Govardhan Puja: ಮೂರು ಶುಭ ಯೋಗಗಳಲ್ಲಿ ಗೋವರ್ಧನ ಪೂಜೆ; ಇಡೀ ವರ್ಷ ಉತ್ತಮ ಫಲಗಳಿಗಾಗಿ ಶ್ರೀಕೃಷ್ಣನನ್ನ ಹೀಗೆ ಆರಾಧಿಸಿ
ಗೋವರ್ಧನ ಪೂಜೆ: ಈ ವರ್ಷ ಗೋವರ್ಧನ ಪೂಜೆಯನ್ನು ನವೆಂಬರ್ 02 ರಂದು ಮೂರು ಪವಿತ್ರ ಯೋಗಗಳಲ್ಲಿ ಆಚರಿಸಲಾಗುತ್ತದೆ. ಈ ದಿನ ಗೋವರ್ಧನ ಪರ್ವತ, ಹಸು ಮತ್ತು ಶ್ರೀಕೃಷ್ಣನನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಕೃಷ್ಣನನ್ನು ಪೂಜಿಸುವುದರಿಂದ ವರ್ಷವಿಡೀ ಪುಣ್ಯ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ.
ಉತ್ತರ ಭಾರತದಲ್ಲಿ ಗೋವರ್ಧನ ಪೂಜೆಯ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕಾರ್ತಿಕ ಮಾಸದ ಪಾಡ್ಯಮಿ ತಿಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಗೋವರ್ಧನ ಪರ್ವತ, ಹಸು ಮತ್ತು ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ದಕ್ಷಿಣ ರಾಜ್ಯಗಳಲ್ಲಿ ಗೋವರ್ಧನ ಪೂಜೆಯಿಂದ ಶುಭ ಕಾರ್ತಿಕ ಮಾಸ ಆರಂಭವಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಶ್ರೀಕೃಷ್ಣನು ಬ್ರಜ್ ಜನರನ್ನು ಉಳಿಸಲು ಗೋವರ್ಧನ ಪರ್ವತವನ್ನು ತನ್ನ ಬೆರಳುಗಳ ಮೇಲೆ ಎತ್ತಿದನು. ಈ ಹಬ್ಬವನ್ನು ಅನ್ನಕೂಟ ಪೂಜೆ ಎಂದೂ ಕರೆಯುತ್ತಾರೆ. ಈ ವರ್ಷ ಗೋವರ್ಧನ ಪೂಜೆಯನ್ನು ದೃಕ್ ಪಂಚಾಂಗದ ಪ್ರಕಾರ 02 ನವೆಂಬರ್ 2024 ರಂದು ಆಚರಿಸಲಾಗುತ್ತದೆ. ಗೋವರ್ಥನ ಪೂಜೆಯ ದಿನದಂದು ಶ್ರೀಕೃಷ್ಣನಿಗೆ ಧಾನ್ಯಗಳನ್ನು ಅರ್ಪಿಸಲಾಗುತ್ತದೆ. ಗೋವು ಮತ್ತು ಗೂಳಿಗಳನ್ನು ಪೂಜಿಸಲಾಗುತ್ತದೆ, ಗೋವರ್ಧನ ಪರ್ವತವನ್ನು ಗೋವಿನ ಸಗಣಿಯಿಂದ ಮಾಡಿ, ಪೂಜಿಸಲಾಗುತ್ತದೆ. ಇದಕ್ಕೆ ಪ್ರದಕ್ಷಿಣೆ ಹಾಕಲಾಗುತ್ತದೆ. ಗೋವರ್ಧನ ಪೂಜೆಯ ನಿಖರವಾದ ದಿನಾಂಕ, ಶುಭ ಸಮಯ ಮತ್ತು ಕಾರ್ಯವಿಧಾನವನ್ನು ತಿಳಿಯೋಣ.
ಗೋವರ್ಧನ ಪೂಜೆಗೆ 3 ಪವಿತ್ರ ಯೋಗಗಳು
ದೃಕ್ ಪಂಚಾಂಗದ ಪ್ರಕಾರ ಕಾರ್ತಿಕ ಮಾಸಂ ಪಾಡ್ಯಮಿ ತಿಥಿಯು 01 ನವೆಂಬರ್ 2024 ರಂದು ಸಂಜೆ 06:16 ಕ್ಕೆ ಪ್ರಾರಂಭವಾಗುತ್ತದೆ. ಮರುದಿನ 02 ನವೆಂಬರ್ 2024 ರಂದು ರಾತ್ರಿ 08:21 ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿ ಪ್ರಕಾರ ನವೆಂಬರ್ 02 ರಂದು ಗೋವರ್ಧನ ಪೂಜೆ ನಡೆಯುತ್ತದೆ. ಈ ವರ್ಷ ಸೌಭಾಗ್ಯ ಯೋಗ, ಆಯುಷ್ಮಾನ್ ಯೋಗ ಮತ್ತು ತ್ರಿಪುಷ್ಕರ ಯೋಗ ಸೇರಿದಂತೆ 3 ಪವಿತ್ರ ಯೋಗಗಳಲ್ಲಿ ಗೋವರ್ಧನ ಪೂಜೆಯನ್ನು ನಡೆಸಲಾಗುತ್ತದೆ.
ಗೋವರ್ಧನ ಪೂಜೆಯು ನವೆಂಬರ್ 2ರ ಶನಿವಾರ ಬೆಳಿಗ್ಗೆ 11.00 ರಿಂದ ಸಂಜೆ 7.00 ರವರೆಗೆ ಆಯುಷ್ಮಾನ್ ಯೋಗವು ನಡೆಯುತ್ತಿದೆ. ಶುಭ ಯೋಗವು ಇಡೀ ದಿನ ಇರುತ್ತದೆ. ಈ ಮಧ್ಯೆ ತ್ರಿಪುಷ್ಕರ ಯೋಗವು 02 ನವೆಂಬರ್ ರಾತ್ರಿ 08:21 ರಿಂದ ನವೆಂಬರ್ 3ರ ಭಾನುವಾರ ಬೆಳಗ್ಗೆ 5:58 ವರೆಗೆ ರೂಪುಗೊಳ್ಳುತ್ತಿದೆ.
ಗೋವರ್ಧನ ಪೂಜೆ ಒಂದು ಮಂಗಳಕರ ಸಮಯ
ಬೆಳಗಿನ ಪೂಜೆಗೆ ಉತ್ತಮ ಸಮಯ: 06:21 AM ರಿಂದ 08:37 AM
ಸಂಜೆ ಪೂಜೆಗೆ ಅನುಕೂಲಕರ ಸಮಯ: 03:12 ರಿಂದ 05:24 ರವರೆಗೆ
ಪೂಜೆಯ ವಿಧಾನ
ಗೋವರ್ಧನ ಪೂಜೆಯ ದಿನದಂದು, ಶ್ರೀಕೃಷ್ಣ ಮತ್ತು ಗೋವರ್ಧನ ಪರ್ವತವನ್ನು ಪೂಜಿಸಲು ಜನರು ಒಂದೇ ಸ್ಥಳದಲ್ಲಿ ಸೇರುತ್ತಾರೆ. ಬೆಳಿಗ್ಗೆ ಎದ್ದ ನಂತರ, ಗೋವರ್ಧನ ಪರ್ವತವನ್ನು ಕೈಯಲ್ಲಿ ಹಿಡಿದಿರುವ ಶ್ರೀಕೃಷ್ಣನ ಫೋಟೊಗೆ ಪೂಜೆ ಮಾಡಲಾಗುತ್ತದೆ. ಮುಂಜಾನೆ ಎದ್ದು ಮನೆಯ ಮುಖ್ಯ ದ್ವಾರದಲ್ಲಿ ಗೋವಿನ ಸಗಣಿಯಿಂದ ಗೋವರ್ಧನನ ವಿಗ್ರಹವನ್ನು ಮಾಡಿ, ಗೋವು, ಗೋವಿನ ಕೂದಲು, ಅಕ್ಕಿ, ಹೂವು, ಮೊಸರು, ಎಣ್ಣೆ ಮತ್ತು ನೀರಿನಿಂದ ಮಾಡಿದ ದೀಪವನ್ನು ಬೆಳಗಿಸಿ ಶ್ರೀಕೃಷ್ಣನನ್ನು ಪೂಜಿಸಬೇಕು.
ಗೋವರ್ಧನ ಪೂಜೆಯ ಸಮಯದಲ್ಲಿ ಶ್ರೀಕೃಷ್ಣನಿಗೆ 56 ವಿಧದ ನೈವೇದ್ಯಗಳನ್ನು ಅರ್ಪಿಸಬೇಕು. ಹಸುಗಳಿಗೆ ಧೂಪ, ಶ್ರೀಗಂಧ ಮತ್ತು ಹೂವುಗಳಿಂದ ಪೂಜಿಸಿ. ತಾಯಿ ಹಸುವಿಗೆ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ತಿನ್ನಿಸಿದ ನಂತರ ಆರತಿ ಮಾಡಿ. ಗೋವರ್ಧನ ಪೂಜೆ ಮಾಡಿದರೆ ವರ್ಷಪೂರ್ತಿ ಶ್ರೀಕೃಷ್ಣ ಕರುಣಿಸುತ್ತಾನೆ ಎಂಬುದು ಭಕ್ತರ ನಂಬಿಕೆ. ಆದ್ದರಿಂದಲೇ ಉತ್ತರ ಭಾರತೀಯರು ಗೋವರ್ಧನ ಪೂಜೆ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಕೃಷ್ಣನನ್ನು ಪೂಜಿಸಲಾಗುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.