ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆಸ್ತಿ ವಿವಾದ ಬಗೆಹರಿಯುತ್ತದೆ, ಇಷ್ಟವಿಲ್ಲದಿದ್ದರೂ ಸ್ನೇಹಿತರ ಹಣಕಾಸಿನ ವಿಚಾರದಲ್ಲಿ ಸಾಕ್ಷಿದಾರರಾಗುವಿರಿ; ನಾಳೆಯ ದಿನ ಭವಿಷ್ಯ

ಆಸ್ತಿ ವಿವಾದ ಬಗೆಹರಿಯುತ್ತದೆ, ಇಷ್ಟವಿಲ್ಲದಿದ್ದರೂ ಸ್ನೇಹಿತರ ಹಣಕಾಸಿನ ವಿಚಾರದಲ್ಲಿ ಸಾಕ್ಷಿದಾರರಾಗುವಿರಿ; ನಾಳೆಯ ದಿನ ಭವಿಷ್ಯ

15th June 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಆಸ್ತಿ ವಿವಾದ ಬಗೆಹರಿಯುತ್ತದೆ, ಇಷ್ಟವಿಲ್ಲದಿದ್ದರೂ ಸ್ನೇಹಿತರ ಹಣಕಾಸಿನ ವಿಚಾರದಲ್ಲಿ ಸಾಕ್ಷಿದಾರರಾಗುವಿರಿ; ನಾಳೆಯ ದಿನ ಭವಿಷ್ಯ
ಆಸ್ತಿ ವಿವಾದ ಬಗೆಹರಿಯುತ್ತದೆ, ಇಷ್ಟವಿಲ್ಲದಿದ್ದರೂ ಸ್ನೇಹಿತರ ಹಣಕಾಸಿನ ವಿಚಾರದಲ್ಲಿ ಸಾಕ್ಷಿದಾರರಾಗುವಿರಿ; ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (15th June 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ಗ್ರೀಷ್ಮ ಋತು-ಜ್ಯೇಷ್ಠ ಮಾಸ-ಶುಕ್ಲಪಕ್ಷ-ಶನಿವಾರ

ತಿಥಿ: ನವಮಿ ರಾತ್ರಿ 12.37ರವರೆಗೂ ಇದ್ದು ನಂತರ ದಶಮಿ ಆರಂಭವಾಗುತ್ತದೆ.

ನಕ್ಷತ್ರ : ಉತ್ತರ ನಕ್ಷತ್ರವು ಬೆಳಗ್ಗೆ 07.24 ರವರೆಗೆ ಇದ್ದು ನಂತರ ಹಸ್ತ ನಕ್ಷತ್ರ ಆರಂಭವಾಗಲಿದೆ.

ಸೂರ್ಯೋದಯ: ಬೆಳಗ್ಗೆ 05.52

ಸೂರ್ಯಾಸ್ತ: ಸಂಜೆ 06.46

ರಾಹುಕಾಲ: ಬೆಳಗ್ಗೆ 09.11 ರಿಂದ 10.47

ರಾಶಿ ಫಲ

 

ಮೇಷ

ನಿಮ್ಮಲ್ಲಿರುವ ಕ್ಷಮಾ ಗುಣದಿಂದಾಗಿ ಆತ್ಮೀಯರ ಸಂಖ್ಯೆ ಹೆಚ್ಚುತ್ತದೆ. ಆರೋಗ್ಯದತ್ತ ಗಮನ ಹರಿಸುವುವಿರಿ. ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವಿರಿ. ಕ್ರೀಡಾ ಸ್ಪರ್ಧಿಗಳಿಗೆ ಉತ್ತಮ ಅವಕಾಶ ಮತ್ತು ಗೆಲುವು ದೊರೆಯುತ್ತದೆ.ಇರುವ ವಾಹನವನ್ನು ಮಾರಾಟ ಮಾಡುವಿರಿ. ಆದರೆ ಹೊಸ ವಾಹನವನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ. ತಾಯಿಗೆ ಅನಾರೋಗ್ಯವಿರುತ್ತದೆ. ಸಂಗಾತಿಯೊಂದಿಗೆ ಅನಾವಶ್ಯಕವಾಗಿ ವಾದದಲ್ಲಿ ತೊಡಗುವಿರಿ.

ಪರಿಹಾರ : ಕೈ ಅಥವ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ಶುಭವಿರುತ್ತದೆ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಹಳದಿ ಬಣ್ಣ

ವೃಷಭ

ಒಳ್ಳೆಯ ಮನಸ್ಸು ಜೀವನದಲ್ಲಿನ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ದಂಪತಿ ನಡುವೆ ಸಣ್ಣಪುಟ್ಟ ವಿಚಾರಗಳಿಗೂ ಮನಸ್ತಾಪ ಉಂಟಾಗಲಿದೆ. ಗಂಡು ಮಕ್ಕಳ ಆರೋಗ್ಯದ ಬಗ್ಗೆ ಗಮನ ವಹಿಸಿ. ಶಾಂತಿಯುತ ಮಾತುಕತೆಯಿಂದ ವಂಶದ ಆಸ್ತಿ ವಿವಾದವು ಬಗೆಹರಿಯುತ್ತದೆ. ಮನಸ್ಸಿಲ್ಲದೆ ಹೋದರು ಸ್ನೇಹಿತರ ಹಣಕಾಸಿನ ವಿಚಾರದಲ್ಲಿ ಸಾಕ್ಷಿದಾರರಾಗುವಿರಿ.

ಪರಿಹಾರ : ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಹಸಿರು ಬಣ್ಣ

ಮಿಥುನ

ನಿಮ್ಮ ತಾಯಿಯವರ ತಾಯಿಗೆ ಸಂಬಂಧಿಸಿದ ಆಸ್ತಿಯಲ್ಲಿ ಪಾಲು ದೊರೆಯುತ್ತದೆ. ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಮಾನ ದೊರೆಯುತ್ತದೆ. ಮಹಿಳೆಯರ ಆಸೆ ಆಕಾಂಕ್ಷಿಗಳು ಸುಲಭವಾಗಿ ನೆರವೇರುತ್ತದೆ. ಒತ್ತಡಕ್ಕೆ ಮಣಿದು ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಮಹತ್ತರ ತಿರುವು ದೊರೆಯುತ್ತದೆ. ವಾಹನ ಲಾಭವಿದೆ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ನೀಲಿ ಬಣ್ಣ

ಕಟಕ

ನನ್ನ ರೀತಿ ನೀತಿಗಳೇ ಸರಿ ಎಂಬ ಭಾವನೆ ನಿಮ್ಮಲ್ಲಿರುತ್ತದೆ. ಚಿನ್ನ ಬೆಳ್ಳಿಯ ಒಡವೆಗಳಿಗಾಗಿ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಉಷ್ಣದ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ನಿಮ್ಮ ಸಂಗಾತಿಗಿದ್ದ ಚರ್ಮದ ಸಮಸ್ಯೆ ಗುಣಮುಖವಾಗುತ್ತದೆ. ಕುಟುಂಬದಲ್ಲಿನ ಹೆಣ್ಣುಮಕ್ಕಳ ವಿವಾಹ ನಿಶ್ಚಯವಾಗುತ್ತದೆ. ತಪ್ಪು ಕಲ್ಪನೆಯಿಂದ ದೂರವಾದ ಬಂಧು ಬಾಂಧವರು ಮರಳಿ ಬರುತ್ತಾರೆ.

ಪರಿಹಾರ : ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನೇರಳೆ

ಸಿಂಹ

ಸುಲಭವಾಗಿ ನೀವು ಯಾರನ್ನೂ ನಂಬುವುದಿಲ್ಲ. ಹಣದ ಲೆಕ್ಕಾಚಾರದ ವಿಚಾರದಲ್ಲಿ ಎಲ್ಲರೂ ನಿಮ್ಮನ್ನು ಅವಲಂಬಿಸುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿಸಿದ ಯಶಸ್ಸು ಮತ್ತು ಆದಾಯ ದೊರೆಯುತ್ತದೆ. ಗೃಹಿಣಿಯರು ಸದ್ದಿಲ್ಲದೆ ಹಣ ಉಳಿಸುತ್ತಾರೆ. ದಾಂಪತ್ಯ ಜೀವನದಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗಿರುತ್ತದೆ. ಬಿಡುವಿನ ವೇಳೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗುವಿರಿ.

ಪರಿಹಾರ : ಸಾಧು ಸಂತರ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ :3

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ಗುಲಾಬಿ

ಕನ್ಯಾ

ವಿವಾಹವಾಗುವವರಿಗೆ ಉತ್ತಮ ಸಂಬಂಧ ಕೂಡಿಬರುತ್ತದೆ. ಮಗನ ಜೊತೆ ಉತ್ತಮ ಬಾಂಧವ್ಯ ಇರುವುದಿಲ್ಲ. ಹಣದ ತೊಂದರೆ ಕಾಡುವುದಿಲ್ಲ. ಸಂಗಾತಿಯಿಂದ ವಿಶೇಷವಾದ ಅನುಕೂಲತೆಗಳು ದೊರೆಯುತ್ತದೆ. ಮಹಿಳೆಯರು ಸಾರ್ವಜನಿಕ ಸಮಾರಂಭದ ನೇತೃತ್ವವನ್ನು ವಹಿಸುತ್ತಾರೆ. ಸಂಗಾತಿಯ ಆತುರದ ಮಾತುಗಳು ಕುಟುಂಬದಲ್ಲಿ ಮನಸ್ತಾಪ ಉಂಟುಮಾಡುತ್ತದೆ. ತಾಯಿಯ ಆರೋಗ್ಯದಲ್ಲಿ ತೊಂದರೆ ಇರುತ್ತದೆ.

ಪರಿಹಾರ : ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು: ಈಶಾನ್ಯ

ಅದೃಷ್ಟದ ಬಣ್ಣ : ಬಿಳಿ ಬಣ್ಣ

ತುಲಾ

ತಂದೆಯವರ ಆರೋಗ್ಯದಲ್ಲಿ ಪೂರ್ಣ ಸುಧಾರಣೆ ಕಂಡು ಬರುತ್ತದೆ. ಉತ್ತಮ ಆದಾಯವಿದ್ದರೂ ಹಣತೆ ಕೊರತೆ ನಿಮ್ಮನ್ನು ಕಾಡಲಿದೆ. ಕೂಡಿಟ್ಟ ಹಣವನ್ನು ಖರ್ಚು ಮಾಡಲೇಬೇಕಾದ ಸ್ಥಿತಿ ಬರುತ್ತದೆ. ನೀವು ಅಂದುಕೊಂಡಂತೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ನಿಮ್ಮ ಮನಸ್ಸಿಗೆ ತೃಪ್ತಿ ನೀಡುವ ವಸ್ತ್ರಗಳಿಗೆ ಹಣ ವೆಚ್ಚವಾಗುತ್ತದೆ. ಕುಟುಂಬದ ಬಳಕೆಗಾಗಿ ದೊಡ್ಡ ವಾಹನವನ್ನು ಕೊಳ್ಳುವಿರಿ.

ಪರಿಹಾರ : ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು: ಪೂರ್ವ

ಅದೃಷ್ಟದ ಬಣ್ಣ : ಬೂದು ಬಣ್ಣ

ವೃಶ್ಚಿಕ

ಬಾಳ ಸಂಗಾತಿಗೆ ಶೀತದಿಂದ ತೊಂದರೆ ಇರುತ್ತದೆ. ಮನದಲ್ಲಿ ಭಯವಿರುವುದಿಲ್ಲ. ಯಾವುದೇ ಕೆಲಸವನ್ನು ಸುಲಭವಾಗಿ ಮಾಡಬಲ್ಲಿರಿ. ಆದರೆ ಕೆಲಸದ ಆರಂಭದಲ್ಲಿ ಅಡ್ಡಿ ಆತಂಕಗಳು ಎದುರಾಗುತ್ತವೆ. ವ್ಯಾಪಾರದ ಉದ್ದೇಶದಿಂದ ಹೊಸ ವಾಹನ ಕೊಳ್ಳುವಿರಿ. ಕೇವಲ ಕುಟುಂಬದಲ್ಲಿ ಮಾತ್ರವಲ್ಲದೆ ಹೊರಗಿನ ಜನರ ಪ್ರೀತಿ-ವಿಶ್ವಾಸವನ್ನು ಗಳಿಸುವಿರಿ. ಮಾತನಾಡಲು ಆರಂಭಿಸಿದರೆ ನಿಲ್ಲಿಸುವುದೇ ಇಲ್ಲ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಂದು ಬಣ್ಣ

ಧನಸ್ಸು

ಆದರೂ ತೊಂದರೆ ಇರುವುದಿಲ್ಲ. ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ. ಸಂಗಾತಿಯ ಅರ್ಥಪೂರ್ಣ ಮಾತುಗಳು ಕುಟುಂಬದಲ್ಲಿನ ಬೇಸರವನ್ನು ದೂರ ಮಾಡುತ್ತದೆ. ನಿಮಗೆ ಉತ್ತಮ ಹಾಸ್ಯ ಪ್ರಜ್ಞೆ ಇರುತ್ತದೆ. ಕೌಟುಂಬಿಕ ಜೀವನದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ನಿಮ್ಮ ಬಳಿ ಇರುವ ಹಣವನ್ನೆಲ್ಲ ಖರ್ಚು ಮಾಡುವಿರಿ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ಕೈ ಕಾಲುಗಳಿಗೆ ಪೆಟ್ಟಾಗುವ ಸಂಭವವಿದೆ ಎಚ್ಚರಿಕೆ ಇರಲಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

ಮಕರ

ಮಾನಸಿಕ ಒತ್ತಡದ ಕಾರಣ ಸೋದರೊಂದಿಗೆ ಮನಸ್ತಾಪ ಉಂಟಾಗುತ್ತದೆ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಕುಟುಂಬದಲ್ಲಿ ಪರಸ್ಪರ ವಾದ ವಿವಾದದ ಕಾರಣ ಶಾಂತಿ ನೆಮ್ಮದಿ ಇರುವುದಿಲ್ಲ. ಕಲಾವಿದರಿಗೆ ಅನಿರೀಕ್ಷಿತ ಜನ ಲಾಭ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಯೋಚನೆ ಇರುತ್ತದೆ. ಗೃಹಿಣಿಯರಿಗೆ ಇಂದು ಉತ್ತಮ ದಿನವಾಗಲಿದೆ. ಮನಒಪ್ಪುವ ಕೆಲಸಗಳನ್ನು ಆಯ್ಕೆ ಮಾಡುವಿರಿ.

ಪರಿಹಾರ : ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ತಿಳಿ ಹಸಿರು

ಕುಂಭ

ಮಹಿಳೆಯರ ಜೀವನದಲ್ಲಿ ನಿರೀಕ್ಷಿತ ಬದಲಾವಣೆಗಳು ಉಂಟಾಗಲಿವೆ. ಧರ್ಮ ಗುರುಗಳನ್ನು ಭೇಟಿ ಮಾಡಲು ತೆರಳುವಿರಿ. ವಿದ್ಯಾರ್ಥಿಗಳು ಸಂತಸದಿಂದ ಕಲಿಕೆಯ ಹಾದಿಯಲ್ಲಿ ಸಾಗುತ್ತಾರೆ. ಕಾನೂನಿಗೆ ಸಂಬಂಧಪಟ್ಟ ವಿಚಾರದಲ್ಲಿ ಅನುಕೂಲತೆ ಕಂಡು ಬರುತ್ತದೆ. ರಾಜಕೀಯದಲ್ಲಿ ಉತ್ತಮ ಅವಕಾಶ ದೊರೆಯುತ್ತದೆ. ನಿಮ್ಮ ಸ್ನೇಹಮಯ ಗುಣದಿಂದ ವಿರೋಧಿಗಳ ಮನಸ್ಸನ್ನು ಗೆಲ್ಲುವಿರಿ.

ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನಸು ಗೆಂಪು ಬಣ್ಣ

ಮೀನ

ಕೀಲುಗಳಲ್ಲಿ ನೋವು ಕಂಡು ಬರುತ್ತದೆ. ಆತಂಕದ ಸನ್ನಿವೇಶದಲ್ಲಿ ಬುದ್ಧಿವಂತಿಕೆಯಿಂದ ಕಷ್ಟದಿಂದ ಪಾರಾಗುವಿರಿ. ಸಂಗಾತಿಯ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಬಹುದಿನದ ನಂತರ ಆತ್ಮೀಯರೊಬ್ಬರನ್ನು ಭೇಟಿ ಮಾಡುವಿರಿ. ದಾಂಪತ್ಯದಲ್ಲಿ ಇದ್ದ ಒಡಕು ದೂರವಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಬರುವ ಫಲಿತಾಂಶ ನಿಮ್ಮ ಪರವಾಗಿರುತ್ತದೆ.

ಪರಿಹಾರ : ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ : ನೀಲಿ ಮಿಶ್ರಿತ ಬಿಳಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.