): ಈ ವಾರದ ಆರ್ಥಿಕ ಭವಿಷ್ಯ ಚೆನ್ನಾಗಿದೆ. ಸಾಕಷ್ಟು ಹಣ ಓಡಾಡಲಿದೆ. ಸ್ವಂತ ಬಳಕೆಗಾಗಿ ವಾಹನವೊಂದನ್ನು ಕೊಳ್ಳುವಿರಿ. ನೂತನ ಹಣಕಾಸಿನ ಯೋಜನೆಯನ್ನು ರೂಪಿಸುವಿರಿ. ಕುಟುಂಬದಲ್ಲಿನ ಸಹಕಾರದ ಗುಣದಿಂದಾಗಿ ನೆಮ್ಮದಿ ಇರುತ್ತದೆ.
ವೃಷಭ ರಾಶಿ ಆರೋಗ್ಯ ಭವಿಷ್ಯ (Taurus Health Horoscope): ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ದೀರ್ಘಕಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಪ್ರಾಣಾಯಾಮವನ್ನು ಅನುಸರಿಸಬಹುದು. ದೈನಂದಿನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ.
ವೃಷಭ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ವೃಷಭ ರಾಶಿಗೆ ಅಧಿಪತಿ: ಶುಕ್ರ, ವೃಷಭ ರಾಶಿಯವರಿಗೆ ಶುಭ ದಿನಾಂಕಗಳು: 5, 6, 15, 18, 19, 20, 25, 29. ವೃಷಭ ರಾಶಿಯವರಿಗೆ ಶುಭ ದಿನಗಳು: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ. ವೃಷಭ ರಾಶಿಯವರಿಗೆ ಶುಭ ಸಂಖ್ಯೆಗಳು: 5, 6, 8. ವೃಷಭ ರಾಶಿಯವರಿಗೆ ಶುಭ ವರ್ಣ: ಪಿಂಕ್, ಹಸಿರು ಮತ್ತು ಬಿಳಿ. ವೃಷಭ ರಾಶಿಯವರಿಗೆ ಅಶುಭ ವರ್ಣ: ಕೆಂಪು ಮತ್ತು ಹಳದಿ. ವೃಷಭ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ ಮತ್ತು ನೈರುತ್ಯ. ವೃಷಭ ರಾಶಿಯವರಿಗೆ ಶುಭ ತಿಂಗಳು: ಜನವರಿ 15 ರಿಂದ ಏಪ್ರಿಲ್15. ವೃಷಭ ರಾಶಿಯವರಿಗೆ ಶುಭ ಹರಳು: ಹಸಿರು ಪಚ್ಚೆ ಮತ್ತು ನೀಲಮಣಿ. ವೃಷಭ ರಾಶಿಯವರಿಗೆ ಶುಭ ರಾಶಿ: ಮಿಥುನ, ಕನ್ಯಾ ಮತ್ತು ಮಕರ. ವೃಷಭ ರಾಶಿಯವರಿಗೆ ಅಶುಭ ರಾಶಿ: ಕಟಕ, ಧನುಸ್ಸು ಮತ್ತು ಮೇಷ.
ವೃಷಭ ರಾಶಿಯವರಿಗೆ ಶುಭಫಲಕ್ಕಾಗಿ ಸರಳ ಪರಿಹಾರಗಳು
1)ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಶ್ರೀ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳಿಸಿಕೊಳ್ಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
2)ಈ ದಾನಗಳಿಂದ ಶುಭ ಫಲ: ಬಿಳಿಬಣ್ಣದ ಬಟ್ಟೆ ಮತ್ತು ಗೋಧಿ ಅಥವಾ ರವೆಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3)ದೇವಸ್ಥಾನ ಮತ್ತು ದೇವರ ಪೂಜೆ:ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮಕರ. ಮನೆಯಲ್ಲಿಯೂ ಶ್ರೀ ಸತ್ಯನಾರಾಯಣ ಪೂಜೆ ಮಾಡಬಹುದು. ಹೂ ಬಿಡುವ ಗಿಡಗಳನ್ನು ಪೋಷಿಸಿದಲ್ಲಿ ಎಲ್ಲಾರೀತಿಯ ಸಮಸ್ಯೆಗಳು ದೂರವಾಗುತ್ತವೆ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ನೀಲಿ ಮತ್ತು ಹಸಿರು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ.
ವಿಭಾಗ