ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ಸ್ವಂತ ಉದ್ಯಮ ಸ್ಥಾಪಿಸಬೇಕೆಂಬ ಈ ರಾಶಿಯವರ ಕನಸು ನನಸಾಗಲಿದೆ; ನಾಳೆಯ ದಿನ ಭವಿಷ್ಯ

Tomorrow Horoscope: ಸ್ವಂತ ಉದ್ಯಮ ಸ್ಥಾಪಿಸಬೇಕೆಂಬ ಈ ರಾಶಿಯವರ ಕನಸು ನನಸಾಗಲಿದೆ; ನಾಳೆಯ ದಿನ ಭವಿಷ್ಯ

15th April 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳೆಯ ದಿನಭವಿಷ್ಯ
ನಾಳೆಯ ದಿನಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (15th April 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಶುಕ್ಲಪಕ್ಷ-ಸೋಮವಾರ

ತಿಥಿ: ಸಪ್ತಮಿ 03.34 ರವರೆಗೂ ಇದ್ದು ನಂತರ ಅಷ್ಟಮಿ ಆರಂಭವಾಗುತ್ತದೆ.

ನಕ್ಷತ್ರ : ಪುನರ್ವಸು ನಕ್ಷತ್ರವು ಮಂಗಳವಾರ ಬೆಳಗ್ಗೆ 06.03 ರವರೆಗೂ ಇದ್ದು ನಂತರ ಪುಷ್ಯ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.07

ಸೂರ್ಯಾಸ್ತ: ಸಂಜೆ 06.31

ರಾಹುಕಾಲ : ಬೆಳಗ್ಗೆ 07.30 ರಿಂದ 09.00

ರಾಶಿಫಲ

ಮೇಷ

ವ್ಯಾಪಾರ ವ್ಯವಹಾರದಲ್ಲಿ ನಷ್ಟದ ಮಾತಿರದು. ಆತ್ಮೀಯ ಸ್ನೇಹಿತರೊಬ್ಬರ ಸಹಾಯ ದೊರೆಯುತ್ತದೆ. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಶುಚಿ ರುಚಿಯಾದ ಆಹಾರ ಸೇವಿಸಿ. ಆಡುವ ಮಾತಿನಲ್ಲಿ ಇತಿ ಮಿತಿ ಇರಲಿ. ಖರ್ಚು ವೆಚ್ಚಗಳು ಹೆಚ್ಚಾಗಿಯೇ ಇರುತ್ತದೆ. ಕುಟುಂಬದವರ ಮತ್ತು ಆತ್ಮೀಯರ ಜೊತೆಯಲ್ಲಿ ದಿನ ಕಳೆಯುವಿರಿ. ಹಣದ ಕೊರತೆ ಕಾಡದು.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೇಳೆಯನ್ನು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಂದು

ವೃಷಭ

ಮಕ್ಕಳೊಂದಿಗೆ ಸಂತಸದಿಂದ ದಿನವನ್ನು ಕಳೆಯುವಿರಿ. ಉದ್ಯೋಗದಲ್ಲಿ ಪ್ರಯ್ಕತ್ನಕ್ಕೆ ತಕ್ಕಂತ ಫಲಿತಾಂಶ ಪಡೆಯುವಿರಿ. ವಿದ್ಯಾರ್ಥಿಗಳು ವಿಧ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸುತ್ತಾರೆ. ತಾಯಿಯ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ವಾದ ನಡೆಯುತ್ತದೆ. ಹಿರಿಯ ನಾಗರಿಕರಿಗೆ ಉತ್ತಮ ಫಲಗಳು ದೊರೆಯುತ್ತವೆ. ರುಚಿಕರವಾದ ಭೋಜನ ಮತ್ತು ವಿಶ್ರಾಂತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 8

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ಕಪ್ಪು ಬಣ್ಣ

ಮಿಥುನ

ಉದ್ಯೋಗದಲ್ಲಿ ಬೇಸರದ ಸನ್ನಿವೇಶವೊಂದು ನಡೆಯುತ್ತದೆ. ಜಗಳ ಕದನವನ್ನು ಇಷ್ಟ ಪಡುವುದಿಲ್ಲ. ಸೋಲೊಪ್ಪುವುದರಲ್ಲಿ ಸಂತಸ ಕಾಣುವಿರಿ. ಎದುರಾಗುವ ಸಮಸ್ಯೆಗೆ ಧೃತಿಗೆಡದೆ ತಕ್ಕ ಪರಿಹಾರವನ್ನು ಕಂಡುಕೊಳ್ಳುವಿರಿ. ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಓದಿನಲ್ಲಿ ಮುಂದುವರೆಯಲಿದ್ದೀರಿ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ರಜೆಯ ಸವಿ ಸವಿಯಲು ಕಿರುಪ್ರವಾಸಕ್ಕೆ ತೆರಳುವಿರಿ.

ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ತಿಳಿ ಹಸಿರು

ಕಟಕ

ಅತಿಯಾದ ಆತ್ಮವಿಶ್ವಾಸದಿಂದ ಮಾಡುವ ಕೆಲಸ ನಿರಾಸೆ ಉಂಟು ಮಾಡಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ತೂಕ ಇಳಿಸಿಕೊಳ್ಳಲು ಆಹಾರ ಕ್ರಮವನ್ನು ಬದಲಾಯಿಸುವಿರಿ. ಧೈರ್ಯ ಸಾಹಸದ ಗುಣ ಹೊಸ ಉದ್ಯೋಗಾವಕಾಶಗಳನ್ನು ನೀಡಲಿದೆ. ಸಾಹಸ ಕಲಾವಿದರಿಗೆ ನೂತನ ಅವಕಾಶ ದೊರೆಯುತ್ತದೆ. ಚಿಕ್ಕ ವಯಸ್ಸಿನ ಮಕ್ಕಳಿಗೆ ಅದೃಷ್ಟವಿದೆ. ಸ್ವಂತ ಉದ್ಯಮ ಸ್ಥಾಪಿಸುವ ಮನಸ್ಸಿದ್ದರೆ ಸುಲಭ ಸಾಧ್ಯವಾಗಲಿದೆ.

ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನಸು ಗೆಂಪು

ಸಿಂಹ

ಕುಟುಂಬದಲ್ಲಿ ನಿಮ್ಮ ನಿರ್ಣಯವೇ ಅಂತಿಮವಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಆರೋಗ್ಯದಲ್ಲಿ ಏರಿಳಿತ ಇರುತ್ತದೆ. ಕುಟುಂಬದ ಸದಸ್ಯರ ಜೊತೆ ಮನರಂಜನಾ ಸ್ಥಳಕ್ಕೆ ತೆರಳುವಿರಿ. ಮನಸ್ಸು ಒಪ್ಪದೇ ಇದ್ದರೂ ಉಪಯೋಗವಿರದ ವಿಚಾರಗಳಿಗೆ ಹಣ ಖರ್ಚು ಮಾಡುವಿರಿ. ಬುದ್ಧಿವಂತಿಕೆಯ ಮಾತಿನಿಂದ ಸಮಸ್ಯೆಯೊಂದರಿಂದ ಪಾರಾಗುವಿರಿ. ಯಾರನ್ನೂ ನಂಬದ ಮನಸ್ಥಿತಿಯಲ್ಲಿ ಇರುವಿರಿ.

ಪರಿಹಾರ : ದೇವರಿಗೆ ತುಪ್ಪದ ದೀಪ ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ : ನೀಲಿ ಮಿಶ್ರಿತ ಬಿಳಿ

ಕನ್ಯಾ

ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಮಧ್ಯಮ ಲಾಭ ನಷ್ಟ ದೊರೆಯುತ್ತದೆ. ಯಾರೊಬ್ಬರನೂ ಆಶ್ರಯಿಸದೆ ಸ್ವಂತ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಬಿಡುವಿಲ್ಲದ ಕೆಲಸದ ನಡುವೆಯೂ ಆತ್ಮೀಯರಿಗೆ ಸಹಾಯ ಮಾಡುವಿರಿ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಅನಿರೀಕ್ಷಿತ ಧನಲಾಭವಿದೆ. ಷೇರಿನ ವ್ಯವಹಾರದಲ್ಲಿ ಆದಾಯ ದೊರೆಯುತ್ತದೆ. ಸೋದರಿಯ ಮನೆಯ ಮಂಗಳಕಾರ್ಯಕ್ಕೆ ಸಹಾಯ ಮಾಡುವಿರಿ.

ಪರಿಹಾರ : ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಹಾಲಿನ ಬಣ್ಣ

ತುಲಾ

ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚುವ ಕಾರಣ ಸಹನೆ ಕಳೆದುಕೊಳ್ಳುವಿರಿ. ಕೈತುಂಬಾ ಹಣವಿದ್ದರೂ ಮಾನಸಿಕ ನೆಮ್ಮದಿ ಇರುವುದಿಲ್ಲ. ಚಾಡಿಮಾತನ್ನು ನಂಬದಿರಿ. ಶಾಂತಿ ಸಹನೆಯಿಂದ ದಾಂಪತ್ಯ ಸುಖಮಯವಾಗಿರುತ್ತದೆ. ಆತುರದಿಂದ ವರ್ತಿಸಿ ಹಣದ ವಿವಾದಕ್ಕೆ ಸಿಲುಕುವಿರಿ. ಆರೋಗ್ಯದಲ್ಲಿ ತೊಂದರೆ ಎದುರಾಗದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ವಯೋವೃದ್ದರ ಆರೋಗ್ಯ ಸುಧಾರಿಸುತ್ತದೆ.

ಪರಿಹಾರ : ತಲೆಗೆ ಹಾಲನಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು ದಕ್ಷಿಣ

ಅದೃಷ್ಟದ ಬಣ್ಣ: ಆಕಾಶ ನೀಲಿ

ವೃಶ್ಚಿಕ

ಅನಾವಶ್ಯಕ ಖರ್ಚು ವೆಚ್ಚಗಳು ಮುಂಗೋಪಕ್ಕೆ ಕಾರಣವಾಗಲಿದೆ. ವ್ಯಯಕ್ತಿಕ ಕೆಲಸವೊಂದು ಅಪೂರ್ಣವಾಗಬಹುದು. ಸ್ತ್ರೀಯರು ಹಟದಿಂದ ಕೆಲಸ ಸಾಧಿಸುತ್ತಾರೆ. ಮಕ್ಕಳಲ್ಲಿನ ಆತ್ಮವಿಶ್ವಾಸ ತೊಂದರೆಯನ್ನು ದೂರ ಮಾಡುತ್ತದೆ. ವಿದೇಶ ಅಥವಾ ದೂರದ ಪ್ರದೇಶಕ್ಕೆ ಉದ್ಯೋಗವನ್ನು ಅರಸಿ ತೆರಳುವಿರಿ. ಬರಹಗಾರರಿಗೆ ವಿನೂತನ ಅವಕಾಶವೊಂದು ದೊರೆಯುತ್ತದೆ. ಖರ್ಚು ಮಾಡುವುದನ್ನು ಕಡಿಮೆ ಮಾಡಿ ಹಣ ಉಳಿಸಲು ಯೋಜನೆಯೊಂದನ್ನು ರೂಪಿಸುವಿರಿ.

ಪರಿಹಾರ : ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕೆಂಪು

ಧನಸ್ಸು

ಉದ್ಯೋಗದಲ್ಲಿ ಪ್ರಗತಿಪರ ಯೋಜನೆಗಳು ಕಾರ್ಯದಕ್ಷತೆಯನ್ನು ಹೆಚ್ಚಿಸುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಯಾವುದೇ ತೊಂದರೆ ಕಾಣದು. ಹಟದ ಗುಣದಿಂದ ನಿಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವಿರಿ. ಯಾರನ್ನೂ ಸಹಾಯಕ್ಕೂ ಕಾಯದೆ ಮುಂದುವರೆಯುವಿರಿ. ಸ್ವಾಭಿಮಾನಿಗಳಾದ ನೀವು ಇತರರಿಗೂ ಸ್ಪೂರ್ತಿಯಾಗುವಿರಿ. ನಿಮ್ಮ ಕಷ್ಟದ ದುಡಿಮೆಯ ಹಣದಲ್ಲಿ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವಿರಿ. ಸಮಾಜದಲ್ಲಿ ನಿಮಗೆ ಗೌರವಯುತ ಸ್ಥಾನ ಮಾನಗಳು ದೊರೆಯಲಿವೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಎಲೆ ಹಸಿರು

ಮಕರ

ಹಣಕಾಸಿನ ವಿಚಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ವೇಳೆ ಗಲಿಬಿಲಿಗೆ ಒಳಗಾಗುವಿರಿ. ವ್ಯಾಪಾರ ವ್ಯವಹಾರದಲ್ಲಿ ಆತುರ ತೋರದೆ ಹೋದಲ್ಲಿ ಆದಾಯದಲ್ಲಿ ಸ್ಥಿರತೆ ಕಾಣಲಿದೆ. ವಿದ್ಯಾರ್ಥಿಗಳು ನಿದ್ರೆ, ಮನರಂಜನೆಯಿಂದ ದೂರ ಉಳಿಯುತ್ತಾರೆ. ಮಕ್ಕಳು ಸುಲಭವಾಗಿ ಗುರಿಯನ್ನು ತಲುಪಲಿದ್ದಾರೆ. ಆತ್ಮೀಯರೊಬ್ಬರು ಅನಾಯಾಸವಾಗಿ ಕೊಟ್ಟ ಮಾತಿನಿಂದ ದೂರ ಸರಿಯುತ್ತಾರೆ. ಆತುರದಲ್ಲಿ ಬೇಸರ ಬರುವಂತೆ ಮಾತನಾಡುವಿರಿ.

ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಕೇಸರಿ

ಕುಂಭ

ದೈಹಿಕವಾಗಿ ಶ್ರಮ ಪಡದೆ ಅನ್ಯರ ಸಹಾಯದಿಂದ ಕೆಲಸ ಕಾರ್ಯಗಳನ್ನು ಪೂರೈಸುವಿರಿ. ಮನದ ವಿಚಾರವನ್ನು ನೇರವಾಗಿ ತಿಳಿಸಲು ಪ್ರಯತ್ನಿಸಿ. ನಿಮ್ಮ ಬದಲಾಗದ ಮನಸ್ಸಿನ ಕಾರಣ ಎದುರಾಳಿಗಳು ಗಲಿಬಿಲಿಗೊಳ್ಳುತ್ತಾರೆ. ಹೊಸ ಮನೆ ಕೊಳ್ಳುವ ಬಗ್ಗೆ ಮಾತು ಕತೆ ನಡೆಯುತ್ತದೆ. ನಿಮ್ಮ ಆದಾಯವು ಹೆಚ್ಚಲಿದೆ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ನಿರ್ಧರಿಸುವಿರಿ. ಅಪರಿಚಿತ ವ್ಯಕ್ತಿಯೊಬ್ಬರ ಸಹಾಯ ಸಹಕಾರ ದೊರೆಯುತ್ತದೆ, ಕಲಾವಿದರ ಪ್ರತಿಭೆಯ ಅನಾವರಣಕ್ಕೆ ನೂತನ ವೇದಿಕೆಯೊಂದು ದೊರೆಯಲಿದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕೆಂಪು

ಮೀನ

ಅನಾವಶ್ಯಕ ವಿಚಾರದಲ್ಲಿ ಸಮಯ ವ್ಯರ್ಥಮಾಡುವಿರಿ. ಸ್ವಂತ ಕೆಲಸ ಕಾರ್ಯಗಳನ್ನು ಮೊದಲು ಪೂರ್ಣಗೊಳಿಸುವಿರಿ. ಸೂಕ್ತ ಸಹಕಾರವಿಲ್ಲದ್ದೆ ಅತಿ ಮುಖ್ಯ ಕೆಲಸವನ್ನು ಮುಂದೂಡುವಿರಿ. ಕಲಿಕೆಯ ವಿಚಾರದಲ್ಲಿ ವಿದ್ಯಾರ್ಥಿಗಳು ನಿರಾಸಕ್ತಿ ತೋರುತ್ತಾರೆ. ಹಣಕಾಸಿನ ಕೊರತೆ ಕಡಿಮೆ ಆಗಲಿದೆ. ಕುಟುಂಬದ ಜವಾಬ್ದಾರಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಸೋಲನ್ನು ಒಪ್ಪದೆ ಪ್ರತಿ ಕೆಲಸದಲ್ಲಿಯೂ ಅವಿರತ ಪ್ರಯತ್ನದಿಂದ ಜಯ ಗಳಿಸುವಿರಿ.  

ಪರಿಹಾರ : ತಾಯಿಯ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಹಳದಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).