ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಗೌರವ, ಮಾನಸಿಕ ಶಾಂತಿಗಾಗಿ ಧ್ಯಾನದ ಅವಶ್ಯಕತೆ ಇದೆ; ದ್ವಾದಶ ರಾಶಿಗಳ ನಾಳೆಯ ದಿನ ಭವಿಷ್ಯ
13th June 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (13th June 2024 Horoscope).
ನಾಳೆಯ ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಗುರುವಾರ
ತಿಥಿ: ಸಪ್ತಮಿ ರಾತ್ರಿ 08.37ರವರೆಗೂ ಇರುತ್ತದೆ ನಂತರ ಅಷ್ಟಮಿ ಆರಂಭವಾಗುತ್ತದೆ.
ನಕ್ಷತ್ರ: ಪುಬ್ಬ ನಕ್ಷತ್ರವು ರಾತ್ರಿ 04.40 ರವರೆಗೂ ಇದ್ದು ನಂತರ ಉತ್ತರ ನಕ್ಷತ್ರವು ಆರಂಭವಾಗುತ್ತದೆ.
ಸೂರ್ಯೋದಯ: ಬೆಳಗ್ಗೆ 05.52
ಸೂರ್ಯಾಸ್ತ: ಸಂಜೆ 06.45
ರಾಹುಕಾಲ: 01.59 ರಿಂದ ಸಂಜೆ 03.35
ನಾಳೆಯ ರಾಶಿಫಲ
ಮೇಷ
ಸ್ತ್ರೀಯರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಾರೆ. ಆದರೆ ಅಪವಾದವೊಂದು ಬರುತ್ತದೆ. ಗಂಟಲಿನ ಸೋಂಕು ನಿಮ್ಮನ್ನು ಕಾಡಲಿದೆ. ಅತ್ತೆಯವರ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಗಂಡು ಮಕ್ಕಳ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಇರುತ್ತದೆ. ಮೃದುವಾಗಿ ಮಾತನಾಡಬಲ್ಲಿರಿ. ಈ ಕಾರಣದಿಂದ ಶತ್ರುಗಳು ಮಿತ್ರರಾಗುತ್ತಾರೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರವಿರಿ. ಸಮಾಜದ ಹಿರಿಯ ವ್ಯಕ್ತಿಗಳನ್ನು ಭೇಟಿ ಮಾಡುವಿರಿ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ
ವೃಷಭ
ಕವಿಗಳು ಮತ್ತು ಬರಹಗಾರರಿಗೆ ಹೊಸ ಅವಕಾಶ ದೊರೆಯುತ್ತದೆ. ದೇಹದಲ್ಲಿ ನೋವಿರುತ್ತದೆ. ಚರ್ಮದ ಸಮಸ್ಯೆ ಗುಣವಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ವಿಶೇಷ ಆಸಕ್ತಿ ತೋರುವಿರಿ. ನಿಮ್ಮದೇ ಮನಸ್ಥಿತಿಯುಳ್ಳ ಸ್ನೇಹಿತರೊಂದಿಗೆ ಭವಿಷ್ಯದ ಬಗ್ಗೆ ಚರ್ಚಿಸುವಿರಿ. ಪಾಲುದಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಧನ ಲಾಭವಿರುತ್ತದೆ. ಸ್ನೇಹಿತರಿಗಾಗಿ ಮನರಂಜನಾ ಕೂಟವನ್ನು ಆಯೋಜಿಸುವಿರಿ.
ಪರಿಹಾರ : ಬಡ ರೋಗಿಗಳಿಗೆ ಹಣದ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಕೆಂಪು
ಮಿಥುನ
ಕುಟುಂಬದಲ್ಲಿನ ಜವಾಬ್ದಾರಿಗಳನ್ನು ಸುಲಭವಾಗಿ ನಿರ್ವಹಿಸುವಿರಿ.ನಿಮ್ಮ ವಯಸ್ಸಿನ ಜನರ ನಡುವೆ ನಾಯಕರಾಗಿ ಬಾಳುವಿರಿ. ಅವಿವಾಹಿತರಿಗೆ ಆತ್ಮಿಯರೊಂದಿಗೆ ವಿವಾಹದ ಮಾತುಕತೆ ನಡೆಯಲಿದೆ. ಅನಿವಾರ್ಯವಾಗಿ ಆಹಾರ ಪದ್ಧತಿ ಬದಲಾಗುತ್ತದೆ. ಸಂಗಾತಿಯ ಜೊತೆಯಲ್ಲಿ ಉತ್ತಮ ಆತ್ಮೀಯತೆ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಒಳ್ಳೆಯ ಲಾಭದೊರೆಯುತ್ತದೆ.
ಪರಿಹಾರ : ಬಲಗೈಯಲ್ಲಿ ಬೆಳ್ಳಿಯ ಕೈಕಡಗ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಕಿತ್ತಳೆ
ಕಟಕ
ಹಣಕಾಸಿನ ಸ್ಥಿತಿಯಲ್ಲಿ ಮಹತ್ತರ ಬದಲಾವಣೆ ಕಂಡುಬರುತ್ತದೆ. ಹಣವನ್ನು ಉಳಿಸಲು ಸಾಧ್ಯವಾಗದೆ ಹೋದರೂ ತೊಂದರೆ ಇರುವುದಿಲ್ಲ. ಯಾರೊಬ್ಬರ ಸಲಹೆಯನ್ನು ಒಪ್ಪುವುದಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಗೌರವಕ್ಕೆ ಪಾತ್ರರಾಗುವಿರಿ. ಬಂಧು-ಬಳಗದವರ ಸಹಾಯದಿಂದ ಜೀವನದ ತೊಂದರೆಗಳಿಂದ ಮುಕ್ತಿ ಪಡೆಯುವಿರಿ. ಆರೋಗ್ಯದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ವಿದ್ಯಾರ್ಥಿಗಳು ಆತಂಕದ ಕ್ಷಣಗಳನ್ನು ಎದುರಿಸುತ್ತಾರೆ.
ಪರಿಹಾರ : ಬೆಳ್ಳಿಯ ಉಂಗುರ ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಹಳದಿ
ಸಿಂಹ
ಪರಂಪರೆ ಮತ್ತು ಪ್ರಾಚೀನ ಶಾಸ್ತ್ರಗಳಲ್ಲಿ ಆಸಕ್ತಿ ಮೂಡುತ್ತದೆ. ಹೆಣ್ಣುಮಕ್ಕಳು ಸಂಗೀತ ನಾಟ್ಯದಲ್ಲಿ ವಿಶೇಷ ಸಾಧನೆ ಮಾಡಲಿದ್ದಾರೆ. ವಾದ ವಿವಾದ ಉಂಟಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಾಣುವುದಿಲ್ಲ. ಅನಿರೀಕ್ಷಿತ ಧನ ಲಾಭವಿದೆ. ಮನ ಶಾಂತಿಗಾಗಿ ಧ್ಯಾನದ ಮಾರ್ಗವನ್ನು ಆರಿಸುವಿರಿ. ಬೇರೊಬ್ಬರ ಸಹಾಯವಿಲ್ಲದೆ ಸ್ವತಂತ್ರವಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ :1
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ : ಹಸಿರು
ಕನ್ಯಾ
ಸಮಾಜದಲ್ಲಿ ನಿಮಗೆ ಗೌರವಯುತ ಸ್ಥಾನ ದೊರೆಯಲಿದೆ. ನಿಮ್ಮ ಮನಸ್ಸಿನಲ್ಲಿ ಭವಿಷ್ಯದ ಜೀವನದ ಬಗ್ಗೆ ಹಲವಾರು ಯೋಚನೆಗಳು ಇರುತ್ತವೆ. ಯುವಕ ಯುವತಿಯರಿಗೆ ಕಣ್ಣಿನ ತೊಂದರೆ ಇರುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನಡೆಯಲಿದೆ. ಆರಂಭದಲ್ಲಿ ಅಡಚಣೆಗಳು ಎದುರಾದರೂ ಉದ್ಯೋಗದಲ್ಲಿ ಯಾವುದೇ ತೊಂದರೆ ಬಾರದು. ನಿಮ್ಮಲ್ಲಿರುವ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವ ಜನರಿದ್ದಾರೆ ಎಚ್ಚರಿಕೆ ಇರಲಿ.
ಪರಿಹಾರ : ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ : ನೀಲಿ ಬಣ್ಣ
ತುಲಾ
ಬೇಸಾಯದಲ್ಲಿ ಆಸಕ್ತಿ ಇದ್ದರೆ ಅದು ಇಂದು ಕಾರ್ಯರೂಪಕ್ಕೆ ಬರುತ್ತದೆ. ಆತ್ಮೀಯರನ್ನು ಅತಿ ಪ್ರೀತಿ ವಿಶ್ವಾಸದಿಂದ ನೋಡುವಿರಿ. ಸಾಕುಪ್ರಾಣಿಗಳ ಬಗ್ಗೆ ದಯೆ ತೋರುವಿರಿ. ಪ್ರಯೋಜನವಿಲ್ಲದ ವಿಚಾರಗಳಿಗಾಗಿ ಹಣ ಖರ್ಚಾಗುತ್ತದೆ. ದುಡುಕದೆ ನಿಧಾನವಾಗಿ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ನೀವೆಷ್ಟೇ ಬುದ್ಧಿವಂತರಾದರು ಪ್ರಯೋಜನವಾಗದು. ಸೋದರನ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರಲಿದೆ.
ಪರಿಹಾರ : ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು ನೈರುತ್ಯ
ಅದೃಷ್ಟದ ಬಣ್ಣ: ನೇರಳೆ
ವೃಶ್ಚಿಕ
ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ತೋರುವುದಿಲ್ಲ. ಆತ್ಮೀಯರೊಂದಿಗೆ ಸಹನೆಯಿಂದ ವರ್ತಿಸುವಿರಿ. ಎಲ್ಲರ ಪ್ರೀತಿ ವಿಶ್ವಾಸ ನಿಮ್ಮದಾಗುತ್ತದೆ. ಮನಸ್ಸಿನ ಬೇಸರದಿಂದ ಹೊರ ಬರಲು ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ಸಂತಾನ ಲಾಭವಿದೆ. ದಂಪತಿಗಳು ಸುಖ ಸಂತೋಷದಿಂದ ಬಾಳುತ್ತಾರೆ. ಮಕ್ಕಳಿಗೆ ವಿಶೇಷ ಸೌಕರ್ಯಗಳನ್ನು ಕಲ್ಪಿಸುವಿರಿ. ಕುಟುಂಬದಿಂದ ದೂರ ಉಳಿಯಲು ಪ್ರಯತ್ನಿಸುವಿರಿ.
ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 2
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಗುಲಾಬಿ
ಧನಸ್ಸು
ಸಮಾಜದಲ್ಲಿ ಉನ್ನತ ಗೌರವ ಪ್ರತಿಷ್ಠೆ ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನಕ್ಕೆ ವಿಶೇಷ ಅವಕಾಶ ದೊರೆಯುತ್ತದೆ. ಬೇಡದ ಖರ್ಚು ವೆಚ್ಚಗಳಿಂದ ಹಣದ ಕೊರತೆ ಇರುತ್ತದೆ. ಹೊಸ ವಾಹನವನ್ನು ಕೊಳ್ಳುವಿರಿ. ವಾಸ ಸ್ಥಳವನ್ನು ಬದಲಿಸುವಿರಿ. ನಿಮ್ಮ ಮಕ್ಕಳಿಗೆ ಪರಸ್ಥಳದಲ್ಲಿ ಉದ್ಯೋಗ ದೊರೆಯುತ್ತದೆ. ಉದ್ಯೋಗದ ಸಲುವಾಗಿ ತಂದೆಯವರು ದೂರದ ಊರಿಗೆ ತೆರಳುತ್ತಾರೆ.
ಪರಿಹಾರ : ಸಾಧು ಸಂತರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಮಕರ
ಮಧ್ಯ ವಯಸ್ಕರಾದಲ್ಲಿ ಜೀವನದಲ್ಲಿನ ಕಷ್ಟಗಳು ಕಡಿಮೆಯಾಗಲಿವೆ ಉದ್ಯೋಗದಲ್ಲಿ ಕೆಲವೊಮ್ಮೆ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಬಿಡುವಿಲ್ಲದಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಬಂಧು ಬಳಗದವರಿಂದ ದೂರವಿರಲು ಬಯಸುತ್ತೀರಿ. ಸಹಾಯ ಮಾಡಿದವರಿಗೆ ಸ್ನೇಹ ಪ್ರೀತಿಯನ್ನು ನೀಡುವಿರಿ. ಎಲ್ಲರಿಗೂ ಇಷ್ಟವಾಗುವಂತೆ ಮಾತನಾಡುವಿರಿ.
ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಬೂದು
ಕುಂಭ
ಕೆಟ್ಟ ಹವ್ಯಾಸಗಳಿಂದ ದೂರ ಉಳಿಯುವ ನಿಶ್ಚಯ ಮಾಡುವಿರಿ. ದಂಪತಿ ನಡುವೆ ಅನಾವಶ್ಯಕ ಮನಸ್ತಾಪವಿರುತ್ತದೆ. ವೈಭವದ ಜೀವನವನ್ನು ನಡೆಸಲು ಇಷ್ಟಪಡುವಿರಿ. ಸಮಯಕ್ಕೆ ತಕ್ಕಂತೆ ಬುದ್ಧಿವಂತಿಕೆಯಿಂದ ವರ್ತಿಸುವಿರಿ. ಶ್ರಮಜೀವಿಗಳ ಬಗ್ಗೆ ಪ್ರೀತಿ ಅನುಕಂಪ ಇರುತ್ತದೆ. ಉದರ ವಾಯುವಿನ ದೋಷ ನಿಮ್ಮನ್ನು ಕಾಡುತ್ತದೆ.
ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಕಂದು
ಮೀನ
ಬಂಧು ಬಳಗದವರ ಮೇಲೆ ನಂಬಿಕೆ ಇರುವುದಿಲ್ಲ. ಸದಸ್ಯರ ಜೊತೆ ಪ್ರವಾಸಕ್ಕೆ ತೆರಳುವಿರಿ. ಸೋದರಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಮನದಲ್ಲಿ ಆತಂಕದ ಭಾವನೆ ಇರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳಿಂದ ಹಣದ ಕೊರತೆ ಉಂಟಾಗುತ್ತದೆ. ಒಳ್ಳೆಯ ಮನಸ್ಸಿರುವ ನೀವು ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ. ಎಲ್ಲರೊಂದಿಗೆ ಹೊಂದಿಕೊಂಡು ಬಾಳುವಿರಿ. ದಂಪತಿ ನಡುವೆ ಉತ್ತಮ ಅನುಬಂಧವಿರುತ್ತದೆ.
ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೇಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ : ಕಪ್ಪು ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).