ಶ್ವಾನಗಳಲ್ಲಿ ಇರುವ 5 ಅಧ್ಯಾತ್ಮಿಕ ಮಹಾಶಕ್ತಿಗಳಿವು; ಮನುಷ್ಯನ ಮನಸ್ಥಿಗೆ ತಕ್ಕಂತೆ ಸ್ಪಂದಿಸುವ ಗುಣವೂ ಇರುತ್ತೆ
ವೈಬ್ ಡಿಟೆಕ್ಟರ್ ಸೇರಿದಂತೆ ಶ್ವಾನಗಳಲ್ಲಿ ಗಮನಾರ್ಹವಾದ ಅಧ್ಯಾತ್ಮಿಕ ಶಕ್ತಿಗಳಿವೆ. ಮನುಷ್ಯನ ಮನಸ್ಥಿತಿಗೆ ತಕ್ಕಂತೆ ಸ್ಪಂದಿಸುವ ಗುಣ ಮಾತ್ರ ಅಚ್ಚರಿ ಮೂಡಿಸುತ್ತೆ. ಶ್ವಾನಗಳಲ್ಲಿ ಇರುವ 5 ಅಧ್ಯಾತ್ಮಿಕ ಮಹಾಶಕ್ತಿಗಳ ಬಗ್ಗೆ ತಿಳಿಯಿರಿ.

ಮನುಷ್ಯ ಮತ್ತು ನಾಯಿಗಳಿಗೆ ಅವಿನಾಭಾವ ಸಂಬಂಧ. ಸ್ನೇಹ ಮತ್ತು ಪ್ರೀತಿಯನ್ನು ಹಂಚಿಕೊಳ್ಳುತ್ತವೆ. ಬಹುತೇಕ ಎಲ್ಲರ ಮನೆಗಳಲ್ಲಿ, ಜೀವನ ಹಾಗೂ ಭಾವನೆಗಳನ್ನು ಪ್ರೀತಿಯ ಪ್ರಾಣಿಗಳೊಂದಿಗೆ ಹಂಚಿಕೊಳ್ಳುತ್ತೇವೆ. ಮನುಷ್ಯ ಮತ್ತು ಸಾಕು ಪ್ರಾಣಿಗಳ ನಡುವಿನ ಸಂಬಂಧವನ್ನು ವರ್ಣಿಸಲಾಗುದು. ಅಷ್ಟರ ಮಟ್ಟಿಗೆ ಸಂಬಂಧವನ್ನು ಹೊಂದಿರುತ್ತವೆ. ನಾವು ಹೇಗೆ ಇರುತ್ತವೆ, ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನಾಯಿಗಳು ಗಮನಿಸುತ್ತವೆ. ಅವು ಕೂಡ ನಮ್ಮ ಮನಸ್ಥಿತಿಗೆ ತಕ್ಕಂತ ಪ್ರತಿಕ್ರಿಯಿಸುತ್ತವೆ ಎಂದು ಅಧ್ಯಯಗಳಿಂದ ತಿಳಿದು ಬಂದಿದೆ. ಶ್ವಾನಗಳಲ್ಲಿ ಇರುವಂತಹ 5 ಅಧ್ಯಾತ್ಮಿಕ ಮಹಾಶಕ್ತಿಗಳ ಬಗ್ಗೆ ತಿಳಿಯೋಣ.
1.ವೈಬ್ ಡಿಟೆಕ್ಟರ್
ನಾವು ಸಂತೋಷವಾಗಿದ್ದೇವೆಯೇ, ದುಃಖದಲ್ಲಿದ್ದೇವೆಯೇ ಅಥವಾ ಅಸಮಾಧಾನಗೊಂಡಿದ್ದೇವೆಯೇ ಎಂದು ತಿಳಿಯಲು ಶ್ವಾನಗಳು ನಮ್ಮ ಮುಖಭಾವಗಳನ್ನು ನೋಡುತ್ತವೆ. ನಮ್ಮ ಮನಸ್ಥಿತಿಯನ್ನು ಊಹಿಸಲು ನಾವು ಹೇಗೆ ನಿಲ್ಲುತ್ತೇವೆ, ಚಲಿಸುತ್ತೇವೆ ಅಥವಾ ವರ್ತಿಸುತ್ತೇವೆ ಎಂಬುದನ್ನು ಸಹ ಗಮನಿಸುತ್ತವೆ. ನಮ್ಮ ಧ್ವನಿಯ ಆಧಾರದ ಮೇಲೆ ನಾವು ಹೇಗೆ ಭಾವಿಸುತ್ತೇವೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತವೆ. ಇದು ನಾಯಿಗಳಲ್ಲಿ ಇರುವ ವೈಬ್ ಡಿಟೆಕ್ಟರ್
2. ಔರಾ ಕ್ಲೆನ್ಸರ್
ತುಂಬಾ ದಿನಗಳ ನಂತರ ನಿಮ್ಮ ಮುದ್ದಿನ ಶ್ವಾನದ ಬಳಿ ಹೋಗಿ ನೋಡಿ. ಮೊದಲಿನಂತೆಯೇ ನಿಮ್ಮ ಮೇಲೆ ಎರಗಿ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ನಿಮ್ಮ ಧ್ವನಿ ಕೇಳುವಷ್ಟರಲ್ಲಿ ಇವರೇ ತನ್ನ ಮಾಲೀಕ ಎಂಬುದನ್ನು ಶ್ವಾನ, ಸುಲಭವಾಗಿ ಕಂಡು ಹಿಡಿಯುತ್ತದೆ. ಇಂತಹ ಸಂದರ್ಭದಲ್ಲಿ ಶ್ವಾನದ ಭಾವನಾತ್ಮಕ ಸ್ಥಿರತೆ ತೆರೆದುಕೊಳ್ಳುತ್ತದೆ.
3. ನೋವನ್ನು ಗ್ರಹಿಸುವ ಶಕ್ತಿ
ನಾಯಿಗಳಿಗೆ ನೋವನ್ನು ಗ್ರಹಿಸುವ ಶಕ್ತಿ ಇರುತ್ತದೆ. ದೈಹಿಕ, ಭಾವನಾತ್ಮಕ ಶಕ್ತಿ ಇರುತ್ತದೆ. ಮನುಷ್ಯನ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಆತನ ಮೇಲೆ ಎಗರುವುದು, ಎದೆಯ ಮೇಲೆ ಕಾಲಿಡುವಂತಹ ಸಾಹಸವನ್ನು ಮಾಡುತ್ತದೆ.
4. ಪವಿತ್ರ ಸ್ಥಳದ ರಕ್ಷಕರು
ಮನೆ ಸೇರಿದಂತೆ ಯಾವುದೇ ವಸ್ತು ಅಥವಾ ಸ್ಥಳವನ್ನು ತುಂಬಾ ಎಚ್ಚರಿಕೆಯಿಂದ ಕಾಪಾಡುತ್ತವೆ. ಇವುಗಳ ನಿಷ್ಠೆಗೆ ಬೆಲೆ ಕಟ್ಟಲಾಗದು. ಇವು ನಿಮ್ಮ ಸ್ಥಳವನ್ನು ಕಳ್ಳರಿಂದ ಮಾತ್ರವಲ್ಲದೆ, ಕೆಟ್ಟ ಕಂಪನಗಳಿಂದಲೂ ರಕ್ಷಿಸುತ್ತವೆ ಎಂದು ಜ್ಯೋತಿಷ್ಯ ಹೇಳುತ್ತದೆ.
5. ವರ್ತಮಾನದ ಗುರು
ಶ್ವಾನಗಳು ಹಿಂದೆ ಏನಾಯಿತು ಎಂಬುದರ ಬಗ್ಗೆ ಯೋಚಿಸುವುದಿಲ್ಲ ಎಂದು ಅಧ್ಯಾಯನಗಳು ಹೇಳುತ್ತವೆ. ಆದರೆ ವರ್ತಮಾನದಲ್ಲಿ ಬದುಕುವುದರ ಬಗ್ಗೆ ಚಿಂತಿಸುತ್ತವೆ, ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಶ್ವಾನಗಳು ಎಂದಿಗೂ ಮೋಸ ಮಾಡುವುದಿಲ್ಲ, ನಾಟಕ ಮಾಡುವುದಿಲ್ಲ, ನಿಯತ್ತಿನಿಂದ ನಡೆದುಕೊಳ್ಳುತ್ತವೆ. ಜ್ಞಾಪಕ ಶಕ್ತಿ ಮಾತ್ರ ಅದ್ಭುತ ಎನ್ನುವಂತೆ ಇರುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)