ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸೋದರನ ಜೊತೆ ಭೂಮಿ ವಿಚಾರವಾಗಿ ಮನಸ್ತಾಪ, ಆರ್ಥಿಕ ಸಮಸ್ಯೆ ಪರಿಹಾರಕ್ಕೆ ಚಿಕ್ಕ ವ್ಯಾಪಾರ ಆರಂಭಿಸುವಿರಿ; ನಾಳೆಯ ದಿನ ಭವಿಷ್ಯ

ಸೋದರನ ಜೊತೆ ಭೂಮಿ ವಿಚಾರವಾಗಿ ಮನಸ್ತಾಪ, ಆರ್ಥಿಕ ಸಮಸ್ಯೆ ಪರಿಹಾರಕ್ಕೆ ಚಿಕ್ಕ ವ್ಯಾಪಾರ ಆರಂಭಿಸುವಿರಿ; ನಾಳೆಯ ದಿನ ಭವಿಷ್ಯ

10th May 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳೆಯ ದಿನ ಭವಿಷ್ಯ
ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (10th May 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ವೈಶಾಖ ಮಾಸ-ಶುಕ್ಲಪಕ್ಷ-ಶುಕ್ರವಾರ

ತಿಥಿ: ತದಿಗೆ ರಾತ್ರಿ 04.40 ರವರೆಗೂ ಇದ್ದು ನಂತರ ಚೌತಿ ಆರಂಭವಾಗುತ್ತದೆ.

ನಕ್ಷತ್ರ: ರೋಹಿಣಿ ನಕ್ಷತ್ರವು 12.22 ರವರೆಗೂ ಇದ್ದು ನಂತರ ಮೃಗಶಿರ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.54

ಸೂರ್ಯಾಸ್ತ: ಸಂಜೆ 06.35

ರಾಹುಕಾಲ: 10.44 ರಿಂದ 12.19

ರಾಶಿಫಲ

ಮೇಷ

ಆತ್ಮೀಯರ ಸಹಾಯದಿಂದ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಜ್ಞಾನ ಇರುತ್ತದೆ. ಕುಟುಂಬದ ಹಣದ ಜವಾಬ್ದಾರಿ ನಿಮ್ಮದಾಗಲಿದೆ. ಸರಳತೆಯೇ ನಿಮ್ಮ ಆಸ್ತಿಯಾಗಿರುತ್ತದೆ. ವಿದ್ಯಾರ್ಥಿಗಳ ಮನದಲ್ಲಿ ಬೇಸರ ಇರುತ್ತದೆ. ಅಧಿಕಾರಿಗಳು ಉದ್ಯೋಗಿಗಳ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುವರು.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕೇಸರಿ

ವೃಷಭ

ಹಣದ ಕೊರತೆ ಕಡಿಮೆ ಮಾಡಲು ಸಣ್ಣಪುಟ್ಟ ವ್ಯಾಪಾರವನ್ನು ಆರಂಭಿಸುವಿರಿ. ಗಟ್ಟಿ ಮನಸ್ಸಿನಿಂದ ಉದ್ಯೋಗವನ್ನು ಬದಲಾಯಿಸುವಿರಿ. ಸೋದರನ ಜೊತೆಯಲಿ ಭೂವಿವಾದದಲ್ಲಿ ಸಿಲುಕುವಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಪರಸ್ಥಳಕ್ಕೆ ತೆರಳುವರು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮಕ್ಕಳು ಮೊಮ್ಮಕ್ಕಳ ಆಗಮನ ಕುಟುಂಬದಲ್ಲಿ ಸಂತಸವನ್ನು ಉಂಟುಮಾಡುತ್ತದೆ.

ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಮಿಥುನ

ಮನೆಯಲ್ಲಿರುವ ಪುಟ್ಟ ಮಕ್ಕಳ ಆರೋಗ್ಯದಲ್ಲಿ ತೊಂದರೆ ಆಗಬಹುದು. ಹಿರಿಯ ಅಧಿಕಾರಿಗಳು ಉದ್ಯೋಗದಲ್ಲಿನ ಸಮಸ್ಯೆಯನ್ನು ಪರಿಹರಿಸುತ್ತಾರೆ. ದಿನ ನಿತ್ಯದ ಖರ್ಚು ವೆಚ್ಚದ ಬಗ್ಗೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಸಮಾಜದ ವಯೋವೃದ್ಧರನ್ನು ಪ್ರೀತಿ ವಿಶ್ವಾಸದಿಂದ ಕಾಣುವಿರಿ. ವಿದೇಶಿ ಸಂಸ್ಥೆಗಳಲ್ಲಿ ಉದ್ಯೋಗ ದೊರೆಯುತ್ತದೆ.

ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕಪ್ಪು

ಕಟಕ

ವಿದ್ಯಾರ್ಥಿಗಳು ಬಿಡುವಿಲ್ಲದೆ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಬೇಸಾಯದಲ್ಲಿ ಲಾಭವಿದೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಕುಟುಂಬದಲ್ಲಿ ಗಂಭೀರದ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ನಿರೀಕ್ಷಿಸಿದ ಮಾದರಿಯಲ್ಲಿ ಅಭಿವೃದ್ದಿ ಕಾಣದು. ಸಣ್ಣ ಪ್ರಮಾಣದ ವ್ಯಾಪಾರದಲ್ಲಿ ಲಾಭವಿರುತ್ತದೆ. ತಾಯಿಗೆ ಅನಾರೋಗ್ಯದ ತೊಂದರೆ ಉಂಟಾಗಬಹುದು.

ಪರಿಹಾರ : ಮನೆಯಲ್ಲಿ ತುಪ್ಪದ ದೀಪ ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ತಿಳಿ ಹಸಿರು

ಸಿಂಹ

ಭೂಮಿಯ ವಿಚಾರದಲ್ಲಿ ಕೊಂಚ ಮೋಸವಾಗುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಪುಣ್ಯಕ್ಷೇತ್ರ ದರ್ಶನಕ್ಕೆ ತೆರಳುವಿರಿ. ವಿದ್ಯಾರ್ಥಿಗಳ ನಿರೀಕ್ಷೆಯು ನಿಜವಾಗಲಿದೆ. ಉತ್ತಮ ಪ್ರಯತ್ನದಿಂದ ವಿದೇಶದಲ್ಲಿ ನೆಲೆಸಲು ಸಾಧ್ಯವಾಗಲಿದೆ. ಜನಸೇವೆಯಲ್ಲಿ ನಿರತರಾಗಿರುವವರಿಗೆ ವಿಶೇಷ ಗೌರವ ಲಭಿಸುತ್ತದೆ.

ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ: ನಸುಗೆಂಪು

ಕನ್ಯಾ

ಕುಟುಂಬದ ಮಹಿಳಾ ಸದಸ್ಯರೊಬ್ಬರ ನಿರ್ಧಾರದಿಂದ ಹಣದ ಸಮಸ್ಯೆಯೊಂದು ನಿವಾರಣೆ ಆಗುವುದು. ಕಲಾವಿದರಿಗೆ ವಿಶೇಷವಾದ ಅವಕಾಶಗಳು ದೊರೆಯಲಿದೆ. ಶುಭ ಕಾರ್ಯಕ್ರಮಗಳ ಆಯೋಜನೆ ಮಾಡುವಲ್ಲಿ ಯಶಸ್ಸನ್ನು ಕಾಣುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಇರದು. ದುಡುಕಿನ ಮಾತು ಕತೆ ವಿವಾದವನ್ನು ಉಂಟುಮಾಡಲಿದೆ.

ಪರಿಹಾರ : ತಲೆಗೆ ಹಾಲು ಹಚ್ಚಿ ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ನೀಲಿ ಮಿಶ್ರಿತ ಬಿಳಿ

ತುಲಾ

ಸಾರಿಗೆ ವ್ಯವಸ್ಥೆ ಕಲ್ಪಿಸುವ ವ್ಯವಹಾರದಲ್ಲಿ ಲಾಭವಿರುತ್ತದೆ. ಸಾರಿಗೆ ಸಂಸ್ಥೆಯ ಏಜೆನ್ಸಿಯಿಂದ ಉತ್ತಮ ಲಾಭಾಂಶ ದೊರೆಯುತ್ತದೆ. ಕಷ್ಟಪಟ್ಟು ಮಾಡುವ ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಸಿಹಿ ಖಾದ್ಯಗಳಿಂದ ದೂರವಿದ್ದಲ್ಲಿ ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ. ಚಾಡಿ ಮಾತನ್ನು ನಂಬಿ ಕುಟುಂಬದ ಸ್ವಾಸ್ಥ್ಯ ಕೆಡಿಸುವಿರಿ. ಭೂವಿವಾದದಲ್ಲಿ ಜಯ ಗಳಿಸುವಿರಿ.

ಪರಿಹಾರ : ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ವೃಶ್ಚಿಕ

ತಂದೆಗೆ ಉದ್ಯೋಗದಲ್ಲಿ ಬಡ್ತಿ ದೊರೆವ ಕಾರಣ ದೂರದ ಊರಿಗೆ ತೆರಳುತ್ತಾರೆ. ಹಣದ ಕೊರತೆ ನಿಮ್ಮನ್ನು ಕಾಡುತ್ತದೆ. ವಿದ್ಯಾರ್ಥಿಗಳು ಕೊಂಚ ತಡವಾಗಿ ಯಶಸ್ಸನ್ನು ಕಾಣುತ್ತಾರೆ. ತಾಯಿಗೆ ಅನಾರೋಗ್ಯ ಇರುತ್ತದೆ ನೀರಿನೊಂದಿಗೆ ಚೆಲ್ಲಾಟವಾಡದಿರಿ. ಮಕ್ಕಳ ಜೀವನದಲ್ಲಿನ ತೊಂದರೆಯು ದೂರವಾಗಲಿದೆ. ಕುಟುಂಬದಲ್ಲಿ ಪ್ರಮುಖ ಘಟನೆಯೊಂದು ನಡೆದು ಮನಸ್ತಾಪ ದೂರವಾಗಲಿದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬೂದು

ಧನಸ್ಸು

ತಾಯಿಗೆ ಶ್ವಾಸಕೋಶದ ತೊಂದರೆ ಇರುತ್ತದೆ. ವ್ಯವಸಾಯದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಜನಸಾಮಾನ್ಯರಿಗೆ ನರ್ಸಿಂಗ್ ಹೋಮ್ ಆರಂಭಿಸುವ ಯೋಚನೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಶುಭ ವರ್ತಮಾನ ಬರಲಿದೆ. ಮುಂಗೋಪದ ಕಾರಣ ಆತ್ಮೀಯರು ನಿಮ್ಮಿಂದ ದೂರ ಉಳಿಯುತ್ತಾರೆ. ಶಾಲಾ ಕಾಲೇಜು ಆರಂಭಿಸಲು ಸರರ್ಕಾರದ ಅನುಮೋದನೆ ಪಡೆಯುವಿರಿ.

ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಆಕಾಶ ನೀಲಿ

ಮಕರ

ಸಂಚಾರಕ್ಕೆ ಸಂಬಂಧಿಸಿದ ಸಂಸ್ಥೆಯನ್ನು ಆರಂಭಿಸುವಿರಿ. ಕುಟುಂಬದ ನಿರ್ವಹಣೆಗಾಗಿ ತಂದೆಯವರಿಂದ ಹಣದ ಸಹಾಯ ದೊರೆಯುತ್ತದೆ. ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳಿಗೆ ಹಣ ಖರ್ಚಾಗುತ್ತದೆ. ಮಾತಿನಿಂದ ಕೆಲಸ ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ಸಂಗೀತ ನಾಟ್ಯಗಳ ಪರಿಣಿತರಿಗೆ ದೇಶಾದ್ಯಂತ ಉತ್ತಮ ಅವಕಾಶ ಮತ್ತು ಗೌರವ ಲಭ್ಯವಾಗುತ್ತದೆ. ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ದೀಪದ ಎಣ್ಣೆ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕೆಂಪು

ಕುಂಭ

ಸ್ವಂತ ಬಳಕೆಗಾಗಿ ಐಷಾರಾಮಿ ವಾಹನವನ್ನು ಕೊಳ್ಳುವಿರಿ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಎದುರಾಗದು. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನಡೆಯಲಿದೆ. ಸೋದರಿಗೆ ಕೌಟುಂಬಿಕ ಜೀವನದಲ್ಲಿ ಇದ್ದ ವಿವಾದವನ್ನು ದೂರ ಮಾಡುವಿರಿ. ಕೈಹಿಡಿದ ಕೆಲಸ ಯಶಸ್ವಿಯಾಗುವವರೆಗೂ ನಿಮ್ಮ ಯೋಜನೆಗಳನ್ನು ರಹಸ್ಯವಾಗಿಡುವಿರಿ. ತಂದೆಯ ಆರೋಗ್ಯದ ಬಗ್ಗೆ ಗಮನ ಇರಲಿ.

ಪರಿಹಾರ : ತಾಯಿಯ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಎಲೆ ಹಸಿರು

ಮೀನ

ವೈದ್ಯಕೀಯ ಉಪಕರಣಗಳ ತಯಾರಿಕಾ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಹಣಕಾಸಿಗೆ ಸಂಬಂಧಿಸಿದ ವಿಚಾರದಲ್ಲಿ ಸಾಕ್ಷಿದಾರರಾಗದಿರಿ. ವಿದ್ಯಾರ್ಥಿಗಳು ದೊಡ್ಡ ಸಾಧನೆಗೆ ಪಾತ್ರರಾಗುತ್ತಾರೆ. ಕುಟುಂಬದಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗಣ್ಯಸ್ಥಾನ ಲಭಿಸುತ್ತದೆ. ಧಾರ್ಮಿಕ ಕೇಂದ್ರಕ್ಕೆ ಹಣ ದೇಣಿಗೆ ನೀಡುವಿರಿ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ಕೇಸರಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ