ಲವ್ ಬ್ರೇಕಪ್ ಆಗಿ ಕುಗ್ಗಿರೋರಿಗೆ ಸಮಾಧಾನ ಮಾಡೋಕೆ ಈ ರಾಶಿಯವರೇ ಬೆಸ್ಟ್ ಅಂತೆ; ನೋವು ಮರೆಸೋ ಗುಣ ಇರುವ 6 ರಾಶಿಗಳಿವು
ಲವ್ ಬ್ರೇಕಪ್ ಆದ ದಿನಗಳು ಬಹಳಷ್ಟು ನೋವು ತರುವ ಸಮಯವಾಗಿರುತ್ತದೆ. ಇಂತಹ ಸಮಯದಲ್ಲಿ ನಿಮ್ಮನ್ನ ಅರಿತು ನಿಮ್ಮ ನೋವಿಗೆ ಹೆಗಲಾಗುವ ಸ್ನೇಹಿತರಿದ್ದರೆ ಆ ದಿನಗಳನ್ನು ಸುಲಭವಾಗಿ ಜಯಿಸಬಹುದು. ಈ ರಾಶಿಯ ಸ್ನೇಹಿತರು ನಿಮ್ಮ ಜೊತೆಗಿದ್ದರೆ ನಿಮ್ಮ ನೋವಿನ ದಿನಗಳು ಸಂತೋಷದ ದಿನಗಳಾಗಿ ಬದಲಾಗುತ್ತದೆ.
ಸ್ನೇಹಿತರೆ ಹಾಗೆ, ನಿಮ್ಮೆಲ್ಲ ಸಂತೋಷದ ದಿನಗಳಲ್ಲಿ ಹೇಗೆ ಭಾಗಿಯಾಗುತ್ತಾರೋ ಅದೇ ರೀತಿ ನೋವಿನ ದಿನಗಳಲ್ಲೂ ನಿಮ್ಮೊಂದಿಗೆ ಇರುತ್ತಾರೆ. ಯಾವುದೇ ಪ್ರಶ್ನೆಗಳನ್ನು ಮಾಡದೇ ನಿಮ್ಮ ಕಷ್ಟ, ನೋವುಗಳಿಗೆ ಸಮಾಧಾನ ಹೇಳುವವರು ಅವರೇ. ಅದರಲ್ಲೂ ಬ್ರೇಕಪ್ನಂತಹ ಸಂದರ್ಭಗಳಲ್ಲಿ ನಿಮ್ಮನ್ನು ಅರ್ಥಮಾಡಿಕೊಂಡು ಬೆಂಬಲಿಸುವ ಸ್ನೇಹಿತರಿದ್ದರೆ ನೀವೇ ಲಕ್ಕಿ ಪರ್ಸನ್ ಆಗಿರುತ್ತೀರಿ. ಕೆಲವು ರಾಶಿಗಳವರು ಯಾವಾಗಲೂ ಸ್ನೇಹಪರರಾಗಿರುತ್ತಾರೆ. ಅವರು ಸದಾ ಸ್ನೇಹಿತರ ಕಷ್ಟದ ಸಮಯದಲ್ಲಿ ನಿಜವಾಗಿಯೂ ಸಹಾಯ ಮಾಡುತ್ತಾರೆ. ನಿಮ್ಮನ್ನು ಅರ್ಥಮಾಡಿಕೊಂಡು, ನಿಮ್ಮ ಸಮಸ್ಯೆ ಆಲಿಸಿ, ಕಾಳಜಿ ವಹಿಸುತ್ತಾರೆ. ಬ್ರೇಕಪ್ ಆದ ಸ್ನೇಹಿತರಿಗೆ ಕಾಳಜಿ ಮಾಡುವವರು ಈ ರಾಶಿಯವರಂತೆ. ನಿಮ್ಮ ಸ್ನೇಹಿತರಲ್ಲಿಯೂ ಈ ರೀತಿಯವರು ಇದ್ದರಬಹುದು. ನಿಮ್ಮ ಲವ್ ಬ್ರೇಕಪ್ನಂತಹ ಕಠಿಣ ಸಮಯದಲ್ಲಿ ನಿಮ್ಮೆಲ್ಲ ಗೊಂದಲಗಳಿಗೆ ಕಿವಿಯಾಗಿ, ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆ ತರುವುದರಲ್ಲಿ ಈ ಸ್ನೇಹಿತರು ಪ್ರಮುಖ ಪಾತ್ರ ವಹಿಸುತ್ತಾರೆ.
* ಕಟಕ ರಾಶಿ
ಈ ರಾಶಿಯವರು ತಮ್ಮ ಸ್ನೇಹಿತರನ್ನು ಬಹಳ ಕಾಳಜಿವಹಿಸುವುದರ ಜೊತೆಗೆ ಅವರನ್ನು ಅರ್ಥಮಾಡಿಕೊಂಡಿರುತ್ತಾರೆ. ನೀವು ಲವ್ ಬ್ರೇಕಪ್ ಆಗಿ ದುಃಖದಲ್ಲಿರುವಾಗ ನಿಮ್ಮ ನೋವು ಆಲಿಸುತ್ತಾರೆ. ನಿಮ್ಮ ಭಾವನೆಗಳನ್ನು ಅವರ ಜೊತೆ ಹಂಚಿಕೊಳ್ಳುವುದರ ಮೂಲಕ ನೀವು ಸುರಕ್ಷಿತ ಅನುಭವ ಹೊಂದುತ್ತೀರಿ. ಈ ರಾಶಿಯ ಸ್ನೇಹಿತರು ಸಾಂತ್ವನದ ಅಪ್ಪುಗೆ ನೀಡುತ್ತಾರೆ. ಬ್ರೇಕಪ್ನಿಂದ ಹೊರಬರಲು ನಿಮಗೆ ಸಹಾಯ ಮಾಡುತ್ತಾರೆ.
ಇದನ್ನೂ ಓದಿ: Mars Transit: ಮಕರ ರಾಶಿಗೆ ಮಂಗಳನ ಸಂಚಾರ; 4 ರಾಶಿಯವರಿಗೆ ದೊರೆಯಲಿದ ಕುಜನ ಆಶೀರ್ವಾದ
* ತುಲಾ ರಾಶಿ
ಈ ರಾಶಿಯವರು ಶಾಂತಿ ಮೂಡಿಸುವ ಮತ್ತು ಸಹಾನುಭೂತಿ ತೋರಿಸುವವರಾಗಿರುತ್ತಾರೆ. ವಿಷಯಗಳನ್ನು ವಿವಿಧ ಕೋನಗಳಿಂದ ನೋಡಲು ಮತ್ತು ಸಮತೋಲನವನ್ನು ಕಾಪಾಡಲು ನಿಮಗೆ ಸಹಾಯ ಮಾಡುತ್ತಾರೆ. ಈ ರಾಶಿಯ ಸ್ನೇಹಿತರು ನಿಮ್ಮನ್ನು ನಿಧಾನವಾಗಿ ಬೆಂಬಲಿಸುತ್ತಾರೆ. ಬ್ರೇಕಪ್ ಸಮಯದಲ್ಲಿ ಅವರು ನಿಮಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ
* ಮೀನ ರಾಶಿ
ಈ ರಾಶಿಯ ಸ್ನೇಹಿತರು ತುಂಬಾ ಕರುಣಾಮಯಿಗಳಾಗಿರುತ್ತಾರೆ. ನೀವು ಖಿನ್ನತೆಗೆ ಒಳಗಾಗಿದ್ದನ್ನು ಅವರು ಗುರುತಿಸುತ್ತಾರೆ. ಅವರು ನಿಮ್ಮನ್ನು ಅನುಮಾನಿಸದೇ ನಿಮಗೆ ರಕ್ಷಣೆ ನೀಡುತ್ತಾರೆ. ಇವರು ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. ನಿಮ್ಮ ಬ್ರೇಕಪ್ ಸಮಯದಲ್ಲಿ ನಿಮ್ಮಲ್ಲಿ ಉಂಟಾಗುವ ವಿಭಿನ್ನ ಭಾವನೆಗಳನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತಾರೆ.
* ವೃಶ್ಚಿಕ ರಾಶಿ
ಈ ರಾಶಿಯವರು ಸ್ವಲ್ಪ ಕಠೋರದವರು ಎಂದೆನಿಸಿದರೂ, ಸ್ನೇಹಿತರನ್ನು ಬೆಂಬಲಿಸುವ ವಿಷಯ ಬಂದಾಗ ಬಹಳಷ್ಟು ನಿಷ್ಠಾವಂತರಾಗಿರುತ್ತಾರೆ. ಈ ರಾಶಿಯವರು ನಿಮಗೆ ಧೈರ್ಯ, ಶಕ್ತಿ ಮತ್ತು ಬೆಂಬಲವನ್ನು ನೀಡುತ್ತಾರೆ. ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮ ಜೊತೆ ನಿಲ್ಲತ್ತಾರೆ.
* ಧನು ರಾಶಿ
ಈ ರಾಶಿಯ ಸ್ನೇಹಿತರು ಧಾನಾತ್ಮಕ ರೀತಿಯಲ್ಲಿ ನಿಮ್ಮನ್ನು ಬೆಂಬಲಿಸುತ್ತಾರೆ. ಲವ್ ಬ್ರೇಕಪ್ ಸಮಯದಲ್ಲಿ ನಿಮಗೆ ಸರಿಯಾದ ಮಾರ್ಗ ತೋರಿಸುವಲ್ಲಿ ಸಹಾಯ ಮಾಡುತ್ತಾರೆ. ಆ ಸಂದರ್ಭದಲ್ಲಿ ನಿಮ್ಮಲ್ಲಿರುವ ಸಾಹಸ ಪ್ರವೃತ್ತಿಯನ್ನು ಪ್ರೋತ್ಸಾಹಿಸುತ್ತಾರೆ. ನಿಮ್ಮನ್ನು ನೀವು ಇನ್ನಷ್ಟು ಆಳವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತಾರೆ. ಇವರು ನಿಮ್ಮ ದುಃಖಕ್ಕೆ ಮದ್ದು ನೀಡುವ ಸ್ನೇಹಿತರಾಗಿರುತ್ತಾರೆ.
* ವೃಷಭ ರಾಶಿ
ಈ ರಾಶಿಯವರು ನಿಮ್ಮ ಫ್ರೆಂಡ್ಶಿಪ್ನಲ್ಲಿ ಸ್ಥಿರತೆಯನ್ನು ತರುತ್ತಾರೆ. ನೀವು ಬ್ರೇಕಪ್ನಲ್ಲಿದ್ದರೆ ಅವರು ನಿಮಗೆ ಪ್ರಾಕ್ಟಿಕಲ್ ಸಲಹೆಗಳನ್ನು ನೀಡುತ್ತಾರೆ. ಮತ್ತು ನಿಮ್ಮನ್ನು ನೀವು ಕಾಳಜಿವಹಿಸಿಕೊಳ್ಳಲು ನಿಮಗೆ ಪ್ರೋತ್ಸಾಹಿಸುತ್ತಾರೆ. ಈ ರಾಶಿಯ ಸ್ನೇಹಿತರು ವಿಶ್ವಾಸಾರ್ಹರಾಗಿದ್ದು, ನಿಮ್ಮ ವೈಯಕ್ತಿಕ ಬೆಳವಣಿಗೆಯ ಮೇಲೆ ನಿಮ್ಮ ಮನಸ್ಸು ಕೇಂದ್ರೀಕರಿಸಲು ನಿಮಗೆ ಸಹಾಯ ಮಾಡುತ್ತಾರೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)