ಕನ್ನಡ ಸುದ್ದಿ  /  Astrology  /  These Zodiac Signs People Fail To Express Feelings Including Scorpio Capricorn Bgy

Zodiac Sings: ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಈ 4 ರಾಶಿಯವರು ವಿಫಲರು; ಪಟ್ಟಿಯಲ್ಲಿ ನೀವೂ ಇದ್ದೀರಾ ನೋಡಿ

Astrology: ಒಬ್ಬೊಬ್ಬರಿಗೆ ಒಂದೊಂದು ಗುಣವಿರುತ್ತದೆ. ನಿಮ್ಮ ರಾಶಿಗಳಿಗೆ ಅನುಗುಣವಾಗಿ ನಿಮ್ಮ ಗುಣ, ವರ್ತನೆ ಹೇಗಿರುತ್ತದೆ ಎಂಬುದನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಅದರ ಪ್ರಕಾರ ಕರ್ಕಾಟಕ, ಸಿಂಹ ಸೇರಿದಂತೆ ಈ ನಾಲ್ಕೂ ರಾಶಿಯವರು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ವಿಫಲರು.

ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಈ 4 ರಾಶಿಯವರು ವಿಫಲರು
ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಈ 4 ರಾಶಿಯವರು ವಿಫಲರು (PC: Unsplash)

Astrology: ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕಪಡಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದೀರಾ ? ಕೆಲವು ಭಾವನೆಗಳು ನಿಮ್ಮೊಳಗೇ ಉಳಿದುಕೊಂಡು, ಬೇರೆಯವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗದೆಯೇ ಕಷ್ಟವೆನ್ನಿಸುತ್ತಿದೆಯಾ ? ಇಂತಹ ಸಂದಿಗ್ಧತೆಯಲ್ಲಿ ಸಿಲುಕಿರುವವರು ನೀವೊಬ್ಬರೇ ಅಲ್ಲ. ಭಾವನೆಗಳು ನಮ್ಮ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು, ನಮ್ಮ ಅನುಭವಗಳು ಮತ್ತು ಸಂಬಂಧಗಳನ್ನು ರೂಪಿಸುತ್ತವೆ. ಆದರೂ ಕೂಡ ಕೆಲವರಿಗೆ, ಭಾವನೆಗಳನ್ನು ವ್ಯಕ್ತಪಡಿಸುವ ಪ್ರಕ್ರಿಯೆಯು ದೊಡ್ಡ ಸವಾಲಾಗಿದೆ.

ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಮಾನ್ಯವಾಗಿ ಕಷ್ಟಪಡುವ ಪ್ರಮುಖ ನಾಲ್ಕು ರಾಶಿಯವರ ಬಗ್ಗೆ ಇಲ್ಲಿದೆ ಮಾಹಿತಿ.

ಕರ್ಕಾಟಕ

ಭಾವನಾತ್ಮಕವಾಗಿರುವವರು, ಸೂಕ್ಷ್ಮ ವ್ಯಕ್ತಿತ್ವವನ್ನು ಹೊಂದಿದವರಲ್ಲಿ ಕರ್ಕಾಟಕ ರಾಶಿಯವರು ಮೊದಲಿಗರು. ಕರ್ಕಾಟಕ ರಾಶಿಯವರು ಪ್ರೀತಿ, ಕರುಣೆ, ಸಹಾನುಭೂತಿಯುಳ್ಳವರಾದರೂ, ಅವರು ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಕಷ್ಟಪಡುತ್ತಾರೆ. ಭಾವನೆಗಳನ್ನು ಹೊರ ಹಾಕಿದಲ್ಲಿ ಅದರ ಪರಿಣಾಮ ಹೇಗಿರಬಹುದೆಂಬ ಚಿಂತೆ ಅವರನ್ನು ಕಾಡುತ್ತದೆ. ತಾಳ್ಮೆ ಮತ್ತು ತಿಳುವಳಿಕೆಯೊಂದಿಗೆ, ಕರ್ಕಾಟಕ ರಾಶಿಯವರು ತಮ್ಮ ಭಾವನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಕಲಿಯಬಹುದು.

ಸಿಂಹ

ಸಿಂಹ ರಾಶಿಯವರು ನಿಷ್ಠೆ ಮತ್ತು ರಕ್ಷಣಾತ್ಮಕ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಹೊರಗಿನ ಪ್ರಪಂಚಕ್ಕೆ ಕಟುವಾಗಿ ಕಾಣಿಸಿಕೊಳ್ಳುವ ಸಿಂಹ ರಾಶಿಯವರು, ತೀರಾ ಭಾವ ಜೀವಿಗಳಾಗಿರುತ್ತಾರೆ. ಅವರ ಆತ್ಮವಿಶ್ವಾಸವನ್ನು ಎಲ್ಲರ ಮುಂದೆ ಬಹಿರಂಗಪಡಿಸಲೂ ಸಹ ಈ ರಾಶಿಯವರು ಕಷ್ಟಪಡುವ ವ್ಯಕ್ತಿತ್ವದವರಾಗಿರುತ್ತಾರೆ. ದುರ್ಬಲರಾಗಿ ಕಾಣಿಸಿಕೊಂಡರೆ ಎಂಬ ಭಯದಿಂದ ಸಿಂಹ ರಾಶಿಯವರು ತಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸಲು ವಿಫಲರಾಗುತ್ತಾರೆ. ಆದ್ದರಿಂದ ಮುಕ್ತವಾಗಿ ಮಾತನಾಡುವ ಕಲೆಯನ್ನು ಇವರು ಕರಗತ ಮಾಡಿಕೊಳ್ಳುವುದು ಉತ್ತಮ.

ವೃಶ್ಚಿಕ

ವೃಶ್ಚಿಕ ರಾಶಿಯವರು ಭಾವ ತೀವ್ರತೆ ಮತ್ತು ಭಾವನೆಯ ಆಳಕ್ಕೆ ಇಳಿಯುವ ವ್ಯಕ್ತಿಗಳು. ಅವರು ತಮ್ಮ ಭಾವನೆಗಳನ್ನು ಖುದ್ದು ಅನುಭವಿಸಬಹುದಾದರೂ, ಅವುಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು ಕಷ್ಟವೆನ್ನಿಸಬಹುದು. ವೃಶ್ಚಿಕ ರಾಶಿಯವರು ಗೌಪ್ಯತೆಯನ್ನು ಗೌರವಿಸುತ್ತಾರೆ, ಕಾಪಾಡಿಕೊಳ್ಳುತ್ತಾರೆ. ಆದರೆ ಇತರರನ್ನು ಅವರ ಅಂತರಂಗದ ಭಾವನೆಗಳೊಂದಿಗೆ ಬೆಸೆದುಕೊಳ್ಳುವುದು ಅವರಿಗೆ ಸವಾಲಿನ ಸಂಗತಿಯಾಗಿದೆ. ಆದರೂ ಇತರರ ಭಾವನೆಗಳಿಗೆ ತಲೆಬಾಗುವ ಮೂಲಕ, ವೃಶ್ಚಿಕ ರಾಶಿಯವರು ಸಮಾಜದೊಂದಿಗೆ ಆಳವಾದ ಸಂಪರ್ಕಗಳನ್ನು ಮತ್ತು ಭಾವನಾತ್ಮಕ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಬಹುದು.

ಮಕರ

ಮಕರ ರಾಶಿಯವರು ತಮ್ಮ ಶಿಸ್ತು ಮತ್ತು ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರೂ, ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಕಷ್ಟಪಡುವವರಾಗಿದ್ದಾರೆ. ಸ್ಥಿರತೆಯನ್ನು ಗೌರವಿಸುವ ಮಕರ ರಾಶಿಯವರು, ತಮ್ಮ ಭಾವನೆಗಳನ್ನು ಬಹಿರಂಗಪಡಿಸುವುದರಿಂದ ಆಗಬಹುದಾದ ತೊಂದರೆಗಳ ಬಗ್ಗೆ ಭಯಪಡಬಹುದು. ಆದರೂ ತಮ್ಮ ದುರ್ಬಲತೆಯನ್ನು ಅರಿತು ಮುನ್ನಡೆಯುವ ಮೂಲಕ ಮಕರ ರಾಶಿಯವರು ಇತರರೊಂದಿಗೆ ಹೆಚ್ಚು ಮುಕ್ತವಾಗಿರಲು ಸಾಧ್ಯ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

ವಿಭಾಗ