ಈ ರಾಶಿಯವರನ್ನು ಅದೃಷ್ಟವೇ ಬೆನ್ನಟ್ಟಿ ಬಂದು ಆಶೀರ್ವದಿಸಲಿದೆ: ಎಲ್ಲ 12 ರಾಶಿಗಳ ಇಂದಿನ ದಿನಭವಿಷ್ಯ ಇಲ್ಲಿದೆ-today horoscope august 9 2024 rashi bhavishya of all zodiac signs astrology daily predictions ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ರಾಶಿಯವರನ್ನು ಅದೃಷ್ಟವೇ ಬೆನ್ನಟ್ಟಿ ಬಂದು ಆಶೀರ್ವದಿಸಲಿದೆ: ಎಲ್ಲ 12 ರಾಶಿಗಳ ಇಂದಿನ ದಿನಭವಿಷ್ಯ ಇಲ್ಲಿದೆ

ಈ ರಾಶಿಯವರನ್ನು ಅದೃಷ್ಟವೇ ಬೆನ್ನಟ್ಟಿ ಬಂದು ಆಶೀರ್ವದಿಸಲಿದೆ: ಎಲ್ಲ 12 ರಾಶಿಗಳ ಇಂದಿನ ದಿನಭವಿಷ್ಯ ಇಲ್ಲಿದೆ

ಆಗಸ್ಟ್ 9 ರ ರಾಶಿವಾರು ದಿನಭವಿಷ್ಯ: ಇಂದು ನಿಮ್ಮ ದಿನವು ಹೇಗಿರಲಿದೆ? ಇಂದು ಯಾವ ರಾಶಿಯವರಿಗೆ ಅದೃಷ್ಟ ಸಿಗಲಿದೆ? ಯಾವ ರಾಶಿಯವರಿಗೆ ಆಸ್ತಿ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

ಆಗಸ್ಟ್​ 9ರ ದಿನಭವಿಷ್ಯ.
ಆಗಸ್ಟ್​ 9ರ ದಿನಭವಿಷ್ಯ.

ವಾರ: ಶುಕ್ರವಾರ, ತಿಥಿ: ಪಂಚಮಿ, ನಕ್ಷತ್ರ: ಹಸ್ತಾ, ಮಾಸ: ಶ್ರಾವಣ, ಸಂವತ್ಸರ: ಶ್ರೀ ಕ್ರೋಧಿ ನಾಮ, ಆಯನ: ದಕ್ಷಿಣಾಯನ

ಮೇಷ ರಾಶಿ: ಸಂಬಂಧಿಕರೊಂದಿಗೆ ಉತ್ತಮ ಸಂಬಂಧ ರೂಪುಗೊಳ್ಳಲಿದೆ. ಶೈಕ್ಷಣಿಕ ವಿಷಯಗಳಿಗೆ ಸರ್ಕಾರದ ನೆರವು ದೊರೆಯುತ್ತದೆ. ವೃತ್ತಿ ವ್ಯವಹಾರಗಳು ಸಾಮಾನ್ಯವಾಗಿರುತ್ತವೆ. ಆತ್ಮೀಯರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಮನಸ್ಸಿನ ಶಾಂತಿಗಾಗಿ ನಿಮ್ಮ ನೆಚ್ಚಿನ ದೇವಸ್ಥಾನಕ್ಕೆ ಭೇಟಿ ನೀಡಿ. ಸಮಸ್ಯೆಗಳು ತಾನಾಗಿಯೇ ಪರಿಹಾರವಾಗುತ್ತವೆ, ಸಮಸ್ಯೆಗಳ ಬಗ್ಗೆ ಹೆಚ್ಚು ಯೋಚಿಸಬೇಡಿ.

ವೃಷಭ ರಾಶಿ: ಇತರರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ನೇತ್ರ ಸಂಬಂಧಿ ಸಮಸ್ಯೆಗಳ ವಿಚಾರದಲ್ಲಿ ಎಚ್ಚರ ಇರಲಿ. ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೊದಲು ಅಗತ್ಯ ಮುನ್ನೆಚ್ಚರಿಕೆ ಇರಲಿ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಂಬಂಧ ಮರುಸ್ಥಾಪನೆಯಾಗಲಿದೆ. ದುರ್ಗಾಪರಮೇಶ್ವರಿಯನ್ನು ಆರಾಧಿಸಿ. ಇಂದು ನಿಮ್ಮ ಬದುಕಿನಲ್ಲಿ ಹಲವು ಒಳ್ಳೆಯ ಸಂಗತಿಗಳು ನಡೆಯುತ್ತವೆ.

ಮಿಥುನ ರಾಶಿ: ಆರೋಗ್ಯ ವಿಷಯಗಳಲ್ಲಿ ಜಾಗರೂಕರಾಗಿರಿ. ಕೋಪ ಮತ್ತು ಕಿರಿಕಿರಿಯನ್ನು ನಿಯಂತ್ರಿಸಿ. ಆರ್ಥಿಕ ಅಡಚಣೆಗಳು ಎದುರಾಗಲಿವೆ. ಸಮಸ್ಯೆಗಳನ್ನು ನಿಭಾಯಿಸಲು, ಪ್ರೀತಿಪಾತ್ರರ ಜೊತೆ ಇರಲು ಸಮಯ ಮೀಸಲಿಡಿ. ಲಕ್ಷ್ಮಿ ದೇವಿಯನ್ನು ಆರಾಧನೆಯಿಂದ ಶುಭ ಫಲ..

ಕಟಕ ರಾಶಿ: ಉದ್ಯೋಗದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗಬಹುದು. ಉನ್ನತ ಅಧಿಕಾರಿಗಳಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಾಳ್ಮೆಯಿಂದ ಅವುಗಳನ್ನು ಎದುರಿಸಿ. ಆರೋಗ್ಯದ ಕಡೆಗೂ ಗಮನ ಕೊಡಿ. ಪ್ರೀತಿಪಾತ್ರರ ಜೊತೆ ಖುಷಿಯಾಗಿ ಇರುವಿರಿ.ಕೆಲವು ಕೌಟುಂಬಿಕ ಸಮಸ್ಯೆಗಳು ಎದುರಾಗಬಹುದು. ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ದುರ್ಗಾ ದೇವಿ ಆರಾಧನೆಯಿಂದ ಶುಭ ಫಲ.

ಸಿಂಹ ರಾಶಿ: ಉದ್ಯಮಗಳಲ್ಲಿ ತೊಡಗಿರುವವರಿಗೆ ಇಂದು ಹೆಚ್ಚಿನ ಆದಾಯ ಸಿಗುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯವು ಕ್ರಮೇಣ ಸುಧಾರಿಸಲಿದೆ. ಮನಸ್ಸಿಗೆ ಸಂತೋಷವಾಗಲಿದೆ. ಸ್ಥಿರಾಸ್ತಿ ಕ್ರೋಢೀಕರಣದ ಪ್ರಯತ್ನ ನಡೆಯಲಿದೆ. ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಪ್ರಮುಖ ವಿಷಯಗಳಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಿ. ಅಮ್ಮನವರ ದರ್ಶನವು ಮಂಗಳಕರ.

ಕನ್ಯಾ ರಾಶಿ: ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಇದು ಸಾಮಾಜಿಕ ಜೀವನವು ಉತ್ತಂಗದಲ್ಲಿರುವ ಅವಧಿ. ಸಮಾಜದಲ್ಲಿ ಉತ್ತಮ ಸ್ಥಾನಮಾನ ಮತ್ತು ಗೌರವ ಸಿಗುತ್ತದೆ. ನಿಮ್ಮ ಸ್ನೇಹಿತರಿಂದಲೂ ಉತ್ತಮ ಬೆಂಬಲ ಇರಲಿದೆ. ವಿವಾಹಿತರಿಗೂ ಇದು ಉತ್ತಮ ಕಾಲ. ಹನುಮಂತನ ದರ್ಶನವು ಮಂಗಳಕರವಾಗಿದೆ.

ತುಲಾ ರಾಶಿ: ಯಾವುದೇ ವಿಚಾರದಲ್ಲಿ ಸತತ ಪ್ರಯತ್ನಿಸುವ ಮನಃಸ್ಥಿತಿ ಇರುತ್ತದೆ. ಶಿಕ್ಷಣ ಮತ್ತು ವೃತ್ತಿಯಲ್ಲಿ ಪ್ರಗತಿ ಕಾಣುವಿರಿ. ನಿಗದಿತ ಸಮಯದಲ್ಲಿ ಗುರಿಗಳನ್ನು ಪೂರ್ಣಗೊಳಿಸುವ ಮೂಲಕ ಎಲ್ಲರ ಮೆಚ್ಚುಗೆ ಪಡೆಯುವಿರಿ. ಹೊಸ ಉದ್ಯೋಗಕ್ಕೆ ಸೇರುವ ಅವಕಾಶವಿರುತ್ತದೆ. ಆರ್ಥಿಕ ಸ್ವಾವಲಂಬನೆ ಸಾಧಿಸುವಿರಿ. ಯೋಜಿತ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ನೀವು ಇಷ್ಟಪಡುವದನ್ನು ಮಾಡಿ. ಇದು ನಿಮಗೆ ಒಳ್ಳೆಯ ಕಾಲ.

ವೃಶ್ಚಿಕ ರಾಶಿ: ನಿಮ್ಮ ಜೀವನಶೈಲಿಯು ವಾಹನ, ಸಂಪತ್ತು ಮತ್ತು ಐಷಾರಾಮಿ ಜೀವನದಂತಹ ಸರಳ ಸೌಕರ್ಯಗಳೊಂದಿಗೆ ಕೂಡಿರುತ್ತದೆ. ನಿಮ್ಮ ಅಗತ್ಯಗಳಿಗೆ ಸಾಕಷ್ಟು ಆದಾಯ ಒದಗಿಬರುತ್ತದೆ. ನೀವು ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಶಿವನ ದೇವಸ್ಥಾನಕ್ಕೆ ಭೇಟಿ, ಅಭಿಷೇಕ ಸೇವೆಯಿಂದ ಶುಭ ಫಲ.

ಧನು ರಾಶಿ: ಉದ್ಯೋಗದಲ್ಲಿ ಮಾನ್ಯತೆ ದೊರೆಯುತ್ತದೆ. ಸಿಕ್ಕಿರುವ ಅವಕಾಶ ಬಳಸಿಕೊಂಡು ಸಂತೃಪ್ತಿಯ ಜೀವನ ನಡೆಸಿ. ಹಣದ ಕೊರತೆ ಇರುವುದಿಲ್ಲ. ಕೆಲವೊಮ್ಮೆ ಮಾನಸಿಕ ಸಮಸ್ಯೆಗಳು ಕಾಣಸಿಕೊಳ್ಳಬಹುದು. ಆದರೆ ಅದೃಷ್ಟವು ನಿಮ್ಮನ್ನು ಹಿಂಬಾಲಿಸುತ್ತದೆ ಎನ್ನುವುದು ನೆನಪಿರಲಿ. ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಿ.

ಮಕರ ರಾಶಿ: ಮಾನಸಿಕ ಮತ್ತು ದೈಹಿಕ ಒತ್ತಡದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಮಹಿಳೆಯರೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ. ಬಾಯಿರುಚಿಗೂ ಕಡಿವಾಣ ಇರಲಿ. ಹಣಕಾಸಿನ ವಿಚಾರದಲ್ಲಿ ಎಚ್ಚರ ಇರಬೇಕು. ಮನಸ್ಸಿನ ಶಾಂತಿಗಾಗಿ ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

ಕುಂಭ ರಾಶಿ: ಪ್ರತಿಭೆಯೊಂದಿಗೆ ಅಧ್ಯಯನದಲ್ಲಿ ಮೇಲುಗೈ ಸಾಧಿಸುವಿರಿ. ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ. ಪ್ರಮುಖ ಕ್ಷೇತ್ರಗಳಲ್ಲಿ ಹೊಸ ಕೌಶಲಗಳನ್ನು ಕಲಿಯಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ಪ್ರಯತ್ನಗಳನ್ನು ಪ್ರಾಮಾಣಿಕಾಗಿ ಮಾಡಿ. ಲಲಿತಾ ಸಹಸ್ರನಾಮವನ್ನು ಪಾರಾಯಣದಿಂದ ಶುಭಫಲ.

ಮೀನ ರಾಶಿ: ಇಂದು ಪ್ರಯಾಣದ ಸಾಧ್ಯತೆ ಇದೆ. ಹೆಚ್ಚು ಥಂಡಿಯಲ್ಲಿ ಇರಬೇಡಿ. ಚರ್ಮದ ಸೋಂಕು ಕಾಣಿಸಬಹುದು. ಸ್ಥಿರಾಸ್ತಿ ಮಾರಾಟವನ್ನು ಮುಂದೂಡುವುದು ಉತ್ತಮ. ಶೀಘ್ರದಲ್ಲೇ ನೀವು ಸಮಸ್ಯೆಗಳಿಂದ ಹೊರಬರುತ್ತೀರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಚಾಮುಂಡೇಶ್ವರಿ ಪೂಜೆಯಿಂದ ಶುಭಫಲ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.